ಮಡಿಕೇರಿ ಮೇ 8 NEWS DESK : 66/11ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಫ್6 ಭಾಗಮಂಡಲ ಫೀಡರ್‍ನಲ್ಲಿ ಮೇ, 11 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಳೆಗಾಲದ ಮುಂಜಾಗೃತಾ ಫೀಡರ್ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ತಾಳತ್ಮನೆ, ಅಪ್ಪಂಗಳ, ಬೆಟ್ಟಗೇರಿ, ಚೇರಂಬಾಣೆ, ಚೆಟ್ಟಿಮಾನಿ, ಭಾಗಮಂಡಲ, ತಲಕಾವೇರಿ, ಅಯ್ಯಂಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
ಲೇಖಕ: admin
ಮಡಿಕೇರಿ ಮೇ 8 NEWS DESK : ಮೂರ್ನಾಡು 33/11 ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದ ಕೇಂದ್ರದಿಂದ ಹೊರಹೊಮ್ಮುವ ಎಫ್3 ಮೂರ್ನಾಡು ಫೀಡರ್‍ನಲ್ಲಿ ಮೇ, 10 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೊಡಗು ಜಾಲ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಮೂರ್ನಾಡು ಟೌನ್, ಮುತ್ತಾರ್‍ಮುಡಿ, ಕುಂಬಳದಾಳು, ಕಿಗ್ಗಾಲು, ಕಬಡಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
ಮಡಿಕೇರಿ ಮೇ 8 NEWS DESK : ಬ್ರಹ್ಮಕುಮಾರೀಸ್ ಮಡಿಕೇರಿ ಶಾಖೆ ವತಿಯಿಂದ ಮಾದಾಪುರ ಸಮೀಪದ ಜಂಬೂರು ಗ್ರಾಮದ ಸಮುದಾಯ ಭವನದಲ್ಲಿ 15 ವರ್ಷದೊಳಗಿನ ಮಕ್ಕಳಿಗಾಗಿ ಸರ್ವತೋಮುಖ ವ್ಯಕ್ತಿತ್ವ ವಿಕಸನ ಶಿಬಿರ ನಡೆಯಿತು. ಐದು ದಿನಗಳ ಕಾಲ ನಡೆದ ಶಿಬಿರದಲ್ಲಿ ಧ್ಯಾನ, ಪ್ರಾಣಾಯಾಮ, ಯೋಗಾಸನ ಹಾಗೂ ಮೌಲ್ಯಾಧಾರಿತ ಕ್ರೀಡೆ ನಡೆಯಿತು. ಶಿಬಿರವನ್ನು ಬ್ರಹ್ಮಕುಮಾರೀಸ್ ಮಡಿಕೇರಿ ಶಾಖೆಯ ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಗಾಯತ್ರೀಜಿ ಅವರು ಉದ್ಘಾಟಿಸಿ, ಆಶೀರ್ವಚನ ನೀಡಿ ಮಕ್ಕಳಿಗೆ ಉತ್ತಮ ಬದುಕಿನ ದಾರಿಯ ಕುರಿತು ಪ್ರೇರಣಾದಾಯಕ ಮಾತುಗಳನ್ನಾಡಿದರು. ಆಯುರ್ವೇದ ವೈದ್ಯರಾದ ಡಾ.ರಾಜಾರಾಮ್, ಡಾ.ಜ್ಯೋತಿ ಹಾಗೂ ಡಾ.ಪುರುಷೋತ್ತಮ್ ಅವರು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ವಿತರಿಸಿದರು. ಬಿ.ಕೆ. ಧನಲಕ್ಷ್ಮಿಯವರು ಮಕ್ಕಳಿಗೆ ರಾಜಯೋಗ ಧ್ಯಾನದ ಅಭ್ಯಾಸ ಮಾಡಿಸಿದರೆ, ಆಲಿಮಾ ಅವರು ಯೋಗಾಸನ ಹಾಗೂ ನೃತ್ಯದ ಮೂಲಕ ಮಕ್ಕಳನ್ನು ರಂಜಿಸಿದರು. ನೆನಪಿನ ಶಕ್ತಿ ಹೆಚ್ಚಿಸುವ ಆಟಗಳನ್ನು ದೀಕ್ಷಾ ನಡೆಸಿಕೊಟ್ಟರು. ಬಿಂದು, ಶರ್ಮಿಳ ಹಾಗೂ ರೇವತಿ ಅವರು ಮಕ್ಕಳಿಗೆ ಜೀವನ ಮೌಲ್ಯಗಳ ಕುರಿತು ಕಿವಿಮಾತು…
ಸೋಮವಾರಪೇಟೆ ಮೇ 8 NEWS DESK : ನಿವೇಶನ ರಹಿತ ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ, ಕರ್ನಾಟಕ ಬಹುಜನ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಕುಂಬೂರು ಗ್ರಾಮದ ಪೈಸಾರಿ ಜಾಗದಲ್ಲಿ ವಸತಿ ರಹಿತ ಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಧರಣಿ 8ನೇ ದಿನಕ್ಕೆ ಕಾಲಿಟ್ಟಿದೆ. 8ನೇ ದಿನವೂ ಯಾವುದೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಧರಣಿ ಸ್ಥಳಕ್ಕೆ ಭೇಟಿ ನೀಡಲಿಲ್ಲ. ಕಾರ್ಮಿಕ ಸಂಘಟನೆಯ ಅಧ್ಯಕ್ಷ ಕೆ.ಮೊಣ್ಣಪ್ಪ ನೇತೃತ್ವದಲ್ಲಿ ಪ್ರಮುಖರು ಮಡಿಕೇರಿಯಲ್ಲಿ ಉಪವಿಭಾಧಿಕಾರಿ ಅವರನ್ನು ಭೇಟಿಯಾಗಿ ಪೈಸಾರಿ ಜಾಗದ ಪಟ್ಟಿ ಹಾಗೂ ಸರ್ಕಾರಿ ಜಾಗ ಒತ್ತುವರಿಯ ಬಗ್ಗೆ ಮಾಹಿತಿ ನೀಡಿದರು. ಶನಿವಾರ ಸ್ಥಳಕ್ಕೆ ತಹಸೀಲ್ದಾರ್ ಅವರನ್ನು ಕಳುಹಿಸಿ, ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಮೊಣ್ಣಪ್ಪ ಹೇಳಿದರು. ಜಿಲ್ಲಾಡಳಿತ ಬಡ ಕಾರ್ಮಿಕರ ಸಮಸ್ಯೆಗೆ ಪರಿಹಾರ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಡಿಕೇರಿ ಮೇ 8 NEWS DESK : ಮಕ್ಕಳು ಬಾಲ್ಯಾವಸ್ಥೆಯಿಂದಲೇ ಶಿಸ್ತನ್ನು ಮೈಗೂಡಿಸಿಕೊಳ್ಳುವದರೊಂದಿಗೆ ದೇಶ ಭಕ್ತರಾಗಿ ಬಾಳಬೇಕು ಎಂದು ಮಾಜಿ ಕ್ಯಾಪ್ಟನ್, ಮ್ಯಾರಥಾನ್ ಒಟಗಾರ ಕಿಮ್ಮುಡಿರ ಶಿವಪ್ರಕಾಶ್ ಕಿವಿಮಾತು ಹೇಳಿದರು. ಮಡಿಕೇರಿಯ ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಶಂಕರ್ ಸ್ವಾಮಿ ಸ್ಮರಣಾರ್ಥ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳ ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಶಿಬಿರದಲ್ಲಿ ಕಲಿತದ್ದನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಶಿಬಿರ ಆಯೋಜನೆ ಮಾಡಿದವರಿಗೆ ಹಾಗೂ ತರಬೇತು ನೀಡಿದವರ ಶ್ರಮಕ್ಕೆ ಬೆಲೆ ಸಿಗಲಿದೆ. ಶಿಸ್ತನ್ನು ರೂಢಿಸಿಕೊಳ್ಳುವದರೊಂದಿಗೆ ಮಕ್ಕಳು ಈಗಿನಿಂದಲೇ ದೇಶ ಭಕ್ತರಾಗಿ ದೇಶಕ್ಕಾಗಿ ಬದುಕಬೇಕೆಂದು ಹೇಳಿದರು. ಮತ್ತೋರ್ವ ಅತಿಥಿ, ಅರಣ್ಯ ಇಲಾಖಾ ನಿವೃತ್ತ ಅಧಿಕಾರಿ ಕಿರುದಂಡ ಗಣೇಶ್ ಮಾತನಾಡಿ; ಮಕ್ಕಳಲ್ಲಿ ಶಿಸ್ತು ಅತಿ ಮುಖ್ಯ, ಶಿಬಿರದಲ್ಲಿ ಎಲ್ಲರೂ ಅದನ್ನೇ ಕಲಿಸುವದು. ಯಾವದೇ ಕೆಲಸದಲ್ಲಾಗಲೀ ಶಿಸ್ತು ಮುಖ್ಯ. ಈ ಶಿಬಿರದಲ್ಲಿ ಪ್ರತಿ ವರ್ಷ 100ರಿಂದ 125 ರಷ್ಟು ಮಕ್ಕಳು…
ವಿರಾಜಪೇಟೆ ಮೇ 8 NEWS DESK : ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವ ರೆಡ್ ಕ್ರಾಸ್ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಶ್ವ ರೆಡ್ ಕ್ರಾಸ್ ದಿನಾಚರಣೆಯ ಪ್ರಯುಕ್ತ ಈ ಬಾರಿಯ ಧ್ಯೇಯ ವಾಕ್ಯವಾದ ಮಾನವೀಯತೆಯಲ್ಲಿ ಏಕತೆ ಎಂಬ ವಿಚಾರದ ಕುರಿತು ಕಾಲೇಜಿನ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವೀಯತೆಯಲ್ಲಿ ಏಕತೆ ಎಂಬ ತತ್ವದಡಿಯಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆಯನ್ನು ಆಚರಿಸುತ್ತಿದ್ದು ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಆರೋಗ್ಯದ ಜಾಗೃತಿ ರೆಡ್ ಕ್ರಾಸ್ ನ ಪ್ರಮುಖ ಉದ್ದೇಶವಾಗಿದ್ದು, ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸ್ವಯಂ ಸೇವಕರ ಪಾತ್ರ ಅಪಾರವಾಗಿದೆ ಎಂದರು. ತುರ್ತು ಸಂದರ್ಭದಲ್ಲಿ ದೇಶಾದ್ಯಂತ ರೆಡ್ ಕ್ರಾಸ್ ಘಟಕದ ಸ್ವಯಂ ಸೇವಕರ ಸಾಮಾಜಿಕ ಕೊಡುಗೆಗಳನ್ನು ಸ್ಮರಿಸಿದರು. ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೆಸ್…
ಮಡಿಕೇರಿ ಮೇ 8 NEWS DESK : ಕುಶಾಲನಗರ, ಪಿರಿಯಾಪಟ್ಟಣ, ಅರಕಲಗೂಡು, ಹುಣಸೂರು, ಕೆ.ಆರ್ ನಗರ ಹಾಗೂ ಸಾಲಿಗ್ರಾಮ ತಾಲ್ಲೂಕುಗಳಿಗೆ ಕುಡಿಯುವ ನೀರು ಪೂರೈಕೆಗೆ ಮೇ 9 ರಿಂದ 13 ರವರೆಗೆ ದಿನವೊಂದಕ್ಕೆ ಜಲಾಶಯದಿಂದ ನದಿಗೆ 500 ಕ್ಯೂಸೆಕ್ ನೀರನ್ನು ಹರಿಸಲು ಹಾರಂಗಿ ಜಲಾಶಯ ಕುಡಿಯುವ ನೀರಿನ ಸಮಿತಿ ಸಭೆಯಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ. ಆದ್ದರಿಂದ ಹಾರಂಗಿ ಮತ್ತು ಕಾವೇರಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡು ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜನ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕುಶಾಲನಗರ ಹಾರಂಗಿ ಪುನರ್ವಸತಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಐ.ಕೆ.ಪುಟ್ಟಸ್ವಾಮಿ ಅವರು ಕೋರಿದ್ದಾರೆ.
ಮಡಿಕೇರಿ NEWS DESK ಮೇ 8 : ಕ್ಷೇತ್ರ ಪುನರ್ ವಿಂಗಡಣೆಯ ಸಂದರ್ಭ ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರವನ್ನು ರಚಿಸಬೇಕೆಂದು ಆಗ್ರಹಿಸಿ 48 ಗಂಟೆಗಳ ಕಾಲ ಅಹೋರಾತ್ರಿ ಸತ್ಯಾಗ್ರಹ ನಡೆಸಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಿರ್ಧರಿಸಿದೆ. ಮಡಿಕೇರಿಯ “ಕೊಡವ ಮಂದ್” ನಲ್ಲಿ ಮೇ 12 ರಂದು ಬೆಳಿಗ್ಗೆ 10.30 ಗಂಟೆಯಿAದ ಮೇ 14 ರಂದು ಬೆಳಿಗ್ಗೆ 10.30 ರವರೆಗೆ ಸತ್ಯಾಗ್ರಹ ನಡೆಸಲಾಗುವುದು. ಸತ್ಯಾಗ್ರಹದಲ್ಲಿ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿ, ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರ ನೀಡಬೇಕೆಂದು ಆಗ್ರಹಿಸಿರುವ ಮನವಿ ಪತ್ರವನ್ನು ಭಾರತದ ರಾಷ್ಟಪತಿಗಳು, ಪ್ರಧಾನಮಂತ್ರಿಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊಡವರಿಗೆ ಮಾತ್ರ ಮೀಸಲಾದ “ವಿಶೇಷ ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರ”ಗಳನ್ನು ನೀಡಬೇಕು ಅಥವಾ ಸಿಕ್ಕಿಂನ “ಸಂಘ” ಕ್ಷೇತ್ರದ ಮಾದರಿಯಲ್ಲಿ ಕೊಡವ ಕ್ಷೇತ್ರಗಳನ್ನು ಸೃಷ್ಟಿಸಬೇಕು. ಶೇ.33ರ ಮಹಿಳಾ ಮೀಸಲಾತಿಯೊಳಗೆ ಕೊಡವ ಮಹಿಳೆಯರಿಗೆ ಒಳ…
ಸೋಮವಾರಪೇಟೆ NEWS DESK ಮೇ 8 : : ತಾಲ್ಲೂಕಿನ ಗೋಣಿಮರೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಗ್ರಾಮದೇವತೆ ಬಂಡಿಯಮ್ಮ ದೇವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳ ಕಾಲ ಶ್ರದ್ದಾಭಕ್ತಿಯಿಂದ ನೆರವೇರಿತು. ದೇವತಾ ವಿಗ್ರಹ ಪ್ರತಿಪ್ಠಾಪನೆಯ ಬಳಿಕ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ಮಾಡಿದ ಸದಾಶಿವ ಶ್ರೀಗಳು, ವಿಜ್ಞಾನದ ಜೊತೆ ಧರ್ಮ ಮೇಳೈಸಿರುವ ಹಿಂದೂ ಧರ್ಮ ಜಗತ್ತಿನ ಶ್ರೇಷ್ಠ ಧರ್ಮ. ಮನುಷ್ಯ ಅಂತರಂಗವನ್ನು ಶುಚಿಯಾಗಿ ಇಟ್ಟುಕೊಳ್ಳುವ ಮೂಲಕ ಮಾನಸಿಕ ನೆಮ್ಮದಿ ಪಡೆಯಬೇಕಿದೆ. ಸಜ್ಜನರ ಸಂಘ, ಸದ್ವಿಚಾರಗಳ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಿದೆ. ಪೋಷಕರಲ್ಲಿ ಉತ್ತಮ ಸಂಸ್ಕಾರಗಳಿದ್ದರೆ ಮಕ್ಕಳಲ್ಲೂ ಅದು ಅನೂಚಾನವಾಗಿ ಇರುತ್ತದೆ. ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರಗಳು ಅತಿ ಮುಖ್ಯ ಎಂದರು. ದೇವಾಲಯ ನಿರ್ಮಾಣಕ್ಕಾಗಿ ಶಾಸಕ ಡಾ.ಮಂತರಗೌಡರು ವಿಶೇಷ ಆಸಕ್ತಿ ವಹಿಸಿ ಒಂದು ಲಕ್ಷ ರೂ ಹಾಗೂ ಗ್ರಾಮಸ್ಥರ ಸಹಕಾರವನ್ನು ದೇವತಾ ಸಮಿತಿ ಅಧ್ಯಕ್ಷರಾದ ಸಿದ್ದಪ್ಪ, ಉಪಾಧ್ಯಕ್ಷ ಧರ್ಮಪ್ಪ ಹಾಗೂ ಕಾರ್ಯದರ್ಶಿ ಮೋಹನ್ ಸ್ಮರಿಸಿದರು. ನಿರ್ದೇಶಕರಾದ ಕೆಂಪರಾಜು, ಬಸವಣ್ಣ, ಪುಟ್ಟಪ್ಪ, ತಾರಣ್ಣಯ್ಯ, ರಮೇಶ್, ಮಂಜುನಾಥ ಮೊದಲಾದವರಿದ್ದರು. ಅರ್ಚಕ ಅಣ್ಣಯ್ಯ…
ಮಡಿಕೇರಿ NEWS DESK ಮೇ 8 : ಕೊಡ್ಲಿಪೇಟೆ ಬಳಿಯ ಕೋರಗಲ್ಲು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ವಿಗ್ರಹದ ಪುನರ್ ಪ್ರತಿಷ್ಠಾಪನೆ ಹಾಗೂ ದೇವಾಲಯದ ಉದ್ಘಾಟನೆ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ದೇವಾಲಯಗಳು ಭಾರತೀಯ ನಾಗರೀಕತೆಯ ಸಾಂಸ್ಕ್ರತಿಕವಾದ ಕುರುಹುಗಳು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶದಲ್ಲಿ ಸರ್ವರ ಸಹಭಾಗಿತ್ವ ಶ್ಲಾಘನೀಯವಾದುದು. ಮನುಷ್ಯನಿಂದಾಗಿರುವ ಪರಿಸರದ ಕಲುಷಿತ ವಾತಾವರಣವೇ ಇಂದಿನ ಹವಾಮಾನಗಳ ವೈರುಧ್ಯಗಳಿಗೆ ಕಾರಣವಾಗಿದೆ. ಹಾಗಾಗಿ ಇನ್ನಾದರೂ ಪರಿಸರವನ್ನು ಸಂರಕ್ಷಿಸುವ ಪಣ ತೊಡಬೇಕಿದೆ ಎಂದು ಶ್ರೀಗಳು ಕರೆಕೊಟ್ಟರು. ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಆಶೀರ್ವಚನದಲ್ಲಿ ಹಳ್ಳಿಗಳು ನಗರಗಳಾಗುತ್ತಿದ್ದು ಮೂಲ ಸಂಸ್ಕೃತಿ ಹಾಗೂ ಸಂಸ್ಕಾರಗಳು ನಾಶವಾಗದಂತೆ ನೋಡಿಕೊಳ್ಳಬೇಕಿದೆ. ಮಕ್ಕಳಿಗೆ ಇಂದು ಸಂಸ್ಕಾರ ತುಂಬಿದ ಶಿಕ್ಷಣ ತುಂಬಾ ಅಗತ್ಯವಿದೆ. ತಾಯಂದಿರು ಮನೆಗಳಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸಲು ಕರೆಕೊಟ್ಟರು. ಸಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಜಿಲ್ಲಾ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ ಮಾತನಾಡಿದರು. ಗ್ರಾಮದ ದೇವಾಲಯ ಸಮಿತಿ ಅಧ್ಯಕ್ಷ ಕೆ.ಪಿ. ಮಲ್ಲಿಕಾರ್ಜುನ,…






