Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸೋಮವಾರಪೇಟೆ : ಪಟ್ಟಣದ ಸ್ವಚ್ಛತೆಗೆ ಜನರ ಸಹಕಾರ ಅಗತ್ಯ : ಶಾಸಕ ಡಾ.ಮಂತರ್ ಗೌಡ*
  • *ಸಿ.ಎಸ್.ಆದ್ವಿಗೆ ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿ*
  • *ಕೊಡಗು ಹಿಂದೂ ಮಲಯಾಳಿ ಸಮಾಜದಿಂದ ಪ್ರತಿಭಾ ಪುರಸ್ಕಾರ : ಸಾಧಕರಿಗೆ ಸನ್ಮಾನ*
  • *ಮಡಿಕೇರಿ : ಮೇ 31 ರಂದು ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶ್ರೀ ಭಗವತಿ ದೇವಿಯ ಪೊಂಗಾಲ ಉತ್ಸವ*
  • *ಮೇ 23 ರಂದು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ “ವಿಶ್ವ ಜೇನು ದಿನಾಚರಣೆ*
  • *ಮೇ 20 ರಂದು ಔಷಧಿ ವ್ಯಾಪಾರಸ್ಥರ ಪ್ರತಿಭಟನೆ : ಕೊಡಗಿನಲ್ಲಿ ಎಲ್ಲಾ ಔಷಧಿಯಂಗಡಿಗಳು ಬಂದ್*
  • *ಕೊಡಗು ವಿಶ್ವವಿದ್ಯಾಲಯದಲ್ಲಿ “ಯುವ ವೈಭವ” ಕಾರ್ಯಕ್ರಮ : ಸಾಂಸ್ಕೃತಿಕ ಸ್ಪರ್ಧೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ರಹದಾರಿ : ಶಾಸಕ ಡಾ.ಮಂತರ್ ಗೌಡ ಅಭಿಮತ*
  • *ಯುಡಿಎಫ್ ಮೈತ್ರಿ ಕೂಟದ ಅಭೂತಪೂರ್ವ ಗೆಲುವು : ಅಭಿನಂದನೆ ಸಲ್ಲಿಸಿದ ಕೆ.ಎ.ಯಾಕುಬ್*
  • *ಶೇ.100ರಷ್ಟು ಫಲಿತಾಂಶ ಗಳಿಸಿದ ಪ್ರೌಢ ಶಾಲೆಗಳಿಗೆ ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ಸಾಧನಸಿರಿ ಪ್ರಶಸ್ತಿ ಪ್ರದಾನ*
  • *ಚಿಕಿತ್ಸೆ ಫಲಿಸದೆ ಮಾರ್ತಾಂಡ ಸಾವು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮೇ 20 ರಂದು ಔಷಧಿ ವ್ಯಾಪಾರಸ್ಥರ ಪ್ರತಿಭಟನೆ : ಕೊಡಗಿನಲ್ಲಿ ಎಲ್ಲಾ ಔಷಧಿಯಂಗಡಿಗಳು ಬಂದ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮೇ 20 ರಂದು ಔಷಧಿ ವ್ಯಾಪಾರಸ್ಥರ ಪ್ರತಿಭಟನೆ : ಕೊಡಗಿನಲ್ಲಿ ಎಲ್ಲಾ ಔಷಧಿಯಂಗಡಿಗಳು ಬಂದ್*

ಮೇ 19, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
oplus_0
Facebook Twitter WhatsApp Email Telegram Copy Link

ಮಡಿಕೇರಿ ಮೇ 19 NEWS DESK : “ಆನ್ ಲೈನ್” ಔಷಧಿಗಳ ಮಾರಾಟವನ್ನು ಸ್ಥಗಿತಗೊಳಿಸಬೇಕೆನ್ನುವ ಪ್ರಮುಖ ಬೇಡಿಕೆಯನ್ನು ಮುಂದಿರಿಸಿಕೊಂಡು ಮೇ 20 ರಂದು ನಡೆಯಲಿರುವ ಔಷಧಿ ವ್ಯಾಪಾರಸ್ಥರ ರಾಷ್ಟ್ರೀಯ ಮಟ್ಟದ ಪ್ರತಿಭಟನೆಯ ಭಾಗವಾಗಿ ಕೊಡಗು ಜಿಲ್ಲಾ ವ್ಯಾಪ್ತಿಯ ಎಲ್ಲಾ ಔಷಧಿಯಂಗಡಿಗಳು ಅಂದು ಮುಚ್ಚಲ್ಪಡಲಿವೆ. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘಟನೆಯ ಅಧ್ಯಕ್ಷರು, ರಾಜ್ಯ ಸಂಘÀಟನೆಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಸಂಘಟನೆಯ ಸಂಘಟನಾ ಕಾರ್ಯದರ್ಶಿಗಳಾದ ಎ.ಕೆ.ಜೀವನ್ ಪ್ರತಿಭಟನೆಯ ಕುರಿತು ಮಾಹಿತಿ ನೀಡಿದರು. ರಾಷ್ಟ್ರವ್ಯಾಪಿ 12.50 ಲಕ್ಷ ಔಷಧಿ ವ್ಯಾಪಾರಸ್ಥರಿದ್ದಾರಾದರೆ, ರಾಜ್ಯದಲ್ಲಿ 26 ಸಾವಿರ ಹಾಗೂ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ 200 ಔಷಧ ವ್ಯಾಪಾರಸ್ಥರಿದ್ದಾರೆ. ಇವರೆಲ್ಲರೂ ತಮ್ಮ ಔಷಧಿಯಂಗಡಿಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚಿ ಪ್ರತಿಭಟನೆ ನಡೆಸಲಿದ್ದಾರೆಂದು ತಿಳಿಸಿದರು. ಪ್ರತಿಭಟನೆಯ ಸಂದರ್ಭ ಸಾರ್ವಜನಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗಬಾರದೆನ್ನುವ ಉದ್ದೇಶದಿಂದ ಆಸ್ಪತ್ರೆಗಳಲ್ಲಿ ಇರುವ ಔಷಧಿಯಂಗಡಿಗಳನ್ನು ತೆರೆದಿಡಲು ಅವಕಾಶ ನೀಡಲಾಗಿದೆಯೆಂದು ಜೀವನ್ ಮಾಹಿತಿಯನ್ನಿತ್ತರು. :: ಕೊರೋನ ಸಂದರ್ಭದ ಆದೇಶ ಹಿಂಪಡೆಯಿರಿ :: ಕೊರೋನಾ ಮಹಾ ಮಾರಿ ರಾಷ್ಟ್ರ ಮಟ್ಟದಲ್ಲಿ ಕಾಣಿಸಿಕೊಂಡು ಆತಂಕವನ್ನು ಸೃಷ್ಟಿಸಿರುವ ಹಂತದಲ್ಲಿ ಕೇಂದ್ರ ಸರ್ಕಾರ “ಆನ್ ಲೈನ್”ನಲ್ಲಿ ಔಷಧಿ ವ್ಯಾಪಾರಕ್ಕೆ ಅವಕಾಶವನ್ನು ಒದಗಿಸಿತು. ಅದನ್ನೇ ಆಧಾರವಾಗಿಸಿಕೊಂಡು ಇಂದಿಗೂ ಆನ್‍ಲೈನ್‍ನಲ್ಲಿ ಔಷಧಿ ವ್ಯಾಪಾರ ನಡೆಸಲಾಗುತ್ತಿದೆ. ಆದರೆ, ಇಂತಹ ವ್ಯಾಪಾರ ಯಾವತ್ತೂ ಗ್ರಾಹಕರ ಹಿತಕ್ಕೆ ವಿರುದ್ಧವಾಗಿದೆ. ಆನ್ ಲೈನ್ ಮೂಲಕ ಔಷಧಿ ಖರೀದಿಸಿದ ಗ್ರಾಹಕರು ಯಾವುದೇ ಸಮಸ್ಯೆಗಳಿಗೆ ಒಳಗಾದಲ್ಲಿ ದೂರು ನೀಡಲು ಸಾಧ್ಯವಾಗಲಾರದೆಂದು ತಿಳಿಸಿದ ಅವರು, ತಕ್ಷಣವೆ ಆನ್‍ಲೈನ್ ಔಷಧಿ ವ್ಯಾಪಾರಕ್ಕೆ ನೀಡಿರುವ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರು. ದೊಡ್ಡ ಮಟ್ಟದ ವಿನಾಯ್ತಿಗಳನ್ನು ಸ್ಥಗಿತಗೊಳಿಸಿ :: ಔಷಧಿ ವ್ಯಾಪಾರಸ್ಥರೆಲ್ಲರು ನ್ಯಾಷನಲ್ ಪ್ರೈಸಿಂಗ್ ಅಥಾರಿಟಿ ನಿಗದಿ ಪಡಿಸಿದ ದರದಂತೆ ಮಾರಾಟ ಮಾಡುತ್ತಾರೆ. ಈ ಸಂದರ್ಭ ಔಷಧಿ ವ್ಯಾಪಾರಸ್ಥರು ಪಡೆಯುವ ಕಮಿಷನ್ ಶೇ.17 ರಿಂದ 20 ರಷ್ಟಿರುತ್ತದೆ. ಆದರೆ, ಆನ್ ಲೈನ್ ಮೂಲಕ ಔಷಧಿ ಮಾರಾಟ ಮಾಡುವ ದೊಡ್ಡ ಕಂಪೆನಿಗಳು ಶೇ.45ರಿಂದ 50 ರಷ್ಟು ರಿಯಾಯಿತಿಯನ್ನು ಗ್ರಾಹಕರಿಗೆ ನೀಡುತ್ತಿದ್ದು, ಈ ಪ್ರಮಾಣದ ರಿಯಾಯಿತಿ ನೀಡಲು ಸಾಧ್ಯವಿಲ್ಲ. ಇದನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಜೀವನ್ ಆಗ್ರಹಿಸಿದರು. ಇವೆಲ್ಲಕ್ಕೂ ಮಿಗಿಲಾಗಿ ದೊಡ್ಡ ಪ್ರಮಾಣದಲ್ಲಿ ಗುಣಮಟ್ಟವನ್ನು ಖಾತರಿ ಪಡಿಸದ ನಕಲಿ ಔಷಧಿಗಳ ಮಾರಾಟ ವ್ಯಾಪಕವಾಗಿ ನಡೆಯುತ್ತಿದ್ದು, ಇವುಗಳ ಮೇಲೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ಅಂಬೆಕಲ್ಲು ವಿನೋದ್, ಕಾರ್ಯದರ್ಶಿ ಡಿ.ಐ.ಪುರುಷೋತ್ತಮ, ಜಂಟಿ ಕಾರ್ಯದರ್ಶಿ ಕೆ.ವಸಂತ ಕುಮಾರ್, ಖಜಾಂಚಿ ಪ್ರಸಾದ್ ಗೌಡ, ಆಡಳಿತ ಮಂಡಳಿ ಸದಸ್ಯರಾದ ತಿಲಕ್ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸೋಮವಾರಪೇಟೆ : ಪಟ್ಟಣದ ಸ್ವಚ್ಛತೆಗೆ ಜನರ ಸಹಕಾರ ಅಗತ್ಯ : ಶಾಸಕ ಡಾ.ಮಂತರ್ ಗೌಡ*

ಮೇ 19, 2026

*ಸಿ.ಎಸ್.ಆದ್ವಿಗೆ ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿ*

ಮೇ 19, 2026

*ಕೊಡಗು ಹಿಂದೂ ಮಲಯಾಳಿ ಸಮಾಜದಿಂದ ಪ್ರತಿಭಾ ಪುರಸ್ಕಾರ : ಸಾಧಕರಿಗೆ ಸನ್ಮಾನ*

ಮೇ 19, 2026

*ಸಿ.ಎಸ್.ಆದ್ವಿಗೆ ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿ*

ಮೇ 19, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸೋಮವಾರಪೇಟೆ ಮೇ 19 NEWS DESK : ಜಿಲ್ಲಾ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡುವ ಜಿಲ್ಲಾ…

*ಕೊಡಗು ಹಿಂದೂ ಮಲಯಾಳಿ ಸಮಾಜದಿಂದ ಪ್ರತಿಭಾ ಪುರಸ್ಕಾರ : ಸಾಧಕರಿಗೆ ಸನ್ಮಾನ*

ಮೇ 19, 2026

*ಮಡಿಕೇರಿ : ಮೇ 31 ರಂದು ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶ್ರೀ ಭಗವತಿ ದೇವಿಯ ಪೊಂಗಾಲ ಉತ್ಸವ*

ಮೇ 19, 2026

*ಮೇ 23 ರಂದು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ “ವಿಶ್ವ ಜೇನು ದಿನಾಚರಣೆ*

ಮೇ 19, 2026

*ಮೇ 20 ರಂದು ಔಷಧಿ ವ್ಯಾಪಾರಸ್ಥರ ಪ್ರತಿಭಟನೆ : ಕೊಡಗಿನಲ್ಲಿ ಎಲ್ಲಾ ಔಷಧಿಯಂಗಡಿಗಳು ಬಂದ್*

ಮೇ 19, 2026

*ಕೊಡಗು ವಿಶ್ವವಿದ್ಯಾಲಯದಲ್ಲಿ “ಯುವ ವೈಭವ” ಕಾರ್ಯಕ್ರಮ : ಸಾಂಸ್ಕೃತಿಕ ಸ್ಪರ್ಧೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ರಹದಾರಿ : ಶಾಸಕ ಡಾ.ಮಂತರ್ ಗೌಡ ಅಭಿಮತ*

ಮೇ 19, 2026

*ಯುಡಿಎಫ್ ಮೈತ್ರಿ ಕೂಟದ ಅಭೂತಪೂರ್ವ ಗೆಲುವು : ಅಭಿನಂದನೆ ಸಲ್ಲಿಸಿದ ಕೆ.ಎ.ಯಾಕುಬ್*

ಮೇ 19, 2026

*ಶೇ.100ರಷ್ಟು ಫಲಿತಾಂಶ ಗಳಿಸಿದ ಪ್ರೌಢ ಶಾಲೆಗಳಿಗೆ ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ಸಾಧನಸಿರಿ ಪ್ರಶಸ್ತಿ ಪ್ರದಾನ*

ಮೇ 19, 2026

*ಚಿಕಿತ್ಸೆ ಫಲಿಸದೆ ಮಾರ್ತಾಂಡ ಸಾವು*

ಮೇ 19, 2026

*ಅಭಿನಯ ನೃತ್ಯ ಕೇಂದ್ರದ ನೂತನ ವಿದ್ಯಾರ್ಥಿಗಳ ಗೆಜ್ಜೆ ಪೂಜೆ ಕಾರ್ಯಕ್ರಮ*

ಮೇ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.