ಮಡಿಕೇರಿ, NEWS DESK ಅ. 30: ಕೂರ್ಗ್ ಹಾಕ್ಸ್ ಕ್ಲಬ್ ಹಾಗೂ ಕೇರಳದ ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಹಾಕಿ ಕೂರ್ಗ್ ಅಧೀನದಲ್ಲಿ ಮಡಿಕೇರಿಯ ಸಾಯಿ ಕ್ರೀಡಾ ತರಬೇತಿ ಕೇಂದ್ರದ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಆವೃತ್ತಿಯ ‘ಫ್ಯಾಪ್ ಕಪ್ ಹಾಕಿ’ ಪಂದ್ಯಾವಳಿಯ ಮೊದಲ ದಿನದ ಪಂದ್ಯಗಳ ಫಲಿತಾಂಶ ಪ್ರಕಟಗೊಂಡಿದೆ.
ಬಾಲಕರ ವಿಭಾಗದ ಪಂದ್ಯಗಳ ಫಲಿತಾಂಶ:
ರಿಪಬ್ಲಿಕ್ ಮುಂಬೈ ಹಾಗೂ ಕೂರ್ಗ್ ಕ್ರೀಡಾ ಶಾಲೆ ನಡುವಿನ ಪಂದ್ಯದಲ್ಲಿ ರಿಪಬ್ಲಿಕ್ ಮುಂಬೈ 1-0 ಗೋಲಿನ ಅಂತರದಿಂದ ಗೆಲುವು ಸಾಧಿಸಿತು. ರಿಪಬ್ಲಿಕ್ ಮುಂಬೈ ಪರ ದೀಪಕ್ ಯಾದವ್ ಗೋಲು ದಾಖಲಿಸಿದರು.
ಡಾಲ್ಫಿನ್ಸ್ ಸೋಮವಾರಪೇಟೆ ಹಾಗೂ ಫಿ.ಮಾ.ಕೆ.ಎಂ. ಕಾರ್ಯಪ್ಪ ಶಾಲೆ ವಿರಾಜಪೇಟೆ ನಡುವಿನ ಪಂದ್ಯದಲ್ಲಿ ಡಾಲ್ಫಿನ್ಸ್ ಸೋಮವಾರಪೇಟೆ 1-0 ಗೋಲಿನಿಂದ ಜಯಗಳಿಸಿತು. ತಂಡದ ಪರ ರಜತ್ ಗೋಲು ಗಳಿಸಿದರು.
ಲಯನ್ಸ್ ಗೋಣಿಕೊಪ್ಪ ಹಾಗೂ ಮುರ್ನಾಡು ರೂರಲ್ ಫ್ರೆಂಡ್ಸ್ ನಡುವಿನ ಪಂದ್ಯದಲ್ಲಿ ಮುರ್ನಾಡು ರೂರಲ್ ಫ್ರೆಂಡ್ಸ್ 6-0 ಗೋಲುಗಳ ಭರ್ಜರಿ ಅಂತರದಿಂದ ಗೆಲುವು ದಾಖಲಿಸಿತು.
ಯುಟಿಎಸ್‌ಸಿ ಹಾಗೂ ಶ್ರೀರಾಮ್ ಟ್ರಸ್ಟ್ ನಾಪೋಕ್ಲು ನಡುವಿನ ಪಂದ್ಯದಲ್ಲಿ ಯುಟಿಎಸ್‌ಸಿ 3-0 ಗೋಲುಗಳ ಅಂತರದಿಂದ ಜಯಗಳಿಸಿತು. ಶ್ರೇಯಸ್ ಎರಡು ಹಾಗೂ ಶಾಹಿಲ್ ಒಂದು ಗೋಲು ದಾಖಲಿಸಿದರು.
ಪತ್ರಿಯಾದ್ ಹಾಗೂ ಕೊಡಗು ವಿದ್ಯಾಲಯ ನಡುವಿನ ಪಂದ್ಯದಲ್ಲಿ ಪತ್ರಿಯಾದ್ 1-0 ಗೋಲಿನಿಂದ ಗೆಲುವು ಸಾಧಿಸಿತು. ಆದಿತ್ ತಂಡದ ಪರ ಗೋಲು ದಾಖಲಿಸಿದರು.
ಬಾಲಕಿಯರ ವಿಭಾಗದ ಪಂದ್ಯಗಳ ಫಲಿತಾಂಶ:
ಮಡಿಕೇರಿಯ ಕೊಡಗು ವಿದ್ಯಾಲಯ ಹಾಗೂ ಕೂರ್ಗ್ ಕ್ರೀಡಾ ಶಾಲೆ ನಡುವಿನ ಪಂದ್ಯ ಗೋಲು ರಹಿತ ಡ್ರಾದಲ್ಲಿ ಅಂತ್ಯಗೊಂಡಿತು.
ಕೊಡಗು ವಿದ್ಯಾಲಯ ಹಾಗೂ ಪೊನ್ನಂಪೇಟೆ ಕ್ರೀಡಾ ಶಾಲೆ ನಡುವಿನ ಪಂದ್ಯದಲ್ಲಿ ಪೊನ್ನಂಪೇಟೆ ಕ್ರೀಡಾ ಶಾಲೆ 2-0 ಗೋಲುಗಳ ಅಂತರದಿಂದ ಜಯಗಳಿಸಿತು. ಗ್ರೀಷ್ಮಾ ಎರಡು ಗೋಲು ದಾಖಲಿಸಿದರು.
ಕೂರ್ಗ್ ಕ್ರೀಡಾ ಶಾಲೆ ಹಾಗೂ ಪೊನ್ನಂಪೇಟೆ ಕ್ರೀಡಾ ಶಾಲೆ ನಡುವಿನ ಮತ್ತೊಂದು ಪಂದ್ಯದಲ್ಲಿ ಕೂರ್ಗ್ ಕ್ರೀಡಾ ಶಾಲೆ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಕೂರ್ಗ್ ಕ್ರೀಡಾ ಶಾಲೆಯ ಪರ ವೇದ ಹಾಗೂ ಯಶಿಕ್ ತಲಾ ಒಂದು ಗೋಲು ಗಳಿಸಿದರೆ, ಪೊನ್ನಂಪೇಟೆ ಕ್ರೀಡಾ ಶಾಲೆಯ ಗ್ರೀಷ್ಮಾ ಒಂದು ಗೋಲು ದಾಖಲಿಸಿದರು.
ಪಂದ್ಯಾವಳಿಯ ಮೊದಲ ದಿನದ ಪಂದ್ಯಗಳು ರೋಚಕವಾಗಿ ನಡೆದಿದ್ದು, ವಿವಿಧ ತಂಡಗಳು ಉತ್ತಮ ಪ್ರದರ್ಶನ ನೀಡಿವೆ.

















