
ಗೋಣಿಕೊಪ್ಪ ಮೇ 19 NEWS DESK : ಕೊಡಗು ಹಿಂದೂ ಮಲಯಾಳಿ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತು ಮಹಾಸಭೆಯು ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷರಾದ ಕೆ.ಪಿ.ಪ್ರಶಾಂತ್‍ಕುಮಾರ್ ಅವರು, ಎಲ್ಲರೂ ಒಗ್ಗಟ್ಟಿನಿಂದ ಮುಂದುವರಿದರೆ ಸಮಾಜದ ಅಭಿವೃದ್ಧಿ ಸಾಧ್ಯವಿದೆ. ಸದಸ್ಯತ್ವ ಅಭಿಯನದೊಂದಿಗೆ ಮರಣ ನಿಧಿ ಸ್ಥಾಪಿಸುವುದು ಕೂಡ ಸದಸ್ಯರ ಕುಟುಂಬಕ್ಕೆ ನೆರವಾಗಲಿದೆ. ಸಮಾಜದಲ್ಲಿ ಆರ್ಥಿಕ ಕ್ರೋಡೀಕರಣದ ಮೂಲಕ ಸ್ವಂತಜಾಗ ಖರೀದಿಸಿ ಸಮಾಜದ ಕಟ್ಟಡ ನಿರ್ಮಿಸಲು ಮುಂದಾಗಲು ಎಲ್ಲರ ಸಹಕಾರ ಅಗತ್ಯ ಎಂದರು. ಗೌರವ ಅಧ್ಯಕ್ಷ ಪಿ.ಎಸ್.ಶರತ್‍ಕಾಂತ್, ಖಜಾಂಜಿ ಶಾಜಿಅಚ್ಚುತನ್, ಉಪಾಧ್ಯಕ್ಷರುಗಳಾದ ಕೆ.ಜಿ.ಪ್ರಸಾದ್, ಸಿ.ಕೆ.ವೇಣುಗೋಪಾಲ್, ಪುಷ್ಪ ಮನೋಜ್, ಶ್ರೀಜಾ ಪ್ರದೀಪ್, ಸಂಘಟನಾ ಕಾರ್ಯದರ್ಶಿ ಟಿ.ಜಿ.ಮನು ಕುಮಾರ್, ಸರಳ ಮಣಿಲಾಲ್, ಸಹ ಕಾರ್ಯದರ್ಶಿ ಬಿಂದು ಸಾಜಿ, ಕಾನೂನು ಸಲಹೆಗಾರ ಕೆ.ಬಿ.ಸಂಜೀವ್, ನಿರ್ದೇಶಕರುಗಳಾದ ಪಿ.ಜಿ.ರಾಜಶೇಖರ್, ಪಿ.ವಿ.ಚಂದ್ರ, ರತೀಶ್‍ಕುಮಾರ್, ವಿ.ಎನ್.ರೀನಾ, ಸುನಿತಾಕಣ್ಣನ್, ಪಾಲಿಬೆಟ್ಟ ಉಪ ಸಮಿತಿಯಅಧ್ಯಕ್ಷಪಿ.ವೈ. ಮುರುಳಿ, ಕಾರ್ಯದರ್ಶಿ ಮನೋಜ್‍ಕುಮಾರ್ ಬಂಡೆ ಇದ್ದರು. : ಸನ್ಮಾನ : ಸಾಧನೆ ಮಾಡಿದ ಸಮಾಜದ ಸದಸ್ಯ ಮಕ್ಕಳನ್ನು ಸನ್ಮಾನಿಸಲಾಯಿತು. ಎಸ್‍ಎಸ್‍ಎಲ್‍ಸಿ ವಿಭಾಗದಲ್ಲಿ ಎಂ.ವಿ.ವಿಶ್ಮಿತ, ಬಿ.ಎ.ಅನುರಾಗ್, ಎನ್.ಎಸ್.ಶ್ರೀಹರಿ, ದ್ವಿತಿಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶಿವಾನಿ, ವಿ. ಎ. ಆತ್ಮಿಕ, ವಿಜ್ಞಾನ ವಿಭಾಗದಲ್ಲಿ ಎಂ.ಟಿ.ಶ್ರೇಯ, ವಿ.ಎ.ಕ್ರಿಶ್ಮಾ, ಕ್ರೀಡಾ ವಿಭಾಗದಲ್ಲಿಉದ್ದಜಿಗಿತದಲ್ಲಿ ಸಾಧನೆ ಮಾಡಿರುವ ಎಂ.ಎಸ್. ನಂದನ ಸನ್ಮಾನ ಸ್ವೀಕರಿಸಿದರು.,ಅಗಲಿದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ನಿರ್ದೇಶಕಿ ವಿ. ಎನ್. ರೀನಾ ಕಳೆದ ಮಹಾಸಭೆ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ವಿ. ವಿ. ಅರುಣ್‍ಕುಮಾರ್ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಶಾಜಿಅಚ್ಚುತ್ತನ್ ಲೆಕ್ಕ ಪತ್ರ ಮಂಡಿಸಿದರು. ಸರಳ ಮಣಿಲಾಲ್ ವಂದಿಸಿದರು.









