
ಮಡಿಕೇರಿ ಜೂ.12 NEWS DESK : ಕಳೆದ ಎಂಟು ವರ್ಷಗಳಿಂದ ಜಿಲ್ಲೆಯ ವಿವಿಧ ಜನಾಂಗದಲ್ಲಿರುವ ಆಯ್ದ ಸಂಕಷ್ಟ ಕುಟುಂಬಗಳಿಗೆ ಆಹಾರದ ಕಿಟ್, ವೈದ್ಯಕೀಯ ಸೌಲಭ್ಯ ಹಾಗೂ ವಿದ್ಯಾರ್ಥಿಗಳಿಗೆ ಪಠ್ಯ ಪರಿಕರಗಳನ್ನು ವಿತರಿಸುತ್ತಾ ಬರುತ್ತಿರುವ ಮಾನವೀಯ ಸ್ನೇಹಿತರ ಒಕ್ಕೂಟದ ಜಿಲ್ಲಾಮಟ್ಟದ ಕಾರುಣ್ಯ ಕಾರ್ಯಕ್ರಮ ಜೂ.14 ರಂದು ನಡೆಯಲಿದೆ. ಅಂದು ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಪೂರ್ವಾಹ್ನ10.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ವಕ್ತಾರ ಶಶಿಕುಮಾರ್ ಚೆಟ್ಟಳ್ಳಿ ಅವರು ವಹಿಸಲಿದ್ದು, ಮಡಿಕೇರಿ ಪುರಸಭೆಯ ಮಾಜಿ ಅಧ್ಯಕ್ಷ ಎಚ್ಎಂ ನಂದ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಮಂತರ್ ಗೌಡ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್ ಟಿ ಅನಿಲ್, ಒಕ್ಕೂಟದ ಸ್ಥಾಪಕ ಅಡ್ಮಿನ್ ಅನಿಲ್ ರೈ, ಡಾ.ಮುಸ್ತಫ ಮಾದಾಪುರ, ಸುಂಟಿಕೊಪ್ಪದ ಹಿರಿಯ ಸಹಕಾರಿ ಚೆಟ್ರಂಡ ಲೀಲಾ ಮೇದಪ್ಪ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಆಹಾರ, ಆರೋಗ್ಯ,ಶಿಕ್ಷಣ ವಿಭಾಗಗಳಲ್ಲಿ ಅಂದು ಜಿಲ್ಲೆಯ 70ಕ್ಕೂ ಅಧಿಕ ಫಲಾನುಭವಿಗಳಿಗೆ ಒಕ್ಕೂಟದ ವತಿಯಿಂದ ಸವಲತ್ತುಗಳ ವಿತರಣೆ ನಡೆಯಲಿದೆ,ಈ ಉದ್ದೇಶಿತ ಕಾರುಣ್ಯ ಕಾರ್ಯಕ್ರಮಕ್ಕೆ ಮೂರು ಲಕ್ಷಕ್ಕೂ ಹೆಚ್ಚಿನ ಮೊತ್ತ ವೆಚ್ಚವಾಗಲಿದೆ ಎಂದು ಒಕ್ಕೂಟದ ವಕ್ತಾರ ಎಂ ಇ ಮಹಮ್ಮದ್ ತಿಳಿಸಿದ್ದಾರೆ .ಒಕ್ಕೂಟದಲ್ಲಿ ಮಹಿಳೆಯರು ಸೇರಿದಂತೆ ಸಮಾಜದ ವಿವಿಧ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನೂರ ತೊಂಭತ್ತು ಸದಸ್ಯರುಗಳಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.








