ಮಡಿಕೇರಿ, NEWS DESK ಸೆ.25 – ಮೂರು ವಿಭಿನ್ನ ಯೋಗಾಸನಗಳ ಮೂಲಕ ಮದೆನಾಡಿನ ವಿದ್ಯಾಥಿ೯ನಿ ಸಿಂಚನಾ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾಡ್ಸ್೯ ಮಾಡಿದ್ದಲ್ಲದೇ, ಈ ಮೂಲಕ ಯೋಗಪ್ರದಶ೯ನದಲ್ಲಿ 18 ಅಂತರರಾಷ್ಟ್ರೀಯ ದಾಖಲೆಗಳನ್ನು ಮಾಡಿರುವ ಕೀತಿ೯ಗೆ ಪಾತ್ರಳಾದಳು.
ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಲಾಮಂದಿರದಲ್ಲಿ ಜರುಗಿದ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾಡ್೯ಗಾಗಿನ ಯೋಗ ಪ್ರದಶ೯ನದಲ್ಲಿ ಮದೆನಾಡಿನ ಬಿಜಿಎಸ್ ಶಾಲೆಯ 7 ನೇ ತರಗತಿ ವಿದ್ಯಾಥಿ೯ನಿ ಸಿಂಚನಾ ಮೂರು ಯೋಗಪ್ರದಶ೯ನಗಳನ್ನು ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾಡ್ಸ್೯ನಲ್ಲಿ ಸ್ಥಾನ ಪಡೆದಳು. ಡಿಂಬಾಸನದಲ್ಲಿ 5 ನಿಮಿಷ ಸತತವಾಗಿ ಚಲಿಸುವುದು, ಧನುರಾಸನ ಭಂಗಿಯಲ್ಲಿ ತಿರುಗುವುದು ಮತ್ತು 1 ನಿಮಿಷದ ಕಾಲ ಸುತ್ತ ಡಿಂಬಾಸನವನ್ನು ಮಾಡುವ ಮೂಲಕ ಮೂರು ವಿಶ್ವದಾಖಲೆಗಳನ್ನು ಏಕವೇದಿಕೆಯಲ್ಲಿ ಮಾಡಿದ ಹಿರಿಮೆಗೆ ಸಿಂಚನಾ ಪಾತ್ರಳಾದಳು.
ಈ ಮೂರು ದಾಖಲೆಗಳೊಂದಿಗೆ ಸಿಂಚನಾ ಈವರೆಗೆ 18 ಅಂತರರಾಷ್ಟೀಯ ದಾಖಲೆಗಳನ್ನು ಯೋಗದಲ್ಲಿ ಮಾಡಿರುವ ಸಾಧ೯ನೆಗೆ ಪಾತ್ರಳಾದಳು.
ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾಡ್ಸ್೯ನ ಏಷ್ಯಾದ ತೀಪು೯ಗಾರರಾದ ಡಾ.ಮನೀಷ್ ವಿಷ್ಣೋಯಿ ಮೂರು ಯೋಗದಾಖಲೆಗಳ ಪಶಸ್ತಿ ಪತ್ರವನ್ನು ಸಭಾ ಕಾಯ೯ಕ್ರಮದಲ್ಲಿ ಪ್ರಧಾನ ಮಾಡಿದರು. , ಈವರೆಗೂ 18 ವಿಶ್ವದಾಖಲೆಗಳನ್ನು ಯೋಗದಲ್ಲಿ ಮಾಡಿರುವ ಸಿಂಚನಾಳ ಪ್ರತಿಭೆ ಅನನ್ಯವಾದದ್ದು ಎಂದು ಶ್ಲಾಘಿಸಿದರಲ್ಲದೇ, ಸಿಂಚನಾಳ ಈವರೆಗಿನ ಯೋಗ ದಾಖಲೆಯನ್ನು ಯಾರಿಂದಲೂ ಈವರೆಗೂ ಮುರಿಯಲೇ ಆಗಲಿಲ್ಲ ಎಂದು ಅವರು ಹೇಳಿದರು. . ಅಮೇರಿಕಾ ಮೂಲದ ಸಂಸ್ಥೆಯಾದ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾಡ್ಸ್೯ ಜಗತ್ತಿನ ವಿವಿಧೆಡೆಯಲ್ಲಿರುವ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಯೋಗದಲ್ಲಿ ಈವರೆಗೆ ಅಂದಾಜು 1 ಸಾವಿರ ದಾಖಲೆಗಳಷ್ಟೇ ವಿಶ್ವವ್ಯಾಪಿ ಆಗಿದೆ. ವಿವಿಧ ಕ್ಷೇತ್ರಗಳಲ್ಲಿ 50 ಸಾವಿರದಷ್ಟು ದಾಖಲೆಗಳನ್ನು ತಮ್ಮ ಸಂಸ್ಥೆ ಈವರೆಗೆ ವಿತರಿ ಸಿದೆ ಎಂದು ಡಾ.ಮನೀಷ್ ವಿಷ್ಣೋಯಿ ಮಾಿಹಿತಿ ನೀಡಿದರು. .
ಸಿಂಚನಾಳಿಗೆ ಗೌರವ ಸನ್ಮಾನ ನೆರವೇರಿಸಿ ಮಾತನಾಡಿದ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಭಾರತೀಯ ಸಂಸ್ಸೖತಿಯಲ್ಲಿ ಯೋಗವಿದ್ಯೆಗೆ ವಿಶೇಷವಾದ ಸ್ಥಾನವಿದೆ. ಮೋದಿಯವರ ಪರಿಕಲ್ಪನೆಯಲ್ಲಿ ಪ್ರತೀ ವಷ೯ ಜೂನ್ 21 ನ್ನು ವಿಶ್ವಯೋಗದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು ಈ ಮೂಲಕ ಭಾರತೀಯ ಯೋಗ ವಿದ್ಯೆ ಜಗತ್ತಿಗೆ ಪರಿಚಿತವಾಗಿದೆ ಎಂದರು. ಮದೆನಾಡಿನಂಥ ಗ್ರಾಮೀಣ ಪ್ರದೇಶದಲ್ಲಿ ಯೋಗಸಾಧನೆ ಮೂಲಕ ಸಿಂಚನಾ ಹಳ್ಳಿಯಲ್ಲಿಯೂ ಪ್ರತಿಭಾ ಸಾಧನೆ ಸಾಧ್ಯ ಎಂದು ನಿರೂಪಿಸಿದ್ದಾರೆ. ಇಂಥ ಗ್ರಾಮೀಣ ಸಾಧಕಿಯರನ್ನು ಸಮಾಜ ಪ್ರೋತ್ಸಾಹಿಸಬೇಕಾಗಿದೆ ಎಂದರು.
ರೋಟರಿ ಸಂಸ್ಥೆಯ ಜಿಲ್ಲಾ ನಿದೇ೯ಶಕ ಅನಿಲ್ ಹೆಚ್.ಟಿ. ಮಾತನಾಡಿ, ಸಿಂಚನಾಳ ಯೋಗ ಸಾಧನೆಯನ್ನು ಜಿಲ್ಲೆಯಾದ್ಯಂತಲಿನ ಇತರ ಶಾಲಾ ವಿದ್ಯಾಥಿ೯ಗಳು ಗಮನಿಸುವಂತಾಗಬೇಕು. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಸಿಂಚನಾಳ ಅಪೂವ೯ ಯೋಗ ಪ್ರದಶ೯ನಕ್ಕೆ ರೋಟರಿ ಸಂಸ್ಥೆಗಳು ಸಹಯೋಗ ನೀಡಲಿವೆ ಎಂದರು. ಸಿಂಚನಾಳ ಯೋಗಗುರುವಿನಂತಿರುವ ಆಕೆಯ ತಾಯಿ ರೇಣುಕಾ ಮತ್ತು ತಂದೆ ಕೀತಿ೯ಕುಮಾರ್ ಮಗಳ ಸಾಧನೆಗೆ ನೀಡುತ್ತಾ ಬಂದಿರುವ ಪ್ರೋತ್ಸಾಹ ಇತರ ಪೋಷಕರಿಗೂ ಮಾದರಿಯಾಗಿದೆ ಎಂದೂ ಅನಿಲ್ ಶ್ಲಾಘಿಸಿದರು. ಛಲ,ಬಲದೊಂದಿಗೆ ಸಾಧಿಸುವ ಇಚ್ಚಾಶಕ್ತಿಯಿರುವ ಸಿಂಚನಾಳಿಗೆ ಯೋಗವಿದ್ಯೆ ಒಲಿದಿರುವುದು ಯೋಗಾೋಗ ಎಂದೂ ಅನಿಲ್ ಹೆಚ್.ಟಿ. ಬಣ್ಣಿಸಿದರು.
ಮದೆನಾಡು ಕೖಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಗೋಳಿಕಜೆ ಪಿ.ಧನಂಜಯ್ ಮಾತನಾಡಿ, ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿಯೇ ಮೊದಲ ಯೋಗ ಪ್ರದಶ೯ ನೀಡಿದ್ದ ಸಿಂಚನಾಳ ಮೂರು ವಿಶ್ವದಾಖಲೆಯೂ ಈ ದೇವಾಲಯದಲ್ಲಿಯೇ ಆಗಿರುವುದು ಗಮನಾಹ೯ ಎಂದರು. ಯೋಗದಾಖಲೆಯ ಮೂಲಕ ಮದೆನಾಡಿನ ಕೀತಿ೯ಯನ್ನು ಸಿಂಚನಾ ವಿಶ್ವವ್ಯಾಪಿ ಪಸರಿಸಿದ್ದಾಳೆ ಎಂದೂ ಧನಂಜಯ್ ಹೇಳಿದರು.
ಹಿರಿಯ ಸಾಹಿತಿ ಬಿ.ಆರ್..ಜೋಯಪ್ಪ ಮಾತನಾಡಿ, ಮನಸ್ಸನ್ನು ಸದಾ ಸಳೆಯುವ ಯೋಗಸಾಧನೆಯ ಮೂಲಕ ಮದೆನಾಡಿನ ಪುಣ್ಯವಂತೆ ಎಂಬ ಕೀತಿ೯ಯನ್ನು ಸಿಂಚನಾ ಹೆಚ್ಚಿಸಿದ್ದಾಳೆ ಎಂದು ಶ್ಲಾಘಿಸಿದರು.
ಯೋಗ ಗುರು ಕೆ.ಕೆ. ಮಹೇಶ್ ಕುಮಾರ್ ಮಾತನಾಡಿ, ಇಂಥ ವಿಶ್ವದಾಖಲೆ ಮಾಡಲು ಒಂದೆರಡು ದಿನಗಳ ಶ್ರಮದಿಂದ ಸಾಧ್ಯವಿಲ್ಲ. ಹಲವು ವಷ೯ಗಳ . ಕಠಿಣ ಪರಿಶ್ರಮದ ಮೂಲಕ ಈ ಸಾಧನೆಗಳು ಸಾಧ್ಯವಾಗಿದೆ. ಎಂದರು. ಹಿಂದಿನ ಕಾಲದಲ್ಲಿ ಯೋಗಕಲಿಯುವವರಿಗೆ ಸೂಕ್ತ ಸೌಲಭ್ಯಗಳಿರಲಿಲ್ಲ. ಆದರೆ ಈಗ ಸೌಕಯ೯ಗಳಿದೆ. ಜತೆಗೇ ಅನಾರೋಗ್ಯವೂ ಹೆಚ್ಚಳವಾಗುತ್ತಿದೆ. ಹೀಗಿದ್ದರೂ ಯೋಗದ ಮೂಲಕ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದ ಮಹೇಶ್, ಯೋಗಗುರುಗಳಿಗೆ ಈಗ ಬೇಡಿಕೆ ಹೆಚ್ಚಾಗಿದ್ದು, ಯೋಗಸಾಧಕರು ಕೂಡ ಗೌರವ ಪಡೆಯುತ್ತಿದ್ದಾರೆ. ಇದು ಯೋಗವಿದ್ಯೆಗೆ ಸಂದ ಯಶಸ್ಸು ಎಂದರು.
ದೇವರಕೊಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಜೆ.ಯಶೋಧರ ಮಾತನಾಡಿ, ಸಿಂಚನಾಳ ಯೋಗದಾಖಲೆಯ ಮೂಲಕವೇ ದೇವಾಲಯದ ನೂತನ ಸಬಾಂಗಣ ಲೋಕಾಪ೯ಣೆಗೊಂಡಿರುವುದು ಹೆಮ್ಮೆಯ ವಿಚಾರ ಎಂದರು.
ಬಿಲ್ಲವ ಸಂಘದ ಅಧ್ಯಕ್ಷ ಬಿ. ಪ್ರದೀಪ್ ಮಾತನಾಡಿ, ಸಿಂಚನಾಳ ಸಾಧನೆಯನ್ನು ತಮ್ಮ ಸಮಾಜದಿಂದ ಶ್ಲಾಘಿಸಿದ್ದು, ಎಲ್ಲಾ ರೀತಿಯ ನೆರವು ನೀಡಲು ಬದ್ದ ಎಂದು ಭರವಸೆ ನೀಡಿದರು.
ಯೋಗಸಾಧನೆ ಮಾಡಿದ ಸಿಂಚನಾ ಮಾತನಾಡಿ, ಮೂರು ವಿಶ್ವದಾಖಲೆಗಳ ಸಾಧನೆ ಹೆಮ್ಮೆ ತಂದಿದೆ. ಮತ್ತಷ್ಟು ಸಾಧನೆಗಳನ್ನು ಮಾಡಲು ಸ್ಪೂತಿ೯ ದೊರಕಿದೆ ಎಂದಳು.
ಸಿಂಚನಾಳ ತಾಯಿ ರೇಣುಕಾ ಕೀತಿ೯ ಮಾತನಾಡಿ, 3 ವಷ೯ದವಳಿರುವಾಗಲೇ ಸಿಂಚನಾಳಿಗೆ ಸರಳ ವ್ಯಾಯಾಮ ಕಲಿಸಿದೆ. ನಂತರ ಹಂತಹಂತವಾಗಿ ವಿವಿಧ ಆಸನಗಳನ್ನು ಪರಿಚಯಿಸಿದೆ. ತರುವಾಯವೇ ಕಠಿಣ ಯೋಗತರಬೇತಿ ನೀಡಿದೆ ಎಂದು ವಿವರಿಸಿದರು. ವಿವಿಧ ಶಾಲೆಗಳಲ್ಲಿ ಯೋಗ ಕಾಯ೯ಕ್ರಮಗಳನ್ನು ಸಿಂಚನಾಳಿಂದ ನೀಡುವುದಾಗಿಯೂ ರೇಣುಕಾ ಘೋಷಿಸಿದರು.
ವಿಠಲ ಪ್ರಾಥಿ೯ಸಿ, ಮಾಲಿನಿ ಸ್ವಾಗತಿಸಿ, ಶ್ರೀನಿಧಿ ಬಂಟ್ವಾಳ ನಿರೂಪಿಸಿ, ದೇವಾಲಯ ಸಮಿತಿಯ ಮದೆನಾಡು ಶಾಲೆಯ ನಿವೖತ್ತ ಶಿಕ್ಷಕ ಎಂ.ಎಸ್. ಶಿವರಾಮ್ ವಂದಿಸಿ,ದರು. ಸಿಂಚನಾಳ ತಂದೆ ಕೀತಿ೯ಕುಮಾರ್, ಮದೆನಾಡು ವ್ಯಾಪ್ತಿಯ ಗ್ರಾಮಸ್ಥರು ಯೋಗದಾಖಲೆಯ ಕಾಯ೯ಕ್ರಮದಲ್ಲಿ ಕಿಕ್ಕಿರಿದು ಸೇರಿ ತಮ್ಮೂರಿನ ಸಾಧಕಿಗೆ ಮೆಚ್ಚುಗೆಯ ಚಪ್ಪಾಳೆ ನೀಡಿ ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು.







