
ಮಡಿಕೇರಿ ಏ.28 NEWS DESK : 1995-96ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ಮದೆನಾಡಿನ ಮದೆಮಹೇಶ್ವರ ವಿದ್ಯಾಸಂಸ್ಥೆ(BGS)ಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬೊಳ್ಳೂರು ಹರೀಶ ಅವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಅಗಲಿದ ಸಹಪಾಠಿಗಳಿಗೆ ಮತ್ತು ಗುರುಗಳಿಗೆ ಸಂತಾಪ ಸೂಚನೆ, ಗುರುಗಳಿಗೆ ಗುರುವಂದನಾ ಸಾಧನೆಗಳ ಪರಿಚಯ, ಮೋಜಿನ ಆಟದೊಂದಿಗೆ ಗುರುಗಳೊಂದಿಗೆ ವಿದ್ಯಾರ್ಥಿಗಳು ಕೊಡಗಿನ ವಾಲಗಕ್ಕೆ ಹೆಜ್ಜೆ ಹಾಕಿದರು. ಗುರುಗಳಿಗೆ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ಶಿಕ್ಷಕರಾದ ಜೋಯಪ್ಪ, ಶಿವರಾಂ, ಸಿದ್ದರಾಜು, ಕೃಷ್ಣ, ಲಕ್ಷಣ, ಸುಗುಣ, ದಿವಂಗತ ಮಂದಣ್ಣ ಅವರ ಪತ್ನಿ ಭಾಗೀರತಿ, ತಿಮ್ಮಯ್ಯ, ಶಿವಲಿಂಗಯ್ಯ, ಕಾರ್ಯಪ್ಪಣ್ಣ ಹಾಗೂ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಇಬ್ರಾಹಿಂ ಹಾಜರಿದ್ದರು. ಮಕ್ಕಳು ವಿದ್ಯಾರ್ಥಿ ಗಳಾಗಿದ್ದಾಗ ಗುರುಗಳಿಂದ ಪೆಟ್ಟು ತಿನ್ನದವರು ಬೆತ್ತ ಕೊಟ್ಟು ಹೊಡೆಸಿಕೊಳ್ಳುವುದು ವಿಶೇಷ ಮನೋರಂಜನೆಗೆ ಸಾಕ್ಷಿಯಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಸ್ವಾಗತಿಸಿದರು. ಬಾರನ ದಿನೇಶ್ ಗುರು ನಮನ ಪರಿಚಯ ಮಾಡಿದರು. ರಾಘವೇಂದ್ರ ಮತ್ತು ಮಾಧವ ನಿರೂಪಿಸಿದರು. ಆಟದ ಉಸ್ತುವಾರಿಯನ್ನು ರೀಮಾ ಮತ್ತು ಚಂದ್ರಕಲಾ ವಹಿಸಿದ್ದರು. ಊಟದ ಉಸ್ತುವಾರಿ ಜಯಪ್ರಕಾಶ್ ,ಕುಮಾರ, ಜೆ.ಜೆ.ದಿನೇಶ ಮತ್ತು ಯೋಗೀಶ ವಹಿಸಿದ್ದರು. ಯಶೋಧಾ ವಂದಿಸಿದರು. ಕಾರ್ಯಕ್ರಮದ ಆಯೋಜನೆಗೆ ಹಳೆ ವಿದ್ಯಾರ್ಥಿಗಳು ನೆರವು ನೀಡಿದ್ದು, ಉಳಿಕೆ ಹಣವನ್ನು ವೃದ್ಧಾಶ್ರಮಕ್ಕೆ ದಿನಸಿ ಹಣದಲ್ಲಿ ವೃದ್ಧಾಶ್ರಮಕ್ಕೆ ದಿನಸಿ ಸಾಮಾಗ್ರಿಗಳನ್ನು ನೀಡುವ ಮೂಲಕ ಮಾದರಿಯಾದರು.









