

ಮಡಿಕೇರಿ, NEWS DESK ಸೆ. 2: ಬ್ರೈನೋಬ್ರೈನ್ ಇಂಟರ್‌ನ್ಯಾಷನಲ್ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಚೆನ್ನೈನ ಚೆನ್ನೈ ಟ್ರೇಡ್ ಸೆಂಟರ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 48ನೇ ರಾಷ್ಟ್ರ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ–2026ರಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ 34 ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. ಸ್ಪರ್ಧೆಯಲ್ಲಿ ಮಡಿಕೇರಿ ಕೇಂದ್ರದ ವಿದ್ಯಾರ್ಥಿಗಳು ಒಟ್ಟು 21 ಚಾಂಪಿಯನ್ ಟ್ರೋಫಿ, 9 ಚಿನ್ನದ ಪದಕ ಹಾಗೂ 4 ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಸಾಧನೆಯ ಹೆಗ್ಗಳಿಕೆ ವಿದ್ಯಾರ್ಥಿಗಳು, ಪೋಷಕರು ಹಾಗೂ ತರಬೇತುದಾರರಿಗೆ ಸಲ್ಲಬೇಕು ಎಂದು ತಿಳಿಸಲಾಗಿದೆ. ಕೇವಲ ಮೂರು ನಿಮಿಷಗಳಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತ್ಯಂತ ಚುರುಕಾಗಿ ಮಾಡುವ ಮೂಲಕ ಈ ಅದ್ಭುತ ಯಶಸ್ಸು ಸಾಧಿಸಿದ ಮಕ್ಕಳನ್ನು ಹಾಗೂ ಅವರನ್ನು ಸ್ಪರ್ಧೆಗಾಗಿ ಚೆನ್ನೈಗೆ ಕರೆತಂದ ಪೋಷಕರನ್ನು ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರು ಅಭಿನಂದಿಸಿದರು. ಬ್ರೈನೋಬ್ರೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಆನಂದ್ ಸುಬ್ರಮಣ್ಯಂ ಹಾಗೂ ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಂ ಅವರು ಉಪಸ್ಥಿತರಿದ್ದು, ಮಡಿಕೇರಿ ಬ್ರೈನೋಬ್ರೈನ್ ಕೇಂದ್ರದ ಮಕ್ಕಳ ಅತ್ಯುತ್ತಮ ಸಾಧನೆಯನ್ನು ಶ್ಲಾಘಿಸಿದರು. ಒಟ್ಟು 34 ಮಕ್ಕಳು ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಬ್ರೈನೋಬ್ರೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಆನಂದ್ ಸುಬ್ರಮಣ್ಯಂ ಅವರಿಗೆ ‘ಎಜುಕೇಷನ್ ಎಕ್ಸಲೆನ್ಸ್ ಅವಾರ್ಡ್ ಇನ್ ಚೈಲ್ಡ್ ಸ್ಕಿಲ್ ಡೆವಲಪ್ಮೆಂಟ್’ ಹಾಗೂ ತಾಂತ್ರಿಕ ನಿರ್ದೇಶಕ ಶ್ರೀ ಅರುಲ್ ಸುಬ್ರಮಣ್ಯಂ ಅವರಿಗೆ ‘ಔಟ್‌ಸ್ಟ್ಯಾಂಡಿಂಗ್ ಕಾಂಟ್ರಿಬ್ಯೂಷನ್ ಟು ಚೈಲ್ಡ್ ಡೆವಲಪ್ಮೆಂಟ್ ಅಂಡ್ ಎಜುಕೇಷನ್ ಅವಾರ್ಡ್’ ಲಭಿಸಿತು. ಈ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾರತದಾದ್ಯಂತ ಇರುವ ಸುಮಾರು 400 ಬ್ರೈನೋಬ್ರೈನ್ ಸಂಸ್ಥೆಗಳಿಂದ ಒಟ್ಟು 8,500 ಮಕ್ಕಳು ಭಾಗವಹಿಸಿದ್ದರು. ವಿವಿಧ ರೀತಿಯ ಲೆಕ್ಕಗಳನ್ನು ಅತ್ಯಂತ ಚುರುಕಾಗಿ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಚಾಂಪಿಯನ್ ಟ್ರೋಫಿ ವಿಜೇತರು:
ಆರುಷಿ ಕೆ.ಸಿ., ಶ್ರೀಹಾನ್ ಸಂಜಯ್ ಜಿತ್ತಿ, ಅನ್ವಿತ್ ಎಸ್., ಲಲಿತ್ ಆದಿತ್ಯ ಬಿ., ಲಕ್ಷಿತ್ ಬಿ.ಆರ್., ವಂಶಿ ಕೆ.ಎಂ., ನಿಲ್ಹಾ ಜೆ. ತಾರಕನ್, ಅಭಿನವ್ ಕೃಷ್ ಜಿ., ಆರಾಧ್ಯ ಕೆ.ಸಿ., ಏಡನ್ ಜೆ. ತಾರಕನ್, ದೃಪದ್ ಪಿ. ಮಣಿಕೋಥ್, ಲಿವ್ಯ ಸುನೀತ್‌ಕುಮಾರ್, ಮಯಾಂಕ್ ಎಂ., ಆಯಿಷ ಮಿನ್ಹ, ಫಾತಿಮ ಮಿಝ್ನ, ರುಷಾಂಕ್ ಸಿ.ಸಿ., ಗಣಿತ್ ಪೊನ್ನಣ್ಣ ಎಂ.ಎಂ., ಮೊಹಮ್ಮದ್ ಶಯಾನ್, ಐಯಾರ ಎಸ್., ಲಶಿಕ ರೈ ಜೆ. ಹಾಗೂ ಮೊಹಮ್ಮದ್ ಅಬಾನ್ ಸಿ. ಚಿನ್ನದ ಪದಕ ವಿಜೇತರು:
ದಿಯಾ ವೈ.ಬಿ., ಜೆಶ್ವಿತ ತಂಗಮ್ಮ ಎ.ಪಿ., ರುಶಾಲಿ ಪಿ.ಜೆ., ಕನಿಷ ಸುನೀತ್‌ಕುಮಾರ್, ಕುಶನ್ ದೇವಪ್ಪ ವೈ.ಡಿ., ರಿಯಾಂಕ ಎಂ., ನಿಧಿ ಆರ್. ಅನ್ವೇಕರ್, ಸಾಕ್ಷಾತ್ ಪಿ. ಗೌಡ ಹಾಗೂ ಬಿ. ಕೃಶ್ವಿನ್ ಆದ್ವಿಕ್. ಬೆಳ್ಳಿ ಪದಕ ವಿಜೇತರು:
ನಿಂಶಿ ಕೆ.ಎಂ., ಪರೀಕ್ಷ ಎ.ಎಲ್., ಜೊಹನ್ನಾ ಮಡ್ತಾ ಹಾಗೂ ಪ್ರಣವ.










