ಮಡಿಕೇರಿ ನ.25 NEWS DESK : ಸ್ವತಂತ್ರ ಭಾರತದ ಪ್ರಪ್ರಥಮ ಸೇನಾ ಮಹಾದಂಡನಾಯಕ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಪದ್ಮಭೂಷಣ ಕೆ.ಎಸ್.ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿದ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ನಿವೃತ್ತ (ಮಾಜಿ)ಯೋಧರ ಒಕ್ಕೂಟ ಅರೆ ಸೇನಾಪಡೆಯ ಸಂಚಾಲಕ ಹಾಗೂ ಕಾರ್ಯದರ್ಶಿ ಎನ್.ಎಂ.ಭೀಮಯ್ಯ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅವಹೇಳನ ಮಾಡಿ ಶಾಂತಿ ಕದಡಲು ಯತ್ನಿಸಿದ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭ ದೊಡ್ಡ ಬಳ್ಳಾಪುರದಲ್ಲಿ ಸಿಆರ್‍ಪಿಎಫ್ ಮಾಜಿ ಯೋಧ ಅನಂತರಾಜ್ ಗೋಪಾಲ್ ಹಾಗೂ ಅವರ ಕುಟುಂಬದವರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಎನ್.ಎಂ.ಭೀಮಯ್ಯ ತೀವ್ರವಾಗಿ ಖಂಡಿಸಿದರು. ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಲಾಗಿದ್ದು, ಗ್ರಾಮದ ರಾಜಕೀಯ ಮುಖಂಡರು ಒತ್ತಾಯ ಪೂರ್ವಕವಾಗಿ ರಾಜಿ ಸಂಧಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಹಲ್ಲೆ ಪ್ರಕರಣ ಮರುಕಳಿಸುತ್ತಲೇ ಇದ್ದು, ಜೀವ ಬೆದರಿಕೆ ಕೂಡ ಹಾಕಿರುವ ಆರೋಪವಿದೆ. ಆದ್ದರಿಂದ…
ಲೇಖಕ: admin
ಮಡಿಕೇರಿ ನ.25 NEWS DESK : ಕೊಡಗು ಜಿಲ್ಲಾ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಚುನಾವಣೆ ನಗರದ ಬಾಲಭವನ ಸಭಾಂಗಣದಲ್ಲಿ ಶಾಂತಿಯುತವಾಗಿ ನಡೆಯಿತು. ಬ್ಯಾಂಕ್ ಆಡಳಿತ ಮಂಡಳಿಯ ಒಟ್ಟು 14 ಸ್ಥಾನಗಳಿಗೆ 24 ಮಂದಿ ಸ್ಪರ್ಧಿಸಿದ್ದರು. ಸಾಮಾನ್ಯ ಕ್ಷೇತ್ರದ 11 ಸ್ಥಾನಗಳಿಗೆ 18, ಮಹಿಳಾ ಕ್ಷೇತ್ರದ 2 ಸ್ಥಾನಗಳಿಗೆ 4, ಹಿಂದುಳಿದ ವರ್ಗ ಬಿ ಕ್ಷೇತ್ರಕ್ಕೆ 1 ಸ್ಥಾನಕ್ಕೆ ಇಬ್ಬರು ಸ್ಪರ್ಧೆಯಲ್ಲಿದ್ದರು. 1048 ಮತದಾರರ ಪೈಕಿ 691 ಮಂದಿ ಮತದಾನ ಮಾಡಿದರು. ಸಾಮಾನ್ಯ ವರ್ಗದಿಂದ ಸ್ಪರ್ಧಿಸಿದ್ದ ಅಂಥೋಣಿ ಕ್ಲೆಮೆಂಟದ ರೆಗೋ (421 ಮತ), ಜೋಕಿಮ್ ವಾಸ್ (500), ಎನ್.ಟಿ.ಜೋಸೆಫ್ (401), ಜೋಸೆಫ್ ವಿ.ವಿನ್ಸೆಂಟ್ (399), ಎಸ್.ಎಂ.ಡಿಸಿಲ್ವ (492), ಫ್ರಾನ್ಸಿಸ್ ಡಿಸೋಜ (462), ಬೆನ್ ಡಿಕ್ಟ್ ರೇಮಂಡ್ ಸಲ್ಹಾನ್ಹಾ (400), ರಿಚರ್ಡ್ ಉಲ್ಲಾಸ್ ಕುಮಾರ್ (369), ಸಾರ್ಜೆಂಟ್ ಎಮಾನ್ಯುಯಲ್ (352), ಸಿರಿಲ್ ಮೊರಾಸ್ (566), ಜೆ.ಸುನಿಲ್ ಲೋಬೋ (387) ಜಯಶಾಲಿಗಳಾದರು. ಗಾಡ್ವಿನ್ ಪ್ರಮೋದ್ ಮಸ್ಕರನೇಸ್ (200), ವಿ.ಜೆ.ಟೋನಿ (180), ಕೆ.ಕೆ.ಪೌಲೋಸ್ (115), ಮರ್ವಿನ್…
ಮಡಿಕೇರಿ ನ.25 NEWS DESK : ಕೊಡಗು ಜಿಲ್ಲಾ ನಿವೃತ್ತ (ಮಾಜಿ)ಯೋಧರ ಒಕ್ಕೂಟ ಅರೆ ಸೇನಾಪಡೆಯ 12ನೇ ವಾರ್ಷಿಕ ಮಹಾಸಭೆ ನ.29ರಂದು ಬೆಳಿಗ್ಗೆ 10.30 ಗಂಟೆಗೆ ಮಡಿಕೇರಿಯ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ನಡೆಯಲಿದೆ. ಒಕ್ಕೂಟದ ಅಧ್ಯಕ್ಷ ಎಂ.ಜಿ.ಯತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅರೆಸೇನಾಪಡೆಯ ಮಾಜಿ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿರುವ ಒಕ್ಕೂಟದ ಸಂಚಾಲಕ ಹಾಗೂ ಕಾರ್ಯದರ್ಶಿ ಎನ್.ಎಂ.ಭೀಮಯ್ಯ ಅವರು, ಸದಸ್ಯತ್ವ ಪಡೆದುಕೊಳ್ಳದೆ ಇರುವವರು ಸದಸ್ಯತ್ವ ಪಡೆದುಕೊಳ್ಳುವಂತೆ ಕೋರಿದ್ದಾರೆ.
ಮಡಿಕೇರಿ ನ.25 NEWS DESK : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಮಡಿಕೇರಿ ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಮತ್ತು 2023-24ನೇ ಸಾಲಿನ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗೆ ಟಿ.ಪಿ.ರಮೇಶ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ನ.30 ರಂದು ನಡೆಯಲಿದೆ. ಮಡಿಕೇರಿಯ ಲಯನ್ ಕ್ಲಬ್ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಲೋಕನಾಥ ಅಮೆಚೂರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್, ಶಿಕ್ಷಣ ಇಲಾಖೆಯ ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ.ದೊಡ್ಡೇಗೌಡ ಭಾಗವಹಿಸಲಿದ್ದಾರೆ. ಅಪರಾಹ್ನ ಎರಡು ಗಂಟೆಗೆ ನಡೆಯುವ ಪ್ರಶಸ್ತಿ ಪ್ರಧಾನ…
ನಾಪೋಕ್ಲು ನ.25 NEWS DESK : ಇಂಡಿಯನ್ ಫಿಲ್ಟರ್ ಕಾಫಿ ಚಾಂಪಿಯನ್‍ಶಿಪ್ ನಲ್ಲಿ ಮೂರ್ನಾಡು ಪದವಿ ಕಾಲೇಜಿನ ಅಂತಿಮ ಬಿ.ಕಾಂ ವಿದ್ಯಾರ್ಥಿ ಶಶಾಂಕ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಐಎಫ್‍ಸಿಸಿ-2024 ಆಯೋಜಿಸಿದ ಫಿಲ್ಟರ್ ಕಾಫಿ ತಯಾರಿಕೆಯ ಚಾಂಪಿಯನ್ ಸ್ಪರ್ಧೆಯಲ್ಲಿ ಬಹು ಸಂಖ್ಯೆಯ ಸ್ಪರ್ಧಿಗಳು ಭಾಗವಹಿಸಿದ್ದರು. ಶಶಾಂಕ್ ಅಗಸ್ತ್ಯ ಕಾಫಿಯಲ್ಲಿ ತನ್ನ ವಿದ್ಯಾಭ್ಯಾಸದೊಂದಿಗೆ ಅರೆಕಾಲಿಕ ಉದ್ಯೋಗವನ್ನು ಮಾಡುತ್ತಿದ್ದು, ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾನೆ ಎಂದು ಮೂರ್ನಾಡು ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರೇಖಾ ಚಿಣ್ಣಪ್ಪ ತಿಳಿಸಿದ್ದಾರೆ. ವರದಿ : ದುಗ್ಗಳ ಸದಾನಂದ.
ಮಡಿಕೇರಿ ನ.25 NEWS DESK : ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದ ಕನ್ನಡ ಭಾಷೆ, ನಾಡು, ನುಡಿ, ಅತಿ ಉತ್ಕೃಷ್ಟವಾದದ್ದು. ಕನ್ನಡ ಸಾಹಿತ್ಯ ಲೋಕದಲ್ಲಿ ದಾಸ ಸಾಹಿತ್ಯ, ವಚನ ಸಾಹಿತ್ಯ, ಶಿಶು ಸಾಹಿತ್ಯ, ಜಾನಪದ ಸಾಹಿತ್ಯ, ಪ್ರೇಮ ಸಾಹಿತ್ಯ, ದಾಂಪತ್ಯ ಸಾಹಿತ್ಯ ಈ ಹಲವಾರು ವಿಭಾಗಗಳಿದ್ದು ಎಲ್ಲವೂ ಅತ್ಯುನ್ನತ ಪರಂಪರೆ ಹೊಂದಿದೆ ಎಂದು ಕೊಡಗು ಬ್ಯಾರಿ ವೆಲ್ಫೇರ್ ಟ್ರಸ್ಟ್ ನ ಉಪಾಧ್ಯಕ್ಷ ಎಂ.ಬಿ.ನಾಸಿರ್ ಅಹಮದ್ ನುಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎ.ಎಲ್.ಜಿ ಕ್ರೆಸೆಂಟ್ ಶಾಲೆ, ಕೊಡಗು ಬ್ಯಾರಿ ವೆಲ್ಫೇರ್ ಟ್ರಸ್ಟ್ ಹಾಗೂ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ವತಿಯಿಂದ ಮಡಿಕೇರಿಯ ಕ್ರೆಸೆಂಟ್ ಶಾಲಾ ಸಭಾಂಗಣದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆ ಮತ್ತು ಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ…
*CODAVA NATIONAL COUNCIL (CNC)* The Codava National Council, the irrepressible voice, ever-sustainable force, and conscience of the indigenous Codava community, will observe its 34th Annual CODAVA NATIONAL DAY on 26th November 2024. This event coincides with Indian Constitution Day. The esteemed Codava gathering rejuvenates and amplifies the sustained and eventful apolitical journey of the CNC, which has been peacefully striving to achieve *CodavaLand* Geo-Political Autonomy under the suzerainty of India. It also seeks UN recognition for the aboriginal indigenous Codavas under international law, the restoration of ancestral properties confiscated and mortgaged to external business tycoons by foreign rulers, and the realization…
ಮಡಿಕೇರಿ ನ.25 NEWS DESK :ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಶಿಶುಸಾಹಿತ್ಯದ ಪಿತಾಮಹ, ಕೊಡಗಿನ ಹುತ್ತರಿ ಹಾಡಿನ ಜನಕ ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆಯನ್ನು ಮಡಿಕೇರಿಯಲ್ಲಿ ಆಚರಿಸುವ ಕುರಿತು ಪೂರ್ವಭಾವಿ ಸಭೆಯು ಮಡಿಕೇರಿಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಯಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಶಾಲಾ-ಕಾಲೇಜು ಮುಖ್ಯೋಪಾಧ್ಯಾಯರನ್ನು ಸಭೆಗೆ ಕರೆಯಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ಮಡಿಕೇರಿಯ ಸೆಂಟ್ರಲ್ ಹೈಸ್ಕೂಲ್ ನಲ್ಲಿ 22 ವರ್ಷಗಳ ಕಾಲ ಶಾಲಾ ಇನ್ಸಪೆಕ್ಟರ್, ಶಿಕ್ಷಕರಾಗಿ, ಮುಖ್ಯೋಪಾದ್ಯಾಯರಾಗಿ ಆಗಿ ಸೇವೆಸಲ್ಲಿಸಿ, ನಾಡಿಗೆ ಕೀರ್ತಿ ತಂದಿದ್ದಾರೆ. ಕೊಡಗಿನ ಗ್ರಾಮೀಣ ಬದುಕನ್ನು ಪರಿಸರವನ್ನು ಅನುಭವಿಸಿ ಕಥೆ, ಕಾದಂಬರಿ, ಕವನಗಳನ್ನು ರಚಿಸಿದ್ದರು ಅವು ಇಂದಿಗೂ ಪ್ರಸ್ತುತ. ಸಣ್ಣಕತೆಗಳ ಜನಕ ಎಂದೇ ಪ್ರಖ್ಯಾತರಾಗಿದ್ದ ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆಯನ್ನು ಆಚರಿಸುವುದು ಕೊಡಗಿನ ಎಲ್ಲ ಸಾಹಿತ್ಯ, ಶೈಕ್ಷಣಿಕ ಸಂಸ್ಥೆಗಳು, ಜಿಲ್ಲೆಯ ನಾಗರೀಕ ಸಮಾಜ…
ಚೆಟ್ಟಳ್ಳಿ ನ.25 NEWS DESK : ಕಾಲೇಜಿನ ಒಂದೇ ಬ್ಯಾಚ್ ನಲ್ಲಿ ಕಲಿತ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಸ್ನೇಹಮಿಲನ ಕಾರ್ಯಕ್ರಮದ ಮೂಲಕ 25ನೇ ವರ್ಷದ ಸವಿನೆನಪಿಗೆ ಸಾಕ್ಷಿಯಾದರು. 1999ರಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದವರು. ಓದು ಮುಗಿದು ಉದ್ಯೋಗ, ಸಾಂಸಾರಿಕ ಬದುಕನ್ನು ಕಟ್ಟಿಕೊಂಡರು. ಆದರೆ ತಮ್ಮ ಕಾಲೇಜಿನ ಸ್ನೇಹಬಳಗವನ್ನು ಮರೆಯದೇ 25ನೇ ಸವಿನೆನಪನ್ನು ಹಂಚಿಕೊಳ್ಳಲು ಸುಂಟಿಕೊಪ್ಪದ ಕೂರ್ಗ್ ರಿವರ್ ಟರ್ನ್ ಹೋಮ್ ಸ್ಟೇನಲ್ಲಿ ಸೇರಿ ಕಾಲೇಜು ಜೀವನದ ಹಳೆಯ ನೆನಪುಗಳು, ಕೇಕ್ ಕತ್ತರಿಸುವುದು, ವಿವಿಧ ಕ್ರೀಡೆ, ಸೆಲ್ ಫೀ ಫೊಟೊ ಶೂಟ್, ನೆನಪಿನ ಕಾಣಿಕೆಯನ್ನು ಪರಸ್ಪರ ಹಂಚಿಕೊಂಡದ್ದು ವಿಶೇಷವಾಗಿತ್ತು. ಕ್ರೀಡೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಧ್ಯಮ ಹಾಗೂ ಸಂಘಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇದೇ ಬ್ಯಾಚ್ ನ ಹಳೆವಿದ್ಯಾರ್ಥಿ ಪುತ್ತರಿರ ಕರುಣ್ ಕಾಳಯ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ವಿರಾಜಪೇಟೆ ನ.25 NEWS DESK : ಹೆಗ್ಗಳ ಗ್ರಾಮದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಮಹಾಪೂಜೆಯು ಶ್ರದ್ಧಾಭಕ್ತಿಯಿಂದ ನಡೆಯಿತು. ಮುಂಜಾನೆಯಿಂದಲೇ ದೇವರಿಗೆ ವಿಶೇಷ ಪೂಜೆ, ಅಲಂಕಾರ ಸೇವೆ, ಹಾಲಿನ ಹಾಗೂ ಸೀಯಾಳ ಅಭಿಷೇಕ ಸೇವೆಗಳು ಸೇರಿದಂತೆ ವಿವಿಧ ದೇವಸ್ಥಾನದ ಅರ್ಚಕರಾದ ವೇಣುಗೋಪಾಲ್ ಭಟ್ ರವರು ಪೂಜಾ ಸೇವೆಯನ್ನು ನೆರವೇರಿಸಿದರು. ಅರ್ಚಕರು ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು ಜರುಗಿತು. ಭಕ್ತರು ಹರಕೆಯ ಹಸು ಮತ್ತು ಕರುವಿನ ಮೂರ್ತಿಗಳನ್ನು ಸಮರ್ಪಿಸಿದರು. ಮಹಾ ಮಂಗಳಾರತಿ ಸೇವೆಯ ಬಳಿಕ ನೆರೆದಿದ್ದ ಭಕ್ತಾಧಿಗಳಿಗೆ ಅನ್ನದಾನ ನೆರವೇರಿತು. ದೇವಾಲಯದ ಆಡಳಿತ ಮಂಡಳಿಯವರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಂತರ ಆಡಳಿತ ಮಂಡಳಿಯ ಸಭೆಯು ನಡೆಯಿತು.






