
ನಾಪೋಕ್ಲು ಮೇ 4 NEWS DESK : ಮಹಿಳೆಯರು ಸ್ವಾವಲಂಬಿಗಳಾಗಲು ಸಂತೆಮೇಳದಂತಹ ಕಾರ್ಯಕ್ರಮಗಳು ಪ್ರಯೋಜನಕಾರಿ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹೇಳಿದರು. ಸ್ಥಳೀಯ ಮಹಿಳಾ ಸಮಾಜದಲ್ಲಿ ಸಂಜೀವಿನಿ ಒಕ್ಕೂಟ ಮತ್ತು ಗ್ರಾಮ ಪಂಚಾಯತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಸಂತೆ ಮೇಳ ಕಾರ್ಯಕ್ರಮವನ್ನು ಹಾಗೂ ವಾರ್ಷಿಕ ಸಭೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಮಹಿಳೆಯರು ಸಂಘ ಸಂಸ್ಥೆಗಳೊಂದಿಗೆ ತಮ್ಮನ್ನು ತೊಡಗಿಸಿಕೊಂಡು ಸದೃಢರಾಗರಬೇಕೆಂದು ಹಿತನುಡಿಗಳನ್ನು ನಾಡಿ ಒಕ್ಕೂಟದ ಅಧ್ಯಕ್ಷರು, ಸಂಘದ ಸದಸ್ಯರು ಯಾವ ರೀತಿ ಕಾರ್ಯ ನಿರ್ವಹಿಸಬೇಕು ಹಾಗೂ ಕಸ ವಿಲೇವಾರಿಯ ಬಗೆಯು ಚರ್ಚೆಯನ್ನು ನಡೆಸಿದರು. ಸಂಜೀವಿನಿ ಒಕ್ಕೂಟದ ಮುಖ್ಯ ಲೆಕ್ಕ ಪತ್ರ ನಿರ್ವಹಾಕಿ ಯಮುನ ವರ್ಷಕ ವರದಿ ಮಂಡನೆಯನ್ನು ಮಾಡಿದರು. ಕಾರ್ಯಕ್ರಮವದಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಲೋಚನಾ, ಪಂಚಾಯಿತಿ ಮಾಜಿ ಸದಸ್ಯ ಕಟ್ಟಿ, ಸಂಜೀವಿನಿ ಒಕ್ಕೂಟದ ಮೇಲ್ವಿಚಾರಕ ಕೃತಿಕಾರ ಪ್ರಸ್ತುತ ಸಾಲಿನಲ್ಲಿ ಆಯ್ಕೆಯಾದಂತಹ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶರೀಫ ಹಾಗೂ ಕಾರ್ಯದರ್ಶಿ ಮಂಜುಳಾ, ಸ್ಥಳೀಯ ಸಂಪನ್ಮೂಲ ವ್ಯಕ್ತಿ ರೋಜಾ, ಕೃಷಿ ಸಖಿ ಗುಣ ಶ್ರೀ ಪಶು ಸಖಿ ನಿಶಾ ಟಿ.ಪಿ, ರಾಜೇಶ್ವರಿ ಹಾಗೂ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.









