ಮಡಿಕೇರಿ, NEWS DESK ಸೆ.17: “ಸಿಐಎಸ್ಸಿಇ ಮಂಡಳಿ”ಯು ನಡೆಸಿದ “ರಾಷ್ಟ್ರೀಯ ಹಾಕಿ ಪಂದ್ಯಾವಳಿ–2026”ರಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಮಡಿಕೇರಿಯ ಹತ್ತನೇ ತರಗತಿ ವಿದ್ಯಾರ್ಥಿನಿಯರಾದ ಮುಖ್ಯ ಆಟಗಾರ್ತಿ ಆದಾದೇಚ್ಚಮ್ಮ (ಆ/ಒ ಶ್ರೀಮತಿ ವಿನಾ ಉತ್ತಪ್ಪ, ಮಡಿಕೇರಿ) ಹಾಗೂ ಮೇಧಾ ಜಾಹ್ನವಿ (ಆ/ಒ ಶ್ರೀ ಅಶ್ವಥ್ ಮತ್ತು ಡೈನ ಅಶ್ವಥ್, ಕಕ್ಕೇಟುಪರಂಬು) ಅವರು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಾರ್ಖಂಡ್ನ ರಾಂಚಿಯ ಸೇಂಟ್ ಕ್ಸೇವಿಯರ್ಸ್ ಶಾಲೆ, ದೋರಂಡದಲ್ಲಿ ದಿನಾಂಕ 12/09/2026ರಂದು ನಡೆದ ಅಂತಿಮ ಪಂದ್ಯಾವಳಿಯಲ್ಲಿ ಕರ್ನಾಟಕ–ಗೋವಾ ವಲಯವನ್ನು ಪ್ರತಿನಿಧಿಸಿ, “ಹಾಕಿ – ಅಂಡರ್–17 ಬಾಲಕಿಯರ” ವಿಭಾಗದಲ್ಲಿ ಅದ್ಭುತ ಸಾಧನೆಯೊಂದಿಗೆ ವಿಜೇತರಾಗಿದ್ದಾರೆ.
ಈ ಪಂದ್ಯಾವಳಿಯಲ್ಲಿ ಕರ್ನಾಟಕದ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಈ ಇಬ್ಬರು ವಿದ್ಯಾರ್ಥಿನಿಯರು ಗಮನಾರ್ಹವಾಗಿ ಪಾಲ್ಗೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿನಿಯರೊಂದಿಗೆ ಶಾಲೆಯ ದೈಹಿಕ ಶಿಕ್ಷಕಿ ಶ್ರೀಮತಿ ಸೀಮಾ ಪ್ರವೀಣ್ ಅವರು ಕೂಡ ತೆರಳಿದ್ದರು.
ವಿದ್ಯಾರ್ಥಿನಿಯರ ಈ ಅವಿಸ್ಮರಣೀಯ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು.








