
ಬೆಂಗಳೂರು, NEWS DESK ಅ.7: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈರುತ್ಯ ರೈಲ್ವೆ ಇಲಾಖೆ ಬೆಂಗಳೂರು, ಮೈಸೂರು, ಅಶೋಕಪುರಂ ಹಾಗೂ ಚಾಮರಾಜನಗರ ನಡುವೆ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ದಸರಾ ವೀಕ್ಷಣೆಗೆ ಮೈಸೂರಿಗೆ ತೆರಳುವ ಪ್ರವಾಸಿಗರು ಹಾಗೂ ಹಬ್ಬದ ರಜೆಯ ಸಂದರ್ಭದಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಕ್ಟೋಬರ್ 16ರಿಂದ 22ರವರೆಗೆ ಈ ವಿಶೇಷ ರೈಲುಗಳು ಸಂಚರಿಸಲಿವೆ. ಕಾಯ್ದಿರಿಸದ (ಅನ್‌ರಿಸರ್ವ್ಡ್) ರೈಲುಗಳಾಗಿರುವುದರಿಂದ ಪ್ರಯಾಣಿಕರು ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಅಗತ್ಯವಿಲ್ಲ. ಸಾಮಾನ್ಯ ಟಿಕೆಟ್ ಪಡೆದು ಪ್ರಯಾಣಿಸಬಹುದಾಗಿದೆ. ವಿಶೇಷ ರೈಲುಗಳ ವೇಳಾಪಟ್ಟಿ ರೈಲು ಸಂಖ್ಯೆ 06285: ಕೆಎಸ್ಆರ್ ಬೆಂಗಳೂರು–ಅಶೋಕಪುರಂ ಅಕ್ಟೋಬರ್ 19, 20 ಮತ್ತು 21ರಂದು ಮಧ್ಯಾಹ್ನ 12.15ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 3.40ಕ್ಕೆ ಅಶೋಕಪುರಂ ತಲುಪಲಿದೆ. 8 ಮೆಮು ಬೋಗಿಗಳಿರಲಿವೆ. ರೈಲು ಸಂಖ್ಯೆ 06286: ಅಶೋಕಪುರಂ–ಕೆಎಸ್ಆರ್ ಬೆಂಗಳೂರು
ಅಕ್ಟೋಬರ್ 19, 20 ಮತ್ತು 21ರಂದು ಸಂಜೆ 4.10ಕ್ಕೆ ಅಶೋಕಪುರಂನಿಂದ ಹೊರಟು ರಾತ್ರಿ 8 ಗಂಟೆಗೆ ಬೆಂಗಳೂರಿಗೆ ತಲುಪಲಿದೆ. 8 ಮೆಮು ಬೋಗಿಗಳಿರಲಿವೆ. ರೈಲು ಸಂಖ್ಯೆ 06287: ಕೆಎಸ್ಆರ್ ಬೆಂಗಳೂರು–ಮೈಸೂರು
ಅಕ್ಟೋಬರ್ 16ರಿಂದ 21ರವರೆಗೆ ಪ್ರತಿದಿನ ರಾತ್ರಿ 9.15ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಮಧ್ಯರಾತ್ರಿ 12.20ಕ್ಕೆ ಮೈಸೂರು ತಲುಪಲಿದೆ. 8 ಮೆಮು ಬೋಗಿಗಳಿರಲಿವೆ. ರೈಲು ಸಂಖ್ಯೆ 06288: ಮೈಸೂರು–ಕೆಎಸ್ಆರ್ ಬೆಂಗಳೂರು
ಅಕ್ಟೋಬರ್ 17ರಿಂದ 22ರವರೆಗೆ ಪ್ರತಿದಿನ ಮಧ್ಯರಾತ್ರಿ 12.30ಕ್ಕೆ ಮೈಸೂರಿನಿಂದ ಹೊರಟು ಮುಂಜಾನೆ 3.30ಕ್ಕೆ ಬೆಂಗಳೂರಿಗೆ ತಲುಪಲಿದೆ. 8 ಮೆಮು ಬೋಗಿಗಳಿರಲಿವೆ. ರೈಲು ಸಂಖ್ಯೆ 06297: ಮೈಸೂರು–ಕೆಎಸ್ಆರ್ ಬೆಂಗಳೂರು
ಅಕ್ಟೋಬರ್ 16ರಿಂದ 21ರವರೆಗೆ ರಾತ್ರಿ 11.15ಕ್ಕೆ ಮೈಸೂರಿನಿಂದ ಹೊರಟು ಮರುದಿನ ಮುಂಜಾನೆ 2.50ಕ್ಕೆ ಬೆಂಗಳೂರಿಗೆ ತಲುಪಲಿದೆ. 19 ಬೋಗಿಗಳಿರಲಿವೆ. ರೈಲು ಸಂಖ್ಯೆ 06298: ಕೆಎಸ್ಆರ್ ಬೆಂಗಳೂರು–ಮೈಸೂರು
ಅಕ್ಟೋಬರ್ 17ರಿಂದ 22ರವರೆಗೆ ಮುಂಜಾನೆ 3.15ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 6.30ಕ್ಕೆ ಮೈಸೂರು ತಲುಪಲಿದೆ. 19 ಬೋಗಿಗಳಿರಲಿವೆ. ಮೈಸೂರು–ಚಾಮರಾಜನಗರ ನಡುವೆ ವಿಶೇಷ ರೈಲು
ದಸರಾ ಹಿನ್ನೆಲೆಯಲ್ಲಿ ಮೈಸೂರು–ಚಾಮರಾಜನಗರ ಮಾರ್ಗದಲ್ಲಿಯೂ ಹೆಚ್ಚುವರಿ ರೈಲುಗಳ ವ್ಯವಸ್ಥೆ ಮಾಡಲಾಗಿದೆ.
06293: ಮೈಸೂರು–ಚಾಮರಾಜನಗರ — ಅ.21ರಂದು ರಾತ್ರಿ 9.30ಕ್ಕೆ ಹೊರಟು 11.20ಕ್ಕೆ ತಲುಪಲಿದೆ.
06294: ಚಾಮರಾಜನಗರ–ಮೈಸೂರು — ಅ.21ರಂದು ರಾತ್ರಿ 9.50ಕ್ಕೆ ಹೊರಟು ಮರುದಿನ ಮಧ್ಯರಾತ್ರಿ 1.50ಕ್ಕೆ ಮೈಸೂರು ತಲುಪಲಿದೆ.
06289: ಮೈಸೂರು–ಚಾಮರಾಜನಗರ — ಅ.21ರಂದು ಮಧ್ಯರಾತ್ರಿ 12.10ಕ್ಕೆ ಹೊರಟು ಮುಂಜಾನೆ 2 ಗಂಟೆಗೆ ತಲುಪಲಿದೆ.
06290: ಚಾಮರಾಜನಗರ–ಮೈಸೂರು — ಅ.21ರಂದು ಮುಂಜಾನೆ 2.30ಕ್ಕೆ ಹೊರಟು 4.15ಕ್ಕೆ ಮೈಸೂರು ತಲುಪಲಿದೆ.
ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ
ಬೆಂಗಳೂರು–ಅಶೋಕಪುರಂ ವಿಶೇಷ ರೈಲುಗಳು ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಎಲಿಯೂರು, ಬ್ಯಾಡರಹಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ, ನಾಗನಹಳ್ಳಿ, ಮೈಸೂರು ಹಾಗೂ ಚಾಮರಾಜಪುರಂ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿವೆ. ಬೆಂಗಳೂರು–ಮೈಸೂರು ವಿಶೇಷ ರೈಲುಗಳು ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಹಾಗೂ ಪಾಂಡವಪುರದಲ್ಲಿ ನಿಲುಗಡೆ ಹೊಂದಿರುತ್ತವೆ. ಮೈಸೂರು–ಬೆಂಗಳೂರು ವಿಶೇಷ ರೈಲುಗಳು ಶ್ರೀರಂಗಪಟ್ಟಣ, ಪಾಂಡವಪುರ, ಬ್ಯಾಡರಹಳ್ಳಿ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ ಹಾಗೂ ಕೆಂಗೇರಿ ನಿಲ್ದಾಣಗಳಲ್ಲಿ ನಿಲ್ಲಲಿವೆ. ಮೈಸೂರು–ಚಾಮರಾಜನಗರ ವಿಶೇಷ ರೈಲುಗಳು ಚಾಮರಾಜಪುರಂ, ಅಶೋಕಪುರಂ, ಕಡಕೊಳ, ತಾಂಡವಪುರ ಹಾಲ್ಟ್, ಸುಜಾತಾಪುರ ಹಾಲ್ಟ್, ನಂಜನಗೂಡು ಟೌನ್, ಚಿನ್ನದಗುಡಿಹುಂಡಿ ಹಾಲ್ಟ್, ನರಸಾಂಬುಧಿ ಹಾಲ್ಟ್, ಕವಲಂದೆ ಹಾಲ್ಟ್, ಕೊಣನೂರು ಹಾಲ್ಟ್, ಬದನಗುಪ್ಪೆ ಹಾಲ್ಟ್ ಹಾಗೂ ಮರಿಯಾಲ ಗಂಗವಾಡಿ ಹಾಲ್ಟ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿವೆ. ದಸರಾ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸುವುದರ ಜೊತೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಸುಗಮ ಮತ್ತು ಅನುಕೂಲಕರ ರೈಲು ಸೇವೆ ಒದಗಿಸುವ ಉದ್ದೇಶದಿಂದ ಈ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ.








