ವಿರಾಜಪೇಟೆ, NEWS DESK ಅ.25: ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಆಯೋಜಿಸಲಾಗಿರುವ 48ನೇ ಗೋಣಿಕೊಪ್ಪಲು ದಸರಾ ಮಹೋತ್ಸವದಲ್ಲಿ ವಿರಾಜಪೇಟೆಯ ಸ್ವರ ಕ್ಲಾಸಿಕಲ್ ಮ್ಯೂಸಿಕ್ ಶಾಲೆಯ ವಿದ್ಯಾರ್ಥಿಗಳು ಮಹಿಷಾಸುರ ಮರ್ದಿನಿ ಸ್ತೋತ್ರವನ್ನು ಪ್ರಸ್ತುತಪಡಿಸಿದರು.
ಸಂಗೀತ ಶಿಕ್ಷಕಿ ಸ್ವರ್ಣಾ ಅವರು ಗುರು ವಿದು, ತಿರುಮುಳಗಿ ಸಂಗೀತ ಸಭಾದಲ್ಲಿ ಒಂಬತ್ತು ವರ್ಷಗಳ ಅನುಭವ ಹೊಂದಿದ್ದು, ತಮ್ಮ ಶಿಷ್ಯರೊಂದಿಗೆ ಭಕ್ತಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ನೃತ್ಯ ಶಿಕ್ಷಕಿ ಚೈತ್ರಾ, ಮಾಸ್ಟರ್ ಹೀಹರಿನ್, ಮಾಸ್ಟರ್ ಲಕ್ಷಿತ್ ಶೆಟ್ಟಿ ಬಿ.ಎನ್., ಮಾಸ್ಟರ್ ಧ್ರುವದೇವ್ ಎಸ್. ನಾಯರ್, ಸುಮನಾ ಸುರೇಶ್, ರೆಜಿ ಸುಮೇಶ್ ಹಾಗೂ ಸುಜಾತಾ ಬಿ.ಆರ್. ಭಾಗವಹಿಸಿದ್ದರು.

















