Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಎಸ್‍ಐಆರ್ ಪ್ರಕ್ರಿಯೆ, ಸೆ.23 ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ : ಕರಡು ಮತದಾರರ ಪಟ್ಟಿ : ಜಿಲ್ಲೆಯಲ್ಲಿ 4,05,803 ಮಂದಿ ಮತದಾರರು : ಡಿಸಿ ಮಾಹಿತಿ *
  • *ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಓ)ಗೆ ಮಾರುಕಟ್ಟೆ ವಿಭಾಗದಲ್ಲಿ ರಾಜ್ಯ ಮಟ್ಟದ ಶ್ರೇಷ್ಠತಾ ಪ್ರಶಸ್ತಿ*
  • *ಪೂಂಪುಹಾರ್ ವರೆಗೆ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ : ಅ.26ರಿಂದ ತಲಕಾವೇರಿಯಿಂದ ಆರಂಭ*
  • *ಕಟ್ಟೆಮಾಡು ಸಕಾ೯ರಿ ಶಾಲೆಯಲ್ಲಿ ಹಿರಿಯ ಜೀವಿಗಳಿಗೆ ಗೌರವ ನಮನ*
  • *ಬುಡಕಟ್ಟು ಸಾಂಸ್ಕೃತಿಕ ಕಾರ್ಯಕ್ರಮ, ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ : ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಯುವಜನರ ಪಾತ್ರ ಮಹತ್ವದ್ದು : ಶಾಸಕ ಎ.ಎಸ್.ಪೊನ್ನಣ್ಣ*
  • *ಹಿರಿಯ ಜೀವಿಗಳಿಗೆ  ಮರಗೋಡು ಸಕಾ೯ರಿ ಶಾಲೆಯಲ್ಲಿ ಗೌರವ ನಮನ*
  • *ಪಾರಾಣೆಯ ಸಕಾ೯ರಿ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ಗೌರವ ಸಲ್ಲಿಕೆ ; ಕನ್ನಡದಲ್ಲಿ ಓದಿಯೂ ಉತ್ತಮ ಹುದ್ದೆಗೇರಲು ಸಾಧ್ಯ – ಕೆ.ಎ.ಉಮ್ಮರ್*
  • *ಮಳೆಗಾಗಿ ಸಚಿವರಿಂದ ವಿಶೇಷ ಪೂಜೆ*
  • *ಮುಖ್ಯಮಂತ್ರಿಗಳ ಕಾರ್ಯದರ್ಶಿ ನಕುಲ್ ಗೆ  ಕುಶಾಲನಗರದಲ್ಲಿ ಸನ್ಮಾನ*
  • *ಚೆಟ್ಟಳ್ಳಿ ಪ್ರೌಡಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ಜೀವಿಗಳಿಗೆ ಗೌರವ ನಮನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ “ಕಲಾ ವೈಭವ” ಉದ್ಘಾಟನೆ : ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ : ಮೇ.ಪ್ರೊ.ರಾಘವ ಬಿ. ಅಭಿಮತ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ “ಕಲಾ ವೈಭವ” ಉದ್ಘಾಟನೆ : ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ : ಮೇ.ಪ್ರೊ.ರಾಘವ ಬಿ. ಅಭಿಮತ*

ಮೇ 9, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಮೇ 9 : ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿಯಾಗಿದೆ, ಕಲೆಯ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೇಜರ್ ಪ್ರೊ.ರಾಘವ ಬಿ. ಅವರು ಕರೆ ನೀಡಿದ್ದಾರೆ. ನಗರದ ಕೊಡಗು ವಿಶ್ವ ವಿದ್ಯಾನಿಲಯದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ವತಿಯಿಂದ ಕಾಲೇಜ್ ನಲ್ಲಿ ನಡೆದ ಪ್ರತಿಭಾನ್ವೇಷಣೆಯ ಕಲೆಯ ಹಬ್ಬ “ಕಲಾ ವೈಭವ” ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿಯಾಗಿದೆ. ಶಿಕ್ಷಣದ ಜೊತೆಯಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕಾಲೇಜು ಶ್ರಮಿಸುತ್ತಿದ್ದು, ಕಲಾ ವೈಭವ ಇದರ ಒಂದು ಭಾಗವಾಗಿದೆ. ಇಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ಕಿವಿಮಾತು ಹೇಳಿದರು. ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ವಿದ್ಯಾರ್ಥಿಗಳ ರೂಪದಲ್ಲಿ ನೀಡುವ ಕಾರ್ಯವನ್ನು ನಿಸ್ವಾರ್ಥವಾಗಿ ಕಾಲೇಜುಗಳು ಮಾಡುತ್ತಿವೆ. ಎಲ್ಲರೂ ಕೈ ಜೋಡಿಸಿದರೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕಾಲೇಜು ಕೂಡ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮೇಜರ್ ಪ್ರೊ.ರಾಘವ ಬಿ. ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ವಿದ್ಯಾರ್ಥಿ ಸಂಘದ ಸಂಚಾಲಕ ಡಾ.ಶ್ರೀಧರ್ ಹೆಗಡೆ ಅವರು ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಯ “ಕಲಾ ವೈಭವ” ಕಾರ್ಯಕ್ರಮದ ಆಯೋಜನೆ ಇತರರಿಗೆ ಮಾದರಿಯಾಗಿದೆ ಮತ್ತು ಹೆಮ್ಮೆಯ ವಿಚಾರವಾಗಿದೆ ಎಂದು ಶ್ಲಾಘಿಸಿದರು. ಕಲಾ ಲೋಕದಲ್ಲಿ 64 ಪ್ರಕಾರದ ಕಲೆಗಳಿದ್ದು, ಅದನ್ನು ಅಧ್ಯಯನ ಮಾಡಬೇಕು. ಇಂತಹ ವೇದಿಕೆಗಳ ಮೂಲಕ ಕೌಶಲ್ಯವನ್ನು ಇತರರಿಗೂ ಪರಿಚಯಿಸಿ ಮುಂದಿನ ಪೀಳಿಗೆಗೂ ಇದನ್ನು ಹಸ್ತಾಂತರಿಸಬೇಕು ಎಂದು ಸಲಹೆ ನೀಡಿದರು. ಕಲಾ ವಿಭಾಗದ ವಿದ್ಯಾರ್ಥಿಗಳು ಶೈಕ್ಷಣಿಕ ಕೀಳರಿಮೆ ಹೊಂದದೆ ಉನ್ನತ ಸಾಧನೆ ಮಾಡಬೇಕು ಎಂದರು.
ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಡಾ.ಕೃಷ್ಣ ಅವರು ಮಾತನಾಡಿ, ಕಾಲೇಜು ಪ್ರಗತಿ ಪಥದಲ್ಲಿ ಸಾಗಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಕಾರ್ಯಪ್ಪ ಕಾಲೇಜ್ ನ ಚಟುವಟಿಕೆ ಜಿಲ್ಲೆಯ ಎಲ್ಲೆಡೆ ಪಸರಿಸಲು ಬೇರೆ ಕಾಲೇಜು ವಿದ್ಯಾರ್ಥಿಗಳ ಸಂಗಮದಿoದ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಡಾ.ನಯನ ಕಶ್ಯಪ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರತಿಬಿಂಬಿಸಲು ಸೂಕ್ತ ವೇದಿಕೆಯ ಅಗತ್ಯವಿರುತ್ತದೆ, ಕೆಲವೊಮ್ಮೆ ವೇದಿಕೆ ಸಿಗದೆ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಪ್ರತಿಭೆಗಳಿಗೆ ಜೀವ ಕಳೆ ತುಂಬಿದoತಾಗುತ್ತದೆ ಎಂದು ತಿಳಿಸಿದರು. ಸುಮಾರು 77 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಾ ಬಂದಿರುವ ಫೀ.ಮಾ.ಕಾರ್ಯಪ್ಪ ಕಾಲೇಜು ಸಹಸ್ರಾರು ವಿದ್ಯಾರ್ಥಿಗಳಿಗೆ ಉನ್ನತ ಹುದ್ದೆಗಳ ಮೂಲಕ ಬದುಕನ್ನು ಕಟ್ಟಿಕೊಟ್ಟಿದೆ. ಇದು ಹೆಮ್ಮೆಯ ವಿಚಾರವೆಂದು ಹರ್ಷ ವ್ಯಯಕ್ತಪಡಿಸಿದರು. “ಗಮನ ಸೆಳೆದ ಕಲಾ ವೈಭವ” ಕಾರ್ಯಕ್ರಮದಲ್ಲಿ ಸಮೂಹ ನೃತ್ಯ, ಹಾಡುಗಾರಿಕೆ, ನಾಟಕ, ಏಕ ಪಾತ್ರಾಭಿನಯ, ರಂಗೋಲಿ, ಫಯರ್ ಲೆಸ್ ಕುಕ್ಕಿಂಗ್, ಚರ್ಚಾ ಕೂಟ ಸಹಿತ ವಿವಿಧ ಕಲೆಗಳ ಪ್ರದರ್ಶನ ಆಕರ್ಷಿಸಿತು. ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು “ಕಲಾ ವೈಭವ” ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು. ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ.ತಿಪ್ಪೇಸ್ವಾಮಿ, ಕಾರ್ಯಕ್ರಮದ ಸಂಚಾಲಕಿ ಡಾ.ಎ.ಎನ್.ಗಾಯತ್ರಿ, ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಡಾ.ಡೀನಾ ಎಂ.ಪಿ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಮೋನಿಕಾ ಎ.ಎನ್, ಸೂಕ್ಷ್ಮಾಣು ವಿಭಾಗದ ಉಪನ್ಯಾಸಕಿ ಡಾ.ಸೌಮ್ಯ ಕೃಷ್ಣ ಮೂರ್ತಿ, ಭೂಗೋಳ ವಿಭಾಗದ ಉಪನ್ಯಾಸಕಿ ಡಾ.ಬೈರವಿ, ವಿದ್ಯಾರ್ಥಿ ಸಂಘಟನೆಯ ಸಂಚಾಲಕಿ ಟಿ.ವಿ.ವರ್ಷ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಎಸ್‍ಐಆರ್ ಪ್ರಕ್ರಿಯೆ, ಸೆ.23 ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ : ಕರಡು ಮತದಾರರ ಪಟ್ಟಿ : ಜಿಲ್ಲೆಯಲ್ಲಿ 4,05,803 ಮಂದಿ ಮತದಾರರು : ಡಿಸಿ ಮಾಹಿತಿ *

ಆಗಷ್ಟ್ 24, 2026

*ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಓ)ಗೆ ಮಾರುಕಟ್ಟೆ ವಿಭಾಗದಲ್ಲಿ ರಾಜ್ಯ ಮಟ್ಟದ ಶ್ರೇಷ್ಠತಾ ಪ್ರಶಸ್ತಿ*

ಆಗಷ್ಟ್ 24, 2026

*ಪೂಂಪುಹಾರ್ ವರೆಗೆ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ : ಅ.26ರಿಂದ ತಲಕಾವೇರಿಯಿಂದ ಆರಂಭ*

ಆಗಷ್ಟ್ 24, 2026

*ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಓ)ಗೆ ಮಾರುಕಟ್ಟೆ ವಿಭಾಗದಲ್ಲಿ ರಾಜ್ಯ ಮಟ್ಟದ ಶ್ರೇಷ್ಠತಾ ಪ್ರಶಸ್ತಿ*

ಆಗಷ್ಟ್ 24, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಆ.24 : ಈಶಾ ಔಟ್‌ರೀಚ್ ಸಹಕಾರ ಮತ್ತು ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿರುವ ನಾಪೋಕ್ಲುವಿನ ಪೊನ್ನಾಡ್ ರೈತ ಉತ್ಪಾದಕ…

*ಪೂಂಪುಹಾರ್ ವರೆಗೆ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ : ಅ.26ರಿಂದ ತಲಕಾವೇರಿಯಿಂದ ಆರಂಭ*

ಆಗಷ್ಟ್ 24, 2026

*ಕಟ್ಟೆಮಾಡು ಸಕಾ೯ರಿ ಶಾಲೆಯಲ್ಲಿ ಹಿರಿಯ ಜೀವಿಗಳಿಗೆ ಗೌರವ ನಮನ*

ಆಗಷ್ಟ್ 24, 2026

*ಬುಡಕಟ್ಟು ಸಾಂಸ್ಕೃತಿಕ ಕಾರ್ಯಕ್ರಮ, ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ : ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಯುವಜನರ ಪಾತ್ರ ಮಹತ್ವದ್ದು : ಶಾಸಕ ಎ.ಎಸ್.ಪೊನ್ನಣ್ಣ*

ಆಗಷ್ಟ್ 24, 2026

*ಹಿರಿಯ ಜೀವಿಗಳಿಗೆ  ಮರಗೋಡು ಸಕಾ೯ರಿ ಶಾಲೆಯಲ್ಲಿ ಗೌರವ ನಮನ*

ಆಗಷ್ಟ್ 24, 2026

*ಪಾರಾಣೆಯ ಸಕಾ೯ರಿ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ಗೌರವ ಸಲ್ಲಿಕೆ ; ಕನ್ನಡದಲ್ಲಿ ಓದಿಯೂ ಉತ್ತಮ ಹುದ್ದೆಗೇರಲು ಸಾಧ್ಯ – ಕೆ.ಎ.ಉಮ್ಮರ್*

ಆಗಷ್ಟ್ 24, 2026

*ಮಳೆಗಾಗಿ ಸಚಿವರಿಂದ ವಿಶೇಷ ಪೂಜೆ*

ಆಗಷ್ಟ್ 23, 2026

*ಮುಖ್ಯಮಂತ್ರಿಗಳ ಕಾರ್ಯದರ್ಶಿ ನಕುಲ್ ಗೆ  ಕುಶಾಲನಗರದಲ್ಲಿ ಸನ್ಮಾನ*

ಆಗಷ್ಟ್ 23, 2026

*ಚೆಟ್ಟಳ್ಳಿ ಪ್ರೌಡಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ಜೀವಿಗಳಿಗೆ ಗೌರವ ನಮನ*

ಆಗಷ್ಟ್ 23, 2026

*ಕತ್ತಲೆಕಾಡು ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ 20ನೇ ವರ್ಷದ ಗೌರಿ ಗಣೇಶೋತ್ಸವ – ಹಲವು ಕಾರ್ಯಕ್ರಮಗಳ ಆಕರ್ಷಣೆ*

ಆಗಷ್ಟ್ 23, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.