ಮಡಿಕೇರಿ NEWS DESK ಮಾ.23 : ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ತಿರಸ್ಕರಿಸಿ ಒಳಮೀಸಲಾತಿ ರಹಿತ ಹಳೆ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ಮಾ.25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗುವುದು ಎಂದು ಒಕ್ಕೂಟದ ಜಿಲ್ಲಾ ಸಂಚಾಲಕ ಮೋಹನ್ ಮೌರ್ಯ ಸಿ.ಜೆ ಹಾಗೂ ಮಡಿಕೇರಿ ಸಂಚಾಲಕ ಎಸ್.ಸಿ.ಸತೀಶ್ ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಸಮಾವೇಶದಲ್ಲಿ ಕೊಡಗು ಜಿಲ್ಲೆಯಿಂದ 500 ಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಅವೈಜ್ಞಾನಿಕ, ಅಪೂರ್ಣ, ದೋಷಪೂರಿತ ಹಾಗೂ ಪಕ್ಷಪಾತದಿಂದ ಕೂಡಿರುವ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಆಯೋಗದ ವರದಿಯನ್ನು ರಾಜ್ಯ ಸರಕಾರ ತಿರಸ್ಕರಿಸಬೇಕು. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಕುಟುಂಬಗಳ ಸಮೀಕ್ಷೆಯ ಅಂಕಿಅoಶಗಳೊoದಿಗೆ ನ್ಯಾಯಮೂರ್ತಿ ನಾಗಮೋಹನ್‌ದಾಸ್ ರವರ ಆಯೋಗದ ಅಂಕಿ ಅಂಶಗಳನ್ನು ಹೋಲಿಕೆ ಮಾಡಬೇಕು. ವ್ಯತ್ಯಾಸಗಳು ಕಂಡುಬoದಲ್ಲಿ ಪರಿಶಿಷ್ಟ ಜಾತಿಯ ಎಲ್ಲಾ ಕುಟುಂಬಗಳ ಸಮೀಕ್ಷೆಯನ್ನು ಮತ್ತೊಮ್ಮೆ…
ಲೇಖಕ: admin
ಮಡಿಕೇರಿ NEWS DESK ಮಾ.23 : ಮಡಿಕೇರಿ ನಗರ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿ ದೇಚೂರಿನ ಕೋಚನ ಚೇತನ್ ಆಯ್ಕೆಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿರುವ ಕೋಚನ ಚೇತನ್ ಅವರನ್ನು ಆಯ್ಕೆ ಮಾಡಿರುವ ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಅವರು ಪಕ್ಷ ಸಂಘಟನೆಗಾಗಿ ಸೂಚಿಸಿದ್ದಾರೆ.
ಮಡಿಕೇರಿ NEWS DESK ಮಾ.22 : ಕಾನಡ್ಕ ಕುಟುಂಬದ ವತಿಯಿಂದ 12ನೇ ವರ್ಷದ ಯುಗಾದಿ ಕ್ರೀಡಾಕೂಟ ಸಂಭ್ರಮದಿoದ ನಡೆಯಿತು. ಮರಗೋಡಿನ ಕಾನಡ್ಕ ಐನ್‌ಮನೆಯಲ್ಲಿ ನಡೆದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿಗಳು ಹಾಗೂ ಸಮಾಜಸೇವಕ ಚೆರಿಯಮನೆ ರತ್ನಕುಮಾರ್ ಅವರು ಯುಗಾದಿ ಹಬ್ಬವು ಹಿಂದೂಗಳಿಗೆ ಹೊಸ ವರ್ಷದ ಪವಿತ್ರ ದಿನವಾಗಿದೆ, ಈ ಶುಭ ಸಂದರ್ಭದಲ್ಲಿ ದಿಟ್ಟ ಗುರಿಯನ್ನು ಹೊಂದಿ ಹೊಸ ಗುರಿಗಳ ಸಾಧನೆಗೆ ನಾವುಗಳು ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮರಗೋಡಿನ ವಿವೇಕಾನಂದ ಯುವಕ ಸಂಘದ ಮಾಜಿ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಬಡುವಂಡ್ರ ಲಕ್ಷ್ಮೀಪತಿ ಅವರು ಹಬ್ಬಗಳ ಸಂದರ್ಭ ಕ್ರೀಡಾಕೂಟಗಳನ್ನು ಆಯೋಜಿಸಿದರೆ ಹಬ್ಬದ ಮೆರುಗು ಮತ್ತಷ್ಟು ಹೆಚ್ಚಾಗುತ್ತದೆ. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಹೆಚ್ಚಾಗುತ್ತದೆ, ಅಲ್ಲದೆ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಕಾನಡ್ಕ ಕುಟುಂಬದ ಹಿರಿಯರಾದ ಉಲ್ಲಾಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಕಾನಡ್ಕ ದೇವಯ್ಯ ಉಪಸ್ಥಿತರಿದ್ದರು. ವಿಶ್ಮ, ಪೂಜಾ, ಸಂಧ್ಯಾ ಹಾಗೂ ಲಕ್ಷಿತ ಪ್ರಾರ್ಥಿಸಿದರು,…
ಮಡಿಕೇರಿ NEWS DESK ಮಾ.22 : ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಸಮೀರ್ ಎಂ. ಮಡಿಕೇರಿ ಅವರಿಗೆ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ) ಜಾನಪದ ಸಂಭ್ರಮ-2026 “ರತ್ನ ಶ್ರೀ” ರಾಜ್ಯಮಟ್ಟದ ಪ್ರಶಸ್ತಿಯನ್ನು ಇಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರೋಗಿಗಳಿಗೆ ರಕ್ತದ ವ್ಯವಸ್ಥೆ ಮಾಡುವುದು ಹಾಗೂ ಹಲವಾರು ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಮೀರ್ ಅವರ ಸಮಾಜಮುಖಿ ಕಾರ್ಯವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಸ್ವೀಕಾರದ ಸಂದರ್ಭ ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ ಸಂಸ್ಥೆಯ ಉಪಾಧ್ಯಕ್ಷ ಆಸಿಫ್, ಪ್ರಮುಖರಾದ ಜಮೀರ್, ಸಾಹಿಲ್ ಹಾಗೂ ಇಸಾಕ್ ಉಪಸ್ಥಿತರಿದ್ದರು.
ಮಡಿಕೇರಿ NEWS DESK ಮಾ.22 : ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಸುತ್ತಮುತ್ತಲ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ದುಬಾರೆ ಹಾಗೂ ಮತ್ತಿಗೋಡು ಶಿಬಿರದ ಸಾಕಾನೆಗಳಾದ ಅಭಿಮನ್ಯು, ಮಹೇಂದ್ರ, ರಂಜನ್, ಭೀಮಾ, ಸುಗ್ರೀವ ಹಾಗೂ ಹರ್ಷನ ಸಹಕಾರದಿಂದ ಸತತ 5 ಗಂಟೆಗಳ ಕಾರ್ಯಾಚರಣೆಯ ಬಳಿಕ ಕಾಡಾನೆ ಸೆರೆಯಾಯಿತು. ಚೆಂಬೆಬೆಳ್ಳೂರು ಗ್ರಾಮದ ಕಾಫಿ ತೋಟವೊಂದರ ಸಮೀಪ ಕಂಡುಬoದ ಕಾಡಾನೆಗೆ ವನ್ಯಜೀವಿ ವೈದ್ಯಾಧಿಕಾರಿ ಡಾ.ರಮೇಶ್ ಹಾಗೂ ಕುಶಾಲನಗರ ಉಪ ಅರಣ್ಯಾಧಿಕಾರಿ ಶಾರ್ಪ್ ಶೂಟರ್ ಕನ್ನಂಡ ರಂಜನ್ ಅವರು ಬಂದೂಕಿನ ಮೂಲಕ ಅರವಳಿಕೆ ನೀಡಿದರು. ಸರೆಯಾದ ಕಾಡಾನೆಯನ್ನು ಸಾಕಾನೆಗಳ ಸಹಕಾರದಿಂದ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಚೆoಬೆಬೆಳ್ಳೂರು, ದೇವಣಗೇರಿ, ಬೆಳ್ಳರಿಮಾಡು, ಕುಕ್ಲೂರು, ಪೊದಕೋಟೆ, ಐಮಂಗಲ, ಮೈತಾಡಿ, ಕದನೂರು, ಬಿಳುಗುಂದ, ಹಾಲುಗುಂದ ಹಾಗೂ ಅಮ್ಮತಿ ಸುತ್ತಮುತ್ತಲ ಗ್ರಾಮಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆ ತೋಟಗಳಲ್ಲಿ ದಾಂಧಲೆ ನಡೆಸಿ ಕೃಷಿ ಫಸಲು ನಷ್ಟಕ್ಕೆ ಕಾರಣವಾಗಿತ್ತು ಮತ್ತು ಸ್ಥಳೀಯರ ಮೇಲೆ ದಾಳಿಗೂ…
ಮಡಿಕೇರಿ NEWS DESK ಮಾ.22 : ಕಳೆದ 7 ವರ್ಷಗಳಿಂದ “ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ” ಎಂಬ ಧ್ಯೇಯದೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಡಿಕೇರಿ ತಾಲ್ಲೂಕಿನ ಹಾಕತ್ತೂರು ಗ್ರಾಮದ ಸಾಮಾಜಿಕ ಸೇವಾ ಸಂಸ್ಥೆ “ಯುವ ಸ್ಪಂದನ ಯೂತ್ ಫೌಂಡೇಶನ್” ನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಸುನಿಲ್ ಕುಮಾರ್ ಕೆ.ಎಸ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘಟನೆಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಮಿಲನ್ ಪೂಜಾರಿ ಬಿ.ಎಸ್ ಹಾಗೂ ಉಪಾಧ್ಯಕ್ಷರಾಗಿ ಪೊನ್ನಪ್ಪ (ಅಣ್ಣು) ಆಯ್ಕೆಯಾದರು. ನೂತನ ಅಧ್ಯಕ್ಷ ಸುನಿಲ್ ಕುಮಾರ್ ಕೆ.ಎಸ್ ಮಾತನಾಡಿ ನೂತನವಾಗಿ ಆಯ್ಕೆಯಾದ ಉತ್ಸಾಹಿ ಯುವ ಪದಾಧಿಕಾರಿಗಳ ತಂಡವು ಮುಂಬರುವ ದಿನಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುವ ದೃಢ ಸಂಕಲ್ಪ ಹೊಂದಿದೆ ಎಂದರು. ಈ ಫೌಂಡೇಶನ್ ಕಳೆದ 7 ವರ್ಷಗಳಿಂದ ಹಾಕತ್ತೂರು ಹಾಗೂ ಸುತ್ತಮುತ್ತಲಿನ ಅನೇಕ ನೊಂದ ಜೀವಗಳಿಗೆ ಆಸರೆಯಾಗುತ್ತಾ ಬಂದಿದೆ. ಸುಮಾರು 30ಕ್ಕೂ ಹೆಚ್ಚು ಸಂಕಷ್ಟದಲ್ಲಿರುವ ಕುಟುಂಬಗಳಿಗೆ…
ಮಡಿಕೇರಿ ಮಾ.21 NEWS DESK : ಕೊಡಗಿನ ಕಾಡಾನೆ-ಮಾನವ ಸಂಘರ್ಷ ತಡೆಗೆ ರಾಜ್ಯದಷ್ಟೇ ಕೇಂದ್ರಕ್ಕೂ ಜವಾಬ್ದಾರಿ ಇದ್ದು, ಕೇಂದ್ರದಿಂದ ಏನು ಪರಿಹಾರ ದೊರೆತ್ತಿದೆ, ಸಮಸ್ಯೆ ಬಗೆಹರಿಕೆಗೆ ಎಷ್ಟು ಅನುದಾನ ಒದಗಿಸಿದೆ ಎನ್ನುವುದನ್ನು ಬಿಜೆಪಿ ಮಂದಿ ಬಹಿರಂಗಪಡಿಸಲಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಒತ್ತಾಯಿಸಿದ್ದಾರೆ. ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡಾನೆಗಳ ಹಾವಳಿಯಿಂದ ಯಾರೂ ತೊಂದರೆಗೆ ಒಳಗಾಗಬಾರದು. ಹೀಗಿದ್ದೂ ಸಿದ್ದಾಪುರ, ಕುಶಾಲನಗರ, ಬೆಟ್ಟತ್ತ್ತೂರಿನಲ್ಲಿ ಮೂವರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ಇದನ್ನೆ ಬಳಸಿಕೊಂಡ ಬಿಜೆಪಿ ಪ್ರತಿಭಟನೆ ಮತ್ತು ರಸ್ತೆ ತಡೆ ಮಾಡಿ ಪ್ರತಿಭಟಿಸುವ ಮೂಲಕ ಸಾವಿನಲ್ಲಿ ರಾಜಕಾರಣ ಮಾಡುತ್ತ್ತಿದೆ. ಬಿಜೆಪಿಯ ಧೋರಣೆಗಳನ್ನು ಗಮನಿಸಿದರೆ, ಅವರು ಸಾವಿಗೆ ಕಾಯುತ್ತಿರುವಂತೆ ಭಾಸವಾಗುತ್ತಿದೆ ಎಂದು ಟೀಕಿಸಿದರು. *25 ವರ್ಷ ಸಾವೇ ಸಂಭವಿಸಿಲ್ಲವೆ* ಜಿಲ್ಲೆಯಲ್ಲಿ ಕಳೆದ ಇಪ್ಪತ್ತೈದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿಯ ಅವಧಿಯಲ್ಲಿ ಕಾಡಾನೆಗಳ ಹಾವಳಿಯಿಂದ ಜೀವಹಾನಿಯೇ ಸಂಭವಿಸಿಲ್ಲವೆ ಎಂದು ಪ್ರಶ್ನಿಸಿದ ಪೊನ್ನಣ್ಣ, 2020-21 ನೇ ಸಾಲಿನಲ್ಲಿ 13 ಮಂದಿ,…
ಮಡಿಕೇರಿ NEWS DESK ಮಾ.21 : ಯಾರಿಗೂ ಹೋಲಿಕೆಯಿಲ್ಲದ ಒಂದು ಅಪರೂಪದ ಮಾನವ ಸಂಕುಲವಾಗಿರುವ ಕೊಡವರು ತಮ್ಮತನವನ್ನು ಉಳಿಸಿಕೊಳ್ಳಲು ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದಾರೆಯೇ ಹೊರತು ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ಅಲ್ಲವೆಂದು ಖ್ಯಾತ ವಕೀಲ, ಲೇಖಕ ಹಾಗೂ ಚಿಂತಕ ಕೆ.ಪಿ.ಬಾಲಸುಬ್ರಮಣ್ಯ ಅಭಿಪ್ರಾಯಪಟ್ಟಿದ್ದಾರೆ. ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಕೊಡವರು ಕೊಡಗಿನ ಆದಿಮಸಂಜಾತರು, ಕೊಡವರು ಪ್ರತ್ಯೇಕ ರೇಸ್ ಅಥವಾ ಮೂಲ ವಂಶಸ್ತ ಜನಾಂಗವಾಗಿದ್ದು , ಈ ಜನಾಂಗದ ನೆಲೆ ಮತ್ತು ನೆಲ ಇಲ್ಲಿಯೇ ಇದೆ ಎಂದರು. ವರ್ಣಾಶ್ರಮದ, ಚಾತುರ್ವರ್ಣದ ಯಾವ ಅಂಶವು ಕೊಡವರಲ್ಲಿ ಇಲ್ಲದಂತ ಪ್ರಕೃತಿ, ಭೂದೇವಿ, ಜಲದೇವಿ, ಪೂರ್ವಿಕರು, ಮಂದ್ ಮತ್ತು ಸೂರ್ಯ ಚಂದ್ರ, ಗತಿಸಿ ಹೋದವರ ಆತ್ಮ ಇತ್ಯಾದಿಗಳನ್ನು ಪೂಜಿಸುವ ಇಡೀ ದೇಶದಲ್ಲೇ ಬೇರೆ ಯಾರಿಗೂ ಹೋಲಿಕೆಯಿಲ್ಲದ ಒಂದು ಅಪರೂಪದ ಮಾನವ ಸಂಕುಲವಾದ ಕೊಡವರು…
ಮಡಿಕೇರಿ ಮಾ.21 NEWS DESK : ಕಾರು ಮತ್ತು ಎರಡು ಬೈಕ್‍ಗಳ ನಡುವೆ ಡಿಕ್ಕಿ ಸಂಭವಿಸಿ ಬೈಕ್‍ಗಳ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಣಿಕೊಪ್ಪ-ತಿತಿಮತಿ-ಮೈಸೂರು ರಸ್ತೆಯಲ್ಲಿ ನಡೆದಿದೆ. ನಂಜನಗೂಡು ನಿವಾಸಿ ಶಿವಕುಮಾರ್(25) ಮತ್ತು ಕೇರಳ ಪಾಲಕ್ಕಾಡ್ ನಿವಾಸಿ ಮೊಹಮದ್ ಶಿಹಾಬ್(27) ಮೃತ ಯುವಕರಾಗಿದ್ದಾರೆ. ಕಾರೊಂದು ಮೈಸೂರು-ತಿತಿಮತಿ ಮಾರ್ಗವಾಗಿ ಗೋಣಿಕೊಪ್ಪ ಕಡೆಗೆ ಆಗಮಿಸುತಿತ್ತು. ಇದೇ ಮಾರ್ಗವಾಗಿ ನಂಜನಗೂಡು ನಿವಾಸಿ ಶಿವಕುಮಾರ್ ಹಾಗೂ ಕೇರಳ ಪಾಲಕ್ಕಾಡ್ ನಿವಾಸಿ ಮೊಹಮದ್ ಶಿಹಾಬ್ ಅವರು ಮೈಸೂರು ಕಡೆಗೆ ತೆರಳುತ್ತಿದ್ದರು. ಮಧ್ಯಾಹ್ನ ಗೋಣಿಕೊಪ್ಪ-ತಿತಿಮತಿ ಹೆದ್ದಾರಿಯ ದೇವರಪುರ ಬಳಿ ಕಾರು ಮತ್ತು ಬೈಕ್‍ಗಳ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಎರಡೂ ಬೈಕ್‍ಗಳಲ್ಲಿದ್ದ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿರಾಜಪೇಟೆ ಮಾ.21 NEWS DESK : ವಿರಾಜಪೇಟೆಯಲ್ಲಿ ಮುತ್ತಪ್ಪ ತೆರೆ ಜಾತ್ರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ವಿರಾಜಪೇಟೆ ಮೀನುಪೇಟೆಯ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದಲ್ಲಿ 82ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವವು 3 ದಿನಗಳ ಕಾಲ ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ನೆರವೇರಿತು. ಸಾವಿರಾರು ಭಕ್ತಾಧಿಗಳು ದೇವರ ದರ್ಶನ ಪಡೆದರು. ಮುತ್ತಪ್ಪ, ವಸೂರಿಮಾಲಾ, ತಿರುವಪ್ಪನ್, ಗುಳಿಗ, ವಿಷ್ಣುಮೂರ್ತಿ, ಪೌವ್ವದಿ ದೇವತೆಗಳು ಭಕ್ತಾಧಿಗಳಿಗೆ ದರ್ಶನ ನೀಡಿದವು. ಪಯಂಗುತ್ತಿ ಹಾಗೂ ತುಲಾಭಾರ, ಇನ್ನಿತರ ಹರಕೆ ಒಪ್ಪಿಸಿದರು. ಶ್ರೀ ಮುತ್ತಪ್ಪ ದೇವರ ಕಲಶ ಮೆರವಣಿಗೆ ಹಾಗೂ ತಾಲಪ್ಪೋಲಿ ಮೆರವಣಿಗೆ ತೆಲುಗರ ಬೀದಿಯ ಮಾರಿಯಮ್ಮ ದೇವಾಲಯದ ಬಳಿಯಿಂದ ಹೊರಟಿತು. ನಗರದ ಮುಖ್ಯ ರಸ್ತೆಗಳಲ್ಲಿ ಪ್ರಸಿದ್ಧ ಕಲಾ ತಂಡದವರಿಂದ ವಿವಿಧ ಕಲಾ ರೂಪಗಳೊಂದಿಗೆ ನಡೆಯಿತು. ಗಣಪತಿ ಹೋಮ, ಬಳಿಕ ಧ್ವಜಾರೋಹಣ ಮಾಡುವುದರೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ಸಂಜೆ ಶ್ರೀ ಮುತ್ತಪ್ಪ ವೆಳ್ಳಾಟಂ ನಡೆಯಿತು. ಬುಧವಾರ ಮದ್ಯಾಹ್ನ ದೇವರ ಮಲೆ ಇಳಿಸುವುದು, ಸಂಜೆ ಶ್ರೀ ಮುತ್ತಪ್ಪ ವೆಳ್ಳಾಟಂ,…






