Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸಿದ್ಧಾಪುರದಲ್ಲಿ ಸಿಎನ್‌ಸಿ ಮಾನವ ಸರಪಳಿ ಕಾರ್ಯಕ್ರಮ; ಕೊಡವಲ್ಯಾಂಡ್ ಸ್ವಾಯತ್ತತೆಗೆ ಸಾಂವಿಧಾನಿಕ ರಕ್ಷಣೆ ನೀಡಬೇಕು: ಎನ್.ಯು. ನಾಚಪ್ಪ; 2027ರ ಜನಗಣತಿಯಲ್ಲಿ ಕೊಡವರನ್ನು ವಿಶಿಷ್ಟ ಜನಾಂಗೀಯ ಸಮುದಾಯವಾಗಿ ದಾಖಲಿಸಲು ಆಗ್ರಹ*
  • *7ನೇ ಹೊಸಕೋಟೆ ದೀಪ್ತಿ ಶಾಲೆಯಲ್ಲಿ ಅಜ್ಜ– ಅಜ್ಜಿಯರ ದಿನಾಚರಣೆ*
  • *ಮಡಿಕೇರಿಯಲ್ಲಿ ಅಂತರ ಕಾಲೇಜು ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ*
  • *ಎಸ್‌ಐಆರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಖಂಡನೀಯ : ಕೊಡಗು ಬಿಜೆಪಿ ಅಸಮಾಧಾನ*
  • *ಅ.4ರಂದು ಮಡಿಕೇರಿಯಲ್ಲಿ “ಓಣಾ ಘೋಷಂ ಓಣಂ ಸಧ್ಯ” ಕಾರ್ಯಕ್ರಮ*
  • *ಅ.6ರಂದು ಪೊನ್ನಂಪೇಟೆಯಲ್ಲಿ ರಾಜ್ಯ ಮಟ್ಟದ ಜೇನು ಕೃಷಿಕರ ಸಮಾವೇಶ*
  • *ಚೆಟ್ಟಳ್ಳಿಯಲ್ಲಿ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ*
  • *ಮಡಿಕೇರಿಯಲ್ಲಿ ಜಿಲ್ಲಾಮಟ್ಟದ ಗೀತಾ ಗಾಯನ ಸ್ಪರ್ಧೆ; ರಾಷ್ಟ್ರೀಯ ಭಾವೈಕ್ಯತೆ ಬೆಳೆಸಲು ಗಾಯನ ಸ್ಪರ್ಧೆ ಸಹಕಾರಿ: ಡಾ. ಮೋಹನ್ ಅಪ್ಪಾಜಿ*
  • *ಕೆದಮುಳ್ಳುರು–ತೋರ–ಪಾಲಂಗಾಲ ರಸ್ತೆ ಅವ್ಯವಸ್ಥೆ : ಗ್ರಾಮಸ್ಥರ ಅಸಮಾಧಾನ* 
  • *ಭತ್ತದ ಬೆಳೆಗೆ ಬೆಂಕಿ ರೋಗ : ತುರ್ತು ನಿರ್ವಹಣೆಗೆ ಕೃಷಿ ಇಲಾಖೆ ಮನವಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅ.6ರಂದು ಪೊನ್ನಂಪೇಟೆಯಲ್ಲಿ ರಾಜ್ಯ ಮಟ್ಟದ ಜೇನು ಕೃಷಿಕರ ಸಮಾವೇಶ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಅ.6ರಂದು ಪೊನ್ನಂಪೇಟೆಯಲ್ಲಿ ರಾಜ್ಯ ಮಟ್ಟದ ಜೇನು ಕೃಷಿಕರ ಸಮಾವೇಶ*

ಅಕ್ಟೋಬರ್ 1, 20261 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ, NEWS DESK ಅ.1: ಮಡಿಕೇರಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ, ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ ಹಾಗೂ ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ ಇವರ ಸಹಯೋಗದಲ್ಲಿ ರಾಜ್ಯ ಮಟ್ಟದ ಜೇನು ಕೃಷಿಕರ ಸಮಾವೇಶ ಅ.6ರಂದು ಬೆಳಿಗ್ಗೆ 10.30ಕ್ಕೆ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ನಡೆಯಲಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡ್ಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್.ಎನ್. ಕೆಂಚರೆಡ್ಡಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯದ ಕುಲಪತಿ ಡಾ. ಕೆ.ಸಿ. ನಾರಾಯಣಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿಸ್ತರಣಾ ನಿರ್ದೇಶಕ ಡಾ. ರಾಮಚಂದ್ರ ಸಿ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅರಣ್ಯ ವಿಭಾಗದ ಡೀನ್ ಹಾಗೂ ಸಂಶೋಧನಾ ನಿರ್ದೇಶಕ ಡಾ. ಜಿ.ಎಂ. ದೇವಗಿರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತೀಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಭಾರತ ಸರ್ಕಾರದ ರಾಜ್ಯ ನಿರ್ದೇಶಕ ಡಾ. ಮೋಹನ ರಾವ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮಾಹಿತಿ ವಿನಿಮಯ: ರಾಜ್ಯ ಮಟ್ಟದ ಸಮಾವೇಶದಲ್ಲಿ ವಿವಿಧ ಜಿಲ್ಲೆಗಳ ಜೇನು ಕೃಷಿಕರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಜೇನು ಕೃಷಿಗೆ ಸಂಬಂಧಿಸಿದ ಮಾಹಿತಿ ವಿನಿಮಯದ ಜೊತೆಗೆ, ಜೇನು ಕೃಷಿಕರು ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳಿಗೆ ಕೈಗೊಳ್ಳಬಹುದಾದ ಮಾರ್ಗೋಪಾಯಗಳ ಕುರಿತು ವಿಜ್ಞಾನಿಗಳು ಅಗತ್ಯ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.

ಸಣ್ಣ ದುಂಬಿಯ ಬಾಧೆ: ಪ್ರಸ್ತುತ ಥಾಯಿ ಸ್ಯಾಕ್ ಬ್ರೂಡ್ ಕಾಯಿಲೆಯಿಂದ ಜೇನು ಕೃಷಿ ಹೊರಬಂದಿದ್ದು, ಈ ರೋಗದ ನಿರ್ವಹಣೆಗೆ ಹಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗಿದೆ. ಹೊರ ಜಿಲ್ಲೆಗಳಲ್ಲಿ ಸ್ಮಾಲ್ ಹೈವ್ ಬೀಟಲ್ ಅಥವಾ ಸಣ್ಣ ದುಂಬಿಯ ಬಾಧೆ ಜೇನು ಕೃಷಿಯಲ್ಲಿ ಕಂಡುಬರುತ್ತಿದೆ. ಸಮಾವೇಶದಲ್ಲಿ ಈ ಬಾಧೆಯ ನಿರ್ವಹಣೆ ಹಾಗೂ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಗತ್ಯ ಮಾಹಿತಿ ನೀಡಲಾಗುವುದು. ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಈ ಬಾಧೆ ಕಂಡುಬಂದಿಲ್ಲವಾದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕದ ಸಹ ಪ್ರಾಧ್ಯಾಪಕ ಡಾ. ಹೇಮಂತ್ ಕುಮಾರ್ ಪಿ. ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ. ಲತಾ ಹೆಚ್.ಸಿ. ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

*ಸಿದ್ಧಾಪುರದಲ್ಲಿ ಸಿಎನ್‌ಸಿ ಮಾನವ ಸರಪಳಿ ಕಾರ್ಯಕ್ರಮ; ಕೊಡವಲ್ಯಾಂಡ್ ಸ್ವಾಯತ್ತತೆಗೆ ಸಾಂವಿಧಾನಿಕ ರಕ್ಷಣೆ ನೀಡಬೇಕು: ಎನ್.ಯು. ನಾಚಪ್ಪ; 2027ರ ಜನಗಣತಿಯಲ್ಲಿ ಕೊಡವರನ್ನು ವಿಶಿಷ್ಟ ಜನಾಂಗೀಯ ಸಮುದಾಯವಾಗಿ ದಾಖಲಿಸಲು ಆಗ್ರಹ*

ಅಕ್ಟೋಬರ್ 1, 2026

*7ನೇ ಹೊಸಕೋಟೆ ದೀಪ್ತಿ ಶಾಲೆಯಲ್ಲಿ ಅಜ್ಜ– ಅಜ್ಜಿಯರ ದಿನಾಚರಣೆ*

ಅಕ್ಟೋಬರ್ 1, 2026

*ಮಡಿಕೇರಿಯಲ್ಲಿ ಅಂತರ ಕಾಲೇಜು ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ*

ಅಕ್ಟೋಬರ್ 1, 2026

*7ನೇ ಹೊಸಕೋಟೆ ದೀಪ್ತಿ ಶಾಲೆಯಲ್ಲಿ ಅಜ್ಜ– ಅಜ್ಜಿಯರ ದಿನಾಚರಣೆ*

ಅಕ್ಟೋಬರ್ 1, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ, NEWS DESK ಅ.1: ಮಕ್ಕಳು ಕೇವಲ ವಿದ್ಯಾಭ್ಯಾಸ ಮಾಡುವುದಷ್ಟೇ ಅಲ್ಲದೆ, ಗುರು–ಹಿರಿಯರನ್ನು ಗೌರವಿಸುವ ಮೂಲಕ ಉತ್ತಮ ನಡವಳಿಕೆ ಹಾಗೂ…

*ಮಡಿಕೇರಿಯಲ್ಲಿ ಅಂತರ ಕಾಲೇಜು ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ*

ಅಕ್ಟೋಬರ್ 1, 2026

*ಎಸ್‌ಐಆರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಖಂಡನೀಯ : ಕೊಡಗು ಬಿಜೆಪಿ ಅಸಮಾಧಾನ*

ಅಕ್ಟೋಬರ್ 1, 2026

*ಅ.4ರಂದು ಮಡಿಕೇರಿಯಲ್ಲಿ “ಓಣಾ ಘೋಷಂ ಓಣಂ ಸಧ್ಯ” ಕಾರ್ಯಕ್ರಮ*

ಅಕ್ಟೋಬರ್ 1, 2026

*ಅ.6ರಂದು ಪೊನ್ನಂಪೇಟೆಯಲ್ಲಿ ರಾಜ್ಯ ಮಟ್ಟದ ಜೇನು ಕೃಷಿಕರ ಸಮಾವೇಶ*

ಅಕ್ಟೋಬರ್ 1, 2026

*ಚೆಟ್ಟಳ್ಳಿಯಲ್ಲಿ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ*

ಅಕ್ಟೋಬರ್ 1, 2026

*ಮಡಿಕೇರಿಯಲ್ಲಿ ಜಿಲ್ಲಾಮಟ್ಟದ ಗೀತಾ ಗಾಯನ ಸ್ಪರ್ಧೆ; ರಾಷ್ಟ್ರೀಯ ಭಾವೈಕ್ಯತೆ ಬೆಳೆಸಲು ಗಾಯನ ಸ್ಪರ್ಧೆ ಸಹಕಾರಿ: ಡಾ. ಮೋಹನ್ ಅಪ್ಪಾಜಿ*

ಅಕ್ಟೋಬರ್ 1, 2026

*ಕೆದಮುಳ್ಳುರು–ತೋರ–ಪಾಲಂಗಾಲ ರಸ್ತೆ ಅವ್ಯವಸ್ಥೆ : ಗ್ರಾಮಸ್ಥರ ಅಸಮಾಧಾನ* 

ಸೆಪ್ಟೆಂಬರ್ 30, 2026

*ಭತ್ತದ ಬೆಳೆಗೆ ಬೆಂಕಿ ರೋಗ : ತುರ್ತು ನಿರ್ವಹಣೆಗೆ ಕೃಷಿ ಇಲಾಖೆ ಮನವಿ*

ಸೆಪ್ಟೆಂಬರ್ 30, 2026

*ಕೊಡ್ಲಿಪೇಟೆಯಲ್ಲಿ ಕರವೇ ನೂತನ ಸದಸ್ಯರ ಸೇರ್ಪಡೆ : ಪದಗ್ರಹಣ*

ಸೆಪ್ಟೆಂಬರ್ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.