ಮಡಿಕೇರಿ ಡಿ.13 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಲ್ಲಿ “ದಕ್ಷ ನಾಯಕತ್ವ ಮತ್ತು ಸಮರ್ಥ ವೃತ್ತಿಪರತೆಯಿಂದ ಮಾತ್ರವೇ ಸಹಕಾರ ಕ್ಷೇತ್ರ ಸದೃಡಗೊಳ್ಳಲು ಸಾಧ್ಯ” ಎಂಬ ವಿಷಯದ ಕುರಿತು ನಡೆದ ರಾಜ್ಯ ಮಟ್ಟದ ಅಂತರ್ ತರಬೇತಿ ಕೇಂದ್ರಗಳ ರೆಗ್ಯೂಲರ್ ಡಿಸಿಎಂ ಅಭ್ಯರ್ಥಿಗಳಿಗೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ಕೆಐಸಿಎಂ ಮಡಿಕೇರಿ ತರಬೇತಿ ಕೇಂದ್ರ ದ್ವಿತೀಯ ಬಹುಮಾನ ಪಡೆದುಕೊಂಡಿದೆ. ಸ್ಪರ್ಧೆಯಲ್ಲಿ ನಗರದ ಸಹಕಾರ ತರಬೇತಿ ಕೇಂದ್ರದ ವಿದ್ಯಾರ್ಥಿನಿಯಾದ ಸಹನಾ ಎನ್.ಪಿ ಹಾಗೂ ಜಸ್ಮಿತಾ ಪಿ.ಜಿ ಭಾಗವಹಿಸಿದ್ದು, ಪಿ.ಜಿ.ಜಸ್ಮಿತಾ ಗೆ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಶುಭಕೋರಿದ್ದಾರೆ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಡಾ.ರೇಣುಕಾ ಆರ್.ಎಸ್ ಹರ್ಷ ವ್ಯಕ್ತಪಡಿಸಿದ್ದಾರೆ.
ಲೇಖಕ: admin
ಮಡಿಕೇರಿ ಡಿ.13 : ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ 2023-24 ನೇ ಸಾಲಿನ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯು ಗದಗ ನಗರದ ಮಹಾತ್ಮಾ ಗಾಂಧಿ ಹಾಕಿ ಕ್ರೀಡಾಂಗಣದಲ್ಲಿ ನಡೆಯಿತು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 18 ಬಾಲಕಿಯರು ಭಾಗವಹಿಸಿ, ಪ್ರಥಮ ಸ್ಥಾನ ಪಡೆದು ಪಂದ್ಯಾವಳಿಯಲ್ಲಿ ವಿಜಯಶಾಲಿಯಾಗಿದ್ದು, ಪಂಜಾಬ್‍ನ ಜಲಂಧರ್‍ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ತಿಳಿಸಿದ್ದಾರೆ. ಈ ಸಂಬಂಧ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಇತರರು ಅಭಿನಂದಿಸಿದ್ದಾರೆ.
ಕಿತ್ತೂರು ಚೆನ್ನಮ್ಮ ಕೋಟೆ ಕರ್ನಾಟಕದ ಒಂದು ದೊಡ್ಡ ಐತಿಹಾಸಿಕ ಸ್ಮಾರಕದ ಜೊತೆಗೆ ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಕಿತ್ತೂರು ಎಂಬ ಸಣ್ಣ ಪಟ್ಟಣವು ಕಿತ್ತೂರು ಚೆನ್ನಮ್ಮ ಕೋಟೆಗೆ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಕಿತ್ತೂರು ಚೆನ್ನಮ್ಮ ಕೋಟೆ ಬೆಳಗಾಂನಿಂದ 50 ಕಿಲೋಮೀಟರ್ ದೂರದಲ್ಲಿದೆ ಮತ್ತು ಧಾರವಾಡದಿಂದ ಇದು 32 ಕಿಲೋಮೀಟರ್ ದೂರದಲ್ಲಿದೆ. ಕಿತ್ತೂರು ಒಂದು ಸಣ್ಣ ಪಟ್ಟಣ ಮತ್ತು ಹಳೆಯ ಅರಮನೆಗಳು, ಸ್ಮಾರಕಗಳು ಮತ್ತು ಪ್ರತಿಮೆಗಳಿಂದಾಗಿ ಆಸಕ್ತಿದಾಯಕ ಪ್ರವಾಸಿ ತಾಣವಾಗಿದೆ. ಕಿತ್ತೂರು ಚೆನ್ನಮ್ಮ ಕೋಟೆಯು ರಾಣಿ ಚೆನ್ನಮ್ಮ ನೇತೃತ್ವದಲ್ಲಿ ನಡೆದ ಮಹಾನ್ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿದೆ. ಕಿತ್ತೂರು ಪುರಾತತ್ತ್ವ ಶಾಸ್ತ್ರದ ತಾಣವಾಗಿಯೂ ಮುಖ್ಯವಾಗಿದೆ. ಕಿತ್ತೂರು ಚೆನ್ನಮ್ಮ ಕೋಟೆ ಧೈರ್ಯ ಮತ್ತು ಮಹಿಳೆಯರ ಹೆಮ್ಮೆಯ ಸಂಕೇತವಾಗಿ ನಿಂತಿದೆ. ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಬ್ರಿಟಿಷ್ ಆಡಳಿತದಿಂದ ದೇಶವನ್ನು ಮುಕ್ತಗೊಳಿಸುವ ಅವರ ಉಪಕ್ರಮದಿಂದಾಗಿ ಒಂದು ಸಣ್ಣ ಸ್ಥಳವು ಇತಿಹಾಸದ ಪುಟಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಗಳಿಸಿದೆ. ಸ್ಮಾರಕಗಳು ಮತ್ತು ಕೋಟೆಗಳು ಈ ಸ್ಥಳದ ಐತಿಹಾಸಿಕ ಪ್ರಾಮುಖ್ಯತೆಯನ್ನು ಸಾರುತ್ತದೆ. ಕರ್ನಾಟಕದ…
ಮಹದೇಶ್ವರ ಬೆಟ್ಟ ಕರ್ನಾಟಕದ ದಕ್ಷಿಣ ತುದಿಯ ಗಡಿಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮುಖ್ಯ ಶ್ರದ್ಧಾಭಕ್ತಿ ಕೇಂದ್ರ. ದೇವಸ್ಥಾನವು ಬೆಟ್ಟಗಳಿಂದ ಸುತ್ತುವರಿದಿರುವ ಕಾರಣ ಮಹದೇಶ್ವರ ಬೆಟ್ಟವೆಂದು ಕರೆಯಲಾಗುತ್ತದೆ. ಪಶ್ಚಿಮಘಟ್ಟಗಳ ಭಾಗದಿಂದ ಆರಂಭವಾಗಿ ಪೂರ್ವಘಟ್ಟಗಳ ಕಡೆಗೆ ಹರಡಿಕೊಂಡಿರುವ ಬೆಟ್ಟ ಸಾಲುಗಳಲ್ಲಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಹಬ್ಬಿರುವ ಮಹದೇಶ್ವರ ಬೆಟ್ಟ ದಖನ್ ಪ್ರಸ್ಥಭೂಮಿಯ ಬಹುಮುಖ್ಯ ಭಾಗವೂ ಕೂಡ. ಮೈಸೂರಿನಿಂದ 150 ಕಿ ಮೀ ಹಾಗೂ ರಾಜಧಾನಿ ಬೆಂಗಳೂರಿನಿಂದ 210 ಕಿ ಮೀ ದೂರವಿದೆ ಈ ಮಹದೇಶ್ವರ ಬೆಟ್ಟ. ಹಾಲುಮತ ಸಮುದಾಯಕ್ಕೆ ಮಹದೇಶ್ವರ ದೇವಸ್ಥಾನ ಮುಖ್ಯವಾದ ಭಕ್ತಿಕೇಂದ್ರವಾಗಿದೆ ಹಾಗೂ ಶಿವನ ಆರಾಧಾನಾ ಕೇಂದ್ರವೂ ಕೂಡ ಆಗಿದೆ. ಪ್ರತೀ ವರ್ಷ ಕರ್ನಾಟಕ ಹಾಗೂ ತಮಿಳುನಾಡಿನ ಲಕ್ಷಾಂತರ ಭಕ್ತರನ್ನು ಮಹದೇಶ್ವರ ಬೆಟ್ಟ ಸೆಳೆಯುತ್ತದೆ. ದೇವಸ್ಥಾನ ಪ್ರಾಂಗಣ ಹಾಗೂ ಸಮುಚ್ಚಯಗಳು ಸೇರಿ ಸುಮಾರು 150 ಎಕರೆಗಳಷ್ಟು ಪ್ರದೇಶ ವ್ಯಾಪಿಸಿಕೊಂಡಿದೆ. ಅದರ ಜೊತೆಗೆ ತಾಳು ಬೆಟ್ಟ, ಹಳೆಯೂರು, ಇಂಡಿಗನಾಥ ಗ್ರಾಮಗಳಲ್ಲಿ ದೇವಸ್ಥಾನಕ್ಕೆ ಸೇರಿದ ಜಾಗಗಳಿವೆ. ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದಲ್ಲಿರುವ ಮಹದೇಶ್ವರ…
ಸೋಮವಾರಪೇಟೆ ಡಿ.13 : ಪಟ್ಟಣ ಪಂಚಾಯಿತಿಗೆ ಸೇರಿದ ಅಂಗಡಿಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಸದಸ್ಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ, ದಿನಾಂಕ ನಿಗದಿ, ಮಳಿಗೆ ಮೀಸಲಾತಿ ಸೇರಿದಂತೆ ಯಾವ ವಿಚಾರಕ್ಕೂ ಸದಸ್ಯರ ಅಭಿಪ್ರಾಯ ಪಡೆದಿಲ್ಲ ಹಾಗೂ ಗಮನಕ್ಕೂ ತರದೆ ಏಕಾಏಕಿ ಅಧಿಕಾರಿಗಳು ಹರಾಜು ನಡೆಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಸೋಮವಾರಪೇಟೆ ಪ.ಪಂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಮವಾರಪೇಟೆ ಪ.ಪಂ ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ಮನವಿ ಸಲ್ಲಿಸಿದ ಸದಸ್ಯರು ಹರಾಜು ಪ್ರಕ್ರಿಯೆ ಮುಂದೂಡುವಂತೆ ಮನವಿ ಮಾಡಿದ್ದಾರೆ. 2023 ಸೆ.13 ರಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿ, ನಗರದ ಅಭಿವೃದ್ಧಿ ಹಾಗೂ ವರ್ತಕರ ಹಿತದೃಷ್ಟಯಿಂದ ಸರ್ಕಾರದ ಅಭಿಪ್ರಾಯ ಪಡೆದು ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವಂತೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಅಧಿಕಾರಿಗಳು ಇತ್ತೀಚೆಗೆ ಮಳಿಗೆಗಳ ಹರಾಜು ಪ್ರಕಟಣೆ ನೀಡಿದ್ದಾರೆ. ಎರಡು ಸಭೆಗಳನ್ನು ಮುಂದೂಡಿದ್ದಾರೆ ಇದರಿಂದಾಗಿ ಸದಸ್ಯರ ಅಭಿಪ್ರಾಯ ತಿಳಿಸಲು ಅವಕಾಶವಾಗಿಲ್ಲ ಆದ್ದರಿಂದ ಹಿಂದಿನ ಸಭೆಯ ನಿರ್ಣಯ ರದ್ದುಪಡಿಸಿ ಹಾಗೂ ಹರಾಜು ಪ್ರಕ್ರಿಯೆಯನ್ನು…
ಮಡಿಕೇರಿ ಡಿ.13 : ಮೂರ್ನಾಡುವಿನ ಕೋಡಂಬೂರು ಶ್ರೀ ಭದ್ರಕಾಳಿ ದೇವಾಲಯದಲ್ಲಿ ಮಡಿಕೇರಿ ಗ್ರಾಮಾಂತರದ ಪ್ರತೀ ಬೂತ್ ಗಳಿಗೂ ಅಯೋಧ್ಯೆಯಿಂದ ತರಲಾಗಿರುವ ಪವಿತ್ರ ಮಂತ್ರಾಕ್ಷತೆಯನ್ನು ವಿತರಿಸಲಾಯಿತು. ಮಂತ್ರಾಕ್ಷತೆಯು ದೇವಾಲಯಕ್ಕೆ ಆಗಮಿಸುತ್ತಿದ್ದಂತೆ ಚಂಡೆ, ವಾದ್ಯಗಳೊಂದಿಗೆ ಗ್ರಾಮಸ್ಥರು, ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು. ನಂತರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ದೇವಾಲಯ ಸಮಿತಿಯಿಂದ ಅನ್ನಸಂತರ್ಪಣೆ ನೆರವೇರಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಜರಂಗದಳದ ವಿಭಾಗ ಸಹ ಸಂಯೋಜಕ್ ಮುರುಳಿಕೃಷ್ಣ ಹಾಗೂ ಆರ್.ಎಸ್.ಎಸ್. ನ ಮಂಗಳೂರು ವಿಭಾಗ ಸಹ ಕಾರ್ಯವಾಹಕ ಹರಿಕೃಷ್ಣ ಮಾತನಾಡಿ, ಜ.22 ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಪೂಜಾವಿಧಿವಿಧಾನಗಳನ್ನು ಕಣ್ತುಂಬಿಕೊಂಡು, ನಾಡಿನ ಎಲ್ಲಾ ದೇವಾಲಯಗಳಲ್ಲಿ ಹಾಗೂ ಮನೆಗಳಲ್ಲಿ ಪೂಜಾ ಕಾರ್ಯಗಳನ್ನು ಶ್ರದ್ಧಾಭಕ್ತಿಯಿಂದ ನಡೆಸುವಂತೆ ಕರೆ ನೀಡಿದರು. ಜಿಲ್ಲಾ ಸಂಯೋಜಕ ಶಿವರಾಜ್ ಹಾಗೂ ವಿ.ಹೆಚ್.ಪಿ. ಯ ಚಿ.ನಾ.ಸೋಮೇಶ್ ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಹಿಂದು ಪರಿಷತ್ – ಬಜರಂಗದಳ , ಹಿಂದು ಜಾಗರಣ ವೇದಿಕೆ, ಬಿ.ಜೆ.ಪಿ ಸೇರಿದಂತೆ 500 ಕ್ಕೂ ಅಧಿಕ…
ಬೆಳಗಾವಿ ಡಿ.13 : ರೈತರಿಗೆ ತೂಕದಲ್ಲಿ ಮೋಸ ಆಗದಂತೆ ತಡೆಯಲು ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಎಲೆಕ್ಟ್ರಾನಿಕ್ ಆಧಾರಿತ ತೂಕ ಮಷಿನ್ ಅಳವಡಿಸಲು ಕ್ರಮ ವಹಿಸಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಕಾನೂನು ಮಾಪನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಳಗಾವಿಯ ಸುವರ್ಣ ಸೌಧದಲ್ಲಿ ಆಹಾರ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕಿನ ಆಯ್ದ 100 ಜನ ಅಂಗಡಿಕಾರರ ಕುಂದು ಕೊರತೆ ಆಲಿಸಿದ ಸಚಿವರು ಸಾರ್ವಜನಿಕರ ದೂರು ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಪಡಿತರ ಅಕ್ಕಿ ಜೊತೆಗೆ, ಡಿಬಿಟಿ ಮೊತ್ತ ಫಲಾನುಭವಿಗಳಿಗೆ ನಿಯಮಾನುಸಾರ ಪ್ರತಿ ಮಾಹೆ ಜಮೆ ಮಾಡಿಸಬೇಕು. ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ಪಡಿತರ ಚೀಟಿ ಅನುಮೋದನೆ ಮಾಡಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಸಕ್ಕರೆ ಸಚಿವ ಶಿವಾನಂದ ಎಸ್ ಪಾಟೀಲ್, ಬೆಳಗಾವಿ…
ಮಡಿಕೇರಿ ಡಿ.13 : ವಾಲ್ನೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಸ್ಥಳೀಯ ಬೆಳೆಗಾರ ಭುವನೇಂದ್ರ ಎಂಬುವವರ ತೋಟಕ್ಕೆ ದಾಳಿ ಮಾಡಿದ ಸುಮಾರು 9ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕೃಷಿ ಬೆಳೆಗಳನ್ನು ನಾಶ ಮಾಡಿದೆ. ಏಳು ವರ್ಷಗಳಾಗಿರುವ 100 ಕ್ಕೂ ಅಧಿಕ ಅಡಿಕೆ ಗಿಡಗಳು, ಕಾಫಿ ಗಿಡ, ಕಾಳು ಮೆಣಸು ಬಳ್ಳಿಗಳನ್ನು ಧ್ವಂಸ ಮಾಡಿದೆ. ಸುತ್ತಮುತ್ತಲ ತೋಟ ಮತ್ತು ಗದ್ದೆಗಳಿಗೂ ಲಗ್ಗೆ ಇಟ್ಟಿರುವ ಕಾಡಾನೆಗಳು ಕೃಷಿಕರ ಕೈಗೆ ಬಂದ ಫಸಲನ್ನು ಬಾಯಿಗೆ ಬಾರದಂತೆ ಮಾಡಿವೆ. ಈ ಭಾಗದ ಬೆಳೆಗಾರರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಗ್ರಾಮಸ್ಥರು ಹಾಗೂ ಕಾರ್ಮಿಕರು ಆತಂಕದಿಂದಲೇ ದಿನದೂಡಬೇಕಾದ ಪರಿಸ್ಥಿತಿ ಬಂದೊದಗಿದೆ. ಕಾಡಾನೆ ಹಾವಳಿ ಕುರಿತು ಬೇಸರ ವ್ಯಕ್ತಪಡಿಸಿರುವ ಭುವನೇಂದ್ರ, ಅರಣ್ಯ ಇಲಾಖೆ ತಕ್ಷಣ ಈ ಭಾಗದ ರೈಲ್ವೆ ಕಂಬಿಯ ಬೇಲಿಗಳನ್ನು ದುರಸ್ತಿ ಪಡಿಸಬೇಕೆಂದು ಒತ್ತಾಯಿಸಿದರು. ಕಾಡಾನೆಗಳ ದಾಳಿಯಿಂದಲೇ ಬೇಲಿಗಳು ಹಾನಿಗೊಳಗಾಗಿದ್ದು, ಇಲಾಖೆ ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದರು. ಕಾಡಾನೆ ಹಾವಳಿಯಿಂದ…
ಪುತ್ತೂರು ಡಿ.13 : ಆಧುನಿಕ ಜೀವನ ಪದ್ದತಿಗೆ ಮಾರುಹೋಗಿರುವ ಯುವ ಜನತೆ ಕೃಷಿ ಕ್ಷೇತ್ರವನ್ನು ಕಡೆಗಣಿಸಿದೆ. ಇದರಿಂದಾಗಿ ಕೆಲವು ವಿಷಯಗಳಲ್ಲಿ ನುರಿತ ಕೆಲಸಗಾರರೇ ಸಿಗುತ್ತಿಲ್ಲ. ಅಡಿಕೆಗೆ ಔಷದ ಸಿಂಪಡಣೆ ಅಡಿಕೆ ಕೊಯ್ಲು, ತೆಂಗಿನಕಾಯಿ ಕೊಯ್ಲು ಮುಂತಾದ ನಾಜೂಕಿನ ಕೆಲಸಗಳನ್ನು ಬೆರಳೆಣಿಯಷ್ಟು ಮಂದಿಯಷ್ಟೇ ಮಾಡುತ್ತಿದ್ದಾರೆ. ಈ ಸಮಸ್ಯೆಗಳನ್ನು ಮನಗಂಡು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ರ‍್ಟಿಫೀಶಿಯನ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳ ತಂಡವು ಹೊಸ ಆಲೋಚನೆಯೊಂದಿಗೆ ಇದಕ್ಕೊಂದು ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ತಯಾರಿಸಿದ ಯೋಜನಾ ವರದಿಗೆ ಸ್ಟಾರ್ಟ್ ಅಪ್ ಚಾಲೆಂಜಸ್ ಸ್ಪರ್ಧೆಯಲ್ಲಿ ಒಂದು ಲಕ್ಷ ರೂಗಳ ನಗದು ಬಹುಮಾನ ಲಭಿಸಿದೆ. ಕೆಎಸ್‌ಡಿಸಿ ಕರ್ನಾಟಕ ಸರ್ಕಾರ, ಯುಎನ್‌ಡಿಪಿ, ಕೌಶಲ್ಯ ಕರ್ನಾಟಕ, ಸೆವೆನ್ತ್ ಸೆನ್ಸ್, ಎಸ್‌ಎಪಿ ಲ್ಯಾಬ್ಸ್ ಇಂಡಿಯಾ ಲಿಮಿಟೆಡ್, ಕೋಡ್ ಉನ್ನತಿ ಮತ್ತು ಎಜೆಐಇಟಿ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಎ ಜೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಯೋಜನೆಯನ್ನು ಮಂಡಿಸಿ…
ಮಡಿಕೇರಿ ಡಿ.13 : ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘದ ಸದಸ್ಯರ ಹಿತರಕ್ಷಾ ಸಮಿತಿ ಮನವಿಯ ಮೇರೆಗೆ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘದ ಸಮಾಪನ ಆದೇಶವನ್ನು ರದ್ದುಪಡಿಸಿ, ಆಡಳಿತ ಅಧಿಕಾರಿಯವರನ್ನ ನೇಮಕ ಮಾಡಿ ಸಮಿತಿಗೆ ಕೂಡಲೇ ಸಂಘವನ್ನು ರೈತರಿಗೆ ವಾಪಸ್ಸು ನೀಡುವಂತೆ ಒತ್ತಾಯಿಸಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಸಹಕಾರಿ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಡನೆ ಬೆಳಗಾವಿ ಸುವರ್ಣ ಸೌಧದಲ್ಲಿ ಸಭೆ ನಡೆಸಿದರು. ಮನವಿಗೆ ತ್ವರಿತವಾಗಿ ಸ್ಪಂದಿಸಿ ಸಂಘವನ್ನು ಪುನಶ್ಚೇತನಗೊಳಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಶಾಸಕ ಎ.ಎಸ್. ಪೊನ್ನಣ್ಣ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಸಂಘ ಕಾಫಿ ಬೆಳೆಗಾರರ ಪರವಾಗಿ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದೆ.






