ಮಡಿಕೇರಿ, NEWS DESK ಅ.6: ಗ್ರಹದೋಷ ಪರಿಹಾರಕ್ಕಾಗಿ ನಗರದ ಆಂಜನೇಯ ದೇವಾಲಯದಲ್ಲಿ ಅಕ್ಟೋಬರ್ 6ರಂದು ಬೆಳಿಗ್ಗೆ 10 ಗಂಟೆಗೆ ನವಗ್ರಹ ಪೂಜೆ ಆಯೋಜಿಸಲಾಗಿದೆ.
ಕ್ಷೇತ್ರದ ತಂತ್ರಿಗಳಾದ ಶ್ರೀ ಉಚ್ಚಿಲ್ಲ ಪದ್ಮನಾಭ ತಂತ್ರಿಯವರ ಸಲಹೆಯಂತೆ ಪ್ರತಿ ತಿಂಗಳ ಮೊದಲ ಮಂಗಳವಾರ ನವಗ್ರಹ ಪೂಜೆ ನಡೆಸಲಾಗುತ್ತಿದೆ. ಭಕ್ತಾದಿಗಳು ದೇವಾಲಯದ ಕಚೇರಿಯಲ್ಲಿ ₹200ರ ಸೇವಾ ರಶೀದಿ ಪಡೆದು ಪೂಜೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ತಿಳಿಸಿದ್ದಾರೆ.







