Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ತೊರೆನೂರು ಗ್ರಾಮದಲ್ಲಿ ಶ್ರೀ ದೊಡ್ಡಮ್ಮ ಹಾಗೂ ಚಿಕ್ಕಮ್ಮ ದೇವಿಯ ಜಾತ್ರೋತ್ಸವ : ಗಮನ ಸೆಳೆದ ಉತ್ಸವ ಮಂಟಪಗಳು*
  • *ಕುಶಾಲನಗರದಲ್ಲಿ ಬ್ಯೂಟೀಶಿಯನ್ ತರಬೇತಿ ಶಿಬಿರದ ಸಮಾರೋಪ : ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ : ವಿಠಲ ಸಾಲಿಯಾನ್
  • *ಕೊಡವ ಪುಸ್ತಕ ಪತ್ತಾಯ : ಪುಸ್ತಕ ಓದುವುದರಿಂದ ಮನಸ್ಸಿಗೆ ಸುಖ, ಶಾಂತಿ ಪ್ರಾಪ್ತಿ : ಅಜ್ಜಿನಿಕಂಡ ಮಹೇಶ್ ನಾಚಯ್ಯ*
  • *ಕೊಡಗಿನಲ್ಲಿ ಸಾಹಿತ್ಯ ಪ್ರಕಾರಗಳು ಶ್ರೀಮಂತವಾಗಿದೆ : ಅಬ್ದುಲ್ ರಶೀದ್*
  • *ಸೋಮವಾರಪೇಟೆ ಗ್ಯಾರಂಟಿ ಯೋಜನೆಯ ಪ್ರಾಧಿಕಾರ ಸಮಿತಿ ಸಭೆ*
  • *ನಿವೇಶನ ರಹಿತ 22ನೇ ದಿನಕ್ಕೆ*
  • *ಹೊನ್ನಮ್ಮನ ಕನಸಿಗೆ ಮತ್ತೊಂದು ಗರಿ*
  • *ಸೆಸ್ಕ್‌ನಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ : ಅತ್ತೆ-ಮಾವಂದಿರನ್ನು ಚೆನ್ನಾಗಿ ನೋಡಿಕೊಂಡಲ್ಲಿ ಸಂಸಾರಕ್ಕೆ ಅರ್ಥ : ಶರಣಮ್ಮ ಎಸ್.ಜಂಗಿನ*
  • *ಹೊಂದಾಣಿಕೆಯ ಕೊರತೆಯಿಂದ ಮಡಿಕೇರಿ ನಗರಸಭೆಯಲ್ಲಿ ಅಭಿವೃದ್ಧಿ ಶೂನ್ಯ : ಬಹುಮತ ನೀಡಿದ ಜನರಿಗೆ ಬಿಜೆಪಿಯಿಂದ ಮೋಸ*
  • *ಕೊಡಗಿನಲ್ಲಿ ಮೊದಲ ಅಂಗಾಂಗ ದಾನ : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅಂಗಾಂಗ ಸಂಗ್ರಹಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗಿನಲ್ಲಿ ಸಾಹಿತ್ಯ ಪ್ರಕಾರಗಳು ಶ್ರೀಮಂತವಾಗಿದೆ : ಅಬ್ದುಲ್ ರಶೀದ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗಿನಲ್ಲಿ ಸಾಹಿತ್ಯ ಪ್ರಕಾರಗಳು ಶ್ರೀಮಂತವಾಗಿದೆ : ಅಬ್ದುಲ್ ರಶೀದ್*

ಮೇ 23, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಸುಂಟಿಕೊಪ್ಪ ಮೇ 23 NEWS DESK : ಸಾಹಿತ್ಯಾಸಕ್ತರಿಗೆ ಕೊಡಗು ಜಿಲ್ಲೆಯಲ್ಲಿ ಎಲ್ಲಾ ರೀತಿಯಲ್ಲಿ ಪ್ರೋತ್ಸಾಹದಾಯಕ ವಾತಾವರಣ ಇದೆ. ಹೀಗಾಗಿಯೇ ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಪ್ರಕಾರಗಳು ಶ್ರೀಮಂತವಾಗಿ ಇದೆ ಎಂದು ಕೊಡಗು ಜಿಲ್ಲಾ 17 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್ ಶ್ಲಾಘಿಸಿದ್ದಾರೆ. ಹುಣಸೂರು ಬಳಿಯಲ್ಲಿ ನೆಲಸಿರುವ ಸುಂಟಿಕೊಪ್ಪ ಮೂಲದ ನಾಡಿನ ಹಿರಿಯ ಸಾಹಿತಿ ಅಬ್ದುಲ್ ರಶೀಧ್ ಮೇ 29 ಮತ್ತು 30 ರಂದು ಸುಂಟಿಕೊಪ್ಪದಲ್ಲಿ ಆಯೋಜಿತ ಕನ್ನಡ ಸಾಹಿತ್ಯದ 17 ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು, ಈ ಹಿನ್ನಲೆಯಲ್ಲಿ ಕುಶಾಲನಗರ ತಾಲ್ಲೂಕು ಪತ್ರಕರ್ತರ ಸಂಘದಿಂದ ಅಬ್ದುಲ್ ರಶೀದ್ ಜೊತೆ ಅವರ ಆದಿವಾಸಿ ಫಾರ್ಮ್‍ನಲ್ಲಿ ಸಂವಾದ ಆಯೋಜಿಸಲಾಗಿತ್ತು. ಪತ್ರಕರ್ತರೊಂದಿಗಿನ ಸಂವಾದ ಸಂದರ್ಭ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಅಬ್ದುಲ್ ರಶೀದ್, ಸುಂದರ ಕೊಡಗು ವಿಭಿನ್ನ ಧಾರ್ಮಿಕ, ಸಮುದಾಯಗಳ ಸಹಭಾಳ್ವೆಗೆ ಸಾಕ್ಷಿಯಾಗಿ ವಿಶಿಷ್ಟ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುವ ಜನರನ್ನು ಹೊಂದಿದೆ. ಕನ್ನಡ, ಕೊಡವ, ಅರೆಭಾಷೆ, ತುಳು, ಮಲಯಾಳ, ಹಿಂದಿ, ತೆಲುಗು, ತಮಿಳು ಹೀಗೆ ವಿವಿಧ ಭಾಷೆಗಳನ್ನು ಕೊಡಗಿನ ಜನತೆ ಬಲ್ಲವರಾಗಿದ್ದರೂ ಬಹುತೇಕ ಕನ್ನಡವೇ ಕೊಡಗಿನ ಜನತೆಯ ಪ್ರೀತಿಯ ಭಾಷೆಯಾಗಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನ ಜನರು ಕನ್ನಡವನ್ನು ಹೆಚ್ಚು ಪ್ರೀತಿಸುತ್ತಾರೆ. ಕೊಡಗಿನಲ್ಲಿ ಕಂಡು ಬರುವ ಕನ್ನಡಾಭಿಮಾನ ಬೇರೆಲ್ಲೂ ಕಾಣಸಿಗಲಾರದು. ಶ್ರೀಮಂತಿಕೆಯ ಜತೆ ಕಡುಬಡವರೂ ಕೊಡಗಿನಲ್ಲಿದ್ದಾರೆ. ಹೀಗಿದ್ದರೂ ಎಲ್ಲಾ ರೀತಿಯ ಜನರ ನಡುವೆ ಸೌಹಾರ್ಧತೆ ಇದೆ. ಇದುವೇ ಕೊಡಗಿನ ಹೆಗ್ಗಳಿಕೆಯಾಗಿದೆ. ಎಂದು ಹೆಮ್ಮೆಯಿಂದ ರಶೀದ್ ನುಡಿದರು. ತಾನು ಹುಟ್ಟಿ ಬೆಳೆದ ಸುಂಟಿಕೊಪ್ಪದಲ್ಲಿ ಆಯೋಜಿತ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅಬ್ದುಲ್ ರಶೀದ್, ತನ್ನ ತಂದೆ ಇಸ್ಮಾಯಿಲ್ ಸ್ಥಳೀಯ ಸ್ಯಾಂಡಲ್ ವುಡ್ ಕಾಫೀ ತೋಟದಲ್ಲಿ ಮೂರು ದಶಕಗಳ ಕಾಲ ರೈಟರ್ ಆಗಿ ಕಾರ್ಯನಿರ್ವಹಿಸಿದ್ದರು. ಆ ತೋಟದ ಮಾಲೀಕರಾಗಿದ್ದ ಎಸ್.ಎಂ. ಸಯ್ಯದ್ ತನ್ನನ್ನು ಓದಲು ಪ್ರೇರೇಪಿಸಿ ಆರ್ಥಿಕ ನೆರವನ್ನು ಕೂಡ ನೀಡಿದ್ದರು. ಅಂತೆಯೇ ಸುಂಟಿಕೊಪ್ಪದಲ್ಲಿಯೇ ತನ್ನ ತಾಯಿ ಫಾತಿಮ ಇಂದಿಗೂ ವಾಸವಾಗಿದ್ದಾರೆ. ಕೊಡಗಿನ ಅನೇಕ ಪ್ರದೇಶಗಳಂತೆ ತಾನು ಆಡಿ ಬೆಳೆದ ಸುಂಟಿಕೊಪ್ಪದ ಬಗ್ಗೆ ಹಲವು ಸುಮಧುರ ನೆನಪುಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ತಾನು ಬಾಲ್ಯ ಕಳೆದ ತೋಟ ಹಾಗೂ ತಂದೆಯವರ ಮೈದಾನಿ (ಅಂತ್ಯಕ್ರಿಯೆ ಮಾಡಿದ ಸ್ಥಳ) ಇರುವ ಗದ್ದೆಹಳ್ಳದ ಬಳಿಯ ಸಭಾಂಗಣದಲ್ಲಿಯೇ ಆಯೋಜಿತ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿರುವುದು ಹೆಚ್ಚು ಸಂತೋಷ ತಂದಿದೆ. ತಾನು ಅಧ್ಯಕ್ಷ ಸ್ಥಾನ ಒಪ್ಪಿಕೊಂಡಿರುವುದು ತನಗಿಂತ ಹೆಚ್ಚಾಗಿ ಸುಂಟಿಕೊಪ್ಪದ ಜನರಿಗೆ ಸಂಭ್ರಮ ತಂದಿರುವುದು ಇನ್ನಷ್ಟು ಖುಷಿ ತಂದಿದೆ ಎಂದು ರಶೀದ್ ನುಡಿದರು. ಕುವೆಂಪು, ದೇವನೂರ ಮಹದೇವ, ತೇಜಸ್ವಿ, ಅನಂತಮೂರ್ತಿ, ಪಿ.ಲಂಕೇಶ್, ಎಂ.ಕೆ. ಇಂದಿರಾ, ಎಂ.ವ್ಯಾಸ, ಕೆ.ಟಿ. ಗಟ್ಟಿ, ಯಶವಂತ ಚೆತ್ತಾಲ, ಮಲಯಾಳದ ಖ್ಯಾತ ಲೇಖಕ ವೈಕಂ ಮಹಮ್ಮದ್ ಬಷೀರ್ ತನ್ನ ಸಾಹಿತ್ಯದ ಮೇಲೆ ಪ್ರಬಾವ ಬೀರಿದ ಲೇಖಕರಾಗಿದ್ದಾರೆ ಎಂದು ಅಬ್ದುಲ್ ರಶೀದ್ ಈ ಸಂದರ್ಭ ಹೇಳಿದರು. ಯುವಪೀಳಿಗೆ ಸಾಹಿತ್ಯ ಪ್ರಕಾರಗಳನ್ನು ಓದುತ್ತಿಲ್ಲ ಎಂಬ ವಾದವನ್ನು ಅಲ್ಲಗೆಳೆದ ಅಬ್ದುಲ್ ರಶೀದ್, ಆಧುನೀಕತೆಯ ನಾಗಾಲೋಟದಲ್ಲಿ ಸಾಹಿತ್ಯ ಓದಲು ನಾನಾ ಮಾದ್ಯಮಗಳಿದೆ. ಇದನ್ನು ಬಳಸಿಕೊಂಡವರು ಸಾಹಿತ್ಯವನ್ನು ತಮಗೆ ನಿಲುಕುವ ನವ ಮಾಧ್ಯಮಗಳ ಮೂಲಕ ಓದುತ್ತಿದ್ದಾರೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಾಲಹಾಳಾಗಿದೆ ಎಂದು ಖಂಡಿತಾ ಹೇಳಲಾಗದು. ಜನರು ಓದುವ ಮಾಧ್ಯಮ ಬದಲಾಗಿದೆ ಎಂಬುದು ವಾಸ್ತವ. ಪುಸ್ತಕದ ಬದಲಿಗೆ ಡಿಜಿಟಲ್ ಮಾಧ್ಯಮದ ಮೂಲಕ ಎಲ್ಲಾ ವಿಚಾರಗಳನ್ನೂ ಸಾಹಿತ್ಯ ಸೇರಿಕೊಂಡಂತೆ ಓದುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಎಂದು ಅವರು ಅಭಿಪ್ರಾಯ ಪಟ್ಟರು. ಲೇಖಕರಿಗೆ ಹೊಸ ವಿಚಾರಗಳು ಇಂದಿನ ಕಾಲಘಟ್ಟದಲ್ಲಿ ಸಾಕಷ್ಟು ಲಭ್ಯವಿದೆ. ಆದರೆ ಮತ್ತೋರ್ವ ಲೇಖಕನ ಶೈಲಿಯನ್ನು ಅನುಕರಿಸಲು ಹೋಗದೆ ತನ್ನದೇ ಶೈಲಿಯಲ್ಲಿ ಬರೆಯುವ ಹವ್ಯಾಸವನ್ನೂ ಪ್ರತೀ ಹೊಸ ಲೇಖಕನೂ ರೂಡಿಸಿಕೊಂಡಾಗ ಆತನ ಸಾಹಿತ್ಯ ಶೈಲಿ ಬಹುಕಾಲ ಬಾಳಿಕೆಯಲ್ಲಿ ಇರುತ್ತದೆ ಎಂದೂ ಅವರು ಸಲಹೆ ನೀಡಿದರು. ಹುಣಸೂರು ಬಳಿಯ ಬನ್ನಿಕುಪ್ಪೆಯಲ್ಲಿ 4 ಎಕ್ರೆ ಜಾಗದಲ್ಲಿ ಮಾವು, ಬಾಳೆ, ತೆಂಗಿನ ಕೃಷಿ ಸೇರಿದಂತೆ ವಿವಿಧ ಕೃಷಿ ಮೂಲಕ ಕೃಷಿಕನ ಜೀವನ ಕಂಡುಕೊಂಡಿರುವ ತಾನು ಈ ಹೊಸ ವೃತ್ತಿಯಲ್ಲಿಯೇ ಸಂಭ್ರಮ್ರ ಕಂಡುಕೊಂಡಿರುವುದಾಗಿ ರಶೀದ್ ನುಡಿದರು. ಆಕಾಶವಾಣಿಯ ವಿವಿಧ ಕೇಂದ್ರಗಳಲ್ಲಿ ಸುದೀರ್ಘ 36 ವರ್ಷಗಳು ಕಾರ್ಯ ನಿರ್ವಹಿಸಿರುವ ಅಬ್ದುಲ್ ರಶೀದ್ ಮಡಿಕೇರಿ ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದ್ದ 6 ವಷ9ಗಳಲ್ಲಿ ಕಾವೇರಿ ಎಕ್ಸ್ ಪ್ರೆಸ್, ಹಳ್ಳಿ ರೆಡಿಯೋ, ಗಿರಿಜನ ಸಂಗೀತ ಸಭಾ, ಕಾಡಿನ ಮಕ್ಕಳ ರೆಡಿಯೋ ಹಬ್ಬ ಸೇರಿದಂತೆ ವಿವಿಧ ವಿನೂತನ ಕಾಯ9ಕ್ರಮಗಳನ್ನು ರೂಪಿಸಿದ್ದರು. ಕೊಡಗು ಪತ್ರಕತ9ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಕೊಡಗು ಪತ್ರಿಕಾಭವನ ಟ್ರಸ್ಟ್ ಪ್ರಧಾನ ಕಾಯ9ದಶಿ9 ಎಸ್.ಜಿ. ಉಮೇಶ್, ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ.ದಿನೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ.ವಿನ್ಸೆಂಟ್, ಖಜಾಂಜಿ ಕೆ.ಎಸ್. ಅನಿಲ್ ಕುಮಾರ್, ಉಪಾಧ್ಯಕ್ಷ ನವೀನ್ ಚಿಣ್ಣಪ್ಪ, ಸಂಘಟನಾ ಕಾರ್ಯದರ್ಶಿ ಬಿ.ಎನ್, ರವಿಕುಮಾರ್ ಸಂವಾದದಲ್ಲಿ ಹಾಜರಿದ್ದರು.
:: ಅಬ್ದುಲ್ ರಶೀದ್ ಪರಿಚಯ :: ಅಬ್ದುಲ್ ರಶೀದ್ ಹುಟ್ಟಿದ್ದು ಕೊಡಗಿನ ಸುಂಟಿಕೊಪ್ಪ ಸ್ಯಾಂಡಲ್ ವುಡ್ ಕಾಫೀ ತೋಟದಲ್ಲಿ ತಂದೆ ಎಚ್ ಎಂ ಇಸ್ಮಾಯಿಲ್, – ತಾಯಿ ಫಾತಿಮಾ ಓದಿದ್ದು ಸುಂಟಿಕೊಪ್ಪ ಸಂಪಾಜೆ ಮಾದಾಪುರ ಮತ್ತು ಮೈಸೂರು ಕನ್ನಡದಲ್ಲಿ ಪ್ರಕಟಿತ ಪುಸ್ತಕಗಳು 2 ಕಾದಂಬರಿಗಳನ್ನು 6. ಕಥಾ ಸಂಕಲನಗಳನ್ನು 3 ಕವನ ಸಂಕಲನಗಳನ್ನು ಹೊರ ತಂದಿದ್ದಾರೆ. 5 ಪತ್ರಿಕೆಗಳಲ್ಲಿ ವಾರದ ಅಂಕಣಗಳನ್ನು ಬರೆದಿದ್ದು, ಅದೆಲ್ಲಾವೂ ಪುಸ್ತಕಗಳನ್ನು ಬರೆದಿದ್ದು ಅಪಾರ ಜನಪ್ರಿಯತೆಯನ್ನು ಪಡೆದಿದೆ. ಇವರ ಕಥೆ, ಕವನಗಳು ಹಾಗೂ ಕಾದಂಬರಿಯ ಭಾಗಗಳು ಇಂಗ್ಲಿಷ್, ಸ್ವೀಡಿಷ್, ಜರ್ಮನ್, ಹಿಂದಿ ಹಾಗೂ ಇತರ ಪ್ರಮುಖ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಅಬ್ಧುಲ್ ರಶೀದ್ ಅವರು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ಕರ್ನಾಟಕ ಸಾಹಿತ್ಯ ಆಕಾಡಮಿ ಪ್ರಶಸ್ತಿಗೆ ಪುರಸ್ಕಾತರಾಗಿದ್ದಾರೆ. ಬಾನುಲಿ ಕ್ಷೇತ್ರದ ಪ್ರಸಾರಕರಾಗಿ ನೀಡಿದ ಕೊಡುಗೆಯನ್ನು ಗುರುತಿಸಿ ಆಕಾಶವಾಣಿ (All India Radio) ವತಿಯಿಂದಐರ್ಲೆಂಡ್ಗೆ ರೇಡಿಯೋ ನಿರ್ಮಾಪಕರಾಗಿ ಆಯ್ಕೆ. ಕಳೆದ ಹತ್ತೊಂಬತ್ತು ವರ್ಷಗಳಿಂದ ಕನ್ನಡದ ಜನಪ್ರಿಯ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಕೆಂಡಸಂಪಿಗೆಯ ಸಂಪಾದಕರಾಗಿದ್ದರೆ. ಮೈಸೂರು ಪೆÇೀಸ್ಟ್ ಇವರ ವೈಯುಕ್ತಿಕ ಬರಹಗಳ ಬ್ಲಾಗ್.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ತೊರೆನೂರು ಗ್ರಾಮದಲ್ಲಿ ಶ್ರೀ ದೊಡ್ಡಮ್ಮ ಹಾಗೂ ಚಿಕ್ಕಮ್ಮ ದೇವಿಯ ಜಾತ್ರೋತ್ಸವ : ಗಮನ ಸೆಳೆದ ಉತ್ಸವ ಮಂಟಪಗಳು*

ಮೇ 23, 2026

*ಕುಶಾಲನಗರದಲ್ಲಿ ಬ್ಯೂಟೀಶಿಯನ್ ತರಬೇತಿ ಶಿಬಿರದ ಸಮಾರೋಪ : ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ : ವಿಠಲ ಸಾಲಿಯಾನ್

ಮೇ 23, 2026

*ಕೊಡವ ಪುಸ್ತಕ ಪತ್ತಾಯ : ಪುಸ್ತಕ ಓದುವುದರಿಂದ ಮನಸ್ಸಿಗೆ ಸುಖ, ಶಾಂತಿ ಪ್ರಾಪ್ತಿ : ಅಜ್ಜಿನಿಕಂಡ ಮಹೇಶ್ ನಾಚಯ್ಯ*

ಮೇ 23, 2026

*ಕುಶಾಲನಗರದಲ್ಲಿ ಬ್ಯೂಟೀಶಿಯನ್ ತರಬೇತಿ ಶಿಬಿರದ ಸಮಾರೋಪ : ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ : ವಿಠಲ ಸಾಲಿಯಾನ್

ಮೇ 23, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ ಮೇ 23 NEWS DESK : ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಂಡು ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು…

*ಕೊಡವ ಪುಸ್ತಕ ಪತ್ತಾಯ : ಪುಸ್ತಕ ಓದುವುದರಿಂದ ಮನಸ್ಸಿಗೆ ಸುಖ, ಶಾಂತಿ ಪ್ರಾಪ್ತಿ : ಅಜ್ಜಿನಿಕಂಡ ಮಹೇಶ್ ನಾಚಯ್ಯ*

ಮೇ 23, 2026

*ಕೊಡಗಿನಲ್ಲಿ ಸಾಹಿತ್ಯ ಪ್ರಕಾರಗಳು ಶ್ರೀಮಂತವಾಗಿದೆ : ಅಬ್ದುಲ್ ರಶೀದ್*

ಮೇ 23, 2026

*ಸೋಮವಾರಪೇಟೆ ಗ್ಯಾರಂಟಿ ಯೋಜನೆಯ ಪ್ರಾಧಿಕಾರ ಸಮಿತಿ ಸಭೆ*

ಮೇ 23, 2026

*ನಿವೇಶನ ರಹಿತ 22ನೇ ದಿನಕ್ಕೆ*

ಮೇ 23, 2026

*ಹೊನ್ನಮ್ಮನ ಕನಸಿಗೆ ಮತ್ತೊಂದು ಗರಿ*

ಮೇ 23, 2026

*ಸೆಸ್ಕ್‌ನಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ : ಅತ್ತೆ-ಮಾವಂದಿರನ್ನು ಚೆನ್ನಾಗಿ ನೋಡಿಕೊಂಡಲ್ಲಿ ಸಂಸಾರಕ್ಕೆ ಅರ್ಥ : ಶರಣಮ್ಮ ಎಸ್.ಜಂಗಿನ*

ಮೇ 23, 2026

*ಹೊಂದಾಣಿಕೆಯ ಕೊರತೆಯಿಂದ ಮಡಿಕೇರಿ ನಗರಸಭೆಯಲ್ಲಿ ಅಭಿವೃದ್ಧಿ ಶೂನ್ಯ : ಬಹುಮತ ನೀಡಿದ ಜನರಿಗೆ ಬಿಜೆಪಿಯಿಂದ ಮೋಸ*

ಮೇ 23, 2026

*ಕೊಡಗಿನಲ್ಲಿ ಮೊದಲ ಅಂಗಾಂಗ ದಾನ : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅಂಗಾಂಗ ಸಂಗ್ರಹಣೆ*

ಮೇ 23, 2026

*ಸಮಾಜ ಕಲ್ಯಾಣ ಇಲಾಖೆ ವಶಕ್ಕೆ ಪಡೆದ ಕಟ್ಟಡದಲ್ಲಿ ಆಸ್ಪತ್ರೆ ಆರಂಭಿಸಲು ಹೇರೂರು ಗ್ರಾಮಸ್ಥರ ಒತ್ತಾಯ*

ಮೇ 23, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.