
ಮಡಿಕೇರಿ NEWS DESK ಮೇ 9 : ಇತ್ತೀಚೆಗೆ ನವದೆಹಲಿಯ ತ್ಯಾಗರಾಜ ಸ್ಟೇಡಿಯಂನಲ್ಲಿ ನಡೆದ “ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್ಮಟ್ಟದ 47ನೇ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿಯ ಅನ್ವಿತ್.ಎಸ್ (9) ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಸ್ಪರ್ಧೆಯಲ್ಲಿ ದೇಶದ 2000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬ್ರೈನೋಬ್ರೈನ್ ಅಂತರಾಷ್ಟ್ರೀಯ ದುಬೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಂ ಹಾಗೂ ರಾಜ್ಯದ ಸ್ಥಳೀಯ ವ್ಯವಸ್ಥಾಪಕ ನಿರ್ದೇಶಕರುಗಳು ಉಪಸ್ಥಿತರಿದ್ದು, ಅನ್ವಿತ್ ಜಾಣ್ಮೆಗೆ ಶ್ಲಾಘನೆ ವ್ಯಕ್ತಪಡಿಸಿದರು. ಅನ್ವಿತ್ ಎಸ್. ಮಡಿಕೇರಿಯ ಬ್ರೈನೋಬ್ರೈನ್ ಅಬಾಕಾಸ್ ಸಂಸ್ಥೆಯ ಮಾಪಂಗಡ ಕವಿತಾ ಕರುಂಬಯ್ಯ ಅವರ ಬಳಿ ತರಬೇತಿ ಪಡೆಯುತ್ತಿದ್ದಾನೆ. ಮದೆನಾಡಿನ ಬಿಜಿಎಸ್ ಶಾಲೆಯ 3ನೇ ತರಗತಿಯ ವಿದ್ಯಾರ್ಥಿಯಾಗಿರುವ ಈತ ಮದೆನಾಡಿನ ಮದೆ ಮಹೇಶ್ವರ ಪದವಿಪೂರ್ವ ಕಾಲೇಜ್ ನ ಉಪನ್ಯಾಸಕ ಶ್ರೀನಿವಾಸ ವಿ. ಹಾಗೂ ಪವಿತ್ರ ಎಂ.ಎನ್ ದಂಪತಿಯ ಪುತ್ರ. ಅನ್ವಿತ್ ಸಣ್ಣ ವಯಸ್ಸಿನಲ್ಲೇ ಈ ಮಟ್ಟದ ಯಶಸ್ಸು ಗಳಿಸಲು ಅವರ ತಂದೆ ತಾಯಿಗಳ ಪರಿಶ್ರಮ ಮತ್ತು ಕುಟುಂಬದವರ ಸಹಕಾರ ಮುಖ್ಯ ಕಾರಣವಾಗಿದೆ. ಅನ್ವಿತ್ ನ ರಾಷ್ಟ್ರಮಟ್ಟದ ಯಶಸ್ಸು ಅವರ ಪೋಷಕರಿಗೆ ಸಲ್ಲಬೇಕು ಎಂದು ಮಾರ್ಗದರ್ಶಕರಾದ ಮಾಪಂಗಡ ಕವಿತಾ ಕರುಂಬಯ್ಯ ತಿಳಿಸಿದ್ದಾರೆ.









