Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡಗು ಸೌಹಾರ್ಧ ಪತ್ತಿನ ಸಹಕಾರಿ ಸಂಘಕ್ಕೆ ‘ಎ’ ವರ್ಗೀಕರಣ : ರೂ.29 ಲಕ್ಷ ನಿವ್ವಳ ಲಾಭ*
  • *ಚೆಟ್ಟಳ್ಳಿಯಲ್ಲಿ ಸಾಂಪ್ರದಾಯಿಕ ಕೈಲ್ ಪೊವ್ದ್ ಧಾರೆ ಪೂಜೆ*
  • *ರಕ್ಷಾಬಂಧನ ಆಚರಣೆ : ಸಂಸದ ಯದುವೀರ್ ಒಡೆಯರ್‌ಗೆ ಬ್ರಹ್ಮಕುಮಾರಿಸ್‌ ನಿಂದ ರಾಖಿ*
  • *ಎ.ಕೆ. ಸುಬ್ಬಯ್ಯರ ಪುಣ್ಯಸ್ಮರಣೆ: ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*
  • *ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*
  • *ಜಾನಪದ ಕಲಾಪ್ರಕಾರದ ತರಬೇತಿಗೆ ಅರ್ಜಿ ಆಹ್ವಾನ*
  • *ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ*
  • *ಗಣೇಶೋತ್ಸವ : ಸೆ.8 ರಂದು ಕೋಟೆ ಶ್ರೀ ಗಣಪತಿ ದೇವಾಲಯದಲ್ಲಿ ಈಡುಗಾಯಿ ಬಹಿರಂಗ ಹರಾಜು*
  • *ಆ.28 ರಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಕೊಡಗಿಗೆ ಭೇಟಿ*
  • *ಖಾರೀಫ್ ಬೆಳೆಗೆ ಹಾರಂಗಿ ಜಲಾಶಯದಿಂದ ನೀರು ಹರಿಸುವ ಕುರಿತು ಸಲಹಾ ಸಮಿತಿ ಸಭೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು ಸೌಹಾರ್ಧ ಪತ್ತಿನ ಸಹಕಾರಿ ಸಂಘಕ್ಕೆ ‘ಎ’ ವರ್ಗೀಕರಣ : ರೂ.29 ಲಕ್ಷ ನಿವ್ವಳ ಲಾಭ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು ಸೌಹಾರ್ಧ ಪತ್ತಿನ ಸಹಕಾರಿ ಸಂಘಕ್ಕೆ ‘ಎ’ ವರ್ಗೀಕರಣ : ರೂ.29 ಲಕ್ಷ ನಿವ್ವಳ ಲಾಭ*

ಆಗಷ್ಟ್ 27, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ, ಆ.27 NEWS DESK : ಕೊಡಗು ಸೌಹಾರ್ಧ ಪತ್ತಿನ ಸಹಕಾರಿ ಸಂಘವು 2025-26ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ‘ಎ’ ವರ್ಗೀಕರಣ ಪಡೆದುಕೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ರೂ.29 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ ತಿಳಿಸಿದರು.
ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಕೊಡಗು ಜಿಲ್ಲಾದ್ಯಂತ ಕಾರ್ಯವ್ಯಾಪ್ತಿ ಹೊಂದಿದ್ದು, ಪ್ರಸ್ತುತ 2,165 ಸದಸ್ಯರನ್ನು ಹೊಂದಿದೆ. ರೂ.1.12 ಕೋಟಿ ಪಾಲು ಬಂಡವಾಳ, ರೂ.6.74 ಕೋಟಿ ಠೇವಣಿ ಹಾಗೂ ರೂ.5.73 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.  ಮನೆ ಸಾಲ, ಕೃಷಿ ಸಾಲ, ಕೃಷಿಯೇತರ ದೀರ್ಘಾವಧಿ ಸಾಲ, ಠೇವಣಿಗಳ ಮೇಲಿನ ಸಾಲ ಹಾಗೂ ಆಭರಣ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ಸದಸ್ಯರಿಗೆ ಒದಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಶೇ.97ರಷ್ಟು ಸಾಲ ವಸೂಲಾತಿ ಮಾಡಲಾಗಿದ್ದು, ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ರೂ.3.32 ಕೋಟಿ ಹೂಡಿಕೆ ಮಾಡಲಾಗಿದೆ ಎಂದರು.
ಸಂಘವು ರೂ.29 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಅಧ್ಯಕ್ಷರು ತಿಳಿಸಿದರು. ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು.
ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ, ಮರಣನಿಧಿ ಹೆಚ್ಚಳ, ಹೆಚ್ಚಿನ ಡಿವಿಡೆಂಡ್ ನೀಡುವುದು, ಸಾಲ ಸೌಲಭ್ಯ ವಿಸ್ತರಣೆ ಹಾಗೂ ಠೇವಣಿ ಸಂಗ್ರಹಣೆ ಹೆಚ್ಚಿಸುವುದು ಸೇರಿದಂತೆ ಸಂಘದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಮಹಾಸಭೆಯಲ್ಲಿ ಚರ್ಚೆ ನಡೆಯಿತು. ಸಂಘದ ಉಪಾಧ್ಯಕ್ಷ ಕೊಳುವಂಡ ಬಿ. ಉತ್ತಪ್ಪ, ನಿರ್ದೇಶಕರಾದ ಚೋವಂಡ ಡಿ. ಕಾಳಪ್ಪ, ಅಂಜಪರವಂಡ ಉಷಾ, ಕೊಂಗಂಡ ಎ. ತಿಮ್ಮಯ್ಯ, ನಂದೇಟಿರ ರಾಜಾ ಮಾದಪ್ಪ, ಕೇಕಡ ಎಂ. ಸುಗುಣ, ಶಾಂತೆಯಂಡ ಟಿ. ದೇವರಾಜ್, ನಾಪನೆರವಂಡ ಎ. ಪೊನ್ನಮ್ಮ, ಡಾ. ಸಣ್ಣುವಂಡ ಎಂ. ಕಾವೇರಪ್ಪ, ಮೇದುರ ಪಿ. ಕಾವೇರಪ್ಪ, ಚೆರುಮಂದಂಡ ಜಿ. ಪೊನ್ನಪ್ಪ, ಕಾಂಡೆರ ಯು. ಕುಟ್ಟಪ್ಪ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಳ್ಳೇಂಗಡ ನೀಮಾರಂಜನ್ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು. ಚೆಟ್ರಂಡ ವಸಂತಿ ಪೂರ್ಣಚ್ಚ ಪ್ರಾರ್ಥಿಸಿದರು. ಕುಡುವಂಡ ಬಿ. ಉತ್ತಪ್ಪ ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಚೆಟ್ಟಳ್ಳಿಯಲ್ಲಿ ಸಾಂಪ್ರದಾಯಿಕ ಕೈಲ್ ಪೊವ್ದ್ ಧಾರೆ ಪೂಜೆ*

ಆಗಷ್ಟ್ 27, 2026

*ರಕ್ಷಾಬಂಧನ ಆಚರಣೆ : ಸಂಸದ ಯದುವೀರ್ ಒಡೆಯರ್‌ಗೆ ಬ್ರಹ್ಮಕುಮಾರಿಸ್‌ ನಿಂದ ರಾಖಿ*

ಆಗಷ್ಟ್ 27, 2026

*ಎ.ಕೆ. ಸುಬ್ಬಯ್ಯರ ಪುಣ್ಯಸ್ಮರಣೆ: ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*

ಆಗಷ್ಟ್ 27, 2026

*ಚೆಟ್ಟಳ್ಳಿಯಲ್ಲಿ ಸಾಂಪ್ರದಾಯಿಕ ಕೈಲ್ ಪೊವ್ದ್ ಧಾರೆ ಪೂಜೆ*

ಆಗಷ್ಟ್ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಚೆಟ್ಟಳ್ಳಿ, ಆ.27 NEWS DESK : ಕೊಡಗಿನ ಸಾಂಪ್ರದಾಯಿಕ ಕೈಲ್ ಪೊವ್ದ್ ಹಬ್ಬದ ಅಂಗವಾಗಿ ಚೆಟ್ಟಳ್ಳಿಯ ಶ್ರೀಮಂಗಲ ಶ್ರೀ ಭಗವತಿ…

*ರಕ್ಷಾಬಂಧನ ಆಚರಣೆ : ಸಂಸದ ಯದುವೀರ್ ಒಡೆಯರ್‌ಗೆ ಬ್ರಹ್ಮಕುಮಾರಿಸ್‌ ನಿಂದ ರಾಖಿ*

ಆಗಷ್ಟ್ 27, 2026

*ಎ.ಕೆ. ಸುಬ್ಬಯ್ಯರ ಪುಣ್ಯಸ್ಮರಣೆ: ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*

ಆಗಷ್ಟ್ 27, 2026

*ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*

ಆಗಷ್ಟ್ 27, 2026

*ಜಾನಪದ ಕಲಾಪ್ರಕಾರದ ತರಬೇತಿಗೆ ಅರ್ಜಿ ಆಹ್ವಾನ*

ಆಗಷ್ಟ್ 27, 2026

*ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ*

ಆಗಷ್ಟ್ 27, 2026

*ಗಣೇಶೋತ್ಸವ : ಸೆ.8 ರಂದು ಕೋಟೆ ಶ್ರೀ ಗಣಪತಿ ದೇವಾಲಯದಲ್ಲಿ ಈಡುಗಾಯಿ ಬಹಿರಂಗ ಹರಾಜು*

ಆಗಷ್ಟ್ 27, 2026

*ಆ.28 ರಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಕೊಡಗಿಗೆ ಭೇಟಿ*

ಆಗಷ್ಟ್ 27, 2026

*ಖಾರೀಫ್ ಬೆಳೆಗೆ ಹಾರಂಗಿ ಜಲಾಶಯದಿಂದ ನೀರು ಹರಿಸುವ ಕುರಿತು ಸಲಹಾ ಸಮಿತಿ ಸಭೆ*

ಆಗಷ್ಟ್ 27, 2026

*SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಹಾಶೀರ್‌ಗೆ ಪ್ರಥಮ ಸ್ಥಾನ*

ಆಗಷ್ಟ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.