ಬೆಂಗಳೂರು, NEWS DESK ಸೆ.25: ರಾಜ್ಯ ಪೊಲೀಸ್ ನೇಮಕಾತಿ ವಿಭಾಗವು ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್‌ಗಳ (RPC ಮತ್ತು KK) ನೇಮಕಾತಿಗೆ ಸಂಬಂಧಿಸಿದ ದೇಹದಾರ್ಢ್ಯ ಪರೀಕ್ಷೆ (PST) ಹಾಗೂ ಸಹಿಷ್ಣುತಾ ಪರೀಕ್ಷೆ (ET) ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಒಟ್ಟು 3,991 ಹುದ್ದೆಗಳಿಗೆ 19,396 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಇದರಲ್ಲಿ ಉಳಿಕೆ ಮೂಲ ವೃಂದ (RPC)ದ 3,395 ಹುದ್ದೆಗಳಿಗೆ 16,454 ಅಭ್ಯರ್ಥಿಗಳು ಹಾಗೂ ಕಲ್ಯಾಣ ಕರ್ನಾಟಕ (KK) ವೃಂದದ 596 ಹುದ್ದೆಗಳಿಗೆ 2,942 ಅಭ್ಯರ್ಥಿಗಳು ಅರ್ಹರಾಗಿದ್ದಾರೆ.
RPC ವೃಂದದ ಪರೀಕ್ಷಾ ವೇಳಾಪಟ್ಟಿ:
- ಬೆಂಗಳೂರು ನಗರ: 2,015 ಹುದ್ದೆಗಳು, 9,887 ಅಭ್ಯರ್ಥಿಗಳು — ಸೆ.28ರಿಂದ ಅ.5ರವರೆಗೆ. ಪರೀಕ್ಷಾ ಕೇಂದ್ರಗಳು ಚಾಮರಾಜಪೇಟೆ, ಆಡುಗೋಡಿ ಹಾಗೂ ತನಿಷಂದ್ರ.
- ಕೇಂದ್ರ ವಲಯ: 200 ಹುದ್ದೆಗಳು, 946 ಅಭ್ಯರ್ಥಿಗಳು — ಸೆ.28ರಿಂದ ಅ.3ರವರೆಗೆ. ಬೆಂಗಳೂರು, 3ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನ, ಕೊರಮಂಗಲ.
- ದಕ್ಷಿಣ ವಲಯ: 395 ಹುದ್ದೆಗಳು, 1,891 ಅಭ್ಯರ್ಥಿಗಳು — ಸೆ.28ರಿಂದ ಅ.5ರವರೆಗೆ. ಮೈಸೂರು CAR ಪರೇಡ್ ಮೈದಾನ.
- ಪೂರ್ವ ವಲಯ: 250 ಹುದ್ದೆಗಳು, 1,234 ಅಭ್ಯರ್ಥಿಗಳು — ಸೆ.29ರಿಂದ ಅ.6ರವರೆಗೆ. ಶಿವಮೊಗ್ಗ, ನವಿಲೆ.
- ಪಶ್ಚಿಮ ವಲಯ: 395 ಹುದ್ದೆಗಳು, 1,803 ಅಭ್ಯರ್ಥಿಗಳು — ಸೆ.28ರಿಂದ ಅ.3ರವರೆಗೆ. ಮಂಗಳೂರು, ಮಂಗಳ ಕ್ರೀಡಾಂಗಣ.
- ಉತ್ತರ ವಲಯ: 110 ಹುದ್ದೆಗಳು, 549 ಅಭ್ಯರ್ಥಿಗಳು — ಸೆ.29 ಮತ್ತು 30ರಂದು. ಬೆಳಗಾವಿ, 2ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನ.
- ಬಳ್ಳಾರಿ ವಲಯ: 30 ಹುದ್ದೆಗಳು, 144 ಅಭ್ಯರ್ಥಿಗಳು — ಅ.5ರಿಂದ ಅ.6ರವರೆಗೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನ ಕೆಎಸ್‌ಆರ್‌ಪಿ ಪಿ.ಟಿ.ಎಸ್. ಮೈದಾನ.
KK ವೃಂದದ ಪರೀಕ್ಷಾ ವೇಳಾಪಟ್ಟಿ:
- ಬೆಂಗಳೂರು ನಗರ: 171 ಹುದ್ದೆಗಳು, 833 ಅಭ್ಯರ್ಥಿಗಳು — ಅ.8ರಂದು.
- ಬಳ್ಳಾರಿ ವಲಯ: 174 ಹುದ್ದೆಗಳು, 869 ಅಭ್ಯರ್ಥಿಗಳು — ಅ.12ರಿಂದ ಅ.15ರವರೆಗೆ.
- ಈಶಾನ್ಯ ವಲಯ: 251 ಹುದ್ದೆಗಳು, 1,240 ಅಭ್ಯರ್ಥಿಗಳು — ಅ.12ರಿಂದ ಅ.14ರವರೆಗೆ. ಕಲಬುರಗಿಯ 6ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನ.
ಅಭ್ಯರ್ಥಿಗಳಿಗೆ ಸೂಚನೆ
ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್‌ಸೈಟ್‌ನಿಂದ ಕರೆ ಪತ್ರ (Call Letter) ಡೌನ್‌ಲೋಡ್ ಮಾಡಿಕೊಂಡು, ಕರೆ ಪತ್ರದಲ್ಲಿ ಸೂಚಿಸಿರುವ ದಿನಾಂಕ ಮತ್ತು ಸಮಯಕ್ಕೆ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು.
ಒಟ್ಟು 3,991 ಹುದ್ದೆಗಳಿಗೆ 19,396 ಅಭ್ಯರ್ಥಿಗಳ ದೈಹಿಕ ಪರೀಕ್ಷೆ ಸೆ.28ರಿಂದ ವಿವಿಧ ಜಿಲ್ಲೆಗಳಲ್ಲಿ ಆರಂಭವಾಗಲಿದೆ.







