ಮಡಿಕೇರಿ NEWS DESK ಅ.7 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀದಂಡಿನ ಮಾರಿಯಮ್ಮ ದೇವಿಗೆ ದಸರಾದ ಐದನೇ ದಿನವಾದ ಇಂದು ನಿಂಬೆ ಹಣ್ಣಿನ ಅಲಂಕಾರ ಮಾಡಲಾಯಿತು. ನೂರಾರು ಭಕ್ತರು ಪೂಜೆ ಸಲ್ಲಿಸಿ ವಿಶೇಷ ಅಲಂಕಾರವನ್ನು ವೀಕ್ಷಿಸಿದರು. ನವರಾತ್ರಿಯ ಪ್ರಯುಕ್ತ ಶ್ರೀದಂಡಿನ ಮಾರಿಯಮ್ಮ ದೇವಾಲಯದಲ್ಲಿ ಪ್ರತಿದಿನ ವಿಶೇಷ ಅಲಂಕಾರ ಸೇವೆ ಮತ್ತು ವಿಶೇಷ ಪೂಜೆ ನಡೆಯುತ್ತಿದೆ. ಅ.8 ರಂದು ಮಹಾಲಕ್ಷ್ಮಿ ಅಲಂಕಾರ ನಡೆಯಲಿದೆ.
ಲೇಖಕ: admin
ಸಿದ್ದಾಪುರ ಅ.7 NEWS DESK : ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಿದ್ದಾಪುರದಲ್ಲಿ 31ನೇ ವರ್ಷದ ಆಯುಧ ಪೂಜೆಯನ್ನು ಈ ಬಾರಿ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಲು ನಿರ್ಧರಿಸಲಾಗಿದ್ದು, ಸಿದ್ದತೆ ನಡೆಯುತ್ತಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸೂದನ ಸತೀಶ್ ತಿಳಿಸಿದರು. ನಗರದ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.11 ರಂದು ಸಿದ್ದಾಪುರ ಬಸ್ ನಿಲ್ದಾಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಮಕ್ಕಳ ಸೈಕಲ್ ನಿಧಾನ ಸ್ಪರ್ಧೆ, 16ವರ್ಷ ಮೇಲ್ಪಟ್ಟವರಿಗೆ ಯುವಕರಿಗೆ ರಸ್ತೆ ಓಟ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. ಆಯುಧ ಪೂಜೆ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಮಾತನಾಡಿ. ಸಾಂಸ್ಕೃತಿಕ ಕಾರ್ಯಕ್ರಮವು ನಾಲ್ಕು ವಿಭಾಗಗಳಲ್ಲಿ ನಡೆಯುತ್ತಿದ್ದು, ಒಂದರಿಂದ ಏಳನೇ ತರಗತಿವರೆಗೆ ಭರತನಾಟ್ಯ, ಜಾನಪದ ನೃತ್ಯ ,ಸಾಮೂಹಿಕ ನೃತ್ಯ, ಪ್ರೌಢಶಾಲಾ ವಿಭಾಗದಲ್ಲಿ ಭರತನಾಟ್ಯ, ಜಾನಪದ ನೃತ್ಯ, ಸಾಮೂಹಿಕ ನೃತ್ಯ, ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಸಾಮೂಹಿಕ ನೃತ್ಯ, ಜಾನಪದ ನೃತ್ಯ , ನೃತ್ಯಶಾಲಾ ವಿಭಾಗದಲ್ಲಿ ಸಾಮೂಹಿಕ…
ನಾಪೋಕ್ಲು ಅ.7 NEWS DESK : ಬೆಂಗಳೂರು ಸೂರ್ಯ ಫೌಂಡೇಶನ್ ಮತ್ತು ಬೆಂಗಳೂರು ಸ್ಪಾರ್ಕ್ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಜಂಟಿ ಆಶ್ರಯದಲ್ಲಿ 2024-25ನೇ ಶೈಕ್ಷಣಿಕ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಮುಖ್ಯಶಿಕ್ಷಕರಿಗೆ ನೀಡುವ “ಶಿಕ್ಷಣ ಪ್ರಕಾಶ” ಪ್ರಶಸ್ತಿಗೆ ಕೊಡಗು ಜಿಲ್ಲೆಯಿಂದ ಮಡಿಕೇರಿ ತಾಲೂಕಿನ ಚೆಂಬು ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಸೋಮಣ್ಣ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಅ.15 ರಂದು ಬೆಂಗಳೂರಿನಲ್ಲಿ ಜರುಗಲಿದೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ಶಿಕ್ಷಕ ವೃಂದ, ಪೋಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವರದಿ : ದುಗ್ಗಳ ಸದಾನಂದ.
ನಾಪೋಕ್ಲು ಅ.7 NEWS DESK : ಇಂದಿರಾ ನಗರದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಎ.ಎಸ್.ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು. ಇಂದಿರಾನಗರ ವಿವೇಕಾನಂದ ಯುವಕ ಸಂಘದ ಪ್ರಮುಖ ಜಲೇಂದ್ರ ಮಾತನಾಡಿ, ರೂ.10 ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಗೊಳ್ಳಲಿದ್ದು, ಇಂದಿರಾನಗರದ ವಿವೇಕಾನಂದ ಯುವಕ ಸಂಘದ ಪದಾಧಿಕಾರಿಗಳು ಸಮುದಾಯ ಭವನದ ಅವಶ್ಯಕತೆ ಇದೆ ಎಂದು ಶಾಸಕ ಪೊನ್ನಣ ಅವರ ಗಮನ ಸೆಳೆದಿದ್ದರು. ಶಾಸಕರ ಮುತುವರ್ಜಿಯಿಂದ ಸಮುದಾಯ ಭವನಕ್ಕೆ ಅನುದಾನ ದೊರೆತಿದೆ. ನಾಡಿಗೆ ಶಾಸಕರಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನೆರವೇರಲಿ ಎಂದರು. ಸಂಘದ ಪರವಾಗಿ ಶಾಸಕಾರಿಗೆ ಹೂವಿನ ಮಾಲೆ ಹಾಕಿ ಅಭಿನಂದಿಸಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಕೆಡಿಪಿ ಸದಸ್ಯ ಎಂ.ಹೆಚ್.ಅಬ್ದುಲ್ ರಹಿಮಾನ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಕೊಡಗು ಯೂಥ್ ಕಾಂಗ್ರೆಸ್ ಉಪಾಧ್ಯಕ್ಷ ವೈ.ಸಿ.ಕತ್ತನಿರ, ಕೊಡಗು ಜಿಲ್ಲಾ ಕಾರ್ಮಿಕ ಸಂಘದ ಉಪಾಧ್ಯಕ್ಷ ಪರವಂಡ ಮಿರ್ಶಾದ್, ಕುಲ್ಲೇಟಿರ…
ಸುಂಟಿಕೊಪ್ಪ ಅ.7 NEWS DESK : ಗುಡ್ಡೆಹೊಸೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪಂಚಾಯಿತಿ ಸದಸ್ಯ ಹಾಗೂ ಗುಡ್ಡೆಹೊಸೂರು ಹೋಟೆಲ್ ಉದ್ಯಮಿ ಕುಡೆಕಲ್ ನಿತ್ಯಾನಂದ ಉಚಿತವಾಗಿ ಟಿಶರ್ಟ್‍ಗಳನ್ನು ವಿತರಿಸಿದರು. ಕಳೆದ 3 ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಖಾಸಗಿ ಶಾಲೆಯ ಮಕ್ಕಳಂತೆ ಕಾಣಬೇಕೆಂಬ ಹಂಬಲದೊಂದಿಗೆ ಗಡ್ಡೆಹೊಸೂರು ಹೋಟೆಲ್ ಉದ್ಯಮಿ ನಿತ್ಯಾನಂದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 72 ಮಕ್ಕಳಿಗೆ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಟಿಶರ್ಟ್ ವಿತರಿಸಿದರು. ಬಸವನಹಳ್ಳಿ ಲ್ಯಾಂಪ್ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಅನಿಕುಮಾರ್ 50 ಮಕ್ಕಳಿಗೆ ಐಡಿ ಕಾರ್ಡ್‍ಗಳನ್ನು ವಿತರಿಸಿದರು. ಶಾಲಾ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಹಾಗೂ ಮಾಜಿ ಪ್ರದಾನಮಂತ್ರಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಅಂಗವಾಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಮಕ್ಕಳಿಂದ ಗುಡ್ಡೆಹೊಸೂರಿನ ಪ್ರಮುಖ ಬೀದಿಗಳಲ್ಲಿ ಗಾಂಧಿಜಿಯ ಸ್ವಚ್ಛ ಭಾರತ ಕನಸಿನ ಸಂದೇಶ ಸಾರುವ ಕಾಲ್ನಡಿಗೆ ಜಾಥಾ ಅಭಿಯಾನ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್. ನಾಗೇಂದ್ರ ವಹಿಸಿದ್ದರು.…
ಸುಂಟಿಕೊಪ್ಪ ಅ.7 NEWS DESK : ಸುಂಟಿಕೊಪ್ಪ ವಾಹನ ಚಾಲಕರ ಸಂಘದ 54ನೇ ವರ್ಷದ ಆಯುಧಪೂಜಾ ಸಮಾರಂಭದ ಅಂಗವಾಗಿ ಸಂಘದ ವತಿಯಿಂದ ಕುಶಾಲನಗರ ವಿಸನ್ಸ್‍ಸ್ಪ್ರಿಂಗ್ ಹಾಗೂ ಮಡಿಕೇರಿಯ ಆಶೋಧಯ ಸಮಿತಿ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ವಾಹನ ಚಾಲಕರ ಸಂಘದ ಸಾರ್ವಜನಿಕ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಶಿಬಿರವನ್ನು ವಾಹನಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ ಮಾತನಾಡಿದ ಅವರು ಗ್ರಾಮೀಣ ಬಡ ಜನರಿಗೆ ಸದುಪಯೋಗಗೊಳಿಸುವ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ 130ಕ್ಕೂ ಹೆಚ್ಚು ಮಂದಿ ಕಣ್ಣಿನ ತಪಾಸಣೆ ನಡೆಸಿಕೊಂಡಿದ್ದು, 80 ಮಂದಿಗೆ ಕನ್ನಡಕ ಹಾಗೂ 7 ಮಂದಿಗೆ ಕಣ್ಣಿನ ಪೊರೆ ಚಿಕಿತ್ಸೆಗೆಶಿಪಾರಸ್ಸು ಮಾಡಲಾಯಿತು. ಶಿಬಿರದಲ್ಲಿ ರಕ್ತದ ಒತ್ತಡ, ಹೆಚ್‍ಐವಿ, ಸಿಫಿಲಿಸ್ ಕಾಯಿಲೆಗಳ ತಪಾಸಣೆ ನಡೆಸಲಾಯಿತು. ತಜ್ಞ ವೈದ್ಯರಾದ ಪುಷ್ಪೆಂದ್ರಯಾಧವ್, ಪುಷ್ಪೇಂದ್ರ ಮಿಶ್ರ ಹಾಗೂ ಸಿಬ್ಬಂದಿಗಳು ತಪಾಣೆ ನಡೆಸಿದರು. ಈ ಸಂದರ್ಭ ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ರಕ್ಷಿತ್, ರಿಜ್ವಾನ್, ಬಸಪ್ಪ, ಶಕ್ತಿ…
ಸುಂಟಿಕೊಪ್ಪ ಅ.7 NEWS DESK : ನವರಾತ್ರಿ ಉತ್ಸವದ ಅಂಗವಾಗಿ ಶ್ರೀಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದಲ್ಲಿ 4ನೇ ದಿನ ಭಸ್ಮದ ಅಲಂಕಾರದಲ್ಲಿ ಗಮನ ಸೆಳೆಯಿತು. ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ್ ಉಡುಪ ಅವರ ನೇತೃತ್ವದಲ್ಲಿ ದೇವಿಗೆ ನೈವೇದ್ಯಪೂಜೆ, ಮಲ್ಲಿಗೆ ಹೂವಿನ ಪೂಜೆ, ಪುಷ್ಪರ್ಚನೆ, ಗಂಧದ ಅಭಿಷೇಕ ನಡೆಯಿತು. ಸಂಜೆ ವಿಶೇಷ ಪೂಜೆ ನೆರವೇರಿತು. ರಾತ್ರಿ ಮಹಾಪೂಜೆ, ಆರತಿ ಪೂಜೆ, ತುಪ್ಪದ ದೀಪ ಆರಾಧನೆ ನಡೆಯಿತು. ಹೋಬಳಿ ವ್ಯಾಪ್ತಿಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ವಿರಾಜಪೇಟೆ ಅ.7 NEWS DESK : ಸುಗಮ ಸಂಗೀತ 20ನೇ ಶತಮಾನದಲ್ಲಿ ಆರಂಭಗೊಂಡಿದ್ದು, ಇಂದು ವಿಶ್ವವ್ಯಾಪಿ ಯುವ ವರ್ಗದಿಂದ ಮುಪ್ಪಿನ ವರೆಗೂ ಮುದ ನೀಡುವ ಸಂಗೀತ ಪ್ರಕಾರವಾಗಿದೆ. ಸುಗಮ ಸಂಗೀತವನ್ನು ಉಳಿಸಿ ಬೆಳಸಬೇಕು ಎಂದು ನಿವೃತ್ತ ವೈದ್ಯಾಧಿಕಾರಿ ಮತ್ತು ಖ್ಯಾತ ಗಝಲ್ ಕವಿಗಳಾದ ಡಾ.ಶ್ರೀ ಶೈಲ ಮಾದಣ್ಣವರ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಂಗಳೂರು ಪ್ರಣವ ಸಂಗೀತ ಶಾಲೆ ವತಿಯಿಂದ ವಿರಾಜಪೇಟೆ ನಗರದ ಶ್ರೀ ರಾಜರಾಜೇಶ್ವರಿ ಸಭಾಂಗಣದಲ್ಲಿ ನಡೆದ ಪ್ರಥಮ ವಾರ್ಷಿಕ ಸಂಭ್ರಮಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪಾಶ್ಚಾತ್ಯ ಸಂಗೀತಕ್ಕೆ ಮಾರು ಹೋಗದೆ ನಾಡಿನ ದಿವ್ಯ ಪರಂಪರೆಯ ಸಂಸ್ಕೃತಿಗಳ ಭಾಗವಾದ ಕರ್ನಾಟಕ ಸಂಗೀತ, ಜನಪದ ಮತ್ತು ಸುಗಮ ಸಂಗೀತವನ್ನು ಅಭ್ಯಾಸ ಮಾಡಿ ಮುಂದಿನ ತಲೆಮಾರಿಗೂ ಮುಂದುವರೆಸುವ ಅನಿವಾರ್ಯ ಸಮಾಜಕ್ಕಿದೆ. ಯುವ ಜನತೆ ಸೇರಿದಂತೆ ಮುಪ್ಪಿನಲ್ಲಿರುವ ವ್ಯಕ್ತಿಗಳಿಗೂ ಮನಸ್ಸಿಗೆ ಮುದ ನೀಡುವ ಸಂಗೀತ ಸುಗಮ ಸಂಗೀತವಾಗಿದ್ದು, ಜನಪದ ಸಾಹಿತ್ಯಕ್ಕೆ ಹೊಸ ಲೇಪನ ಮಾಡಿ, ಹಾಡಿನ ಮೂಲಕ ಮೋಡಿ ಮಾಡುವ ಶಕ್ತಿ ಸುಗಮ…
ಮಡಿಕೇರಿ NEWS DESK ಅ.6 : ಮಡಿಕೇರಿ ದಸರಾ ಸಮಿತಿ ಮತ್ತು ಕ್ರೀಡಾ ಸಮಿತಿ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾಭವನದಲ್ಲಿ ಪತ್ರಕರ್ತರಿಗೆ ಭಾನುವಾರ ಟಿಟಿ, ಕೇರಂ ಹಾಗೂ ಚೆಸ್ ಸ್ಪರ್ಧೆ ನಡೆಯಿತು. ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಮಡಿಕೇರಿ ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ ಕರ್ಕೆರ ಮಾತನಾಡಿ, ಈಗಾಗಲೇ ತಾಲೂಕು ಮಟ್ಟದ ರಸ್ತೆ ಓಟ, ಮುಕ್ತ ಫುಟ್ಬಾಲ್ ಪಂದ್ಯಾಟ ನಡೆದಿದೆ. ಕೆಲವು ಸ್ಪರ್ಧೆಗಳು ಭಾನುವಾರ ನಡೆದಿದೆ. ಅದೇ ರೀತಿ ಪತ್ರಕರ್ತರಿಗಾಗಿ ವಿವಿದ ಕ್ರೀಡಾಕೂಟ ಆಯೋಜಿಸಲಾಗಿದೆ. ಅ.9 ರಂದು ಚೆಸ್ ಮತ್ತು ಕೇರಂ ಪಂದ್ಯಾಟ ನಡೆಯಲಿದೆ. ಅ.10 ರಂದು ಮ್ಯಾಟ್ ಕಬಡ್ಡಿ ನಡೆಯಲಿದೆ. ಕ್ರೀಡಾಕೂಟಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ದಸರಾ ನಾಡ ಹಬ್ಬ. ಇಂತಹ ಸಂದರ್ಭ ಎಲ್ಲರನ್ನೂ ಒಗ್ಗೂಡಿಸಲು ದಸರಾ ಕ್ರೀಡಾ ಸಮಿತಿ ವತಿಯಿಂದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಒತ್ತಡದಲ್ಲಿರುವ ಪತ್ರಕರ್ತರಿಗೆ ಇಂದು ಕೊಂಚ ವಿರಾಮ…
ಮಡಿಕೇರಿ NEWS DESK ಅ.6 : ವಿಶ್ವದಲ್ಲಿಯೇ ವಿಶಿಷ್ಟವಾಗಿರುವ ಕೊಡವರ ಆಚಾರ ವಿಚಾರ ಹಾಗೂ ಸಂಸ್ಕೃತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕುಟ್ಟಂಡ ಪ್ರಮೋದ್ ಮುತ್ತಪ್ಪ ತಿಳಿಸಿದ್ದಾರೆ. ಕೂಡಿಗೆಯ ಕೊಡವ ಕೂಟದ ವತಿಯಿಂದ ಸ್ಥಳೀಯ ರೈತ ಸಹಕಾರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕೈಲ್ದ್ ಪೊಳ್ದ್ ಸಂತೋಷ ಕೂಟ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಕೊಡವ ಕೂಟಕ್ಕೆ ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದರು. ಕೊಡಗ ಕೂಟದ ಅಧ್ಯಕ್ಷ ವಾಂಚೀರ ಮನು ನಂಜುಂಡ ಮಾತನಾಡಿ, ಕೊಡವರ ಜಮ್ಮಾ ಆಸ್ತಿಯನ್ನು ಪರಾಭಾರೆ ಮಾಡದೆ ಜೋಪಾನವಾಗಿ ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಯುವ ಸಮುದಾಯ ಕೊಡವ ಪರಂಪರೆ ಹಾಗೂ ಸಂಸ್ಕೃತಿಯ ವಾರಸುದಾರರಾಗಬೇಕು. ಪೋಷಕರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಕೊಡವ ಕೂಟದ ಕಾರ್ಯದರ್ಶಿ ಮುಂಡಂಡ ಸತೀಶ್, ಖಜಾಂಚಿ ದೇಯಂಡ ಪೊನ್ನಪ್ಪ, ನಿರ್ದೇಶಕರಾದ ಕೊಳುವಂಡ…






