
ಮಡಿಕೇರಿ ಜೂ.9 NEWS DESK : ಕೊಡಗು ಪತ್ರಿಕಾ ಭವನ ಟ್ರಸ್ಟ್(ರಿ) ವತಿಯಿಂದ ಜೂ.13 ರಂದು ಮಧ್ಯಾಹ್ನ 3 ಗಂಟೆಗೆ ಪತ್ರಕರ್ತರ ಮಕ್ಕಳಿಗೆ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ವಹಿಸಲಿದ್ದಾರೆ. ಕಲ್ಲಡ್ಕದ ನಿವೃತ್ತ ಉಪನ್ಯಾಸಕರಾದ ನಾರಾಯಣ ಗೌಡ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಕೋಶಾಧಿಕಾರಿ ಕೆ. ತಿಮ್ಮಪ್ಪ, ಟ್ರಸ್ಟಿಗಳಾದ ಟಿ.ಪಿ.ರಮೇಶ್, ಜಿ.ಚಿದ್ವಿಲಾಸ್, ಜೀವನ್ ಚಿಣ್ಣಪ್ಪ, ಅನಿಲ್ ಎಚ್.ಟಿ., ವಿ.ಪಿ.ಸುರೇಶ್, ಶ್ರೀಧರ್ ಹೂವಲ್ಲಿ, ಮಧೋಶ್ ಪೂವಯ್ಯ ಅವರುಗಳ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.









