Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡಗು : ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ*
  • *ಮೇ 15 ರಂದು “ಕೋವಿ ಮತ್ತು ಕೊಳಲು” ಸಿನಿಮಾದ ಮುಹೂರ್ತ*
  • *ನಿವೇಶನ ರಹಿತರ ಹೋರಾಟವನ್ನು ದಾರಿ ತಪ್ಪಿಸುವ ಯತ್ನ : ಜೆ.ಶಿವಪ್ಪ ಆರೋಪ*
  • *ಹಾಕತ್ತೂರು ಪ್ರೀಮಿಯರ್ ಲೀಗ್ : ತುಶಾಂತ್ ಫ್ರೆಂಡ್ಸ್ ಬಿಳಿಗೇರಿ ತಂಡ ಚಾಂಪಿಯನ್*
  • *ಜನಪರ ಕಾಳಜಿಯಿಂದ ಪ್ರಧಾನಮಂತ್ರಿಗಳು ಆರ್ಥಿಕ ಶಿಸ್ತಿನ ಸಲಹೆ ನೀಡಿದ್ದಾರೆ : ಕಾಂಗ್ರೆಸ್ಸಿಗರು ಬೇಜವಾಬ್ದಾರಿತನದ ಹೇಳಿಕೆ ನೀಡುವುದನ್ನು ನಿಲ್ಲಿಸಲಿ : ವಿರಾಜಪೇಟೆ ಬಿಜೆಪಿ ಅಸಮಾಧಾನ*
  • *ಸಿಡಿಲಬ್ಬರಕ್ಕೆ ಲಾರಿ ಮೇಲೆ ಮರ ಬಿದ್ದು 8 ಕಾರ್ಮಿಕರಿಗೆ ಗಾಯ*
  • *ಅಕ್ಕಪಡೆಯಿಂದ ರೆಸಾರ್ಟ್ ಸಿಬ್ಬಂದಿಗಳಿಗೆ ತುರ್ತು ಸಹಾಯವಾಣಿಗಳ ಕುರಿತು ಜಾಗೃತಿ*
  • *ನಂಬಿಕೆಗೆ ಮತ್ತೊಂದು ಗರಿ : ಜಿ.ಎಲ್‌.ಆಚಾರ್ಯ ಜ್ಯುವೆಲ್ಲರಿಯ ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯಗೆ ‘ಪವರ್ ಆಫ್ ಯಂಗ್’ ಗೌರವ*
  • *ಬಸವನಹಳ್ಳಿಯಲ್ಲಿ ಚಾಮುಂಡೇಶ್ವರಿ ದೇವರ 53ನೇ ವಾರ್ಷಿಕ ಪೂಜೋತ್ಸವ*
  • *ಮೇ 15 ರಿಂದ ಮೂರ್ನಾಡಿನಲ್ಲಿ ಕೊಡವ ಭಾಷಿಕ ಸಮುದಾಯಗಳ ಕ್ರೀಡಾಕೂಟ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಜನಪರ ಕಾಳಜಿಯಿಂದ ಪ್ರಧಾನಮಂತ್ರಿಗಳು ಆರ್ಥಿಕ ಶಿಸ್ತಿನ ಸಲಹೆ ನೀಡಿದ್ದಾರೆ : ಕಾಂಗ್ರೆಸ್ಸಿಗರು ಬೇಜವಾಬ್ದಾರಿತನದ ಹೇಳಿಕೆ ನೀಡುವುದನ್ನು ನಿಲ್ಲಿಸಲಿ : ವಿರಾಜಪೇಟೆ ಬಿಜೆಪಿ ಅಸಮಾಧಾನ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಜನಪರ ಕಾಳಜಿಯಿಂದ ಪ್ರಧಾನಮಂತ್ರಿಗಳು ಆರ್ಥಿಕ ಶಿಸ್ತಿನ ಸಲಹೆ ನೀಡಿದ್ದಾರೆ : ಕಾಂಗ್ರೆಸ್ಸಿಗರು ಬೇಜವಾಬ್ದಾರಿತನದ ಹೇಳಿಕೆ ನೀಡುವುದನ್ನು ನಿಲ್ಲಿಸಲಿ : ವಿರಾಜಪೇಟೆ ಬಿಜೆಪಿ ಅಸಮಾಧಾನ*

ಮೇ 13, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 13 NEWS DESK : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಜಾಗತಿಕ ತೈಲ ಮಾರುಕಟ್ಟೆಯ ಅಸ್ಥಿರತೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿತಾಯ ಹಾಗೂ ಆರ್ಥಿಕ ಶಿಸ್ತಿನ ಬಗ್ಗೆ ದೇಶದ ಜನತೆಗೆ ನೀಡಿರುವ ಸಲಹೆಯನ್ನು ಕಾಂಗ್ರೆಸ್ ಪಕ್ಷ ಕ್ಷುಲ್ಲಕ ರಾಜಕಾರಣಕ್ಕಾಗಿ ಬಳಸುತ್ತಿರುವುದು ಖಂಡನೀಯವೆಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಸಂದಿಗ್ಧತೆ ಇಡೀ ವಿಶ್ವದ ಮೇಲೆ ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ದೇಶದ ಜನರಿಗೆ ಸಮಸ್ಯೆಯಾಗಬಾರದು ಎನ್ನುವ ದೂರದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಶಿಸ್ತಿನ ಕುರಿತು ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದ ಕಾಂಗ್ರೆಸ್ಸಿಗರು ದೇಶದ ಆಂತರಿಕ ಸಮಸ್ಯೆ ಎಂಬಂತೆ ಪ್ರತಿಬಿಂಬಿಸಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಗಳಾಗಿದ್ದಾಗ ಚಿನ್ನದ ಮೇಲಿನ ಅವಲಂಬನೆ ಕಡಿಮೆ ಮಾಡಲು ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಮಿತವಾಗಿ ಬಳಸಲು ಕರೆ ನೀಡಿದ್ದರು. ಆದರೆ ಆ ಸಂದರ್ಭ ಯಾವುದೇ ಯುದ್ಧ ಇರಲಿಲ್ಲ, ಕೇವಲ ಆರ್ಥಿಕ ನಿರ್ವಹಣೆಯ ಕೊರತೆ ಇತ್ತು ಎಂದು ಟೀಕಿಸಿದ್ದಾರೆ. ಪ್ರಸ್ತುತ ಪ್ರಧಾನಿ ಮೋದಿ ಅವರು ನೀಡಿರುವ ಸಲಹೆಗಳನ್ನು ದೇಶದ ಹಿತ ಮತ್ತು ನಮ್ಮ ಒಳಿತಿಗಾಗಿ ನಾವೆಲ್ಲರೂ ಪಾಲಿಸಬೇಕಾಗಿದೆ. ದೇಶದ ಬಗ್ಗೆ ಕಾಳಜಿ ಇಲ್ಲದ ಕಾಂಗ್ರೆಸ್ಸಿಗರು ಈ ಹಿಂದೆ ಕೋವಿಡ್ ಸಂದರ್ಭದ ಕ್ರಮಗಳಿಗೂ ಟೀಕೆ ವ್ಯಕ್ತಪಡಿಸಿದ್ದರು. ಆದರೆ ಪ್ರಧಾನಿ ಮೋದಿ ಅವರ ದಿಟ್ಟ ನಿರ್ಧಾರದಿಂದಾಗಿ ಜನರು ಸರಕ್ಷಿತವಾಗಿದ್ದರು, ಅಲ್ಲದೆ ಭಾರತದ ಕ್ರಮಗಳು ಇತರ ದೇಶಗಳಿಗೂ ಮಾದರಿಯಾಗಿತ್ತು. ದೇಶದ ಹಿತಕ್ಕಿಂತ ಸ್ವಾರ್ಥ ರಾಜಕಾರಣವೇ ಕಾಂಗ್ರೆಸ್ಸಿಗರಿಗೆ ಮುಖ್ಯವಾಗಿದೆ. 1968 ರ ಚಿನ್ನದ (ನಿಯಂತ್ರಣ) ಕಾಯಿದೆಯು ಭಾರತದ ಆರ್ಥಿಕ ಇತಿಹಾಸದಲ್ಲಿ ಚಿನ್ನದ ಮೇಲೆ ಹೇರಲಾದ ಅತ್ಯಂತ ಕಠಿಣ ನಿಬರ್ಂಧಗಳಲ್ಲಿ ಒಂದಾಗಿದೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸರಕಾರ ದೇಶೀಯ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡಲು ಮತ್ತು ಆರ್ಥಿಕ ಒತ್ತಡವನ್ನು ನಿರ್ವಹಿಸಲು, ವಿಶೇಷವಾಗಿ ಚಿನ್ನದ ಕಳ್ಳಸಾಗಣೆಯನ್ನು ತಡೆಯಲು ಈ ಕಾಯಿದೆಯನ್ನು ಸೆಪ್ಟೆಂಬರ್ 1, 1968 ರಂದು ಜಾರಿಗೆ ತಂದಿತು. ಈ ಕಾಯಿದೆಯು ವೈಯಕ್ತಿಕವಾಗಿ ಚಿನ್ನವನ್ನು (ಕಚ್ಚಾ ಅಥವಾ ಆಭರಣವಲ್ಲದ ರೂಪದಲ್ಲಿ) ಇಟ್ಟುಕೊಳ್ಳುವುದನ್ನು ನಿಬರ್ಂಧಿಸಿತು. ಚಿನ್ನದ ವ್ಯಾಪಾರ, ಉತ್ಪಾದನೆ ಮತ್ತು ವಿತರಣೆಯ ಮೇಲೆ ಸರಕಾರ ಸಂಪೂರ್ಣ ನಿಯಂತ್ರಣ ಸಾಧಿಸಿತು. ಇದನ್ನು ಕಾಂಗ್ರೆಸ್ಸಿಗರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಕೇಂದ್ರ ಸರಕಾರವನ್ನು ಟೀಕಿಸುವ ಮೊದಲು ರಾಜ್ಯ ಸರಕಾರದ ಆರ್ಥಿಕ ದುಸ್ಥಿತಿಯ ಬಗ್ಗೆ ಕಾಂಗ್ರೆಸ್ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ಮನಬಂದಂತೆ ಏರಿಕೆ ಮಾಡಲಾಗುತ್ತಿದೆ. ಜನರಿಗೆ ಹೊರೆಯಾಗಿರುವ ಕಾಂಗ್ರೆಸ್ ಸರಕಾರ ಕೇಂದ್ರವನ್ನು ಟೀಕಿಸುವುದರಲ್ಲೇ ಕಾಲಹರಣ ಮಾಡುತ್ತಿದೆ. ಕ್ಷುಲ್ಲಕ ರಾಜಕಾರಣಕ್ಕಾಗಿ ಬೇಜವಾಬ್ದಾರಿ ಹೇಳಿಕೆಗಳನ್ನು ಮೊದಲು ನಿಲ್ಲಿಸಿ ಪ್ರಧಾನಿ ಮೋದಿ ಅವರ ಜನಪರ ಕಾಳಜಿಯನ್ನು ಗೌರವಿಸಲಿ ಎಂದು ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡಗು : ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ*

ಮೇ 13, 2026

*ಮೇ 15 ರಂದು “ಕೋವಿ ಮತ್ತು ಕೊಳಲು” ಸಿನಿಮಾದ ಮುಹೂರ್ತ*

ಮೇ 13, 2026

*ನಿವೇಶನ ರಹಿತರ ಹೋರಾಟವನ್ನು ದಾರಿ ತಪ್ಪಿಸುವ ಯತ್ನ : ಜೆ.ಶಿವಪ್ಪ ಆರೋಪ*

ಮೇ 13, 2026

*ಮೇ 15 ರಂದು “ಕೋವಿ ಮತ್ತು ಕೊಳಲು” ಸಿನಿಮಾದ ಮುಹೂರ್ತ*

ಮೇ 13, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 13 NEWS DESK : ಮಂಗಳೂರಿನ ಎಂಪೀರಿಯಾ ಎಂಟರ್‍ಟೈನ್‍ಮೆಂಟ್ ವತಿಯಿಂದ ನಿರ್ಮಾಣವಾಗಲಿರುವ “ಕೋವಿ ಮತ್ತು ಕೊಳಲು” ಸಿನಿಮಾದ…

*ನಿವೇಶನ ರಹಿತರ ಹೋರಾಟವನ್ನು ದಾರಿ ತಪ್ಪಿಸುವ ಯತ್ನ : ಜೆ.ಶಿವಪ್ಪ ಆರೋಪ*

ಮೇ 13, 2026

*ಹಾಕತ್ತೂರು ಪ್ರೀಮಿಯರ್ ಲೀಗ್ : ತುಶಾಂತ್ ಫ್ರೆಂಡ್ಸ್ ಬಿಳಿಗೇರಿ ತಂಡ ಚಾಂಪಿಯನ್*

ಮೇ 13, 2026

*ಜನಪರ ಕಾಳಜಿಯಿಂದ ಪ್ರಧಾನಮಂತ್ರಿಗಳು ಆರ್ಥಿಕ ಶಿಸ್ತಿನ ಸಲಹೆ ನೀಡಿದ್ದಾರೆ : ಕಾಂಗ್ರೆಸ್ಸಿಗರು ಬೇಜವಾಬ್ದಾರಿತನದ ಹೇಳಿಕೆ ನೀಡುವುದನ್ನು ನಿಲ್ಲಿಸಲಿ : ವಿರಾಜಪೇಟೆ ಬಿಜೆಪಿ ಅಸಮಾಧಾನ*

ಮೇ 13, 2026

*ಸಿಡಿಲಬ್ಬರಕ್ಕೆ ಲಾರಿ ಮೇಲೆ ಮರ ಬಿದ್ದು 8 ಕಾರ್ಮಿಕರಿಗೆ ಗಾಯ*

ಮೇ 13, 2026

*ಅಕ್ಕಪಡೆಯಿಂದ ರೆಸಾರ್ಟ್ ಸಿಬ್ಬಂದಿಗಳಿಗೆ ತುರ್ತು ಸಹಾಯವಾಣಿಗಳ ಕುರಿತು ಜಾಗೃತಿ*

ಮೇ 12, 2026

*ನಂಬಿಕೆಗೆ ಮತ್ತೊಂದು ಗರಿ : ಜಿ.ಎಲ್‌.ಆಚಾರ್ಯ ಜ್ಯುವೆಲ್ಲರಿಯ ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯಗೆ ‘ಪವರ್ ಆಫ್ ಯಂಗ್’ ಗೌರವ*

ಮೇ 12, 2026

*ಬಸವನಹಳ್ಳಿಯಲ್ಲಿ ಚಾಮುಂಡೇಶ್ವರಿ ದೇವರ 53ನೇ ವಾರ್ಷಿಕ ಪೂಜೋತ್ಸವ*

ಮೇ 12, 2026

*ಮೇ 15 ರಿಂದ ಮೂರ್ನಾಡಿನಲ್ಲಿ ಕೊಡವ ಭಾಷಿಕ ಸಮುದಾಯಗಳ ಕ್ರೀಡಾಕೂಟ*

ಮೇ 12, 2026

*ಮೇ 13 ರಿಂದ ಸಿದ್ದಾಪುರ ಮುಸ್ಲಿಂ ಆರ್ಫನೇಜ್ ಸುವರ್ಣ ಮಹೋತ್ಸವ*

ಮೇ 12, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.