ವಿರಾಜಪೇಟೆ, NEWS DESK ಅ.29: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಆರ್ಯನ್ ಕುನ್ವರ್ ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾನೆ.
ಈ ಸಾಧನೆಯ ಮೂಲಕ ಆರ್ಯನ್ ರಾಜ್ಯಮಟ್ಟದಲ್ಲಿ ನಡೆಯಲಿರುವ ಮುಂದಿನ ಸುತ್ತಿನ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ಸಂತ ಅನ್ನಮ್ಮ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಶಿನಿ ಆನ್ಸಿ ಅವರು ಆರ್ಯನ್ಗೆ ತರಬೇತಿ ನೀಡಿದ್ದರು. ವಿದ್ಯಾರ್ಥಿಯ ಸಾಧನೆಗೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ. ಫಾ. ಜೇಮ್ಸ್ ಡೊಮಿನಿಕ್ ಹಾಗೂ ಸಂತ ಅನ್ನಮ್ಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ವಂದನ ಲೋಬೋ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಆರ್ಯನ್ ಕುನ್ವರ್ ವಿರಾಜಪೇಟೆಯ ತಿಮ್ಮಯ್ಯ ಲೇಔಟ್ ನಿವಾಸಿಗಳಾದ ಚಂದ್ರ ಬಹದ್ದೂರ್ ಕುನ್ವರ್ ಮತ್ತು ಶರದಾ ಕುನ್ವರ್ ದಂಪತಿಯ ಪುತ್ರ.

















