
ವಿರಾಜಪೇಟೆ ಏ.22 NEWS DESK : ವಿಷು ಹಬ್ಬದ ಪ್ರಯುಕ್ತ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಏ.26 ರಂದು ವಿರಾಜಪೇಟೆಯ ತಾಲ್ಲೂಕು ಮೈದಾನದಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ.ಸುಮೇಶ್ ತಿಳಿಸಿದ್ದಾರೆ. ಗ್ರಾಮೀಣ ಕ್ರೀಡಾಕೂಟದ ಅಂಗವಾಗಿ ಹಿಂದೂ ಮಹಿಳಾ ಮಲಯಾಳಿ ಬಂಧುಗಳಿಂದ ಮೆಗಾ(100ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿರುವ) ತಿರುವಾದಿರ ನೃತ್ಯವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ವಿಷು ಹಬ್ಬದ ಮಹತ್ವ ಸೇರಿದಂತೆ ಹಬ್ಬದ ವಿಷು ಕಣಿ ಮಡಗುವ ರೀತಿ, ಈ ಸಂದರ್ಭ ಹೇಗೆ ದೀಪವನ್ನು ಹಚ್ಚುವುದು, ಸಾಂಪ್ರಾದಾಯಿಕವಾಗಿ ವಿಷು ಕಣಿ ಇಡುವ ಮತ್ತು ಆಚರಿಸುವ ರೀತಿಯನ್ನು ಪ್ರಸ್ತುತ ಪಡಿಸಲಾಗುತ್ತದೆ. ಮತ್ತು ಇಂದಿನ ಯುವಜನತೆಗೆ ವಿಷು ಹಬ್ಬದ ಮಹತ್ವವನ್ನು ತಿಳಿಯಪಡಿಸಲಾಗುವುದು. ಬಳಿಕ ಮೆಗಾ ತಿರುವಾದಿರ ನೃತ್ಯ ಪ್ರದರ್ಶನ ಹಾಗೂ ಪುರುಷರಿಗೆ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ. ಮಧ್ಯಾಹ್ನದ ಊಟದ ನಂತರ ಮಹಿಳೆಯರಿಗೆ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಅಧ್ಯಕ್ಷ ಸುಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.








