
ಮಡಿಕೇರಿ NEWS DESK ಮೇ 7 : ಕೊಡಗು ಜಿಲ್ಲೆಯ ಏಳು ಭದ್ರಕಾಳಿ ನೆಲೆಯ ತಕ್ಕ ಮುಖ್ಯಸ್ಥರು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕೊಡಗು ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ತಾಪಮಾನ ಹೆಚ್ಚಾಗುತ್ತಿದೆ. ಕುಡಿಯುವ ನೀರಿನ ಕೊರತೆಯೂ ಎದುರಾಗುತ್ತಿದ್ದು, ಮಳೆ ಅನಿವಾರ್ಯವಾಗಿದೆ. ಸಕಲ ಜೀವಸಂಕುಲಕ್ಕೆ ನೀರಿನ ಅಗತ್ಯವಿದ್ದು, ಉತ್ತಮ ಮಳೆ ಬೆಳೆಯಾಗಲೆಂದು ಪ್ರಾರ್ಥಿಸಿದರು.
ಕಾಟಕೇರಿ, ಗಾಳಿಬೀಡು, ಇಬ್ನಿವಳವಾಡಿ, ಮಕ್ಕಂದೂರ್, ಹಾಲೇರಿ, ಕೆದಕಲ್, ಮದೆನಾಡ್ ಸೇರಿದಂತೆ ಏಳು ಭದ್ರಕಾಳಿ ನೆಲೆಗಳ ಪ್ರಮುಖರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ತೆರಳಿ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಬೈವಾಡ್ ಸೇವೆಯನ್ನು ಸಮರ್ಪಿಸಿದರು.








