ಮಡಿಕೇರಿ, NEWS DESK ಸೆ. 18: ಮಡಿಕೇರಿ ದಸರಾ ಪ್ರಯುಕ್ತ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಅಕ್ಟೋಬರ್ 16ರಂದು ನಗರದ ಗಾಂಧಿ ಮೈದಾನದಲ್ಲಿ 13ನೇ ವರ್ಷದ ಮಕ್ಕಳ ದಸರಾ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ ಹಾಗೂ ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ಮಕ್ಕಳ ದಸರಾ ಸ್ಪರ್ಧೆಗಳು ಅಕ್ಟೋಬರ್ 16ರಂದು ಶುಕ್ರವಾರ ಬೆಳಗ್ಗೆ 9.30ರಿಂದ ಗಾಂಧಿ ಮೈದಾನದಲ್ಲಿ ಆರಂಭವಾಗಲಿವೆ.
ಮಕ್ಕಳ ಸಂತೆ ಮತ್ತು ಮಕ್ಕಳ ಅಂಗಡಿ: ಎಸ್‌ಎಸ್‌ಎಲ್‌ಸಿ ಒಳಗಿನ ವಿದ್ಯಾರ್ಥಿಗಳಿಗಾಗಿ ಮಕ್ಕಳ ಸಂತೆ ಆಯೋಜಿಸಲಾಗಿದ್ದು, ಒಂದು ತಂಡದಲ್ಲಿ ಗರಿಷ್ಠ ಐವರು ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಸಂತೆಯಲ್ಲಿ ಗ್ರಾಮೀಣ ಪದಾರ್ಥಗಳ ಮಾರಾಟಕ್ಕೆ ಆದ್ಯತೆ ನೀಡಲಾಗಿದೆ. ಮಕ್ಕಳ ಅಂಗಡಿ ಸ್ಪರ್ಧೆಯಲ್ಲಿ ಗರಿಷ್ಠ ಇಬ್ಬರು ಸ್ಪರ್ಧಿಗಳಿಗೆ ಅವಕಾಶವಿದೆ.
ಮಕ್ಕಳ ಮಂಟಪ: 10 ನಿಮಿಷಗಳ ಪ್ರದರ್ಶನಾವಧಿಯ ಮಂಟಪ ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ ಆರು ಮಕ್ಕಳು ಪಾಲ್ಗೊಳ್ಳಬಹುದು. ಯಾವುದೇ ಕಾರಣಕ್ಕೂ ಮಂಟಪದಲ್ಲಿ ವಿದ್ಯುತ್ ಮತ್ತು ಬೆಂಕಿಯಂತಹ ಅಪಾಯಕಾರಿ ವಸ್ತುಗಳನ್ನು ಬಳಸಿ ಪ್ರದರ್ಶನ ನೀಡುವಂತಿಲ್ಲ.
ಛದ್ಮವೇಶ ಸ್ಪರ್ಧೆ: ಎಲ್‌ಕೆಜಿ ಮತ್ತು ಯುಕೆಜಿ, 1ರಿಂದ 4ನೇ ತರಗತಿ ಹಾಗೂ 5ರಿಂದ 7ನೇ ತರಗತಿಯ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಛದ್ಮವೇಶ ಸ್ಪರ್ಧೆಗಳು ನಡೆಯಲಿವೆ. ಸಂಭಾಷಣೆಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲದ ಈ ಸ್ಪರ್ಧೆಯಲ್ಲಿ ವಸ್ತ್ರಾಲಂಕಾರಕ್ಕೆ ಆದ್ಯತೆ ನೀಡಲಾಗಿದೆ.
ಕ್ಲೇ ಮಾಡೆಲಿಂಗ್: 5ರಿಂದ 7ನೇ ತರಗತಿ ಹಾಗೂ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಜೇಡಿಮಣ್ಣು ಬಳಸಿ ಕ್ಲೇ ಮಾಡೆಲಿಂಗ್ ಸ್ಪರ್ಧೆ ಆಯೋಜಿಸಲಾಗಿದೆ.
ಅಕ್ಟೋಬರ್ 16ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸ್ಪರ್ಧಿಗಳು ಬೆಳಗ್ಗೆ 9 ಗಂಟೆಗೆ ಸರಿಯಾಗಿ ಹಾಜರಿರಬೇಕು. ಎಲ್ಲಾ ಸ್ಪರ್ಧೆಗಳು ಬೆಳಗ್ಗೆ 9.30ರಿಂದ ಆರಂಭವಾಗಲಿವೆ. ಸ್ಪರ್ಧೆಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಸ್ಪರ್ಧಿಗಳೇ ತರಬೇಕು.
ಹೆಸರು ನೋಂದಣಿಗೆ ಸಂಪರ್ಕ ಸಂಖ್ಯೆಗಳು:
- ಮಕ್ಕಳ ಸಂತೆ: ಶಫಾಲಿ ರೈ – 9741523484, ಪ್ರಿಯಾಪ್ರಶಾಂತ್ – 9449915522
- ಮಕ್ಕಳ ಅಂಗಡಿ: ಗಾನಾ ಪ್ರಶಾಂತ್ – 9449713748, ಪಲ್ಲವಿ ಪ್ರಸಾದ್ – 9972963151
- ಮಕ್ಕಳ ಮಂಟಪ: ದಿವ್ಯಾ ಚೇತನ್ – 9538101863, ಸೌಮ್ಯ ದಿನೇಶ್ – 9380595964
- ಛದ್ಮವೇಶ ಸ್ಪರ್ಧೆ: ನಮಿತಾ ರೈ – 9448976405, ಶಮ್ಮಿ ಪ್ರಭು – 9449833179
- ಕ್ಲೇ ಮಾಡೆಲಿಂಗ್: ಸುಮನಾ ಶ್ರೀಹರಿ – 9591064297, ರಶ್ಮಿ ಪ್ರವೀಣ್ – 9902362038
ಎಲ್ಲಾ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ಅಕ್ಟೋಬರ್ 5 ಕೊನೆಯ ದಿನಾಂಕವಾಗಿದೆ.







