Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಗೋಣಿಮರೂರು ಗ್ರಾಮದಲ್ಲಿ ಬಂಡಿಯಮ್ಮ ದೇವತಾ ಮೂರ್ತಿ ಪ್ರತಿಷ್ಠಾಪನೆ* 
  • *ಕೋರಗಲ್ಲು ಬಸವೇಶ್ವರ ಸ್ವಾಮಿ ವಿಗ್ರಹ ಪುನರ್  ಪ್ರತಿಷ್ಠಾಪನೆ* 
  • *ಬಸ್ ಚಾಲಕ ಹೃದಯಾಘಾತದಿಂದ ಸಾವು : ಪ್ರಯಾಣಿಕರು ಅಪಾಯದಿಂದ ಪಾರು*
  • *ಹೊದ್ದೂರು : ಗ್ರಾಮೀಣ ಮಕ್ಕಳಿಗೆ ಅರಿವು ಬೇಸಿಗೆ ಶಿಬಿರ*
  • *ಹುಲಿ ದಾಳಿಗೆ ಹಸು ಬಲಿ*
  • *ಡೊನೇಷನ್ ಹಾವಳಿ ವಿರೋಧಿಸಿ ವಿರಾಜಪೇಟೆಯಲ್ಲಿ ಎಸ್‍ಎಫ್‍ಐ ಪ್ರತಿಭಟನೆ*
  • *ವಿರಾಜಪೇಟೆ : ಮೇ 26 ರಂದು ನುಡಿ ಉತ್ಸವದ ರಾಷ್ಟ್ರಮಟ್ಟದ ವಿಚಾರ ಸಂಕಿರಣ*
  • *ಕೊಡಗು : ಅನಧಿಕೃತ ಹೋಂ-ಸ್ಟೇಗಳ ವಿರುದ್ಧ ಕಠಿಣ ಕ್ರಮ : ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಎಚ್ಚರಿಕೆ*
  • *ಮೇ 10ರ ವರೆಗೆ ಸಂತ ಅಂತೋಣಿ ದೇವಾಲಯದ ವಾರ್ಷಿಕ ಮಹೋತ್ಸವ*
  • *ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಚಿ.ನಾ.ಸೋಮೇಶ್ ಅವರಿಗೆ ಸನ್ಮಾನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಚಿ.ನಾ.ಸೋಮೇಶ್ ಅವರಿಗೆ ಸನ್ಮಾನ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಚಿ.ನಾ.ಸೋಮೇಶ್ ಅವರಿಗೆ ಸನ್ಮಾನ*

ಮೇ 7, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 8 NEWS  DESK : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮದಡಿ ಹಿರಿಯ ಪತ್ರಕರ್ತರು, ಸಂಘದ ಮಾಜಿ ಅಧ್ಯಕ್ಷರಾದ ಚಿ.ನಾ.ಸೋಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಚರಣಿಯಂಡ ಅನು ಕಾರ್ಯಪ್ಪ ನೇತೃತ್ವದಲ್ಲಿ ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದಲ್ಲಿರುವ ಸೋಮೇಶ್ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸೋಮೇಶ್ ಅವರು, ಡಿ.ವಿ. ಗುಂಡಪ್ಪ ಅವರು ಸ್ಥಾಪಿಸಿದ ಕಾರ್ಯನಿರತ ಪತ್ರಕರ್ತರ ಸಂಘ ಇಂದಿಗೂ ಗಟ್ಟಿಯಾಗಿ ನೆಲೆಯೂರಿದೆ. ಈ ಸಂಘದ ಅಧ್ಯಕ್ಷನಾಗಿ ಕೆಲಸ ಮಾಡಲು ಅವಕಾಶ ದೊರೆತ್ತಿದ್ದು, ನನ್ನ ಸೌಭಾಗ್ಯವಾಗಿದೆ. ನಿವೃತ್ತಿ ನಂತರ ಸಂಘದವರು ಮನೆಗೆ ಬಂದು ಗೌರವಿಸುತ್ತಿರುವುದು ಹೆಮ್ಮೆ ಮೂಡಿಸುವುದರೊಂದಿಗೆ ಹಳೆಯ ನೆನೆಪುಗಳನ್ನು ಮೆಲುಕು ಹಾಕುವಂತೆ ಮಾಡಿದೆ ಎಂದರು. ಸಾಕಷ್ಟು ಏಳುಬೀಳುಗಳ ನಡುವೆ ಕಾರ್ಯನಿರತ ಪತ್ರಕರ್ತರ ಸಂಘ ಗಟ್ಟಿಯಾಗಿ ನಿಂತಿದೆ. 1982ರಲ್ಲಿ ಬೆಂಗಳೂರಿನಲ್ಲಿ ವಿಕ್ರಮ್ ಪತ್ರಿಕೆಯಿಂದ ವೃತ್ತಿ ಜೀವನ ಆರಂಭಿಸದ ನಾನು ನವಶಕ್ತಿ ಪತ್ರಿಕೆಯಲ್ಲಿ ಕೆಲಸ ಮಾಡಿದ ನಂತರ ಶಕ್ತಿ ಪತ್ರಿಕೆಯಲ್ಲಿ ಸುದೀರ್ಘ ಅವಧಿ ಕೆಲಸ ಮಾಡುವ ಅವಕಾಶ ದೊರೆಯಿತು. ಪತ್ರಕರ್ತರಾಗಿ ಕೆಲಸ ಮಾಡುವಾಗ ಸಿಗುವ ಅನುಭವ ಬೇರೆ ಯಾವುದೇ ವೃತ್ತಿಯಲ್ಲಿಯೂ ಸಿಗಲು ಸಾಧ್ಯವಿಲ್ಲ ಎಂದು ಸೋಮೇಶ್ ಹೇಳಿದರು. ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಮಾತನಾಡಿ, ಚಿ.ನಾ ಸೋಮೇಶ್ ಸಂಘದ ಅಧ್ಯಕ್ಷರಾಗಿದ್ದ ಸಂದರ್ಭ ಸಾಕಷ್ಟು ಕೆಲಸಗಳು ಆಗಿವೆ. ಸಂಘದ ಹಿತಕ್ಕಾಗಿ ಸಾಕಷ್ಟು ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ನೇರ ನಡೆನುಡಿಯ ಪತ್ರಕರ್ತರಾಗಿ ಸೋಮೇಶ್ ಅವರು ಹೆಸರು ಮಾಡಿದವರು. ಈಗ ಸಂಘದ ಸದಸ್ಯರಲ್ಲದಿದ್ದರೂ ಅದೇ ಸಂಬಂಧ ಒಡನಾಟವನ್ನು ಹೊಂದಿದ್ದಾರೆ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಸವಿತಾ ರೈ ಮಾತನಾಡಿ, ಸೋಮೇಶ್ ಅವರು ಅಗಾಧವಾದ ಪಾಂಡಿತ್ಯವನ್ನು ಹೊಂದಿದ್ದಾರೆ. ಅವರೊಟ್ಟಿಗೆ ಒಡನಾಡಿಯಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಅವರು ಹಾಕಿಕೊಟ್ಟ ಹೆಜ್ಜೆಯಲ್ಲಿ ನಾವು ಮುನ್ನಡೆಯುತ್ತಿದ್ದೇವೆ. ಹಿರಿಯರ ಅನುಭವವನ್ನು ಹಂಚಿಕೊಳ್ಳಲು ಸಂಘ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದು ಇದೊಂದು ಉತ್ತಮ ಕಾರ್ಯಕ್ರಮ. ಮನೆಗೆ ತೆರಳಿ ಗೌರವಿಸಿ ಮಾತನಾಡುವುದು ಸ್ಮರಣೀಯವಾಗಿರುತ್ತದೆ ಎಂದು ತಿಳಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ಸತ್ಯಾಸತ್ಯತೆಯನ್ನು ತಿಳಿದು ಮಾತನಾಡುವ ಸೋಮೇಶ್ ಅವರು ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ನೇರನಡೆನುಡಿಯ ವ್ಯಕ್ತಿಯಾಗಿದ್ದು ಇದೀಗ ಅಧ್ಯಾತ್ಮದತ್ತ ಮುಖ ಮಾಡಿದ್ದಾರೆ. ಸಂಘಕ್ಕೆ ಸೋಮೇಶ್ ಅವರ ಮಾರ್ಗದರ್ಶನ ನೀಡಬೇಕೆಂದರು. ಈ ಸಂದರ್ಭ ಸಂಘದ ಉಪಾಧ್ಯಕ್ಷÀ ನವೀನ್ ಸುವರ್ಣ, ಸೋಮವಾರಪೇಟೆ ತಾಲೂಕು ಸಂಘದ ಅಧ್ಯಕ್ಷ ವಿಶ್ವಕುಮಾರ್, ನಿರ್ದೇಶಕರಾದ ಶಿವಕುಮಾರ್, ಸದಸ್ಯರಾದ ಮಂಜು ಸುವರ್ಣ, ಕೆ.ಎಂ.ವಿನೋದ್, ಸುರ್ಜಿತ್ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಗೋಣಿಮರೂರು ಗ್ರಾಮದಲ್ಲಿ ಬಂಡಿಯಮ್ಮ ದೇವತಾ ಮೂರ್ತಿ ಪ್ರತಿಷ್ಠಾಪನೆ* 

ಮೇ 8, 2026

*ಕೋರಗಲ್ಲು ಬಸವೇಶ್ವರ ಸ್ವಾಮಿ ವಿಗ್ರಹ ಪುನರ್  ಪ್ರತಿಷ್ಠಾಪನೆ* 

ಮೇ 8, 2026

*ಬಸ್ ಚಾಲಕ ಹೃದಯಾಘಾತದಿಂದ ಸಾವು : ಪ್ರಯಾಣಿಕರು ಅಪಾಯದಿಂದ ಪಾರು*

ಮೇ 8, 2026

*ಕೋರಗಲ್ಲು ಬಸವೇಶ್ವರ ಸ್ವಾಮಿ ವಿಗ್ರಹ ಪುನರ್  ಪ್ರತಿಷ್ಠಾಪನೆ* 

ಮೇ 8, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಮೇ 8 : ಕೊಡ್ಲಿಪೇಟೆ ಬಳಿಯ ಕೋರಗಲ್ಲು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ವಿಗ್ರಹದ ಪುನರ್…

*ಬಸ್ ಚಾಲಕ ಹೃದಯಾಘಾತದಿಂದ ಸಾವು : ಪ್ರಯಾಣಿಕರು ಅಪಾಯದಿಂದ ಪಾರು*

ಮೇ 8, 2026

*ಹೊದ್ದೂರು : ಗ್ರಾಮೀಣ ಮಕ್ಕಳಿಗೆ ಅರಿವು ಬೇಸಿಗೆ ಶಿಬಿರ*

ಮೇ 7, 2026

*ಹುಲಿ ದಾಳಿಗೆ ಹಸು ಬಲಿ*

ಮೇ 7, 2026

*ಡೊನೇಷನ್ ಹಾವಳಿ ವಿರೋಧಿಸಿ ವಿರಾಜಪೇಟೆಯಲ್ಲಿ ಎಸ್‍ಎಫ್‍ಐ ಪ್ರತಿಭಟನೆ*

ಮೇ 7, 2026

*ವಿರಾಜಪೇಟೆ : ಮೇ 26 ರಂದು ನುಡಿ ಉತ್ಸವದ ರಾಷ್ಟ್ರಮಟ್ಟದ ವಿಚಾರ ಸಂಕಿರಣ*

ಮೇ 7, 2026

*ಕೊಡಗು : ಅನಧಿಕೃತ ಹೋಂ-ಸ್ಟೇಗಳ ವಿರುದ್ಧ ಕಠಿಣ ಕ್ರಮ : ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಎಚ್ಚರಿಕೆ*

ಮೇ 7, 2026

*ಮೇ 10ರ ವರೆಗೆ ಸಂತ ಅಂತೋಣಿ ದೇವಾಲಯದ ವಾರ್ಷಿಕ ಮಹೋತ್ಸವ*

ಮೇ 7, 2026

*ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಚಿ.ನಾ.ಸೋಮೇಶ್ ಅವರಿಗೆ ಸನ್ಮಾನ*

ಮೇ 7, 2026

*ಭಾಗಮಂಡಲದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಸಂತೋತ್ಸವ*

ಮೇ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.