Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ವಿಶ್ವದಾದ್ಯಂತ ಕನ್ನಡ ಭಾಷೆ ಪ್ರಸಾರದಲ್ಲಿ ಯುವಜನತೆಯ ಪಾತ್ರ ಅಪಾರ: ಸಿದ್ದಪ್ಪ ಹೆಳವರಹುಂಡಿ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿಶ್ವದಾದ್ಯಂತ ಕನ್ನಡ ಭಾಷೆ ಪ್ರಸಾರದಲ್ಲಿ ಯುವಜನತೆಯ ಪಾತ್ರ ಅಪಾರ: ಸಿದ್ದಪ್ಪ ಹೆಳವರಹುಂಡಿ

ನವೆಂಬರ್ 2, 20261 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಕುಶಾಲನಗರ, NEWS DESK ನ.2: ಪ್ರತಿಯೊಬ್ಬ ಕನ್ನಡಿಗರ ಸಂತಸ ಹಾಗೂ ಸಂಕಟಗಳನ್ನು ವ್ಯಕ್ತಪಡಿಸುವ ಅಂತರಂಗದ ಭಾಷೆ ಕನ್ನಡವಾಗಿದ್ದು, ಕನ್ನಡ ಭಾಷೆಯನ್ನು ವಿಶ್ವದಾದ್ಯಂತ ಪಸರಿಸುವ ಜವಾಬ್ದಾರಿ ಇಂದಿನ ಯುವಜನತೆ ಮತ್ತು ವಿದ್ಯಾರ್ಥಿಗಳ ಮೇಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಸಿದ್ದಪ್ಪ ಹೆಳವರಹುಂಡಿ ಅಭಿಪ್ರಾಯಪಟ್ಟರು.

ಹಾರಂಗಿ ಸಮೀಪದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡಿಗರ ಅಂತರಂಗದ ಆತ್ಮಭಾಷೆಯಾಗಿರುವ ಕನ್ನಡವನ್ನು ವಿಶ್ವದಾದ್ಯಂತ ಪಸರಿಸುವುದರ ಜೊತೆಗೆ ಕರುನಾಡಿನಲ್ಲಿ ಭಾಷೆಯ ಕೀರ್ತಿಯನ್ನು ಬೆಳಗಿಸುವ ಕಾಯಕ ಇಂದಿನ ವಿದ್ಯಾರ್ಥಿಗಳಲ್ಲಿ ಮೊಳಕೆಯೊಡೆಯಬೇಕು. ಬ್ರಿಟಿಷರು ಭಾರತವನ್ನು ತೊರೆಯುವ ಸಂದರ್ಭದಲ್ಲಿ ಹೂಡಿದ ತಂತ್ರಗಳಿಂದಾಗಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳು, ಏಕೀಕರಣ ಸಮಿತಿಯ ನಿರಂತರ ಹೋರಾಟದ ಫಲವಾಗಿ ಸಮಗ್ರ ಕರ್ನಾಟಕವಾಗಿ ರೂಪುಗೊಂಡವು. ಇಂತಹ ಸಮಗ್ರ ಕರ್ನಾಟಕವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಪಡಿಸಲು ಇಂದಿನ ವಿದ್ಯಾರ್ಥಿಗಳು ಹಾಗೂ ಯುವಜನತೆ ಪಣತೊಡಬೇಕು ಎಂದು ಕರೆ ನೀಡಿದರು.

ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅಪ್ಪಟ ಕನ್ನಡಿಗ ದಂಪತಿಗಳಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರು ಯುವಜನತೆಗೆ ಮಾದರಿಯಾಗಬೇಕು ಎಂದು ಸಿದ್ದಪ್ಪ ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ರೇಷ್ಮೆ ಇಲಾಖೆಯ ನಿವೃತ್ತ ವ್ಯವಸ್ಥಾಪಕ ಪುಟ್ಟಪ್ಪ, ಜ್ಞಾನಗಂಗಾ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಕೆ. ಸುಧೀರ್, ಕಾರ್ಯದರ್ಶಿ ಬಿ.ಎಸ್. ನಿಂಗಪ್ಪ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಮೂರ್ತಿ, ಶಾಲೆಯ ಪ್ರಾಂಶುಪಾಲೆ ಜೆ.ಎ. ಸಂಜನಾ, ಆಡಳಿತಾಧಿಕಾರಿ ಮರ್ವಿನ್ ಕೊರಿಯಪ್ಪ ಹಾಗೂ ಶಿಕ್ಷಕರಾದ ಭಾಸ್ಕರ್, ದೀಪಾ, ರೇವತಿ, ಜಲಾವತಿ, ಶ್ರೀಕಲ ಮತ್ತು ಜಿ.ಎಸ್. ಪುನೀತ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ವಿಷುದ್ಧ ಪ್ರಾರ್ಥಿಸಿದರು. ತನ್ಮಯ್ ಸ್ವಾಗತಿಸಿದರು. ತೇಜೋ ತನ್ನಯ್ ಕಾರ್ಯಕ್ರಮ ನಿರೂಪಿಸಿದರು.

ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ಗಾಯನ, ವೀರ ಕನ್ನಡಿಗರ ಛದ್ಮವೇಷ ಸ್ಪರ್ಧೆ, ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Follow us Follow us
Share. WhatsApp Facebook Twitter Email Telegram Copy Link

Related Posts

ಚೆಯ್ಯಂಡಾಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಥಿಲ ಕಟ್ಟಡ: ತಕ್ಷಣ ದುರಸ್ತಿಗೆ ಆಗ್ರಹ

ನವೆಂಬರ್ 2, 2026

ಸೋಲಿನ ಭೀತಿಯಿಂದ ಹುದಿಕೇರಿ ಜಿ.ಪಂ. ಕ್ಷೇತ್ರದ ಮೀಸಲಾತಿ ಬದಲಾವಣೆಗೆ ಕಾಂಗ್ರೆಸ್ ಪ್ರಯತ್ನ: ಚೆಪ್ಪುಡಿರ ರಾಕೇಶ್ ದೇವಯ್ಯ ಆರೋಪ

ನವೆಂಬರ್ 2, 2026

ನಾಪೋಕ್ಲುವಿನಲ್ಲಿ ‘ಸೇವ್ ಬರ್ಡ್ಸ್, ಸೇವ್ ಟ್ರೀ’ ಅಭಿಯಾನದಡಿ ಗಿಡ ನೆಡುವ ಕಾರ್ಯಕ್ರಮ

ನವೆಂಬರ್ 2, 2026

ಸೋಲಿನ ಭೀತಿಯಿಂದ ಹುದಿಕೇರಿ ಜಿ.ಪಂ. ಕ್ಷೇತ್ರದ ಮೀಸಲಾತಿ ಬದಲಾವಣೆಗೆ ಕಾಂಗ್ರೆಸ್ ಪ್ರಯತ್ನ: ಚೆಪ್ಪುಡಿರ ರಾಕೇಶ್ ದೇವಯ್ಯ ಆರೋಪ

ನವೆಂಬರ್ 2, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ನ.2: ಸೋಲಿನ ಭೀತಿಯನ್ನು ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷವು ಹುದಿಕೇರಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ನಿಗದಿಯಾಗಿರುವ ಸಾಮಾನ್ಯ…

ನಾಪೋಕ್ಲುವಿನಲ್ಲಿ ‘ಸೇವ್ ಬರ್ಡ್ಸ್, ಸೇವ್ ಟ್ರೀ’ ಅಭಿಯಾನದಡಿ ಗಿಡ ನೆಡುವ ಕಾರ್ಯಕ್ರಮ

ನವೆಂಬರ್ 2, 2026

ಭರತನಾಟ್ಯ ಜೂನಿಯರ್ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಕು. ಖುಷಿಗೆ ಉನ್ನತ ಶ್ರೇಣಿ

ನವೆಂಬರ್ 2, 2026

ಹೆಬ್ಬಾಲೆ ವ್ಯಾಪ್ತಿಯ ವೀರಶೈವ ಲಿಂಗಾಯತ ಸಮಾಜದ ಸಭೆ: ನೂತನ ಬಸವ ಸಮಿತಿ ರಚನೆ, ಮೋಹನ್ ಹಕ್ಕೆ ನಂಜಪ್ಪ ಅಧ್ಯಕ್ಷರಾಗಿ ಆಯ್ಕೆ

ನವೆಂಬರ್ 2, 2026

ವಿಶ್ವದಾದ್ಯಂತ ಕನ್ನಡ ಭಾಷೆ ಪ್ರಸಾರದಲ್ಲಿ ಯುವಜನತೆಯ ಪಾತ್ರ ಅಪಾರ: ಸಿದ್ದಪ್ಪ ಹೆಳವರಹುಂಡಿ

ನವೆಂಬರ್ 2, 2026

ಕೊಡವಲ್ಯಾಂಡ್ ಸ್ವಾಯತ್ತತೆಗೆ ವಂಶಪಾರಂಪರ್ಯ ಭೂಮಿ ಮತ್ತು ಮಾತೃಭಾಷೆಯ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ : ಎನ್.ಯು. ನಾಚಪ್ಪ : ಪೊನ್ನಂಪೇಟೆಯಲ್ಲಿ CNCಯ 8ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ

ನವೆಂಬರ್ 2, 2026

ನಗರದ ಮಕ್ಕಳಿಗೆ ರೈತರ ಜಮೀನಿನಲ್ಲಿ ಗ್ರಾಮಾನುಭವ: ಕೃಷಿ ಪಾಠ ಕಲಿತ ವಿದ್ಯಾರ್ಥಿಗಳು

ನವೆಂಬರ್ 2, 2026

ಸುಂಟಿಕೊಪ್ಪ ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಛತಾ ಕಾರ್ಯ

ನವೆಂಬರ್ 2, 2026

ಸುಂಟಿಕೊಪ್ಪ ಮಲ ತ್ಯಾಜ್ಯ ಘಟಕದಲ್ಲಿ ಅವ್ಯವಹಾರದ ಆರೋಪ: ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಎಚ್ಚರಿಕೆ

ನವೆಂಬರ್ 2, 2026

ಕಲಾವಿದ ಅಡ್ಡಂಡ ಸಿ.ಕಾರ್ಯಪ್ಪ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣ : ಕೊಡಗು ಕಲಾವಿದರ ಸಂಘ ಖಂಡನೆ

ನವೆಂಬರ್ 2, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.