
ಮಡಿಕೇರಿ NEWS DESK ಮೇ 14 : ವಿರಾಜಪೇಟೆ ಬ್ಲಾಕ್ ಮತ್ತು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ನ ವಲಯಗಳಿಗೆ ನೂತನ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ನ ಚೆನ್ನಯ್ಯನ ಕೋಟೆ ವಲಯಾಧ್ಯಕ್ಷರಾಗಿ ಹೆಚ್.ಸಿ.ಮನು, ಅಮ್ಮತ್ತಿ ಕೆ.ಎನ್.ರಾಜನ್, ಕಾರ್ಮಾಡು ಪಳಿಯತಂಡ ಡಿ.ಹರಿ, ಕಣ್ಣಂಗಾಲ ಮಚ್ಚಾರಂಡ ಎಂ.ಕಿರಣ್, ಕಾಕೋಟುಪರಂಬು ಬಟ್ಟಕಾಳಂಡ ರಾಜ ದಿನೇಶ್, ಬಿಳಗುಂದ ನೌಫಲ್ ಹೆಚ್.ಎಂ ಹಾಗೂ ವಿರಾಜಪೇಟೆ ವಲಯಾಧ್ಯಕ್ಷರಾಗಿ ಮಾಳೇಟಿರ ಬೋಪಣ್ಣ ನೇಮಕಗೊಂಡಿದ್ದಾರೆ. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ನ ಸಂಪಾಜೆ ವಲಯಾಧ್ಯಕ್ಷರಾಗಿ ವಿಜಯ್ ಕುಮಾರ್, ಕುಂದಚೇರಿ ಕೀರ್ತಿ ಉತ್ತಪ್ಪ, ಅಯ್ಯಂಗೇರಿ ಅಬ್ದುಲ್ ರೆಹಮಾನ್, ಹಾಕತ್ತೂರು ಬಿ.ಕೆ.ನಾರಾಯಣ, ಎಮ್ಮೆಮಾಡು ಕೆ.ಎಂ.ಮೂಸ, ಬಲ್ಲಮಾವಟಿ ಮಣವಟ್ಟಿರ ದಯಾ ಕುಟ್ಟಪ್ಪ, ಮದೆ ದೀಪಕ್ ಎಂ.ಎ, ಮೇಕೇರಿ ಪೊನ್ನಪ್ಪ ಹಾಗೂ ಕರಿಕೆ ವಲಯಾಧ್ಯಕ್ಷರಾಗಿ ಬೇಕಲ್ ಹರಿ ಪ್ರಸಾದ್ ನೇಮಕಗೊಂಡಿದ್ದಾರೆ.
ಇತರ ವಲಯ ಅಧ್ಯಕ್ಷರುಗಳು ಯಥಾ ರೀತಿಯಲ್ಲಿ ಮುಂದುವರಿಯಲಿದ್ದಾರೆ ಎಂದು ಕೊಲ್ಯದ ಗಿರೀಶ್ ತಿಳಿಸಿದ್ದಾರೆ.








