ಲೇಖಕ: admin

ಮಡಿಕೇರಿ ಮಾ.24 NEWS DESK : ಪ್ರಸ್ತುತ ದಿನಗಳಲ್ಲಿ ತೊಟ್ಟಿಲು ತೂಗುವ ಕೈ ಜಗವನ್ನು ಆಳುತ್ತಿದ್ದು, ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೂ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯ ಕೊಡುಗೆ ಅಪಾರ ಎಂದು ಕೊಡಗು 1 ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಜಿ.ಸುರೇಂದ್ರ ಅವರು ಹೇಳಿದರು. ಮಹಿಳೋದಯ ಮಹಿಳಾ ಒಕ್ಕೂಟ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಶಿಶು ಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು, ಮಾತನಾಡಿದರು. 20ನೇ ಶತಮಾನದ ಆರಂಭದಲ್ಲಿ ಉತ್ತರ ಅಮೇರಿಕಾ ಮತ್ತು ಯುರೋಪ್‍ನಲ್ಲಿ ನಡೆದ ಕಾರ್ಮಿಕ ಚಳುವಳಿಗಳಿಂದ ಇದು ಹುಟ್ಟಿಕೊಂಡಿತು. 1975 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಅಧಿಕೃತಗೊಳಿಸಿತು. ಮಹಿಳೆಯರ ಸಾಧನೆಗಳನ್ನು ಗೌರವಿಸುವುದು, ಲಿಂಗ ತಾರತಮ್ಯ ಹೋಗಲಾಡಿಸುವುದು ಮತ್ತು ಸಮಾಜದಲ್ಲಿ ಸಮಾನತೆ ತರುವುದು ಮುಖ್ಯ ಉದ್ದೇಶವಾಗಿದೆ ಎಂದು ಜಿ.ಸುರೇಂದ್ರ ಅವರು ಹೇಳಿದರು. ಇಂದಿನ ಸಮಾಜದಲ್ಲಿ ಮಹಿಳೆಯರು ಶಿಕ್ಷಣ, ವಿಜ್ಞಾನ, ರಾಜಕೀಯ, ಕ್ರೀಡೆ…

Read More

ಕುಶಾಲನಗರ ಮಾ.24 NEWS DESK : ತೊರೆನೂರು ಸಂಜೀವಿನಿ ಒಕ್ಕೂಟ ವತಿಯಿಂದ  ತೊರೆನೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸಂಜೀವಿನಿ ಸಂತೆ ಮೇಳ ನಡೆಯಿತು. ಕಾರ್ಯಕ್ರಮದಲ್ಲಿ  ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ರೂಪ ಮಹೇಶ್ ಮಾತಾನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಸಂತೆ ಮೇಳಗಳು ನಡೆಯುವ ಮೂಲಕ ಮಹಿಳೆಯರು ಅರ್ಥಿಕ ವ್ಯವಹಾರ ಜ್ಞಾನದ ಜೊತೆಯಲ್ಲಿ ಆರ್ಥಿಕವಾಗಿ ಮುಂದುವರೆಯಲು ಅನುಕೂಲವಾಗುವುದು ಎಂದರು. ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಕೆ.ಎಸ್ ಕೃಷ್ಣೆಗೌಡ ಮಾತಾನಾಡಿ,   ಸಂಜೀವಿನಿ  ಯೋಜನೆಯ ಅಡಿಯಲ್ಲಿ ತಮ್ಮ ಮನೆಗಳಲ್ಲಿ ಗೃಹೋಪಯೋಗಿ ವಸ್ತುಗಳು, ಕರಕುಶಲ ವಸ್ತುಗಳ ತಯಾರಿಕೆಗೆ  ಯೋಜನೆಯ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಇದರ ಮೂಲಕ ಮಹಿಳೆಯರು  ಸ್ವಾವಲಂಬಿ ಬದುಕಿಗೆ ಪೂರಕವಾಗುವುದು ಎಂದು ತಿಳಿಸಿದರು. ಜಿಲ್ಲಾ ಕೆ.ಡಿ.ಪಿ. ಸದಸ್ಯ ಜಗದೀಶ್ ಮಾತಾನಾಡಿ, ಮಹಿಳೆಯರು ಸ್ವ ಉದ್ಯೋಗಿಗಳಾಗಲು ಇಂತಹ ಯೋಜನೆಯು ಸಹಕಾರಿಯಾಗುವುದರ ಮೂಲಕ ತಮ್ಮ ಜವಾಬ್ದಾರಿ ಹೆಚ್ಚಳಕ್ಕೆ ಅನುಕೂಲವಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ತೊರೆನೂರು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ  ಮಹಾದೇವಮ್ಮ, ಉಪಾಧ್ಯಕ್ಷೆ  ವಿಮಲಾ, ಗ್ರಾಮ ಪಂಚಾಯತಿ ಮಾಜಿ…

Read More

ಕುಶಾಲನಗರ ಮಾ.24 NEWS DESK :  ಪಂಜಾಬ್ ನಲ್ಲಿ ನಡೆದ 45ನೇ ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ  ಕುಶಾಲನಗರದ ಐಮುಡಿಯಂಡ ಶೈಲಾ ಕುಶಾಲಪ್ಪ ಅವರು ಚಿನ್ನದ ಪದಕ ಗಳಿಸಿದ್ದಾರೆ. ಕುಶಾಲನಗರದ ಗುಡ್ಡೆ ಹೊಸೂರು ನಿವಾಸಿ ಐಮುಡಿಯಂಡ ಶೈಲಾ ಕುಶಾಲಪ್ಪ ಅವರು  ಮಾ.14 ರಿಂದ ಎರಡು ದಿನಗಳ ಕಾಲ ಪಂಜಾಬ್ ಭಟಿಯಂಡ ನಗರದ ಗುರು ಕಾಶಿ ವಿಶ್ವವಿದ್ಯಾಲಯ ಕ್ರೀಡಾ ಮೈದಾನದಲ್ಲಿ ನಡೆದ 200 ಮೀಟರ್, 1500 ಮೀಟರ್ ಓಟ 100 ಮೀಟರ್ ಹರ್ಡಲ್ಸ್ ಮತ್ತು ರಿಲೇ ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಜಿಲ್ಲೆಯಿಂದ ಒಟ್ಟು ಐದು ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಶೈಲಾ ಕುಶಾಲಪ್ಪ ಅವರು ಈ ಹಿಂದೆ ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾರೆ.

Read More

ಮಡಿಕೇರಿ ಮಾ.24 NEWS DESK : ಕೊಡಗು ಮೈಸೂರು ಸಂಸದರಾದ ಯದುವೀರ್ ಒಡೆಯರ್ ಅವರ ಜನ್ಮದಿನದ ಪ್ರಯುಕ್ತ ಕೊಡಗು ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಎಂ.ಪಿ.ಸುನಿಲ್ ಸುಬ್ರಮಣಿ ಅವರ ನೇತೃತ್ವದಲ್ಲಿ ನಗರದ  ಓಂಕಾರೇಶ್ವರ ದೇವಾಲಯದಲ್ಲಿ  ವಿಶೇಷ ಪೂಜೆ ಸಲ್ಲಿಸಿ ಸಂಸದರ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದರು. ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ,  ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಜಿಲ್ಲಾ ವಕ್ತಾರ ಬಿ.ಕೆ.ಅರುಣ್ ಕುಮಾರ್, ಪ್ರಮುಖರಾದ ಉಪಾಧ್ಯಕ್ಷ ಬಿ.ಕೆ.ಜಗದೀಶ್, ಪಿ.ಎಂ.ರವಿ, ಬೊಳ್ಳಜಿರ ಬಿ ಅಯ್ಯಪ್ಪ ಮತ್ತಿತರರು ಹಾಜರಿದ್ದರು.

Read More

ಸಿದ್ದಗಂಗಾ ಮಾ.24 NEWS DESK : ನೀರು ಅಮೂಲ್ಯ ವಸ್ತು ಅದನ್ನು ಅವಶ್ಯಕತೆಗೆ ತಕ್ಕಂತೆ ಮಿತವಾಗಿ ಬಳಸಬೇಕು. ಪೋಲು ಮಾಡಬೇಡಿ ಎಂದು ತುಮಕೂರು ಸಿದ್ದಗಂಗಾ ಮಠದ ಶ್ರೀ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ ಹೇಳಿದರು. ಮಠದ ಆವರಣದಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನ ಹಾಗೂ ವಿಶ್ವ ಜಲದಿನದ ಮಹತ್ವ ಕುರಿತು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಜಗತ್ತಿನಾದ್ಯಂತ ಇಂದು ನೀರು ಎಲ್ಲಾರಿಗೂ,ಎಲ್ಲಾದಕ್ಕೂ ಬೇಕಾಗಿದೆ ಆದರೆ ಅದನ್ನು ಬಳಸುತಿರುವ ರೀತಿ ಸರಿಯಲ್ಲವೆಂದರು. ನೀರಿಲ್ಲದೆ ಬದುಕು ಸಾದ್ಯವೇ ಇಲ್ಲಾ ಎಂಬುದು ಸತ್ಯ, ವಿದ್ಯಾರ್ಥಿಗಳು ಈ ಬಗ್ಗೆ ಜಾಗೃತರಾಗಬೇಕು ನಿಮ್ಮಲ್ಲಿ ಅರಿವು ಮೂಡಿದರೆ,ಇತರರಿಗೂ ಜಾಗೃತಿ ಮೂಡಿಸಬಹುದೆಂದು. ನೀವುಗಳು ನೀರನ್ನು ಮಿತವಾಗಿ ಬಳಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಮುಂದಿನ ತಲೆಮಾರಿಗೂ ಉಳಿಸಿ ಅವರಿಗೂ ದೊರಕುವಂತೆ ಮಾಡಬೇಕು ಇದು ನಾವು ಮಿತವಾಗಿ ಬಳಸುವುದರಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು. ನಂತರ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಮುಂದಿನ ಪರೀಕ್ಷೆಯ ಬಗ್ಗೆ ಮಾಹಿತಿ ಪಡೆದು ಅಗತ್ಯ ಮಾರ್ಗದರ್ಶನ ಮಾಡಿದರು. ಶ್ರೀ ಮಠದಲ್ಲಿ ವಿದ್ಯಾಭ್ಯಾಸ ಮಾಡುತಿರುವ…

Read More

ಮಡಿಕೇರಿ NEWS DESK ಮಾ.24 : ಶ್ರೀಕೋದಂಡ ರಾಮೋತ್ಸವ ಸಮಿತಿ ವತಿಯಿಂದ ಮಡಿಕೇರಿಯ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ 37ನೇ ವರ್ಷದ ಶ್ರೀ ರಾಮೋತ್ಸವ ಹಾಗೂ ದ್ವಿತೀಯ ವರ್ಷದ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಇದೇ ಮಾ.26 ಮತ್ತು 27 ರಂದು ವಿಜೃಂಭಣೆಯಿAದ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಕೋದಂಡ ರಾಮೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಂ.ಗಣೇಶ್ ಅವರು ಎರಡು ದಿನಗಳ ಕಾಲ ನಡೆಯುವ ಧಾರ್ಮಿಕ ವಿಧಿ ವಿಧಾನಗಳ ಕುರಿತು ಮಾಹಿತಿ ನೀಡಿದರು. ಮಾ.26ರಂದು ಸಂಜೆ 5 ಗಂಟೆಗೆ ಶ್ರೀ ರಾಮೋತ್ಸವದ ಅಂಗವಾಗಿ ಮಡಿಕೇರಿಯ ಗಾಂಧಿ ಮೈದಾನದಿಂದ ನಗರದಲ್ಲಿ ಭವ್ಯ ಮೆರವಣಿಗೆ ಸಾಗಲಿದೆ. ಮೆರವಣಿಗೆ ಸಂದರ್ಭ ವಿಶೇಷ ಪಲ್ಲಕ್ಕಿಯಲ್ಲಿ ಆಸೀನಗೊಂಡ ಶ್ರೀ ಕೋದಂಡ ರಾಮ ಪರಿವಾರ ಉತ್ಸವ ಮೂರ್ತಿಯನ್ನು ಹೊತ್ತು ನಗರದ ಪ್ರಮುಖ ರಸ್ತೆಗಳಲ್ಲಿ ತೆರಳಲಾಗುತ್ತದೆ. ಗಾಂಧಿ ಮೈದಾನದಿಂದ ಜನರಲ್ ತಿಮ್ಮಯ್ಯ ವೃತ್ತಕ್ಕೆ ಸಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತದೆ. ವಿವಿಧ ಆಕರ್ಷಕ ನೃತ್ಯ, ಚಂಡೆ ವಾದ್ಯ ಸಹಿತ ಸಾಂಸ್ಕೃತಿಕ…

Read More

ವಿರಾಜಪೇಟೆ ಮಾ.23 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪ ವಲಯ ಹಾತೂರು ಕಾರ್ಯಕ್ಷೇತ್ರದ ಅನುಗ್ರಹ ಜ್ಞಾನವಿಕಾಸ ಕೇಂದ್ರದಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಾತೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಮಂಜುಳಾ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅವಶ್ಯಕತೆ ಇರುವ ಮಾಹಿತಿಗಳನ್ನು ಹಾಗೂ ಸ್ವಾವಲಂಬಿ ಜೀವನವನ್ನು ನಡೆಸಲು ಮಹಿಳೆಯರಿಗೆ ಅಗತ್ಯವಾದ ತರಬೇತಿಗಳ ಸೌಲಭ್ಯವನ್ನು ನೀಡುತ್ತಿದ್ದು ಇದರಿಂದ ಅನೇಕ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಸಹಕಾರವಾಗಿದೆ ಎಂದು ತಿಳಿಸಿದರು. ಹೋಮಿಯೋಪತಿ ವೈದ್ಯಾಧಿಕಾರಿ ಡಾ.ಶ್ವೇತಾ ಮಾತನಾಡಿ, ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಕೇಂದ್ರದ ಅಧ್ಯಕ್ಷರಾದ ಗಿರಿಜಾ ಮಾತನಾಡಿ, ನಮ್ಮ ಕೇಂದ್ರಕ್ಕೆ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ತುಂಬಾ ಉಪಕಾರಿಯಾಯಿತು ಹಾಗೂ ಸದಸ್ಯರಲ್ಲಿ ಸ್ವಉದ್ಯೋಗ ಮಾಡಲು ಮತ್ತು ಸ್ವಾವಲಂಬಿಯಾಗಿ ಬದುಕಲು ಸಹಕಾರವಾಯಿತು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹೊಲಿಗೆ ತರಬೇತಿ…

Read More

ವಿರಾಜಪೇಟೆ ಮಾ.23 NEWS DESK : ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ಸಹಯೋಗದಲ್ಲಿ ಕೂರ್ಗ್ ಕ್ಲಿಫ್ ರೆಸಾರ್ಟ್‍ನಲ್ಲಿ ನಡೆದ ಕ್ಲಿಫ್ ಆಫ್ ಗ್ರೇಸ್ ಎಂಬ ಕಾರ್ಯಕ್ರಮ ನಡೆಯಿತು. ಆರ್ಥಿಕ ಸ್ಥಿತಿಯಲ್ಲಿ ಹಿಂದುಳಿದ ರೋಗಿಗಳಿಗೆ ನಗದು ರೂಪದಲ್ಲಿ ಸಹಾಯ ಮಾಡುವುದು ಹಾಗೂ ಅವಶ್ಯಕತೆ ಇದ್ದವರಿಗೆ ವೈದ್ಯಕೀಯ ಸಲಕರಣೆಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದಕ್ಷಿಣ ಕೊಡಗಿಗೆ ಸೇರಿದ 15 ಚರ್ಚ್‍ನ ತಲಾ ಒಬ್ಬೊಬ್ಬ ಫಲಾನುಭವಿಗಳಿಗೆ ಮೂರು ಲಕ್ಷ ರೂಪಾಯಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡಿರ ಅರುಣ್ ಮಾಚಯ್ಯ ಅವರು, ಧರ್ಮ ಯಾವುದೇ ಆಗಿರಲಿ, ದಾನ ಧರ್ಮ ಮಾಡುವ ಮೂಲಕ ಇತರರಿಗೆ ನೆರವಾಗಬೇಕು. ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತ ಮಿಷಿನರಿಗಳ ಸೇವೆ ಅಪಾರ ಎಂದು ನುಡಿದರು. ಕೊಡಗು ಡಿಸಿಸಿ ಹಾಗೂ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ಟಿ.ಎಂ.ಧರ್ಮಜ ಉತ್ತಪ್ಪ ಮಾತನಾಡಿ, ಇದು ಇತರರಿಗೆ ಮಾದರಿಯಾಗುವಂತಹ ಕಾರ್ಯಕ್ರಮ ಎಂದ ಅವರು, ತಮ್ಮ ಹೋರಾಟ ಜೀವನವನ್ನು ಹಾಗೂ ಕೈಗೊಂಡ ಯಶಸ್ಸನ್ನು ಸ್ಮರಿಸಿದರು.…

Read More

ಮಡಿಕೇರಿ ಮಾ.23 NEWS DESK : 66/11 ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರ ಪೊನ್ನಂಪೇಟೆ ಮತ್ತು ಶ್ರೀಮಂಗಲದಲ್ಲಿ ಮಾಸಿಕ ನಿರ್ವಹಣೆ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸುಳುಗೋಡು, ಕೋಣನಕಟ್ಟೆ, ಬಾಳೆಲೆ, ದೇವನೂರು, ಪೊನ್ನಂಪೇಟೆ, ಗೋಣಿಕೊಪ್ಪ, ತಿತಿಮತಿ, ಹಾತೂರು, ಕುಂದ, ಕಾನೂರು, ದೇವರಪುರ, ಜಾಗಲೆ, ನಿಟ್ಟೂರು, ಕಿರಗೂರು, ಅತ್ತೂರು, ಕಾಯಿಮನೆ, ಮಂಚಳ್ಳಿ, ತೈಲ, ಸಿಂಕೋನ, ಶ್ರೀಮಂಗಲ, ಕುಟ್ಟ, ಕೆಟ್ಟಗೇರಿ, ಹರಿಹರ, ಬಿರುನಾಣಿ, ಕೆ.ಬಾಡಗ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾರ್ಚ್, 26 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Read More

ಕುಶಾಲನಗರ, ಮಾ.23 NEWS DESK : ಕರ್ನಾಟಕ ಸರ್ಕಾರದ ಸಮಗ್ರ ಶಿಕ್ಷಣ – ಕರ್ನಾಟಕದ ರಾಜ್ಯ ನಿರ್ದೇಶನಾಲಯದ ನಿರ್ದೇಶನದಂತೆ ರಾಜ್ಯದ 34 ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಗಳಲ್ಲಿ ಜಿಲ್ಲಾ ವೃತ್ತಿಪರ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ (ಕೆರಿಯರ್) ಘಟಕವನ್ನು ಸ್ಥಾಪಿಸಲಾಗುತ್ತಿದೆ ಎಂದು ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಯ ಪ್ರಾಂಶುಪಾಲರು ಆದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಪದನಿಮಿತ್ತ ಉಪನಿರ್ದೇಶಕರು(ಅಭಿವೃದ್ದಿ) ರಾಮಚಂದ್ರ ರಾಜೇ ಅರಸ್  ತಿಳಿಸಿದರು. ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಜಿಲ್ಲಾ ವೃತ್ತಿಪರ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ ಘಟಕವನ್ನು ಆರಂಭಿಸಲಾಗುತ್ತಿದ್ದು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಅವರ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಮುಂದಿನ ವೃತ್ತಿ ಜೀವನದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲು ಇದೇ ಮಾರ್ಚ್ 27 ರಂದು ಬೆಳಗ್ಗೆ 10.00 ಗಂಟೆಯಿಂದ ಕೂಡಿಗೆ ಸಂಸ್ಥೆಯ ಆವರಣದಲ್ಲಿ ವೃತ್ತಿ ಶಿಕ್ಷಣ ಪ್ರದರ್ಶನ ಹಾಗೂ ವೃತ್ತಿ ಮಾರ್ಗದರ್ಶನ (ಕೆರಿಯರ್)ಮೇಳವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಕೂಡಿಗೆ ಡಯಟ್…

Read More