
ಭಾಗಮಂಡಲ ಏ.20 NEWS DESK : ನವೀಕರಣಗೊಂಡ ಭಾಗಮಂಡಲ, ತಾವುರೂ ಗ್ರಾಮದ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಿತು. ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು. ಏ.25ರಿಂದ ಪ್ರಾರಂಭವಾದ ದೇವಸ್ಥಾನದ ಜೀರ್ಣೋದ್ಧಾರದ ಕಲಶೋೀತ್ಸವದಲ್ಲಿ, ಬೆಟ್ಟದಿಂದ ದೇವರು ತರುವುದು, ಗ್ರಾಮ ಸಂಸ್ಕøತಿ ಕುರಿತು ಮಕ್ಕಳಿಂದ ಹೀಲಿಯಾಟ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ಪ್ರಸಾದ, ಶುದ್ದಿ ವಾಸ್ತು ರಣೋಜ್ಞ ಹೋಮ, ವಾಸ್ತು ಬಲಿ, ಗಣಪತಿ ಹೋಮ,ಬಿಂಬಶುದ್ದಿ, ಕಲಶಾಭಿಷೇಕ, ದ್ವಾರಪ್ರಾಯಶ್ಚಿತ ಹೋಮ, ಹೋಮ ಕಲಶಾಭಿಷೇಕ, ದುರ್ಗಾ ನಮಸ್ಕಾರ ಪೂಜೆ, ಲಲಿತ ಸಹಸ್ರನಾಮ ಪಾರಾಯಣ, ಶಾಂತಿ ಹೋಮಗಳು, ಬ್ರಹ್ಮಕಲಶ, ಮಂಟಪ ಸಂಸ್ಕಾರ, ಕುಂಬೇಶ ಕರ್ಕರಿ ಕಲಶಪೂಜೆ, ಅಧಿವಾಸ ಹೋಮ, ಪರಿಕಲಶ ಪೂಜೆ, ತತ್ವ ಕಲಶ ಪೂಜೆ, ತತ್ವ ಹೋಮ, ತತ್ವ ಕಲಸಾಭಿಷೇಕ,, ಅನುಜ್ಞಾ ಕಲಶಾಭಿಷೇಕ, ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ,, ಬ್ರಹ್ಮಕಲಶಾಭಿಷೇಕ,, ಮಂತ್ರಾಕ್ಷತೆ, ಶ್ರೀ ಬಲಿ ಸೇವಾ ಸುತ್ತುಗಳು, ನೃತ್ಯಬಲಿ, ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ಐದು ದಿನಗಳ ಕಾಲ ನಡೆದು ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೋಳಿಬೈಲು ಸಿ. ವೆಂಕಟೇಶ್,ಉಪಾಧ್ಯಕ್ಷಅಯ್ಯಣೀರ ಎ. ದಿನೇಶ್,ಕಾರ್ಯದರ್ಶಿ ಬಾರಿಕೆ ಎ. ತೀರ್ಥಕುಮಾರ್,ತಕ್ಕ ಮುಖ್ಯಸ್ಥಕುರುಂಜಿ ಸಿ. ದೇವಯ್ಯ,ಜೀರ್ಣೋದ್ಧಾರ ಸಮಿತಿಅಧ್ಯಕ್ಷ ಕುದುಕುಳಿ ಸಿ. ಅಶ್ವತ್, ಖಜಾಂಚಿ ಹೊಸಗದ್ದೆ ಸಿ. ವೆಂಕಟರಮಣ,ತಾವೂರುದೇವಸ್ಥಾನ ಸಮಿತಿ ಮಾಜಿಅಧ್ಯಕ್ಷ ಅಮೆ ಬಾಲಕೃಷ್ಣ, ದೇವಸ್ಥಾನದ ಆಡಳಿತ ಮಂಡಳಿ ಜೀರ್ಣೋದ್ಧಾರ ಸಮಿತಿ ಹಾಗೂ ಗ್ರಾಮಸ್ಥರು ಇದ್ದರು.









