ನಾಪೋಕ್ಲು, NEWS DESK ಅ.20: ಮೈಸೂರು ಕೊಡಗು ಗೌಡ ಸಮಾಜದ ವತಿಯಿಂದ ಸಮುದಾಯದ ಬಾಂಧವರಿಗೆ ಕಾವೇರಿ ತೀರ್ಥ ವಿತರಣೆ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಮೈಸೂರಿನಲ್ಲಿರುವ ಕೊಡಗು ಗೌಡ ಸಮಾಜದ ಸಮುದಾಯ ಭವನದಲ್ಲಿ ಕುಲದೇವರಾದ ವೆಂಕಟರಮಣ ಸ್ವಾಮಿ ಹಾಗೂ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜಾ ವಿಧಿವಿಧಾನಗಳ ಬಳಿಕ ಸಮಾವೇಶಗೊಂಡಿದ್ದ ನೂರಾರು ಸಮುದಾಯದ ಬಾಂಧವರಿಗೆ ಕಾವೇರಿ ತೀರ್ಥವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ, ಕಾರ್ಯದರ್ಶಿ ಪೊನ್ನೆಟಿ ನಂದ, ಖಜಾಂಚಿ ಉಳುವಾರನ ಸುರೇಶ್ ಹಾಗೂ ಸಹ ಕಾರ್ಯದರ್ಶಿ ನಡುಮನೆ ಚಂಗಪ್ಪ ಉಪಸ್ಥಿತರಿದ್ದರು.
ಸಮಾಜದ ನಿರ್ದೇಶಕರಾದ ನಡುವಟ್ಟಿರ ಲಕ್ಷ್ಮಣ್, ಪಟ್ಟಡ ಶಿವಕುಮಾರ್, ಹೊಸೂರು ರಾಘವ, ಕುಂಟುಪುಣಿ ರಮೇಶ್, ಮೊಟ್ಟನ ಕೌಶಿಕ್, ಚಪ್ಪೇರ ಯಮುನಾ, ಕುಂಟುಪುಣಿ ಶೀಲ ರಮೇಶ್ ಹಾಗೂ ಶಂಕರನ ಶ್ಯಾಮಲ ಸೇರಿದಂತೆ ಸಮಾಜದ ಪ್ರಮುಖರು ಮತ್ತು ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ದುಗ್ಗಳ ಸದಾನಂದ



































