ಮಡಿಕೇರಿ ಡಿ.16 NEWS DESK : ವಿಶೇಷ ಚೇತನ ಮಕ್ಕಳು ದೇವರ ಮಕ್ಕಳು, ಅವರು ಸಮಾಜದಲ್ಲಿ ಎಲ್ಲರಂತೆ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ರೀಬಿಲ್ಡ್ ಕೊಡಗು ಸಂಸ್ಥೆ ವಿಶೇಷ ಚೇತನ ಮಕ್ಕಳಿಗೆ ಅಗತ್ಯ ಸಹಕಾರ ನೀಡಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕೆ.ಎ.ಕುಶಾಲಪ್ಪ ಭರವಸೆ ನೀಡಿದ್ದಾರೆ. ರೀಬಿಲ್ಡ್ ಕೊಡಗು ಸಂಸ್ಥೆ ವತಿಯಿಂದ ನಗರದ ಜೂನಿಯರ್ ಕಾಲೇಜು ಆವರಣದಲ್ಲಿರುವ ಶಾಲಾ ಸಿದ್ಧತಾ ಕೇಂದ್ರದಲ್ಲಿ ನಡೆದ ವಿಶೇಷ ಅಗತ್ಯತೆವುಳ್ಳ ವಿದ್ಯಾರ್ಥಿಗಳ ಪೋಷಕರ ಆಪ್ತ ಸಮಾಲೋಚನಾ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಶೂಟ್ ವಿತರಣೆ ಮಾಡಿ ಅವರು ಮಾತನಾಡಿದರು. ಈ ಹಿಂದೆ ವಿಶೇಷ ಚೇತನ ಮಕ್ಕಳ ಸಂಖ್ಯೆ ಹೆಚ್ಚಿತ್ತು. ಇದೀಗ ಜಾಗೃತಿ ಕಾರ್ಯಕ್ರಮಗಳಿಂದ ಕಡಿಮೆಯಾಗುತ್ತಿದೆ. ವಿಶೇಷ ಚೇತನ ಮಕ್ಕಳನ್ನು ದೇವರ ಮಕ್ಕಳೆಂದು ಭಾವಿಸಬೇಕು. ಆ ಮಕ್ಕಳ ಪ್ರತಿಭೆಗೆ ತಕ್ಕಂತೆ ಅವಕಾಶವನ್ನು ನೀಡಲು ಪೋಷಕರು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಮನೆಯ ವಾತಾವರಣವೇ ಬದಲಾಗುತ್ತದೆ ಎನ್ನುವ ನಿಟ್ಟಿನಲ್ಲಿ ರೀಬಿಲ್ಡ್ ಕೊಡಗು ಸಂಸ್ಥೆ ಕನ್ನಡ ಶಾಲೆ ಮತ್ತು…
ಲೇಖಕ: admin
ಮಡಿಕೇರಿ ಡಿ.16 NEWS DESK : ಕೊಡವ ಮಕ್ಕಡ ಕೂಟದ 105ನೇ ಪುಸ್ತಕ, ಹಾಕಿ ಆಟಗಾರ, ಲೇಖಕ ಚೆಪ್ಪುಡೀರ ಕಾರ್ಯಪ್ಪ ಅವರು ರಚಿಸಿರುವ “ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ” ಡಿ.22 ರಂದು ಬಿಡುಗಡೆಯಾಗಲಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ನಗರದ ಪತ್ರಿಕಾಭವನದ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಚೆಪ್ಪುಡೀರ ಎಂ.ಪೂಣಚ್ಚ ಉದ್ಘಾಟಿಸಲಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ, ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, 1975ರ ವಿಶ್ವಕಪ್ ಹಾಕಿ ಪಂದ್ಯಾವಳಿಯ ವಿಜೇತ ಪೈಕೇರ ಇ.ಕಾಳಯ್ಯ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಹಾಗೂ ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ ಪುಸ್ತಕದ ಬರಹಗಾರ ಚೆಪ್ಪುಡೀರ ಎ.ಕಾರ್ಯಪ್ಪ ಉಪಸ್ಥಿತರಿರುವರು. ಲೇಖಕ ಚೆಪ್ಪುಡೀರ ಕಾರ್ಯಪ್ಪ ಆಟಗಾರನಾಗಿ, ತೀರ್ಪುಗಾರನಾಗಿ ಹಾಗೂ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಿದ್ದು, ಯುವ ಆಟಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ…
ಮಡಿಕೇರಿ ಡಿ.16 NEWS DESK : ಯಾವುದೇ ಕಠಿಣ ಪರಿಸ್ಥಿತಿಗಳ ನಡುವೆಯೂ ಧೈರ್ಯದಿಂದ ಕರ್ತವ್ಯನಿಷ್ಟರಾಗಿ ಮುನ್ನಡೆಯುತ್ತಿರುವ ‘ಬ್ರಾಹ್ಮಣ’ ಸಮೂಹ ಇತ್ತೀಚಿನ ದಿನಗಳಲ್ಲಿ, ಅನಗತ್ಯವಾದ ಅವಮಾನ ಮತ್ತು ಅವಹೇಳನಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭ ಬ್ರಾಹ್ಮಣ ಸಮೂಹ ತನ್ನ ಸೌಮ್ಯ ಸ್ವಭಾವವನ್ನು ಮೀರಿ ದೃಢ ನಿಲುವುಗಳನ್ನು ತಳೆದು ಹೆಜ್ಜೆಹಾಕಬೇಕೆಂದು ಮೇಜರ್ ವೆಂಕಟಗಿರಿಯವರು ಕರೆ ನೀಡಿದರು. ನಗರದ ಶಾನಭಾಗ್ ಸೆಂಟರ್ ಸಭಾ ಭವನದಲ್ಲಿ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ಸಮಾಜ ಬಾಂಧವರಿಗೆ ಹಮ್ಮಿಕೊಳ್ಳಲಾಗಿದ್ದ ವೀರಾಜಪೇಟೆ ತಾಲೂಕು ಮಟ್ಟದ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿ, ಬ್ರಾಹ್ಮಣರು ತಮ್ಮ ಬುದ್ಧಿಮತ್ತೆ ಹಾಗೂ ಕರ್ತವ್ಯಪರತೆಯಿಂದ ಯಾವುದೇ ಕ್ಷೇತ್ರಕ್ಕೆ ಹೋದರೂ ಅಲ್ಲಿ ಸೈ ಅನ್ನಿಸಿಕೊಳ್ಳಬಲ್ಲ ಸಾಮಥ್ರ್ಯ ಹೊಂದಿದ್ದಾರೆಂದು ನುಡಿದರು. ಪ್ರಗತಿಪರ ಕೃಷಿಕರು,ವಾಣಿಜ್ಯೋದ್ಯಮಿಗಳು ಹಾಗೂ ಶಾನಭಾಗ್ ಸೆಂಟರ್ ಮಾಲೀಕರಾದ ನಿಖಿಲ್ ರಾಮಮೂರ್ತಿಯವರು ಮಾತನಾಡಿ, ಕಲೆ, ಕ್ರೀಡೆ, ಸಾಹಿತ್ಯ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಿಗೆ ಯಾವತ್ತೂ ತಮ್ಮ ಸಹಕಾರವಿದೆಯೆಂದು ತಿಳಿಸಿದರು. ನಿಧಿಯ ವೀರಾಜಪೇಟೆ ತಾಲೂಕಿನ ನಿರ್ದೇಶಕರೂ ಹಾಗೂ ನಿಧಿಯ ಸಹ…
ಮಡಿಕೇರಿ NEWS DESK ಡಿ.16 : ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ತೆರ್ಮೆಮೊಟ್ಟೆಯ ಶ್ರೀ ಆದಿ ಶಕ್ತಿ ಮತ್ತು ಧರ್ಮದೈವ ಹಾಗೂ ಪಾಷಾಣ ಮೂರ್ತಿ ಪರಿವಾರ ದೈವಗಳ ಧರ್ಮ ಚಾವಡಿಯ ವತಿಯಿಂದ ‘ಶ್ರೀ ಆದಿ ಶಕ್ತಿ, ಧರ್ಮದೈವ ಮತ್ತು ಪರಿವಾರ ದೈವ’ ಪುನರ್ ಪ್ರತಿಷ್ಠಾಪನೆ ಹಾಗೂ ನೇಮೋತ್ಸವ ಮುಂದಿನ ಫೆ.6 ರಿಂದ 9ರವರೆಗೆ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಆದಿ ಶಕ್ತಿ ಮತ್ತು ಧರ್ಮದೈವ ಹಾಗೂ ಪಾಷಾಣ ಮೂರ್ತಿ ಪರಿವಾರ ದೈವಗಳ ಧರ್ಮ ಚಾವಡಿಯ ಪ್ರಮುಖರು ಹಾಗೂ ದೈವ ಆರಾಧಕರಾದ ಹರೀಶ್ ಬಿ.ಜೆ. ತಮ್ಮ ತಂದೆ ದಿ.ಜತ್ತಪ್ಪ ಪೂಜಾರಿ ಹಾಗೂ ತಾಯಿ ದಿ.ಬಿ.ಜೆ.ಗುರುವಮ್ಮ ಅವರಿಂದ ಸುಮಾರು 55 ವರ್ಷಗಳಿಂದ ಆರಾಧನೆಗೊಳ್ಳುತ್ತ ಬಂದಿರುವ ದೈವ ಸನ್ನಿಧಿಯಲ್ಲಿ, ಅವರ ತರುವಾಯ ಪೂಜಾ ಕಾರ್ಯಗಳು ಸ್ಥಗಿತಗೊಂಡಿತ್ತು. ಈ ಬಗ್ಗೆ ಅಷ್ಟಮಂಗಲ ಪ್ರಶ್ನೆಯಿಂದ ಕಂಡು ಬಂದ ವಿಚಾರಗಳಂತೆ ಇದೀಗ ಸುಮಾರು 22 ಲಕ್ಷ ರೂ. ವೆಚ್ಚದಲ್ಲಿ ದೈವ ಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ ಎಂದರು. ಪುನರ್ ಪ್ರತಿಷ್ಠಾ ಕಾರ್ಯಗಳು ಕಾವಾಡಿಯ…
ಮಡಿಕೇರಿ NEWS DESK ಡಿ.16 : ಗ್ರಾಮೀಣ ಕ್ರೀಡಾ ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ 69ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಷನ್ ವತಿಯಿಂದ ವೀರನಾಡು ರಕ್ಷಣಾವೇದಿಕೆಯ ಸಹಯೋಗದಲ್ಲಿ ಡಿ.22 ರಂದು ನಗರದ ಗಾಂಧಿ ಮೈದಾನದಲ್ಲಿ ‘ಗ್ರಾಮೀಣ ಕ್ರೀಡೋತ್ಸವ’ ನಡೆಯಲಿದೆ ಎಂದು ಫೆಡÀರೇಷನ್ ನ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಿಗ್ಗೆ 9.30 ಗಂಟೆಗೆ ಆರಂಭಗೊಳ್ಳುವ ಕ್ರೀಡೋತ್ಸವದಲ್ಲಿ ವಯೋಮಿತಿಯ ಭೇದವಿಲ್ಲದೆ ಕ್ರೀಡಾ ಚಟುವಟಿಕೆಗಳಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ಮರೆತು ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಮರುಜೀವ ತುಂಬಬೇಕೆಂದು ಮನವಿ ಮಾಡಿದರು. ಕ್ರೀಡೋತ್ಸವದಲ್ಲಿ ಗೋಲಿ, ಬುಗುರಿ, ಲಗೋರಿ, ಚಕ್ರಗಾಡಿ ತಳ್ಳುವುದು, ಕ್ಯಾಟರ್ ಬಿಲ್ಲಿನಿಂದ ಕಲ್ಲು ಹೊಡೆಯುವುದು, ಕುಂಟ ಬಿಲ್ಲೆ ಮೊದಲಾದ ಗ್ರಾಮೀಣ ಆಟಗಳು ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಇಂದಿನ ಯುವ ಸಮೂಹ ಮೊಬೈಲ್ ಪ್ರಭಾವಕ್ಕೆ ಸಿಲುಕಿ ಕ್ರೀಡಾ ಚಟುವಟಿಕೆಗಳಿಂದ ದೂರ ಸರಿದಿರುವುದಲ್ಲದೆ, ಅವರಿಗೆ ಗ್ರಾಮೀಣ ಆಟೋಟಗಳ ಬಗ್ಗೆ ಮಾಹಿತಿಗಳಿಲ್ಲ. ಗ್ರಾಮೀಣ ಕ್ರೀಡೋತ್ಸವದ ಮೂಲಕ ನಮ್ಮ ಹಳೆಯ…
ಭಾಗಮಂಡಲ NEWS DESK ಡಿ.16 : ಕೋರಂಗಾಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಹುಣಸೂರಿ ನ ಬಿ. ಜಿ ಎಸ್ ಸಭಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ವೈಟ್ ಬೆಲ್ಟ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕಥ ಮತ್ತು ಕುಮಿತೆ ವಿಭಾಗದಲ್ಲಿ ಪದಕಗಳು ಮತ್ತು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನಿಯರ ಈ ಸಾಧನೆಗೆ ಶಾಲೆಯ ಪ್ರಾಂಶುಪಾಲರಾದ ಲೋಕೇಶ್, ನಿಲಯ ಪಾಲಕರಾದ ದೀಪಕ್ ಕೆ.ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಕರಾಟೆ ಶಿಕ್ಷಕರಾದ ದಿಲೀತ್ ಉತ್ತಪ್ಪ. ದೈಹಿಕ ಶಿಕ್ಷಣ ಶಿಕ್ಷಕ ಪವನ್ ಸಾಗರ್ ಕೆ.ಪಿ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿದರು. ಶಾಲೆಯ ಶಿಕ್ಷಕರಾದ ರಘು ಜಿ.ಎಸ್. ಲಿಂಗಸ್ವಾಮಿ ಕೆ. ಎಂ. ಹೇಮಂತ್. ರಾಜಶೇಖರ್ ಮೂರ್ತಿ. ಚೇತನ್ ಕೆ. ಜಿ. ಭಾಗವಹಿಸಿದ್ದರು.
ಭಾಗಮಂಡಲ NEWS DESK ಡಿ.16 : ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ವತಿಯಿಂದ ಆಯೋಜಿಸಿದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬವಾರು ಹಗ್ಗ ಜಗ್ಗಾಟ ಪಂದ್ಯಾವಳಿಯ ಪ್ರಥಮ ವರ್ಷದ ಕೊಡಗು ಗೌಡ ಹುತ್ತರಿ ಕಪ್ – 2024 ಅನ್ನು ಪೆರಾಜೆಯ ಕುಂಬಳಚೇರಿ ಮನೆತನ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಪುರುಷರ ಹಗ್ಗಜಗ್ಗಾಟ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ಕುಂಬಳಚೇರಿ ಕುಟುಂಬ ತಂಡವು ಎದುರಾಳಿ ಪರ್ಲಕೋಟಿ ಕುಟುಂಬವನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಹಗ್ಗ ಜಗ್ಗಾಟದ ರನ್ನರ್ ಅಪ್ ಪ್ರಶಸ್ತಿಯನ್ನು ಪರ್ಲಕೋಟಿ ಕುಟುಂಬ ತಂಡವು ಪಡೆದು ಕೊಂಡರೆ , ತೃತೀಯ ಹಾಗೂ ಚತುರ್ಥ ಸ್ಥಾನವನ್ನು ಪೆರಾಜೆಯ ನಿಡ್ಯಮಲೆ ಕುಟುಂಬ ಮತ್ತು ಮಜಿಕೋಡಿ ಕುಟುಂಬ ತಂಡ ಪಡೆದುಕೊಂಡಿತು. ಮಹಿಳೆಯರ ಕುಟುಂಬವಾರು ಹಗ್ಗಜಗ್ಗಾಟ ಪಂದ್ಯದಲ್ಲಿ ದಾಯನ ಕುಟುಂಬ ತಂಡ ಪ್ರಥಮ ಸ್ಥಾನ ಗಳಿಸಿದರು. ದ್ವಿತೀಯ ಸ್ಥಾನವನ್ನು ಅಮೆಮನೆ ಕುಟುಂಬಸ್ಥರ ತಂಡ, ತೃತೀಯ ಹಾಗೂ ಚತುರ್ಥ ಕುದುಪಜೆ ಮತ್ತು ಪೊನ್ನೇಟಿ…
ನವದೆಹಲಿ NEWS DESK ಡಿ.16 : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ವಿಜಯ್ ದಿವಸ್ ಅಂಗವಾಗಿ ಇಂದು ಸೇನಾ ಮುಖ್ಯಸ್ಥರು ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್, ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಹಾಗೂ ನೌಕಾಪಡೆಯ ಉಪಾಧ್ಯಕ್ಷ ವೈಸ್-ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಹಾಜರಿದ್ದರು.
ನಾಪೋಕ್ಲು ಡಿ.16 NEWS DESK : ಹಳೇ ತಾಲೂಕಿನಲ್ಲಿ ಕೊಡಗಿನ ಸುಗ್ಗಿಯ ಹಬ್ಬ ಪುತ್ತರಿಯನ್ನು ಕೊಡವರು ಹಾಗೂ ಮುಸ್ಲಿಂ ಬಾಂಧವರು ಪಾಲ್ಗೊಂಡು ಸಂಭ್ರಮದಿಂದ ಆಚರಿಸಿದರು. ವರ್ಷ ಪ್ರತಿ ಇಲ್ಲಿನ ಹಿರಿಯ ಬೊಪ್ಪೇರ ಕಾವೇರಪ್ಪ ಮತ್ತು ಅವರ ಮಗ ಜಯ ಉತ್ತಪ್ಪ ತಮ್ಮ ಮನೆಯಲ್ಲಿ ಪುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾ ಬರುತ್ತಿದ್ದು, ಇಲ್ಲಿನ ಮುಸ್ಲಿಂ ಜನಾಂಗದವರು ಹಲವು ವರ್ಷಗಳಿಂದ ಪುತ್ತರಿ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಸೌರ್ಹಾದತೆ, ಸಾಮರಸ್ಯಕ್ಕೆ ಸಾಕ್ಷಿಯಾದರು. ಎಲ್ಲರ ಆಗಮನದ ನಂತರ ನೆರೆ ಕಟ್ಟಿ, ಕದಿರು ತೆಗೆದು, ಪ್ರಸಾದವನ್ನು ಸ್ವೀಕರಿಸಿ ಊಟ ಉಪಚಾರದೊಂದಿಗೆ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ಈ ಸಮಯದಲ್ಲಿ ಪೋಲಿ ಪೋಲಿಯೇ ಬಾ ಎಂಬ ಉದ್ಘೋಷ ಹಾಗೂ ಪಟಾಕಿಗಳ ಆರ್ಭಟ ಮುಗಿಲಿಗೇರಿತು. ಈ ಸಂದರ್ಭ ಮಾತನಾಡಿದ ಹಿರಿಯರಾದ ಬೊಪ್ಪೇರ ಕಾವೇರಪ್ಪ, ನಾವು ಪ್ರತಿ ವರ್ಷವು ಹುತ್ತರಿ ಹಬ್ಬವನ್ನು ಆಚರಿಸುತ್ತಾ ಬರುತ್ತಿದ್ದು, ನಮ್ಮ ನೆರೆಯವರಾದ ಮುಸ್ಲಿಂ ಬಾಂಧವರು ಪ್ರತಿ ವರ್ಷವು ನಮ್ಮ ಮನೆಗೆ ಬಂದು ಹಬ್ಬದಲ್ಲಿ ಪಾಲ್ಗುಳ್ಳುತ್ತಾರೆ. ನಾವೇಲ್ಲರು ಸಹೋದರರಂತೆ ಅವರನ್ನು…
ನಾಪೋಕ್ಲು ಡಿ.16 NEWS DESK : ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ಧಾನ್ಯಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗದ್ದೆಯಿಂದ ಭತ್ತದ ಕದಿರು ತಂದು ದೇವಾಲಯದ ನಮಸ್ಕಾರ ಮಂಟಪದಲ್ಲಿ ಇರಿಸಿ ಧಾನ್ಯಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮುಖ್ಯ ಅರ್ಚಕ ಸುಧೀರ್ ವಿಶೇಷ ಪೂಜೆ ನೆರವೇರಿಸಿ ತೀರ್ಥ ಪ್ರಸಾದ ಹಾಗೂ ಕದಿರನ್ನು ಭಕ್ತಾಧಿಗಳಿಗೆ ವಿತರಿಸಿದರು. ಈ ವೇಳೆ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಹಾಗೂ ಊರಿನವರು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ.






