ಮಡಿಕೇರಿ, NEWS DESK ಅ. 28: ಕೊಡಗು ಜಿಲ್ಲೆಯಲ್ಲಿ ಅಹಿಂದ ಸಮುದಾಯದ ಸಂಘಟನೆ ಹಾಗೂ ಬಲವರ್ಧನೆಯ ಉದ್ದೇಶದಿಂದ ರಚನೆಗೊಂಡಿರುವ ಅಹಿಂದ ಬಳಗಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಅಹಿಂದ ಬಳಗದ ಕೊಡಗು ಜಿಲ್ಲಾಧ್ಯಕ್ಷ ನಾಪಂಡ ಮುತ್ತಪ್ಪ ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಎಚ್.ಎಂ. ನಂದಕುಮಾರ್, ಬಿ.ಇ. ಜಯೇಂದ್ರ, ಬಾಪು ಮಾಯಾಮುಡಿ, ರಾಜೇಶ್ ವಿರಾಜಪೇಟೆ, ಅರುಣ್ ರಾವ್ ಹಾಗೂ ವಿಕ್ಟರ್ ಜಾನ್ಸನ್ ಆಯ್ಕೆಯಾಗಿದ್ದಾರೆ.
ಹಿರಿಯ ಸಲಹೆಗಾರರಾಗಿ ಕೆ.ಕೆ. ಮಂಜುನಾಥ್ ಕುಮಾರ್, ಕೆ.ಎಂ. ಯಾಕೂಬ್, ಆದಂ ಸೋಮವಾರಪೇಟೆ, ಕೋಯ ಹೋಸತೋಟ, ವೈ.ಟಿ. ಪರಮೇಶ್ ಹಾಗೂ ರಾಜಪ್ಪ ಮೆಣಸ ಬೆಟ್ಟ ಅವರನ್ನು ನೇಮಕ ಮಾಡಲಾಗಿದೆ.
ಸಂಘಟನಾ ಕಾರ್ಯದರ್ಶಿಗಳಾಗಿ ರವಿ ಅಜ್ಜಳ್ಳಿ, ಅಬ್ಬಾಸ್ ಶನಿವಾರಸಂತೆ, ಮುದ್ದು ರಾಜ್ ಮಡಿಕೇರಿ, ನಿತೀಶ್ ಗೋಣಿಕೊಪ್ಪ, ರಜನೀಕಾಂತ್ ವಿರಾಜಪೇಟೆ ಹಾಗೂ ಅಶೋಕ್ ಗೋಪಾಲಪುರ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಗಳಾಗಿ ಕೆ.ಎಂ. ಸೈಯದ್ ಬಾವ ಹಾಗೂ ಅಶ್ರಫ್ ಕುಶಾಲನಗರ ಅವರನ್ನು ನೇಮಕ ಮಾಡಲಾಗಿದೆ. ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಪ್ರೀತಮ್ ಪೊನ್ನಪ್ಪ ಹಾಗೂ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಸುಪ್ರೀತಾ ನೀರುಗುಂದ ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ಮಂಜು ಕೂಡಿಗೆ, ವಿಜಿ ಅಳುವಾರ, ಮೋಹನ್ ರಾಜ್ ತಣ್ಣೀರ್ಹಳ್ಳ, ಯೇಸು ಬಸವನಹಳ್ಳಿ, ರಾಜಶೇಖರ ಶನಿವಾರಸಂತೆ, ಜಗದೀಶ್ ಕೊಡ್ಲಿಪೇಟೆ, ಜೆ.ಆರ್. ಪಾಲಾಕ್ಷ, ಯೋಗೇಶ್ ಚೆನ್ನಯ್ಯನಕೋಟೆ, ದಾಮೋದರ ಮಾದಾಪಟ್ಟಣ, ಹೊನ್ನಪ್ಪ ಚೌಡ್ಲು, ಚಂದು ಸಬ್ಬನ್ ಕೊಪ್ಪ, ದಾಮೋದರ ಬೆಳಕಿಕೊಪ್ಪ ಹಾಗೂ ರತನ್ ಹಾನಗಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ನಾಪಂಡ ಮುತ್ತಪ್ಪ ತಿಳಿಸಿದ್ದಾರೆ.
ಮುಂದಿನ ಹಂತದಲ್ಲಿ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿಯೂ ಸಮಿತಿಗಳನ್ನು ರಚಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















