
ಸೋಮವಾರಪೇಟೆ ಜೂ.9 NEWS DESK : ಪಾಠದ ಜೊತೆಗೆ ಕೈತೋಟದಂತಹ ಕೃಷಿ ಚಟುವಟಿಕೆಯನ್ನು ಶಾಲೆಯಲ್ಲಿ ಕೈಗೊಂಡರೆ ರಸಾಯನಮುಕ್ತ ಆಹಾರ ಪದಾರ್ಥಗಳು ವಿದ್ಯಾರ್ಥಿಗಳಿಗೆ ದೊರಕುತ್ತದೆ ಎಂದು ಚೌಡ್ಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಸಮಾಜ ಸೇವಕ ಸಿ.ಬಿ.ಸುರೇಶ್ ಶೆಟ್ಟಿ ಅಭಿಪ್ರಾಯಿಸಿದರು. ಐಗೂರು ಪ್ರೌಢಶಾಲೆಯ ಭುವನಕ್ಕೊಂದು ಸದನ ಇಕೋ ಕ್ಲಬ್ ವತಿಯಿಂದ ನೂತನವಾಗಿ ಶಾಲಾ ಆವರಣದಲ್ಲಿ ನಿರ್ಮಿಸಲಾದ ಕೈದೋಟಕ್ಕೆ ಉದಾರವಾಗಿ ಗೇಟ್ ಹಸ್ತಾಂತರಿಸಿ, ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ತಾಜಾ ತರಕಾರಿಗಳು, ಸೊಪ್ಪುಗಳ ಅಗತ್ಯತೆ ಇದೆ. ವಿದ್ಯಾರ್ಥಿಗಳು ಸ್ವತ: ಶಾಲಾ ಕೈತೋಟದಲ್ಲಿ ಇಂತಹುಗಳನ್ನು ಬೆಳೆಯುವ ಮೂಲಕ ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ ಎಂದಿಗೂ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು. ಪುಸ್ತಕಗಳು ಅಥವಾ ಶಾಲಾ ಶುಲ್ಕಗಳಿಗೆ ತಾನು ಸಹಾಯಹಸ್ತ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಎಂ.ಎಂ.ಯಶ್ವಂತ್ ಕುಮಾರ್, ಸಹ ಶಿಕ್ಷಕರು ಇದ್ದರು.









