
ಸುಂಟಿಕೊಪ್ಪ ಜೂ.1 NEWS DESK : ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಸುಂಟಿಕೊಪ್ಪ ವ್ಯಾಪ್ತಿಯ ಶಾಲೆಗಳಲ್ಲಿ ಬಾಳೆಗಿಡ ತಳಿರುತೋರಣ ಮಕ್ಕಳಿಗೆ ಪುಷ್ಪ ನೀಡಿ ಸಿಹಿ ಹಂಚುವ ಮೂಲಕ ಶಿಕ್ಷಕರು ಸ್ವಾಗತ ಕೋರಿದರು. ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಹಾಗೂ ಗದ್ದೆಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸೋಮವಾರದಂದು ಹಬ್ಬದ ವಾತವರಣ ಕಂಡು ಬಂತು 2 ತಿಂಗಳ ಬರೋಬರಿ ರಜೆಯನ್ನು ಮುಗಿಸಿ ಮರಳಿ ಶಾಲೆಗೆ ಹೋಗುವ ದಿನ ಸಮೀಪಿಸಿ ಇಂದಿನಿಂದ ಸರಕಾರದ ಘೋಷವಾಕ್ಯವಾದ ಮರಳಿ ಶಾಲೆಗೆ ಬಾ ಎಂಬುದನ್ನು ಪೋಷಕರು ಮಕ್ಕಳನ್ನು ಶಾಲೆಗೆ ತಂದು ಬಿಡುತ್ತಿದ್ದದು ಕಂಡು ಬಂತು. ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಜೂ.1 ರಂದು ಶಾಲೆಗಳನ್ನು ತೆರೆಯುವ ಆದೇಶದ ಮೇರೆ ಮಕ್ಕಳಿಗೆ ಅಧಿಕೃತವಾಗಿ ಶಾಲಾ ಪ್ರಾರಂಭೋತ್ಸವವನ್ನು ಮಾಡಿದ ಹಿನ್ನಲೆಯಲ್ಲಿ ಇದೀಗ ಪ್ರಾಥಮಿಕ ಪ್ರೌಢಶಾಲಾ ಮತ್ತೊಂದು ವರ್ಷದ ಶೈಕ್ಷಣಿಕ ಸಾಧನೆಗಾಗಿ ಶಾಲೆಯತ್ತ ಮುಖ ಮಾಡಿದ್ದಾರೆ. ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾದ ವೈ.ಸಿ.ಕುಮಾರ್, ಪ್ರೌಢಶಾಲೆಯ ಮುಖ್ಯೋಪಾದ್ಯಾಯರಾದ ಬಾಲಕೃಷ್ಣ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ಜೋವಿಟಾ ವಾಸ್ ಹಾಗೂ ಗದ್ದೆಹಳ್ಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ಹೇಮಾಕುಮಾರಿ ಇತರೆ ಶಾಲೆಗಳ ಸಹ ಶಿಕ್ಷಕರು ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಬರಮಾಡಿಕೊಂಡರು. ವಿವಿಧ ಶಾಲೆಗಳ ಮಕ್ಕಳು ಶಾಲೆಯ ಸಮಸ್ತ್ರವನ್ನು ಧರಿಸಿಕೊಂಡು ಲವಲವಿಕೆಯಿಂದ ಶಾಲೆಗಳಿಗೆ ಆಗಮಿಸಿದರು.









