
ಮಡಿಕೇರಿ NEWS DESK ಜೂ.1 : ರಾಜ್ಯ ಸರಕಾರದ ನೂತನ ಮಂತ್ರಿಮoಡಲ ರಚನೆಯ ಸಂದರ್ಭ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಅಖಿಲ ಕೆಂಬಟ್ಟಿ ಸಮಾಜ ಹಾಗೂ ಕೆಂಬಟ್ಟಿ ಪೊಮ್ಮಕಡ ಕೂಟ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಮಾಜದ ಅಧ್ಯಕ್ಷ ಬಿಲ್ಲಿರಿ ಕುಟ್ಟ ಪ್ರಭು ಅಯ್ಯಪ್ಪ ಹಾಗೂ ಪದಾಧಿಕಾರಿಗಳು ಯಾವುದೇ ಸರಕಾರಗಳು ಅಧಿಕಾರಕ್ಕೆ ಬಂದರೂ ಕೊಡಗು ಸಚಿವ ಸ್ಥಾನದಿಂದ ವಂಚಿತವಾಗುತ್ತಿದೆ. ಪ್ರಸ್ತುತ ಬದಲಾದ ರಾಜಕೀಯ ಸನ್ನಿವೇಶದಲ್ಲಾದರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಎಲ್ಲಾ ಜಾತಿ ಜನಾಂಗಗಳ ಪ್ರಗತಿಗಾಗಿ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದಾರೆ. ಯುವ ನೇತಾರ ಪೊನ್ನಣ್ಣ ಅವರು, ಕಳೆದ ಮೂರು ವರ್ಷಗಳಿಂದ ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ ಮತ್ತು ಬಡವರ ಪರ ಕಾಳಜಿ ಹೊಂದಿದ್ದಾರೆ. ತಮ್ಮ ದಕ್ಷ ಕಾರ್ಯ ವೈಖರಿಯಿಂದಲೇ ಸಜ್ಜನ ರಾಜಕಾರಣಿ ಎಂದು ಹೆಸರು ಗಳಿಸಿರುವ ಇವರು ಜನಾನುರಾಗಿಯಾಗಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚು ಅನುಭವ ಹೊಂದಿದ್ದಾರೆ. ಅಭಿವೃದ್ಧಿಪರ ಚಿಂತನೆ ಹೊಂದಿರುವ ಇವರನ್ನು ಸಚಿವರನ್ನಾಗಿ ಆಯ್ಕೆ ಮಾಡಿದರೆ ನಾಡಿನ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಂಬಟ್ಟಿ ಜನಾಂಗದ ಮೇಲೆ ಪೊನ್ನಣ್ಣ ಅವರಿಗೆ ಅಪಾರ ಕಾಳಜಿ ಇದ್ದ ಕಾರಣದಿಂದಲೇ ಜಾತಿವಾರು ಪಟ್ಟಿಯಲ್ಲಿ ಕೆಂಬಟ್ಟಿ ಸಮಾಜದ ಹೆಸರು ಬರಲು ಸಾಧ್ಯವಾಗಿದೆ. ಕೆಂಬಟ್ಟಿ ಸಮಾಜ ಸೇರಿದಂತೆ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ, ಸಾಮಾಜಿಕ ಮತ್ತು ಆರ್ಥಿಕ ಬೆಳೆವಣಿಗೆಗೆ ಪೊನ್ನಣ್ಣ ಅವರಿಗೆ ಸಚಿವ ಸ್ಥಾನವನ್ನು ನೀಡಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕೆಂದು ಬಿಲ್ಲಿರಿ ಕುಟ್ಟ ಪ್ರಭು ಅಯ್ಯಪ್ಪ, ಕಾರ್ಯಾಧ್ಯಕ್ಷ ಬಾಳೆಕುಟ್ಟಂಡ ಉದಯ್ ಮಾದಪ್ಪ, ಉಪಾಧ್ಯಕ್ಷರಾದ ಚಿಮ್ಮಿಕುಟ್ಟ ನಿತೇಶ್, ಚಿಮ್ಮ ಅಯ್ಯಪ್ಪ, ಜೀವನ್, ಕಾರ್ಯದರ್ಶಿ ಮೂಳೆಕುಟ್ಟ ದಿನೇಶ್, ಕಿರಣ್, ಕುವಲೆ ಕುಟ್ಟ ಗಿರೀಶ್, ಚಿಮ್ಮಿಕುಟ್ಟ ಗಿರೀಶ್ ಬೆಳ್ಳಿಯಪ್ಪ, ಸಂತೋಷ್, ಮನು ಬಿದ್ದಪ್ಪ, ಮಂಜೇಶ್, ಡಾಲಿ ಉಮ್ಮಣ್ಣಕುಟ್ಟ, ಸುಬ್ರಮಣಿ ಚವರೇಕುಟ್ಟ, ಕೆಂಬಟ್ಟಿ ಪೋಮ್ಮಕಡ ಕೂಟದ ಅಧ್ಯಕ್ಷೆ ರೋಹಿಣಿ, ಕಾರ್ಯಾಧ್ಯಕ್ಷೆ ಮೊಟ್ಟಕುಟ್ಟ ಭೋಜಮ್ಮ, ಕಾರ್ಯದರ್ಶಿ ವೈಶಾಲಿ, ಉಪಾಧ್ಯಕ್ಷ ವಿಲ್ಮ, ಚಟ್ಟಕುಟ್ಟ ಸುಬ್ಬಕ್ಕಿ ಬಿಲ್ಲರಿಕುಟ್ಟ ಬಬಿತ ಹಾಗೂ ಕೂಟದ ಎಲ್ಲಾ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.









