Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ನಿಟ್ಟೂರು ಕಾರ್ಮಾಡಿನಲ್ಲಿ ವನ್ಯಜೀವಿ ಸಪ್ತಾಹ: ಪ್ಲಾಸ್ಟಿಕ್ ತ್ಯಾಜ್ಯ ತೆರವು, ಪರಿಸರ ಜಾಗೃತಿ*
  • *ಅ.14 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*
  • *ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಅ.9ರ ಕಾರ್ಯಕ್ರಮ*
  • *ಶಾಸಕ ಡಾ. ಮಂತರ್ ಗೌಡ ಅವರ ಅ.9ರ ಕಾರ್ಯಕ್ರಮ*
  • *ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ : ಕೇಂದ್ರ ಪುರಸ್ಕೃತ ಯೋಜನೆ ಸಕಾಲದಲ್ಲಿ ಪ್ರಗತಿ ಸಾಧಿಸಿ : ಸಂಸದ ಯದುವೀರ್ ಒಡೆಯರ್
  • *ಕಾವೇರಿ ತೀರ್ಥೋದ್ಭವ : ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಮನವಿ*
  • *ಗಾಂಧಿ ಮೈದಾನಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ : ದಸರಾ ಸಿದ್ಧತೆ ಕುರಿತು ಪರಿಶೀಲನೆ*
  • *ಬೆಂಗಳೂರು ಸಣ್ಣ ಭಾಷಾ ಚಲನಚಿತ್ರೋತ್ಸವಕ್ಕೆ ಕೊಡಗಿನ ‘ಬೇರ್’ ಆಯ್ಕೆ*
  • *ಕರ್ನಾಟಕದಲ್ಲಿ ಭೀಕರ ಬರ: ಶೇ.90ರಷ್ಟು ಬೆಳೆ ಹಾನಿ, ರೈತರ ನೆರವಿಗೆ ಸರ್ಕಾರದ ಮಹತ್ವದ ಕ್ರಮ*
  • *ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಿಯ ಕರಗೋತ್ಸವ: ಅ.11ರಿಂದ ನಗರ ಪ್ರದಕ್ಷಿಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಏ.28 ರಂದು ಕೊಡಗು ಜಿಲ್ಲಾ “ಬ್ಯಾರಿ ಸಾಹಿತ್ಯ ಸಮ್ಮೇಳನ”*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಏ.28 ರಂದು ಕೊಡಗು ಜಿಲ್ಲಾ “ಬ್ಯಾರಿ ಸಾಹಿತ್ಯ ಸಮ್ಮೇಳನ”*

ಏಪ್ರಿಲ್ 25, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement


ಮಡಿಕೇರಿ ಏ.25 NEWS DESK : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ, ಕೊಡಗು ಬ್ಯಾರೀಸ್ ವೆಲ್‍ಫೇರ್ ಟ್ರಸ್ಟ್‍ನ ಸಹಯೋಗದೊಂದಿಗೆ ಏ.28 ರಂದು ನಗರದಲ್ಲಿ ಕೊಡಗು ಜಿಲ್ಲಾ “ಬ್ಯಾರಿ ಸಾಹಿತ್ಯ ಸಮ್ಮೇಳನ” ನಡೆಯಲಿದೆಯೆಂದು ಅಕಾಡೆಮಿ ಅಧ್ಯಕ್ಷರಾದ ಉಮರ್ ಯು.ಹೆಚ್. ತಿಳಿಸಿದರು. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಸಮ್ಮೇಳನದ ಕುರಿತು ಮಾಹಿತಿಯನ್ನಿತ್ತ ಅವರು, ಬ್ಯಾರಿ ಭಾಷಾ ಹಿರಿಯ ಸಾಹಿತಿ ಬಿ.ಎ. ಷಂಶುದ್ದೀನ್ ಅವರ ಸರ್ವಾಧ್ಯಕ್ಷತೆಯಲ್ಲಿ ಜಿಲ್ಲಾ ಸಮ್ಮೇಳನವು ನಡೆಯಲಿದೆ. ಸಮ್ಮೇಳನದಂದು ಬೆಳಗ್ಗೆ 9.30 ಗಂಟೆಗೆ ನಗರದ ಕ್ರೆಸೆಂಟ್ ಶಾಲೆಯಿಂದ ಸಮ್ಮೇಳನ ನಡೆಯುವ ಕಾವೇರಿ ಹಾಲ್‍ವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ನಡೆಸಲಾಗುತ್ತದೆ. ಬಳಿಕ ಧ್ವಜಾರೋಹಣವನ್ನು ತಾನು ನಡೆಸಲಿರುವುದಾಗಿ ಹೇಳಿದರು. ಸಮ್ಮೇಳನವನ್ನು ಬೆಳಿಗ್ಗೆ 10.30ಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್ ಉದ್ಘಾಟಿಸಲಿದ್ದಾರೆ. ಬಿ.ಎ.ಷಂಶುದ್ದೀನ್ ಅವರ ಸಮ್ಮೇಳನಾಧ್ಯಕ್ಷರ ಭಾಷಣದ ಬಳಿಕ, ಹಿರಿಯ ಸಾಹಿತಿ ಮತ್ತು ಚಿಂತಕರಾದ ಎಸ್.ಜಿ.ಸಿದ್ದರಾಮಯ್ಯ ಮುಖ್ಯ ಭಾಷಣ ಮಾಡಲಿದ್ದು, ಹಲ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ಮಾಹಿತಿಯನ್ನಿತ್ತರು. :: ಚರ್ಚಾ ಗೋಷ್ಠಿ :: ಅಂದು ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ನಡೆಯಲಿರುವ ಚರ್ಚಾಗೋಷ್ಠಿಯಲ್ಲಿ ಪತ್ರಕರ್ತ ಹಂಝ ಮಲಾರ್, ಶಾಹೀನ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ತೌಸೀಫ್ ಅಹ್ಮದ್, ಸೋಮವಾರಪೇಟೆ ಸರ್ಕಾರಿ ವೈದ್ಯರಾದ ಡಾ.ಆಫ್ರೀನ್ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಇ.ಸುಲೇಮಾನ್ ಅವರ ಅಧ್ಯಕ್ಷತೆಯಲ್ಲಿ ಬ್ಯಾರಿ ಕವಿಗೋಷ್ಠಿ ನಡೆಯಲಿದೆಯೆಂದು ವಿವರಗಳನ್ನಿತ್ತರು. :: ಸಮಾರೋಪ- ಸನ್ಮಾನ :: ಅಂದು ಸಂಜೆ 4.30 ಗಂಟೆಗೆ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.ಶಾಸಕ ಡಾ.ಮಂತರ್ ಗೌಡ ಸಮ್ಮೇಳನದ ಅಂಗವಾಗಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಿದ್ದಾರೆ. ಶಾಸಕ ಎ.ಎಸ್.ಪೊನ್ನಣ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹನ್ನೊಂದು ಮಂದಿ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಸಮ್ಮೇಳನದ ವಿಶೇಷ ಆಕರ್ಷಣೆಯಾಗಿ ದಫ್, ಒಪ್ಪನೆ ಪಾಟ್, ಕೋಲ್ಕಲಿ, ಬ್ಯಾರಿ ಹಾಡುಗಳ ಸಂಭ್ರಮ ಮತ್ತು ಬ್ಯಾರಿ ಪ್ರಹಸನವನ್ನು ಹಮ್ಮಿಕೊಳ್ಳಲಾಗಿದೆಯೆಂದು ವಿವರಗಳನ್ನಿತ್ತರು. :: “ಬ್ಯಾರಿ ಭವನ”ಕ್ಕೆ ಮನವಿ :: ಸಮ್ಮೇಳನದ ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಅಮೀನ್ ಮೊಹ್ಸಿನ್ ಮಾತನಾಡಿ, ಅತ್ಯಂತ ವಿಶಿಷ್ಟ ಭಾಷಾ ಸಂಸ್ಕøತಿಯನ್ನು ಬ್ಯಾರಿ ಸಮುದಾಯ ಹೊಂದಿದೆ. ಈ ಸಮುದಾಯದ ಕಾರ್ಯಚಟುವಟಿಕೆÉಗಳಿಗ ಪೂರಕವಾದ “ಬ್ಯಾರಿ ಭವನ” ನಿರ್ಮಾಣಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಅವಕಾಶ ಕೊಡಬೇಕೆಂದು ಮನವಿ ಮಾಡಿದರು, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್ ಮಾತನಾಡಿ, ಕನ್ನಡ ಸಾರಸ್ವತ ಲೋಕಕ್ಕೆ ಬ್ಯಾರಿ ಸಮುದಾಯದಿಂದ ಬಂದ ಹಲ ಪ್ರತಿಭೆಗಳು ಅಮೂಲ್ಯ ಕಾಣಿಕೆಯನ್ನು ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡದೊಂದಿಗೆ ಬ್ಯಾರಿ ಭಾಷೆಯ ಸಾಹಿತ್ಯದತ್ತಲು ಯುವ ಸಮೂಹ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಗೋಷ್ಠಿಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಉಪಾಧ್ಯಕ್ಷರುಗಳಾದ ಎಂ.ಎ.ನಾಸಿರ್ ಅಹಮದ್, ಕಲೀಮ್ ಅಹಮದ್, ಕಾರ್ಯದರ್ಶಿ ಅಬ್ದುಲ್ಲಾ ಮಡಿಕೇರಿ ಉಪಸ್ಥಿತರಿದ್ದರು.

 

 

 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

*ನಿಟ್ಟೂರು ಕಾರ್ಮಾಡಿನಲ್ಲಿ ವನ್ಯಜೀವಿ ಸಪ್ತಾಹ: ಪ್ಲಾಸ್ಟಿಕ್ ತ್ಯಾಜ್ಯ ತೆರವು, ಪರಿಸರ ಜಾಗೃತಿ*

ಅಕ್ಟೋಬರ್ 9, 2026

*ಅ.14 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*

ಅಕ್ಟೋಬರ್ 8, 2026

*ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಅ.9ರ ಕಾರ್ಯಕ್ರಮ*

ಅಕ್ಟೋಬರ್ 8, 2026

*ಅ.14 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*

ಅಕ್ಟೋಬರ್ 8, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.8 NEWS DESK : ಕರ್ನಾಟಕ ಲೋಕಾಯುಕ್ತ ಮಡಿಕೇರಿಯ ಲೋಕಾಯುಕ್ತ ಅಧಿಕಾರಿಗಳು ಅಕ್ಟೋಬರ್, 14 ರಂದು ಬೆಳಗ್ಗೆ 11…

*ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಅ.9ರ ಕಾರ್ಯಕ್ರಮ*

ಅಕ್ಟೋಬರ್ 8, 2026

*ಶಾಸಕ ಡಾ. ಮಂತರ್ ಗೌಡ ಅವರ ಅ.9ರ ಕಾರ್ಯಕ್ರಮ*

ಅಕ್ಟೋಬರ್ 8, 2026

*ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ : ಕೇಂದ್ರ ಪುರಸ್ಕೃತ ಯೋಜನೆ ಸಕಾಲದಲ್ಲಿ ಪ್ರಗತಿ ಸಾಧಿಸಿ : ಸಂಸದ ಯದುವೀರ್ ಒಡೆಯರ್

ಅಕ್ಟೋಬರ್ 8, 2026

*ಕಾವೇರಿ ತೀರ್ಥೋದ್ಭವ : ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಮನವಿ*

ಅಕ್ಟೋಬರ್ 8, 2026

*ಗಾಂಧಿ ಮೈದಾನಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ : ದಸರಾ ಸಿದ್ಧತೆ ಕುರಿತು ಪರಿಶೀಲನೆ*

ಅಕ್ಟೋಬರ್ 8, 2026

*ಬೆಂಗಳೂರು ಸಣ್ಣ ಭಾಷಾ ಚಲನಚಿತ್ರೋತ್ಸವಕ್ಕೆ ಕೊಡಗಿನ ‘ಬೇರ್’ ಆಯ್ಕೆ*

ಅಕ್ಟೋಬರ್ 8, 2026

*ಕರ್ನಾಟಕದಲ್ಲಿ ಭೀಕರ ಬರ: ಶೇ.90ರಷ್ಟು ಬೆಳೆ ಹಾನಿ, ರೈತರ ನೆರವಿಗೆ ಸರ್ಕಾರದ ಮಹತ್ವದ ಕ್ರಮ*

ಅಕ್ಟೋಬರ್ 8, 2026

*ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಿಯ ಕರಗೋತ್ಸವ: ಅ.11ರಿಂದ ನಗರ ಪ್ರದಕ್ಷಿಣೆ*

ಅಕ್ಟೋಬರ್ 8, 2026

*ಮಡಿಕೇರಿ ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಪ್ಯಾಕೇಜ್ ಟೂರ್*

ಅಕ್ಟೋಬರ್ 8, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.