Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಜೂ.14ಕ್ಕೆ ಮರಾಠ-ಮರಾಟಿ ಸಮಾಜದ ವಾರ್ಷಿಕ ಮಹಾಸಭೆ*
  • *ಮಡಿಕೇರಿಯಲ್ಲಿ ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ*
  • *ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕ-ಶಿಕ್ಷಕರ ಸಭೆ*
  • *ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ : ಪ್ರಕೃತಿ, ವನ್ಯಜೀವಿಗಳ ಮೇಲೆ ಕಾಳಜಿ ಅಗತ್ಯ : ಸಂಸದ ಯದುವೀರ್ ಒಡೆಯರ್*
  • *ಬಿಜೆಪಿ ಪಕ್ಷದ ವಿರಾಜಪೇಟೆ ಮಂಡಲ ಕಚೇರಿಯನ್ನು ಉದ್ಘಾಟಿಸಿದ ಸಂಸದ ಯದುವೀರ್ ಒಡೆಯರ್*
  • *ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ ಆಚರಣೆ : ಮಾದಕ ವ್ಯಸನದಿಂದ ದೂರವಿರಲು ಎನ್.ಜೆ.ಲತಾ ಕರೆ*
  • *ಸೋಮವಾರಪೇಟೆ : ಕಾರ್ಯಕರ್ತರ ಸಮಸ್ಯೆ ಆಲಿಸಿದ ಶಾಸಕ ಡಾ.ಮಂತರ್ ಗೌಡ*
  • *ಐಗೂರು : ಕೈತೋಟದಿಂದ ವಿದ್ಯಾರ್ಥಿಗಳಿಗೆ ರಸಾಯನ ಮುಕ್ತ ಆಹಾರ ದೊರೆಯಲಿದೆ : ಸಿ.ಬಿ.ಸುರೇಶ್ ಶೆಟ್ಟಿ*
  • *ಎನ್‍ಡಿಆರ್‍ಎಫ್ ತಂಡ ಭೇಟಿ ಮಾಡಿ ಮಾಹಿತಿ ಪಡೆದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
  • *ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ಸಮಿತಿ ಸಭೆ : ಅಗತ್ಯ ಮುನ್ನೆಚ್ಚರಿಕೆಗೆ ಶಾಸಕ ಡಾ.ಮಂತರ್ ಗೌಡ ಸೂಚನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*19ನೇ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಉಮ್ಮತ್ತಾಟ್’ ಆಯ್ಕೆ*
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

*19ನೇ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಉಮ್ಮತ್ತಾಟ್’ ಆಯ್ಕೆ*

ಜೂನ್ 9, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಜೂ.9 : ಮುಂಬೈನ ಎನ್‌ಎಫ್‌ಡಿಸಿ-ಎಫ್‌ಡಿ ಕ್ಯಾಂಪಸ್‌ನಲ್ಲಿ ಜೂ.15 ರಿಂದ ಜೂ.21 ರವರೆಗೆ ನಡೆಯುವ 19ನೇ ಮುಂಬೈ  ಅಂತರಾಷ್ಟ್ರೀಯ  ಚಲನಚಿತ್ರೋತ್ಸವಕ್ಕೆ ‘ಉಮ್ಮತ್ತಾಟ್’ ಕೊಡವ ಸಾಕ್ಷ್ಯಚಿತ್ರ ಆಯ್ಕೆಯಾಗಿದೆ. ದಕ್ಷಿಣ ಏಷ್ಯಾದ ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಮತ್ತು ಅನಿಮೇಷನ್ ಚಿತ್ರಗಳಿಗಾಗಿ ಮೀಸಲಾದ ಅತ್ಯಂತ ದೊಡ್ಡ ಚಲನಚಿತ್ರೋತ್ಸವ ಇದಾಗಿದೆ. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಹಾಗೂ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ದಂಪತಿಗೆ ಮುಂಬೈ  ಅಂತರಾಷ್ಟ್ರೀಯ   ಚಲನಚಿತ್ರೋತ್ಸವದಲ್ಲಿ ‘ಉಮ್ಮತ್ತಾಟ್’ ಪ್ರದರ್ಶನಗೊಳ್ಳುತ್ತಿರುವುದು ಮತ್ತೊಂದು ಹೆಗ್ಗಳಿಕೆಯಾಗಿದೆ.
ಕೊಡವ ಚಿತ್ರರಂಗದ ಖ್ಯಾತಿಯನ್ನು ಅಂತರಾಷ್ಟ್ರೀಯ  ಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆಯ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ಸ್ವಸ್ತಿಕ್ ಎಂಟರ್ಟೈನ್ಮೆoಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿ, ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ನಿರ್ದೇಶಿಸಿರುವ ‘ಉಮ್ಮತ್ತಾಟ್’ ಕೊಡವ ಜಾನಪದ ನೃತ್ಯ ಪ್ರಕಾರದ ಮೇಲೆ ಬೆಳಕು ಚೆಲ್ಲಿದೆ. ಹಲವು ವರ್ಷಗಳ ಇತಿಹಾಸ ಹೊಂದಿರುವ ಈ ಕಲೆಯ ಒಟ್ಟು 13 ನೃತ್ಯ ಪ್ರಕಾರಗಳನ್ನು ಚಿತ್ರೀಕರಿಸಲಾಗಿದ್ದು, 153 ಕಲಾವಿದರು ನೃತ್ಯ ಮಾಡಿದ್ದಾರೆ. ‘ಯೂ’ ಅರ್ಹತಾಪತ್ರ ಪಡೆದಿರುವ ‘ಉಮ್ಮತ್ತಾಟ್’ ಜನಪದದಲ್ಲಿ ಸಿಬಿಎಫ್‌ಸಿ ದಾಖಲಾತಿ ಹೊಂದಿದ ಸಾಕ್ಷ್ಯಚಿತ್ರವಾಗಿದೆ. ಮುಂಬೈ  ಅಂತರಾಷ್ಟ್ರೀಯ  ಚಲನಚಿತ್ರೋತ್ಸವದಲ್ಲಿ ‘ಉಮ್ಮತ್ತಾಟ್’ ಸಿನಿ ಪ್ರಿಯರನ್ನು ಆಕರ್ಷಿಸಲಿದೆ ಎಂದು ಸಾಕ್ಷ್ಯಚಿತ್ರದ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲೆಯ ಮುಟ್ಲುವಿನಿಂದ ಕುಟ್ಟದವರೆಗಿನ ವಿವಿಧೆಡೆಯ ಸುಂದರ ಪ್ರದೇಶದಲ್ಲಿ  ‘ಉಮ್ಮತ್ತಾಟ್’ ಸಾಕ್ಷ್ಯಚಿತ್ರ ಚಿತ್ರೀಕರಣಗೊಂಡಿದ್ದು, ಛಾಯಾಗ್ರಾಹಕ ವಿನಾಯಕ ರೇವಡಿ ಅವರ ಛಾಯಾಗ್ರಹಣ ಹಾಗೂ ಟಿ.ಮುತ್ತುರಾಜು ಅವರ ಸಂಕಲನವಿದೆ. ತಂತಿಪಾಲ, ದೇವಸ್ತೂರು, ಬಲಂಬೇರಿ, ಕಾಕೋಟುಪರಂಬು, ನೀರುಕೊಲ್ಲಿ, ಮುಟ್ಲು, ಬಾಳೆಲೆ ಆದೆಂಗಡ ಐನ್ ಮನೆ, ಗುಹ್ಯ ಅಗಸ್ತೇಶ್ವರ ದೇವಾಲಯ, ಚೇರಂಬಾಣೆಯ ಗೋಪಾಲಕೃಷ್ಣ ದೇವಾಲಯ ಮುಂತಾದೆಡೆ ಚಿತ್ರೀಕರಿಸಲಾಗಿದೆ. ಈ ಸಾಕ್ಷ್ಯಚಿತ್ರಕ್ಕೆ ‘ಉಮ್ಮತ್ತಾಟ್’ ತರಬೇತುದಾರರಾದ ಕಲಾವಿದೆ ಬೊಳ್ಳಜಿರ ಯಮುನಾ ಅಯ್ಯಪ್ಪ ಅವರ ಸಹ ನಿರ್ದೇಶನವಿದ್ದು, ನಿರೂಪಣೆಯನ್ನು ಕೂಡ ಮಾಡಿದ್ದಾರೆ. ಅಲ್ಲದೆ ವಸ್ತç ವಿನ್ಯಾಸ ಮತ್ತು ನೃತ್ಯ ಪ್ರದರ್ಶನಕ್ಕೆ ಸಹಕಾರ ನೀಡಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತೆ, ನೃತ್ಯ ಮತ್ತು ನೃತ್ಯ ಸಂಗೀತ ಭರತನಾಟ್ಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ಕೇಂದ್ರ ಸರಕಾರದ ಜೂನಿಯರ್ ಫೆಲೋಶಿಪ್ ಪಡೆದಿರುವ  ಅಂತರಾಷ್ಟ್ರೀಯ   ಮಟ್ಟದ ಖ್ಯಾತ ಭರತನಾಟ್ಯ ಕಲಾವಿದೆ ಮುಕ್ಕಾಟಿರ ಶಿಲ್ಪ ನಂಜಪ್ಪ ಅವರು ನೃತ್ಯ ಪ್ರಕಾರಗಳನ್ನು ನಿರೂಪಣೆ ಮಾಡಿದ್ದಾರೆ. *ಮೊದಲ  ಸಾಕ್ಷ್ಯಚಿತ್ರ* ಕಳೆದ ವರ್ಷ ಗೋವಾದಲ್ಲಿ ನಡೆದ 56ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ‘ಉಮ್ಮತ್ತಾಟ್’ ಇಂಡಿಯನ್ ಪನೋರಮಾಗೆ ಆಯ್ಕೆಯಾದ ಮೊದಲ ಕೊಡವ ಭಾಷಾ ಸಾಕ್ಷ್ಯಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ನಂತರ ಇದೇ ಜನವರಿಯಲ್ಲಿ 17ನೇ ಬೆಂಗಳೂರು  ಅಂತರಾಷ್ಟ್ರೀಯ   ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು. ಇದೀಗ 19ನೇ ಮುಂಬೈ  ಅಂತರಾಷ್ಟ್ರೀಯ   ಚಲನಚಿತ್ರೋತ್ಸವಕ್ಕೆ ‘ಉಮ್ಮತ್ತಾಟ್’ ಆಯ್ಕೆಯಾಗಿರುವುದರಿಂದ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದು ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಜಾನಪದ ಕಲಾವಿದೆ ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ, ಜನಪದ ನೃತ್ಯ ಅಧ್ಯಯನ ಗ್ರಂಥ ರಚಿಸಿರುವ ಸಾಹಿತಿ ಡಾ.ರೇವತಿ ಪೂವಯ್ಯ, ಸಾಹಿತಿ ಹಾಗೂ ಕಲಾವಿದೆ ಮೊಣ್ಣಂಡ ಶೋಭಾ ಸುಬ್ಬಯ್ಯ, ತಾಯಿ ಬೇರು ಪುಸ್ತಕದ ರಚನೆಕಾರರಾದ ಬೆಂಗಳೂರಿನ ಸ್ನೇಹ ಕಪ್ಪಣ್ಣ ಅವರುಗಳ ಸಹಕಾರ ಮತ್ತು ಸಲಹೆಯನ್ನು ಪಡೆದು ಸಾಕ್ಷ್ಯಚಿತ್ರ  ‘ಉಮ್ಮತ್ತಾಟ್’ ನ್ನು ತಯಾರಿಸಲಾಗಿದೆ ಎಂದು ಕೊಟ್ಟುಕತ್ತೀರ ಯಶೋಧ ಪ್ರಕಾಶ್ ತಿಳಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಜೂ.14ಕ್ಕೆ ಮರಾಠ-ಮರಾಟಿ ಸಮಾಜದ ವಾರ್ಷಿಕ ಮಹಾಸಭೆ*

ಜೂನ್ 9, 2026

*ಮಡಿಕೇರಿಯಲ್ಲಿ ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ*

ಜೂನ್ 9, 2026

*ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕ-ಶಿಕ್ಷಕರ ಸಭೆ*

ಜೂನ್ 9, 2026

*ಮಡಿಕೇರಿಯಲ್ಲಿ ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ*

ಜೂನ್ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಜೂ.9 NEWS DESK : ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯಿ) ಎಸ್‍ಟಿಸಿ ಮಡಿಕೇರಿ ಕ್ಯಾಂಪಸ್‍ನಲ್ಲಿ ವಿಶ್ವ ಸೈಕಲ್ ದಿನಾಚರಣೆಯ ಅಂಗವಾಗಿ…

*ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕ-ಶಿಕ್ಷಕರ ಸಭೆ*

ಜೂನ್ 9, 2026

*ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ : ಪ್ರಕೃತಿ, ವನ್ಯಜೀವಿಗಳ ಮೇಲೆ ಕಾಳಜಿ ಅಗತ್ಯ : ಸಂಸದ ಯದುವೀರ್ ಒಡೆಯರ್*

ಜೂನ್ 9, 2026

*ಬಿಜೆಪಿ ಪಕ್ಷದ ವಿರಾಜಪೇಟೆ ಮಂಡಲ ಕಚೇರಿಯನ್ನು ಉದ್ಘಾಟಿಸಿದ ಸಂಸದ ಯದುವೀರ್ ಒಡೆಯರ್*

ಜೂನ್ 9, 2026

*ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ ಆಚರಣೆ : ಮಾದಕ ವ್ಯಸನದಿಂದ ದೂರವಿರಲು ಎನ್.ಜೆ.ಲತಾ ಕರೆ*

ಜೂನ್ 9, 2026

*ಸೋಮವಾರಪೇಟೆ : ಕಾರ್ಯಕರ್ತರ ಸಮಸ್ಯೆ ಆಲಿಸಿದ ಶಾಸಕ ಡಾ.ಮಂತರ್ ಗೌಡ*

ಜೂನ್ 9, 2026

*ಐಗೂರು : ಕೈತೋಟದಿಂದ ವಿದ್ಯಾರ್ಥಿಗಳಿಗೆ ರಸಾಯನ ಮುಕ್ತ ಆಹಾರ ದೊರೆಯಲಿದೆ : ಸಿ.ಬಿ.ಸುರೇಶ್ ಶೆಟ್ಟಿ*

ಜೂನ್ 9, 2026

*ಎನ್‍ಡಿಆರ್‍ಎಫ್ ತಂಡ ಭೇಟಿ ಮಾಡಿ ಮಾಹಿತಿ ಪಡೆದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಜೂನ್ 9, 2026

*ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ಸಮಿತಿ ಸಭೆ : ಅಗತ್ಯ ಮುನ್ನೆಚ್ಚರಿಕೆಗೆ ಶಾಸಕ ಡಾ.ಮಂತರ್ ಗೌಡ ಸೂಚನೆ*

ಜೂನ್ 9, 2026

*ಕೊಡಗು ಪತ್ರಿಕಾ ಭವನ ಟ್ರಸ್ಟ್‌ನಿಂದ  ಜೂ.13ರಂದು ಪತ್ರಕರ್ತರ ಮಕ್ಕಳಿಗೆ ವಿದ್ಯಾನಿಧಿ ವಿತರಣೆ*

ಜೂನ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.