Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅ.14 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*
  • *ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಅ.9ರ ಕಾರ್ಯಕ್ರಮ*
  • *ಶಾಸಕ ಡಾ. ಮಂತರ್ ಗೌಡ ಅವರ ಅ.9ರ ಕಾರ್ಯಕ್ರಮ*
  • *ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ : ಕೇಂದ್ರ ಪುರಸ್ಕೃತ ಯೋಜನೆ ಸಕಾಲದಲ್ಲಿ ಪ್ರಗತಿ ಸಾಧಿಸಿ : ಸಂಸದ ಯದುವೀರ್ ಒಡೆಯರ್
  • *ಕಾವೇರಿ ತೀರ್ಥೋದ್ಭವ : ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಮನವಿ*
  • *ಗಾಂಧಿ ಮೈದಾನಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ : ದಸರಾ ಸಿದ್ಧತೆ ಕುರಿತು ಪರಿಶೀಲನೆ*
  • *ಬೆಂಗಳೂರು ಸಣ್ಣ ಭಾಷಾ ಚಲನಚಿತ್ರೋತ್ಸವಕ್ಕೆ ಕೊಡಗಿನ ‘ಬೇರ್’ ಆಯ್ಕೆ*
  • *ಕರ್ನಾಟಕದಲ್ಲಿ ಭೀಕರ ಬರ: ಶೇ.90ರಷ್ಟು ಬೆಳೆ ಹಾನಿ, ರೈತರ ನೆರವಿಗೆ ಸರ್ಕಾರದ ಮಹತ್ವದ ಕ್ರಮ*
  • *ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಿಯ ಕರಗೋತ್ಸವ: ಅ.11ರಿಂದ ನಗರ ಪ್ರದಕ್ಷಿಣೆ*
  • *ಮಡಿಕೇರಿ ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಪ್ಯಾಕೇಜ್ ಟೂರ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ದೇವಟ್ ಪರಂಬ್ ನಲ್ಲಿ ಹಿರಿಯರಿಗೆ ಗೌರವ ಅರ್ಪಿಸಿದ ಸಿಎನ್‌ಸಿ : ಅಂತರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ದೇವಟ್ ಪರಂಬ್ ನಲ್ಲಿ ಹಿರಿಯರಿಗೆ ಗೌರವ ಅರ್ಪಿಸಿದ ಸಿಎನ್‌ಸಿ : ಅಂತರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ*

ಮೇ 26, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement

ಮಡಿಕೇರಿ NEWS DESK ಮೇ 26 : ದೇವಟ್ ಪರಂಬ್ ನಲ್ಲಿ ವಂಚನೆಯಿoದ ಹತ್ಯೆಗೊಳಗಾದ ಕೊಡವ ಯೋಧರಿಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಗೌರವ ಅರ್ಪಿಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ದೇವಟ್ ಪರಂಬುವಿಗೆ ಭೇಟಿ ನೀಡಿದ ಪ್ರಮುಖರು ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿ ಇತಿಹಾಸದ ದುರ್ಘಟನೆಗೆ ವಿಷಾದ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು ದೇವಟ್ ಪರಂಬು ಹತ್ಯಾಕಾಂಡವು ಕೊಡವರ ಇತಿಹಾಸದಲ್ಲಿ ಒಂದು ಮರೆಯಲಾಗದ ಮತ್ತು ಕ್ಷಮಿಸಲಾಗದ ದುರಂತವಾಗಿದೆ. ಘಟನೆಗೆ ಸಾಂತ್ವನವಾಗಿ ದೇವಟ್‌ಪರಂಬ್ ನಲ್ಲಿ ಅಂತರಾಷ್ಟ್ರೀಯ ಹೋಲೋಕಾಸ್ಟ್ ಸ್ಮಾರಕವನ್ನು ನಿರ್ಮಿಸಬೇಕು ಮತ್ತು ಕೊಡವ ಜನಾಂಗೀಯ ಹತ್ಯೆಯನ್ನು ಯುಎನ್‌ಒ ಅಂತರರಾಷ್ಟಿçÃಯ ಹೋಲೋಕಾಸ್ಟ್ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು. ಈ ಮಹಾನ್ ಮಾನವ ಹಾನಿಗಳನ್ನು ಸರಿದೂಗಿಸಲು, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳು) ಸೂಕ್ತ ಶಾಸಕಾಂಗ ವ್ಯವಸ್ಥೆಯ ಮೂಲಕ ಸಾಂವಿಧಾನಿಕ ಪರಿಹಾರವನ್ನು ಆರಂಭಿಸಬೇಕು. ವಿಶ್ವಪ್ರಸಿದ್ಧ ಅರ್ಥಶಾಸ್ತçಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕರ್ನಾಟಕ ಉಚ್ಚ ನ್ಯಾಯಾಲಯದ ಮುಂದೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರತಿಪಾದಿಸಿರುವಂತೆ “ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ”ಯಾಗಿ ವಿಶೇಷ ಸ್ಥಾನಮಾನ, ಬುಡಕಟ್ಟು  ವರ್ಗೀಕರಣ, 8ನೇ ಶೆಡ್ಯೂಲ್ನಲ್ಲಿ ಕೊಡವ ಭಾಷೆ ಸೇರ್ಪಡೆ, ಕೊಡವ ಧಾರ್ಮಿಕ ವಿಧಿವಿಧಾನದ ಸಂಸ್ಕಾರವನ್ನು ಒಳಗೊಂಡಿರುವ “ಗನ್-ತೋಕ್’ (ಕೋವಿ ಆರಾಧನೆ) ಅನ್ನು ನಮ್ಮ ಸಂವಿಧಾನದ 25 ಮತ್ತು 26 ನೇ ವಿಧಿಗಳ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಚಟುವಟಿಕೆಗಳ ಕಾಯ್ದೆಯಡಿ ಸೇರಿಸಬೇಕು. ಕೊಡವರ ಅನುವಂಶಿಕ ಭೂಮಿಯನ್ನು ವಿಶ್ವಸಂಸ್ಥೆಯ ಸ್ಥಳೀಯ ಆಸ್ತಿ ಹಕ್ಕುಗಳ ಅಡಿಯಲ್ಲಿ ಮರುಸ್ಥಾಪಿಸಿ ರಕ್ಷಿಸಬೇಕು. ಸಿಕ್ಕಿಂನ ಸಂಘ ಮತಕ್ಷೇತ್ರದ ಮಾದರಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಕೊಡವ ಅಮೂರ್ತ ಸಂಸತ್ತು ಮತ್ತು ವಿಧಾನಸಭಾ ಕ್ಷೇತ್ರವನ್ನು ಸ್ಥಾಪಿಸಬೇಕು. 2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರ ಜನಸಂಖ್ಯೆಯನ್ನು ಎಣಿಕೆ ಮಾಡಲು ಪ್ರತ್ಯೇಕ ಕೋಡ್ ಮತ್ತು ಕಾಲಂ ಅನ್ನು ರಚಿಸಬೇಕು. ಕೊಡವ ಪರಂಪರೆಯನ್ನು ಯುನೆಸ್ಕೋ ಅಮೂರ್ತ ಪಟ್ಟಿಯಲ್ಲಿ ಸೇರಿಸಬೇಕು ಎಂದು ಹಕ್ಕೊತ್ತಾಯಗಳನ್ನು ಮಂಡಿಸಿದರು. ದೇವಟ್‌ಪರoಬ್ ದುರಂತ ಕೊಡವ ಮಹಾಹತ್ಯಾಕಾಂಡವನ್ನು ಮೈಸೂರು ಸುಲ್ತಾನರ ಸೈನ್ಯ ಮತ್ತು ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಲೀಜನ್ ಪಡೆಗಳು ಜಂಟಿಯಾಗಿ ನಡೆಸಿದವು. ಕೊಡವರು ಅತ್ಯುತ್ತಮ ಗೆರಿಲ್ಲಾ ಯೋಧರಾಗಿದ್ದು, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಆಕ್ರಮಣಗಳನ್ನು ಹಲವಾರು ಬಾರಿ ಪ್ರತಿರೋಧಿಸಿದ್ದರು. ಆದಿಮಸಂಜಾತ, ಮೂಲನಿವಾಸಿ, ಏಕ-ಜನಾಂಗೀಯ, ಪ್ರಕೃತಿ ಆರಾಧಕರಾದ (ಅನಿಮಿಸ್ಟಿಕ್) ಕೊಡವರು ಈ ಮಣ್ಣಿನ ರಕ್ಷಕರಾಗಿದ್ದಾರೆ. ಅವರು ಪ್ರಾಚೀನ ಕಾಲದಿಂದಲೂ ಕಾಡು ಏಲಕ್ಕಿ ಮತ್ತು ಕಪ್ಪು ಮೆಣಸನ್ನು ಸಂಶೋಧಿಸಿ, ಅವುಗಳನ್ನು ಎತ್ತುಗಳ ಬೆನ್ನಿನ ಮೇಲೆ ಹೊರಿಸಿ (ಎತ್ತ್ ಪೋರಾಟ) ದಕ್ಷಿಣದ ಮಸಾಲೆ-ಸಮೃದ್ಧ ರಾಜ್ಯಗಳಾದ ತಿರುವಾಂಕೂರು, ಕೊಚ್ಚಿ ಮತ್ತು ಮಲಬಾರ್‌ನ ಜಾಮೋರಿನ್‌ಗಳಿಗೆ ಪೂರೈಸುತ್ತಿದ್ದರು. ಕೊಡವ ಪ್ರಾಂತ್ಯದ ಈ ಸಾಂಬಾರ ಕಾಳುಗಳ ಸಂಪತ್ತು ಮತ್ತು ಇತರ ಅರಣ್ಯ ಉತ್ಪನ್ನಗಳ ಮೇಲೆ ಕಣ್ಣಿಟ್ಟ ಫ್ರೆಂಚರು, ಹೈದರ್ ಮತ್ತು ಟಿಪ್ಪು ಒಂದು ಮೈತ್ರಿಕೂಟವನ್ನು ರಚಿಸಿಕೊಂಡು (ಗೇರುಸೊಪ್ಪ ರಾಣಿ ಚೆನ್ನಭೈರಾದೇವಿ ಯಾನೆ ಕಾಳುಮೆಣಸು ರಾಣಿ ವಿದೇಶಗಳಿಗೆ ಸಂಬಾರ ಪದಾರ್ಥ ರಫ್ತು ಮಾಡುವ ಉದ್ದೇಶದಿಂದ, ಕೊಡವರಿಂದ  ಏಲಕ್ಕಿ, ಕಾಳುಮೆಣಸು  ಸಂಗ್ರಹಿಸಲು 16ನೇ ಶತಮಾನದಲ್ಲಿ ಕೊಡಗು ಮತ್ತು ಪರ್ವತವಾಸಿ ಕೊಡವರ ಸಂಪರ್ಕ ಸಾದಿಸಿರುವುದನ್ನು ನೆನೆಪಿಸಬೇಕಾಗಿದೆ) ಇದರ ನಿಯಂತ್ರಣವನ್ನು ಸಾಧಿಸಲು ಯತ್ನಿಸಿದರು. ಮೈಸೂರು ಸುಲ್ತಾನರ ಪಡೆಗಳು ಮಲಬಾರ್ ಕರಾವಳಿಗೆ ಸಂಪರ್ಕ ಸಾಧಿಸಲು, ಕೊಡಗು ಮೂಲಕವೇ  ಹಾದುಹೋಗಬೇಕಾಗಿತ್ತು. ಈ ಮೈಸೂರಿನ ಸುಲ್ತಾನರ ಯುದ್ಧ ಲೂಟಿಕೋರರ ಮಾರ್ಗವನ್ನು ಸತತವಾಗಿ ಕೊಡವ ಪಡೆ ತಡೆಯೊಡ್ಡುತ್ತ ಹಿಮ್ಮೆಟ್ಟಿಸುವಲ್ಲಿ ಸಫಲವಾಗಿತ್ತು. ಆ ಅವಧಿಯಲ್ಲಿ ಕೊಡಗು ಜಿಲ್ಲೆಯನ್ನು ಪರಕೀಯರಾದ ಕೆಳದಿ ರಾಜರು ಆಳುತ್ತಿದ್ದರು. ಮಲಬಾರ್ ಕರಾವಳಿಯ ಮೇಲೆ ಮತ್ತಷ್ಟು ನಿಯಂತ್ರಣ ಸಾಧಿಸಲು ಹಾಗೂ ಕೊಡವ ಭೂಪ್ರದೇಶವು ಭೌಗೋಳಿಕವಾಗಿ ಆಯಕಟ್ಟಿನ ಜಾಗವಾಗಿದ್ದರಿಂದ, ಅವರು ಕೊಡವ ಪ್ರಾಂತ್ಯದ ಮೇಲೆ ಅಸಂಖ್ಯಾತ ಬಾರಿ ದಾಳಿ ಮಾಡಿದರು ಮತ್ತು ವೀರ ಕೊಡವರ ಕೈಯಲ್ಲಿ ಸೋಲನ್ನು ಅನುಭವಿಸಿದರು. ಕೆಳದಿ ರಾಜರು ಕೂಡ ಮೈಸೂರು ಸುಲ್ತಾನರ ವಿರುದ್ಧ ನಡೆದ ಎಲ್ಲಾ ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ಕೊಡವರನ್ನು ಬಳಸಿಕೊಂಡರು. ತನ್ನ ಸರಣಿ ಸೋಲುಗಳಿಂದ ಕೋಪಗೊಂಡ ಟಿಪ್ಪು, ಕೊಡವರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಂಚು ಹೂಡಿ ಸೇಡು ತೀರಿಸಿಕೊಂಡನು. ಅವನು 12 ಡಿಸೆಂಬರ್ 1785 ರಂದು ದೇವಟ್‌ಪರಂಬ್‌ನಲ್ಲಿ ಭವ್ಯವಾದ ಔತಣಕೂಟದ ಹೆಸರಿನಲ್ಲಿ ಶಾಂತಿ ಒಪ್ಪಂದದ ಸಭೆಯನ್ನು ಕರೆದನು. ದೇಶ ತಕ್ಕರು, ನಾಡ್ ತಕ್ಕರು ಮತ್ತು ಊರ್ ತಕ್ಕರ ಮಧ್ಯಸ್ಥಿಕೆಯ ಮೂಲಕ ಸಾವಿರಾರು ನಿರಾಯುಧ ಕೊಡವ ಪುರುಷರು ಮತ್ತು ಮಹಿಳೆಯರು ತಮ್ಮ ಕುಟುಂಬಗಳೊoದಿಗೆ ಅಲ್ಲಿ ಜಮಾಯಿಸಿದರು. ಆ ಸಮಯದಲ್ಲಿ ಮೈಸೂರು ಸುಲ್ತಾನರ ಸೈನ್ಯ ಮತ್ತು ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಲೀಜನ್ ಪಡೆಗಳು ಅವರನ್ನು ಸುತ್ತುವರೆದು ಹತ್ಯೆಗೈದವು. ಉಳಿದ ಜನರನ್ನು ಶ್ರೀರಂಗಪಟ್ಟಣಕ್ಕೆ ಒತ್ತೆಯಾಳುಗಳಾಗಿ ಕರೆದೊಯ್ದು, ಅಲ್ಲಿ ಅವರಿಗೆ ಬಲವಂತವಾಗಿ ತನ್ನ ಧರ್ಮಕ್ಕೆ ಮತಾಂತರಿಸಲಾಯಿತು. ಈ ದುರಂತ ಇತಿಹಾಸವನ್ನು ಇತಿಹಾಸಕಾರರು ಪುಸ್ತಕಗಳಲ್ಲಿ ದಾಖಲಿಸಿದ್ದಾರೆ ಎಂದು ಎನ್.ಯು.ನಾಚಪ್ಪ ವಿವರಿಸಿದರು. ಕಾರ್ಯಕ್ರಮದಲ್ಲಿ ಅರೆಯಡ ಗಿರೀಶ್ ತಿಮ್ಮಯ್ಯ, ಮಂದಪoಡ ಮನೋಜ್ ಮಂದಣ್ಣ, ಕೊಟ್ಟುಕತ್ತಿರ ಬಾಬಿ ಪಳಂಗಪ್ಪ, ಮಾಂಗೇರಿರ ಜಗದೀಶ್, ಕೊಟ್ಟುಕತ್ತಿರ ರೋಷನ್ ಹಾಗೂ ಕೊಟ್ಟುಕತ್ತಿರ ಅಕ್ಷಯ್ ಪಾಲ್ಗೊಂಡಿದ್ದರು.

 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

*ಅ.14 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*

ಅಕ್ಟೋಬರ್ 8, 2026

*ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಅ.9ರ ಕಾರ್ಯಕ್ರಮ*

ಅಕ್ಟೋಬರ್ 8, 2026

*ಶಾಸಕ ಡಾ. ಮಂತರ್ ಗೌಡ ಅವರ ಅ.9ರ ಕಾರ್ಯಕ್ರಮ*

ಅಕ್ಟೋಬರ್ 8, 2026

*ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಅ.9ರ ಕಾರ್ಯಕ್ರಮ*

ಅಕ್ಟೋಬರ್ 8, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.8: ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ (ಸಂಪುಟ ದರ್ಜೆ) ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ…

*ಶಾಸಕ ಡಾ. ಮಂತರ್ ಗೌಡ ಅವರ ಅ.9ರ ಕಾರ್ಯಕ್ರಮ*

ಅಕ್ಟೋಬರ್ 8, 2026

*ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ : ಕೇಂದ್ರ ಪುರಸ್ಕೃತ ಯೋಜನೆ ಸಕಾಲದಲ್ಲಿ ಪ್ರಗತಿ ಸಾಧಿಸಿ : ಸಂಸದ ಯದುವೀರ್ ಒಡೆಯರ್

ಅಕ್ಟೋಬರ್ 8, 2026

*ಕಾವೇರಿ ತೀರ್ಥೋದ್ಭವ : ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಮನವಿ*

ಅಕ್ಟೋಬರ್ 8, 2026

*ಗಾಂಧಿ ಮೈದಾನಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ : ದಸರಾ ಸಿದ್ಧತೆ ಕುರಿತು ಪರಿಶೀಲನೆ*

ಅಕ್ಟೋಬರ್ 8, 2026

*ಬೆಂಗಳೂರು ಸಣ್ಣ ಭಾಷಾ ಚಲನಚಿತ್ರೋತ್ಸವಕ್ಕೆ ಕೊಡಗಿನ ‘ಬೇರ್’ ಆಯ್ಕೆ*

ಅಕ್ಟೋಬರ್ 8, 2026

*ಕರ್ನಾಟಕದಲ್ಲಿ ಭೀಕರ ಬರ: ಶೇ.90ರಷ್ಟು ಬೆಳೆ ಹಾನಿ, ರೈತರ ನೆರವಿಗೆ ಸರ್ಕಾರದ ಮಹತ್ವದ ಕ್ರಮ*

ಅಕ್ಟೋಬರ್ 8, 2026

*ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಿಯ ಕರಗೋತ್ಸವ: ಅ.11ರಿಂದ ನಗರ ಪ್ರದಕ್ಷಿಣೆ*

ಅಕ್ಟೋಬರ್ 8, 2026

*ಮಡಿಕೇರಿ ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಪ್ಯಾಕೇಜ್ ಟೂರ್*

ಅಕ್ಟೋಬರ್ 8, 2026

*ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ರಸ್ತೆ, ಕಸ ಹಾಗೂ ನೀರಿನ ಸಮಸ್ಯೆ ಸದ್ದು*

ಅಕ್ಟೋಬರ್ 8, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.