Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ನಿಟ್ಟೂರು ಕಾರ್ಮಾಡಿನಲ್ಲಿ ವನ್ಯಜೀವಿ ಸಪ್ತಾಹ: ಪ್ಲಾಸ್ಟಿಕ್ ತ್ಯಾಜ್ಯ ತೆರವು, ಪರಿಸರ ಜಾಗೃತಿ*
  • *ಅ.14 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*
  • *ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಅ.9ರ ಕಾರ್ಯಕ್ರಮ*
  • *ಶಾಸಕ ಡಾ. ಮಂತರ್ ಗೌಡ ಅವರ ಅ.9ರ ಕಾರ್ಯಕ್ರಮ*
  • *ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ : ಕೇಂದ್ರ ಪುರಸ್ಕೃತ ಯೋಜನೆ ಸಕಾಲದಲ್ಲಿ ಪ್ರಗತಿ ಸಾಧಿಸಿ : ಸಂಸದ ಯದುವೀರ್ ಒಡೆಯರ್
  • *ಕಾವೇರಿ ತೀರ್ಥೋದ್ಭವ : ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಮನವಿ*
  • *ಗಾಂಧಿ ಮೈದಾನಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ : ದಸರಾ ಸಿದ್ಧತೆ ಕುರಿತು ಪರಿಶೀಲನೆ*
  • *ಬೆಂಗಳೂರು ಸಣ್ಣ ಭಾಷಾ ಚಲನಚಿತ್ರೋತ್ಸವಕ್ಕೆ ಕೊಡಗಿನ ‘ಬೇರ್’ ಆಯ್ಕೆ*
  • *ಕರ್ನಾಟಕದಲ್ಲಿ ಭೀಕರ ಬರ: ಶೇ.90ರಷ್ಟು ಬೆಳೆ ಹಾನಿ, ರೈತರ ನೆರವಿಗೆ ಸರ್ಕಾರದ ಮಹತ್ವದ ಕ್ರಮ*
  • *ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಿಯ ಕರಗೋತ್ಸವ: ಅ.11ರಿಂದ ನಗರ ಪ್ರದಕ್ಷಿಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸಾಧನೆಯ ಹಾದಿಯಲ್ಲಿ ಸರ್ಕಾರಿ ಪ್ರೌಢಶಾಲೆ ಮೂರ್ನಾಡು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸಾಧನೆಯ ಹಾದಿಯಲ್ಲಿ ಸರ್ಕಾರಿ ಪ್ರೌಢಶಾಲೆ ಮೂರ್ನಾಡು*

ಏಪ್ರಿಲ್ 29, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ಮಡಿಕೇರಿ NEWS DESK ಏ.29 : 2025-26 ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ ಇತ್ತೀಚೆಗಷ್ಟೇ ಹೊರ ಬಿದ್ದಿದ್ದು ಕೊಡಗು ಜಿಲ್ಲೆಯು ಉತ್ತಮ ಫಲಿತಾಂಶವನ್ನು ಕಾಯ್ದುಕೊಂಡಿದೆ. ವಿಶೇಷವಾಗಿ ಇತ್ತೀಚಿನ ವರ್ಷಗಳಲ್ಲಿ ಸರಕಾರಿ ಶಾಲೆಗಳು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸುತ್ತಿದೆ. ಇಂತಹ ಸಾಧನೆಯ ಹಾದಿಯಲ್ಲಿರುವ ಶಾಲೆ ಎಂದರೆ ಸರಕಾರಿ ಪ್ರೌಢಶಾಲೆ ಮೂರ್ನಾಡು. ಕಳೆದ ಆರು ವರ್ಷಗಳಿಂದ ಶೇಕಡ ನೂರರಷ್ಟು ಫಲಿತಾಂಶ ದಾಖಲಿಸಿದ ಗಮನಾರ್ಹ ಸಾಧನೆ ಈ ಶಾಲೆಯದಾಗಿದೆ. ಮೂರ್ನಾಡುವಿನ ಸ್ಥಳೀಯರ, ವಿದ್ಯಾಭಿಮಾನಿಗಳ, ಹಿತೈಷಿಗಳ ನಿರಂತರ ಬೇಡಿಕೆಯ ಫಲವಾಗಿ 2007ರಲ್ಲಿ ಕೇವಲ ಒಂಬತ್ತು ವಿದ್ಯಾರ್ಥಿಗಳೊಂದಿಗೆ ಹಳೆಯ ಕಟ್ಟಡ ಒಂದರಲ್ಲಿ ಪ್ರಾರಂಭವಾದ ಈ ಶಾಲೆ ಇಂದು ಅತ್ಯುತ್ತಮವಾದ ಕಟ್ಟಡ, ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಸೈನ್ಸ್ ಲ್ಯಾಬ್, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಪ್ರೊಜೆಕ್ಟರ್, ವಿಶಾಲ ಆಟದ ಮೈದಾನ ಹಾಗೂ ಉತ್ತಮ ಬೋಧಕ ವೃಂದದವರನ್ನು ಹೊಂದಿದೆ. ನೋಡುವವರಿಗೆ ಇದು ಒಂದು ಖಾಸಗಿ ಶಾಲೆ ಎಂಬ ಭಾವನೆಯನ್ನು ಮೂಡಿಸುತ್ತದೆ.
ಸರ್ಕಾರಿ ಶಾಲೆಯ ಸಮಸ್ಯೆಗಳು ಖಾಸಗಿ ಶಾಲೆಗಳಿಗಿಂತ ವಿಭಿನ್ನವಾಗಿರುತ್ತದೆ. ಅದು ಪೋಷಕರ ಶೈಕ್ಷಣಿಕ ಅರ್ಹತೆಯಲ್ಲಿ ವೃತ್ತಿ ಬದುಕಿನಲ್ಲಿ, ಆರ್ಥಿಕ ಸ್ಥಿತಿಗತಿಯಲ್ಲಿಯೂ ಕೂಡ ತೀರ ಹೆಚ್ಚು. ಶಾಲೆಯಿಂದ ಹೊರಗೆ ಉಳಿಯುವ ಮಕ್ಕಳು, ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳು, ಮನಸ್ಸಿನ ಸೈರ್ಯವಿಲ್ಲದೆ ದಾರಿ ತಪ್ಪುವ ವಿದ್ಯಾರ್ಥಿಗಳ ಸಂಖ್ಯೆ, ನಿಜಕ್ಕೂ ಸರಕಾರಿ ಶಾಲೆಗಳಲ್ಲಿಯೇ ಹೆಚ್ಚು. ಈ ಎಲ್ಲಾ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ ಮಕ್ಕಳಿಗೆ ಒತ್ತಾಸೆಯಾಗಿ ನಿಂತು ಅವರಿಂದ ಶೇಕಡ ನೂರರಷ್ಟು ಫಲಿತಾಂಶ ಗಿಟ್ಟಿಸುವುದು ಪ್ರಸಂಶನಾರ್ಹ. ಇದಕ್ಕೆಲ್ಲ ಕಾರಣ ಈ ಶಾಲೆಯ ಶಿಕ್ಷಕ ವೃಂದದವರ ಛಲ ಬಿಡದ ಪ್ರಯತ್ನ. ಎಲ್ಲಾ ಅಡೆತಡೆಯ ನಡುವೆ ವರ್ಷವಿಡಿ ವಿಶೇಷ ತರಗತಿ, ಮಧ್ಯಂತರ ರಜೆಯಲ್ಲಿ, ಸಾರ್ವಜನಿಕ ರಜಾ ದಿನಗಳಂದು ನಡೆಸುವ ವಿಶೇಷ ತರಗತಿಗಳು, ಪರೀಕ್ಷೆ ಸಮೀಪಿಸುತ್ತಿದ್ದಂತೆಯೇ ಕಳೆದ ಹಲವು ವರ್ಷಗಳಿಂದ ಜನವರಿ ತಿಂಗಳ 1ನೇ ತಾರೀಖಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಕೊನೆಯ ದಿನದ ಹಿಂದಿನ ದಿನದ ರಾತ್ರಿ ಎಂಟು ಗಂಟೆಯವರೆಗೆ ಸತತವಾಗಿ ಮೂರು ತಿಂಗಳವರೆಗೆ ನಡೆಸುವ ಅಭ್ಯಾಸ ಈ ಶಾಲೆಯ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ. ಮಕ್ಕಳ ಬಗೆಗಿರುವ ಕಾಳಜಿ, ವಿದ್ಯಾರ್ಥಿ ಸ್ನೇಹಿ ವಾತಾವರಣ, ಶಿಸ್ತು, ಸ್ವಚ್ಛತೆ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದ ಒಂದು ಉತ್ತಮ ಕಲಿಕಾ ವಾತಾವರಣ ಈ ಶಾಲೆಯದಾಗಿದೆ.
ಸರಕಾರದ ಅನುದಾನ, ಉತ್ತಮ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ಸು ವಾರಿ ಸಮಿತಿ, ಶಾಲಾ ಸ್ನಾಪನಾ ಸಮಿತಿ, ಗ್ರಾಮ ಪಂಚಾಯಿತಿ, ಸ್ಥಳೀಯ ಸಂಘ ಸಂಸ್ಥೆಗಳು, ದಾನಿಗಳು, ವಿದ್ಯಾಭಿಮಾನಿಗಳು, ಹಿತೈಷಿಗಳ ಸಹಕಾರದೊಂದಿಗೆ ಈ ಶಾಲೆಯು ಪ್ರಗತಿಯತ್ತ ಸಾಗುತಿದೆ. 2019ರಲ್ಲಿ ಈ ಶಾಲೆಯ ಮುಖ್ಯ ಶಿಕ್ಷಕರಾಗಿ ಬಂದ ಶ್ರೀ ಗುರುರಾಜ ಕೆ ಪಿ, ಇವರ ದೂರ ದೃಷ್ಟಿ, ಶಾಲೆಯ ಬಗೆಗಿನ ವಿಶೇಷ ಪ್ರೀತಿ, ಎಲ್ಲಾ ಶಿಕ್ಷಕರ ಸಹಕಾರ, ಕರ್ತವ್ಯ ನಿಷ್ಠೆಯ ಫಲವಾಗಿ ಈ ಶಾಲೆ ಇಂದು ಪರಿಪೂರ್ಣತೆಯನ್ನು ಕಂಡಿದೆ ಹಾಗೂ ಅದೇ ಹಾದಿಯಲ್ಲಿ ಸಾಗುತ್ತಿದೆ. ಕನ್ನಡ ಮತ್ತು ಆಂಗ್ಲ ಮಾಧ್ಯಮವನ್ನು ಹೊಂದಿರುವ ಈ ಶಾಲೆಯು ಪ್ರಸಕ್ತ ಸಾಲಿನಲ್ಲಿ ಎಸ್.ಎಸ್. ಎಲ್.ಸಿ ಪರೀಕ್ಷೆಗೆ ಹಾಜರಾದ ಎಲ್ಲಾ 25 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಇಬ್ಬರು ಉನ್ನತ ಶ್ರೇಣಿಯಲ್ಲಿ, 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ನಾಲ್ಕು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಶೇಕಡ ನೂರರಷ್ಟು ಫಲಿತಾಂಶ ಬಂದಿರುತ್ತದೆ. ಶಾಲೆಯು (QWP) ಗುಣಮಟ್ಟದಲ್ಲಿ 84.80% ಗಳಿಸಿದ್ದು ‘A’ ಗ್ರೇಡ್ ಗಳಿಸಿರುತ್ತದೆ. ໖ ໑໖ 2026-27 PMSHRI -Prime Minister’s School for Rising India ಯೋಜನೆಗೆ ಒಳಪಟ್ಟಿದ್ದು ವಿದ್ಯಾರ್ಥಿಗಳಿಗೆ ಎಲ್ಲಾ ವಿಶೇಷ ಸೌಲಭ್ಯಗಳು ಸರಕಾರದಿಂದ ದೊರೆಯಲಿದೆ. ಇದರ ಸದುಪಯೋಗವನ್ನು ಮೂರ್ನಾಡುವಿನ ಹಾಗೂ ಸುತ್ತಮುತ್ತಲಿನ ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಈ ದಿನಗಳಲ್ಲಿ ತಮ್ಮ ಶಾಲೆ ಯಾರಿಗೂ ಕಡಿಮೆ ಇಲ್ಲ ಎಂಬಂತೆ ಈ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಮುಖ್ಯೋಪಾಧ್ಯಾಯರಿಗೆ, ಬೋಧಕ ಮತ್ತು ಬೋಧಕೇತರ ವೃಂದದವರಿಗೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರಿಗೆ ಹೃತ್ತೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. (ಎಸ್.ಸುರೇಶ್, ಶ್ರೀ ಭಗವಾನ್ ಬಿಲ್ಡರ್ಸ್, ಮಾಲೀಕರು ಹಾಗೂ ಸಮಾಜ ಸೇವಕರು, ಮೂರ್ನಾಡು) (9448406534)

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

*ನಿಟ್ಟೂರು ಕಾರ್ಮಾಡಿನಲ್ಲಿ ವನ್ಯಜೀವಿ ಸಪ್ತಾಹ: ಪ್ಲಾಸ್ಟಿಕ್ ತ್ಯಾಜ್ಯ ತೆರವು, ಪರಿಸರ ಜಾಗೃತಿ*

ಅಕ್ಟೋಬರ್ 9, 2026

*ಅ.14 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*

ಅಕ್ಟೋಬರ್ 8, 2026

*ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಅ.9ರ ಕಾರ್ಯಕ್ರಮ*

ಅಕ್ಟೋಬರ್ 8, 2026

*ಅ.14 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*

ಅಕ್ಟೋಬರ್ 8, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.8 NEWS DESK : ಕರ್ನಾಟಕ ಲೋಕಾಯುಕ್ತ ಮಡಿಕೇರಿಯ ಲೋಕಾಯುಕ್ತ ಅಧಿಕಾರಿಗಳು ಅಕ್ಟೋಬರ್, 14 ರಂದು ಬೆಳಗ್ಗೆ 11…

*ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಅ.9ರ ಕಾರ್ಯಕ್ರಮ*

ಅಕ್ಟೋಬರ್ 8, 2026

*ಶಾಸಕ ಡಾ. ಮಂತರ್ ಗೌಡ ಅವರ ಅ.9ರ ಕಾರ್ಯಕ್ರಮ*

ಅಕ್ಟೋಬರ್ 8, 2026

*ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ : ಕೇಂದ್ರ ಪುರಸ್ಕೃತ ಯೋಜನೆ ಸಕಾಲದಲ್ಲಿ ಪ್ರಗತಿ ಸಾಧಿಸಿ : ಸಂಸದ ಯದುವೀರ್ ಒಡೆಯರ್

ಅಕ್ಟೋಬರ್ 8, 2026

*ಕಾವೇರಿ ತೀರ್ಥೋದ್ಭವ : ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಮನವಿ*

ಅಕ್ಟೋಬರ್ 8, 2026

*ಗಾಂಧಿ ಮೈದಾನಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ : ದಸರಾ ಸಿದ್ಧತೆ ಕುರಿತು ಪರಿಶೀಲನೆ*

ಅಕ್ಟೋಬರ್ 8, 2026

*ಬೆಂಗಳೂರು ಸಣ್ಣ ಭಾಷಾ ಚಲನಚಿತ್ರೋತ್ಸವಕ್ಕೆ ಕೊಡಗಿನ ‘ಬೇರ್’ ಆಯ್ಕೆ*

ಅಕ್ಟೋಬರ್ 8, 2026

*ಕರ್ನಾಟಕದಲ್ಲಿ ಭೀಕರ ಬರ: ಶೇ.90ರಷ್ಟು ಬೆಳೆ ಹಾನಿ, ರೈತರ ನೆರವಿಗೆ ಸರ್ಕಾರದ ಮಹತ್ವದ ಕ್ರಮ*

ಅಕ್ಟೋಬರ್ 8, 2026

*ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಿಯ ಕರಗೋತ್ಸವ: ಅ.11ರಿಂದ ನಗರ ಪ್ರದಕ್ಷಿಣೆ*

ಅಕ್ಟೋಬರ್ 8, 2026

*ಮಡಿಕೇರಿ ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಪ್ಯಾಕೇಜ್ ಟೂರ್*

ಅಕ್ಟೋಬರ್ 8, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.