
ವಿರಾಜಪೇಟೆ ಜೂ.8 NEWS DESK : ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವತಿಯಿಂದ ಬಸವ ಜಯಂತಿ ಅಂಗವಾಗಿ ಬಸವ ಶ್ರೀ ಕಾಯಕ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಾಂಸ್ಕೃತಿಕ ಉತ್ಸವ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆಯಿತು. ಚಲನಚಿತ್ರ ನಟರಾದ ಅನಿರುದ್ದ ಜತಕರ್, ಪೋಲಿಸ್ ಮಹಾನಿರ್ದೇಶಕರು, ಮತ್ತು ಆಯುಕ್ತರಾಗಿದ್ದ ನಿವೃತ್ತ ಶಂಕರ ಬಿದರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಾವಣಗೆರೆಯ ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ಮಾಮಿಜಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾವಿತ್ರಿಬಾಯಿ ಫುಲೆ ಸಂಘಟನೆಯ ರಾಜ್ರ್ಯಾಧ್ಯಕ್ಷ ಧಾರವಾಡದ ಲತಾ ಮುಳ್ಳುರು, ಸಮಾಜ ಸೇವಕರಾದ ಪರಮಾನಂದ ಬಸಪ್ಪ ಸನ್ನಟ್ಟಿ, ಸುಧಾಕರ್ ಎಸ್ ಜಡಗಿ, ಸಾದಿಕ್, ಷರೀಪ್, ಆರೀಫ ಬೀರೂರು, ಇನ್ನೂ ಅನೇಕ ಗಣ್ಯರು ಭಾಗವಹಿಸಿದ್ದರು. ನಾಟ್ಯ ಮಯೂರಿ ನೃತ್ಯ ಟ್ರಷ್ಟಿನ ಸಂಸ್ಥಾಪಕರಾದ ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಜ್ಯ ವಿವಿಧ ಕಡೆಗಳಿಂದ ಆಗಮಿಸಿದ ನೃತ್ಯ ಸಂಸ್ಥೆಗಳ ವಿದ್ಯಾರ್ಥಿಗಳು ಉತ್ತಮ ನೃತ್ಯ ಪ್ರದರ್ಶನ ನೀಡಿದರು.









