
ಮಡಿಕೇರಿ ಮೇ 21 NEWS DESK : ಪೊನ್ನಂಪೇಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಜೂ.6 ರಂದು ಹುದಿಕೇರಿಯಲ್ಲಿ ಜರಗಲಿದೆ. ಸಮ್ಮೇಳನದಲ್ಲಿ ಉದ್ಘಾಟನಾ ಸಮಾರಂಭ, ವಿಚಾರಗೋಷ್ಠಿ, ಕನ್ನಡ ಗೀತ ಗಾಯನ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಸಮಾರೋಪ ಸಮಾರಂಭ ಮತ್ತು ತಾಲೂಕಿನ ಪ್ರತಿಭೆಗಳ ಪ್ರದರ್ಶನಕ್ಕಾಗಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಕಲಾವಿದರು ಅಥವಾ ಕಲಾವಿದರ ತಂಡ ಈ ಕೆಳಗಿನ ವಿಳಾಸ ಅಥವಾ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಅಪೇಕ್ಷೆ ಅಥವಾ ಅರ್ಜಿ ವಾಟ್ಸಾಪ್ ಮೂಲಕ ದಿನಾಂಕ 25.05.2026ರ ಒಳಗಾಗಿ ಸಲ್ಲಿಸಬಹುದು. ಸಂಪರ್ಕಿಸಬೇಕಾದ ವಿಳಾಸ : ಶ್ರೀ ಬಾನಂಗಡ ಅರುಣ್, ಅಧ್ಯಕ್ಷರು, ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಹುದಿಕೇರಿ. ಹೆಚ್ಚಿನ ಮಾಹಿತಿಗೆ 94497 64418, 91138 92396, 94487 21542 ಸಂಪರ್ಕಿಸಬಹುದಾಗಿದೆ ಎಂದು ಸಮ್ಮೇಳನದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಬುಟ್ಟಿಯಂಡ ಸುನಿತಾ ಗಣಪತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








