
ಮಡಿಕೇರಿ NEWS DESK ಮೇ 31 : ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೊಡಗು ಗೌಡ ಸಮಾಜ ಒತ್ತಾಯಿಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಕೊಡಗು ಗೌಡ ಸಮಾಜದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಬರೆದಿರುವ ಪತ್ರದ ಸಾರಾಂಶ ಹೀಗಿದೆ >>> ಕೊಡಗಿನ ಜನತೆಯ ಆಕಾಂಕ್ಷೆ ಹಾಗೂ ವಿಶೇಷವಾಗಿ ಕೊಡಗಿನ ಒಕ್ಕಲಿಗ ಜನಾಂಗದ ನಿರೀಕ್ಷೆಯಂತೆ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ರಾಜ್ಯದ 25ನೇ ಮುಖ್ಯಮುಖ್ಯಂತ್ರಿಗಳಾಗಿ ಅಧಿಕಾರ ಸ್ವೀಕರಿಸುವ ಸುಸಂದರ್ಭ ಕೊಡಗಿನ ಗೌಡರ ಪರವಾಗಿ ತಮಗೆ ಹೃತೂರ್ವಕ ಅಭಿನಂದನೆ ಸಲ್ಲಿಸುತ್ತಿದ್ದೇವೆ. 2023ನೇ ಇಸವಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮಗಳ ನೇತೃತ್ವದಲ್ಲಿ ಹಾಗೂ ತಾವು ನೀಡಿದ ನೈತಿಕ ಬಲದಿಂದಾಗಿ ಕೊಡಗಿನ ಎರಡು ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರದಿಂದ ಇಬ್ಬರು ಕಾಂಗ್ರೆಸ್ ಪಕ್ಷದ ಯುವ ಅಭ್ಯರ್ಥಿಗಳು ಪ್ರಚಂಡ ವಿಜಯ ಸಾಧಿಸಿರುವುದು ಅಭ್ಯರ್ಥಿಗಳಿಗೆ ತಾವು ನೀಡಿದ ನೈತಿಕ ಸ್ಥೆರ್ಯ ಎಂಬುದು ಹೊಗಳಿಕೆಯ ಮಾತಲ್ಲ. ನಂತರದ ಈ 3 ವರ್ಷಗಳಲ್ಲಿ ನಮ್ಮ ಶಾಸಕರು ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಪ್ರಯತ್ನದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷವಾಗಿ ಎ.ಎಸ್.ಪೊನ್ನಣ್ಣ ಶಾಸಕರು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಕೊಡಗು ಜಿಲ್ಲೆಯ ಅಭಿವೃದ್ಧಿ ಕಾರ್ಯವನ್ನು ಜಾತ್ಯಾತೀತವಾಗಿ ನಡೆಸುತ್ತಿರುವುದಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಜಾತಿ ಸಂಘಟನೆಗಳಿಗೆ ಇವರು ಸರಕಾರಿ ಜಾಗ ಮಂಜೂರು ಮಾಡಿಸುವಲ್ಲಿ ಹೆಜ್ಜೆ ಇಟ್ಟಿದ್ದು ವಿಶೇಷವಾಗಿ ಕೊಡಗು ಗೌಡ ಸಮಾಜಕ್ಕೆ ಮಡಿಕೇರಿ ನಗರಕ್ಕೆ ಸಮೀಪ ಮದೆನಾಡು ಎಂಬಲ್ಲಿ 6 ಎಕ್ರೆ ಸರಕಾರಿ ಜಾಗವನ್ನು 2026ರ ಸಾಲಿನಲ್ಲಿ ತಮ್ಮ ಸರಕಾರದ ವತಿಯಿಂದ ಮಂಜೂರು ಮಾಡಿಸಿರುವುದು ಕೊಡಗಿನ ಗೌಡರಿಗೆ ಹೆಮ್ಮೆ ತಂದಿದೆ. ಅಂತೆಯೇ ಇವರು ಕೊಡಗಿನ ಮೂಲೆಮೂಲೆಗಳಲ್ಲಿ ಅಭಿವೃದ್ಧಿ ಕಾರ್ಯನಡೆಸುವ ಉತ್ಸಾಹದಲ್ಲಿರುವುದಾಗಿದೆ. ಈ ಅಭಿವೃದ್ಧಿ ಕಾರ್ಯ ಮುಂದುವರಿಯುವ ಅಗತ್ಯಕ್ಕಾಗಿ ತಾವು ರಚಿಸಲಿರುವ ಕರ್ನಾಟಕ ಸರಕಾರದ ನೂತನ ಮಂತ್ರಿಮಂಡಲದಲ್ಲಿ ಎ.ಎಸ್.ಪೊನ್ನಣ್ಣ, ಶಾಸಕರು, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಇವರಿಗೆ ಪ್ರಮುಖ ಖಾತೆಯ ಮಂತ್ರಿ ಪದವಿ ನೀಡುವುದರೊಂದಿಗೆ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಅವಕಾಶ ಮಾಡಿಕೊಡುವಂತೆ ಕೊಡಗಿನ ಗೌಡ ಜನಾಂಗದ ಪರವಾಗಿ ವಿನಂತಿಸುತ್ತೇವೆ.








