ಲೇಖಕ: admin

ಮಡಿಕೇರಿ ಅ.31 :  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಡಿಕೇರಿ ಶಿಶು ಅಭಿವೃದ್ಧಿ ಯೋಜನಾ ಇಲಾಖೆ  ವತಿಯಿಂದ ಎಂ.ಬಾಡಗ 1 ಅಂಗನವಾಡಿ ಕೇಂದ್ರದಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನದ ಪ್ರಯುಕ್ತ “ರಾಷ್ಟ್ರೀಯ ಏಕತಾ ದಿವಸ’ವನ್ನು ಆಚರಿಸಲಲಾಯಿತು. ಅಂಗನವಾಡಿ ಕಾರ್ಯಕರ್ತೆ ಬಿ.ಬಿ.ಜಯಂತಿ ಮಾತನಾಡಿ, ಈ ಬಾರಿ  “ಮೇರಿ ಮಾಟಿ ಮೇರಿ ದೇಶ್” (ನನ್ನ ಮಣ್ಣು ನನ್ನ ದೇಶ) ಎಂಬ ವಿಶೇಷ ಅಭಿಯಾನದ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಎಂದರು. ಹಲವು ದಿನಗಳಿಂದ ನಡೆದ ನನ್ನ ಮಣ್ಣು ನಮ್ಮ ದೇಶ ಕಾರ್ಯಕ್ರಮ ಕ್ಕೆ ನಾವುಗಳು ಕೈ ಜೋಡಿಸಿದ್ದು, ಈ ಅಭಿಯಾನ  ಒಂದು ಮನೆಯಿಂದ ಸಂಗ್ರಹವಾದ ಒಂದು ಹಿಡಿ ಮಣ್ಣು ರಾಜಪತ್ತ್ ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಉದ್ಯಾನವನಕ್ಕೆ ಕಳುಹಿಸಿ  ಕೊಡುವ ಕಾರ್ಯಕ್ರಮ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷರಾದ  ದಿವ್ಯ ಅಧ್ಯಕ್ಷತೆಯಲ್ಲಿ  ನಡೆದ ಕಾರ್ಯಕ್ರಮದಲ್ಲಿ  ಗ್ರಾ.ಪಂ  ಸದಸ್ಯರಾದ  ನಿಂಗಪ್ಪ, ಆಶಾ ಕಾರ್ಯಕರ್ತೆ  ಚಂದ್ರಿಕಾ, ಅಂಗನವಾಡಿ ಸಹಾಯಕಿ ಎಚ್.…

Read More

ಪುತ್ತೂರು ಅ.31 : ಯಾವುದೇ ರೀತಿಯ ಖಾಯಿಲೆಗಳಿಗೆ ಪ್ರಾಥಮಿಕ ಹಂತದಲ್ಲಿಯೇ ತಜ್ಞ ವೈದ್ಯರುಗಳಿಂದ ಔಷಧೋಪಚಾರ ಮಾಡಿಸಿದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಮಂಗಳೂರು ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ಬ್ರೆಸ್ಟ್ ಹಾಗೂ ಎಂಡೋಕ್ರೈಂ ಸರ್ಜನ್ ಡಾ.ಸ್ಮಿತಾ.ಎಸ್.ರಾವ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಟೆಕ್ನಾಲಜಿಯ ಕಾಲೇಜು ಆಂತರಿಕ ದೂರು ಸಮಿತಿ ಹಾಗೂ ಕುಂದುಕೊರತೆ ನಿವಾರಣಾ ಪ್ರಕೋಷ್ಟ ಇದರ ಸಂಯುಕ್ತ ಆಶ್ರಯದಲ್ಲಿ ಸ್ತನ ಕ್ಯಾನ್ಸರ್ ಕುರಿತು ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಾಡಿದರು. ಕ್ಯಾನ್ಸರ್ ಪ್ರಾಥಮಿಕ ಹಂತದಲ್ಲಿಯೇ ಗುರುತಿಸಲ್ಪಟ್ಟರೆ ಅದನ್ನು ಗುಣಪಡಿಸಬಹುದು, ಆದರೆ ಹೆಚ್ಚಿನ ಸಂದರ್ಭದಲ್ಲಿ ನಾಚಿಕೆಪಟ್ಟು ಇತರರೊಡನೆ ಹೇಳಿಕೊಳ್ಳದೆ ನಾವು ಮಾಡುವ ಸ್ವಯಂ ವೈದ್ಯ ಪದ್ಧತಿಯಿಂದ ಖಾಯಿಲೆಗಳು ಗುಣಪಡಿಸಲಾರದ ಮಟ್ಟಕ್ಕೆ ಹೋಗುತ್ತವೆ. ಅತಿಯಾದ ನೋವು ಮತ್ತು ರಕ್ತಸ್ರಾವ ಕ್ಯಾನ್ಸರ್ ರೋಗದ ಅಂತಿಮ ಘಟ್ಟ ಎಂದು ಅವರು ಹೇಳಿದರು. ನಮ್ಮ ದೇಹದಲ್ಲಿ ಅಸಹಜ ಬೆಳವಣಿಗೆಗಳು ಕಂಡು ಬಂದ ತಕ್ಷಣ ತಜ್ಞ ವೈದ್ಯರುಗಳನ್ನು ಸಂಪರ್ಕಿಸಬೇಕು. ಶೇ.10 ರಷ್ಟು ಸ್ತನ ಕ್ಯಾನ್ಸರ್ ಅನುವಂಶಿಕವಾಗಿ ಬರಬಹುದು,…

Read More

ಮಡಿಕೇರಿ ಅ.31 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ  ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಸೇರಿದಂತೆ ಕಾಂಗ್ರೆಸ್‍ಪ್ರಮುಖರು ಹಾಗೂ ಕಾರ್ಯಕರ್ತರು  ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್ ಮುಖಂಡರಾದ ಟಿ.ಪಿ.ರಮೇಶ್,  ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವೈ.ರಾಜೇಶ್,  ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ತೆನ್ನಿರ ಮೈನಾ, ಮಹಿಳಾ ಘಟಕದ ನಗರಾಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ,   ಮಡಿಕೇರಿ ಬ್ಲಾಕ್ ಅಧ್ಯಕ್ಷ ಹಂಸ, ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜಿ.ಪೀಟರ್, ನಗರಸಭಾ ಮಾಜಿ ಅಧ್ಯಕ್ಷರಾದ ಜುಲೈಕಾಬಿ,  ಪ್ರಮುಖರಾದ ವಿ.ಪಿ.ಸುರೇಶ್, ಆರ್.ಪಿ.ಚಂದ್ರಶೇಖರ್, ಚುಮ್ಮಿದೇವಯ್ಯ ಸೇರಿದಂತೆ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.

Read More

ಮಡಿಕೇರಿ ಅ.31 :  ಬಾಗಲಕೋಟೆಯಲ್ಲಿ ನಡೆದ ದಕ್ಷಿಣ ವಲಯ ಸಬ್ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ  ಕೊಡಗು ವಿದ್ಯಾಲಯ ಬಾಲಕ ಮತ್ತು ಬಾಲಕಿಯರ ಹಾಕಿ ತಂಡವು  ಉತ್ತಮ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ. ನಾಯಕಿ ನೀತು ಚೌಧರಿ, ಉಪನಾಯಕಿ ಪರ್ಲಿನ್ ಪೂವಮ್ಮ ನೇತೃತ್ವದ ಸಬ್ ಜೂನಿಯರ್ ಬಾಲಕಿಯರ ಹಾಕಿ ತಂಡ ಹಾಗೂ ನಾಯಕ ಧವನ್ ಉಪನಾಯಕ ಆಯೂಷ್ ಶೆಟ್ಟಿ ನೇತೃತ್ವದ ಸಬ್ ಜೂನಿಯರ್ ಬಾಲಕರ ಹಾಕಿ ತಂಡವು ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಲೀಗ್ ಮತ್ತು ನಾಕೌಟ್ ಹಂತದಲ್ಲಿ ತಾನಾಡಿದ ಎಲ್ಲಾ ಪಂದ್ಯಾವಳಿಗಳಲ್ಲೂ  ಭರ್ಜರಿ ಗೆಲುವು ದಾಖಲಿಸುವ ಮೂಲಕ ಫೈನಲ್  ಪಂದ್ಯದಲ್ಲಿ ರನ್ನರ್ ಅಫ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಕೊಡಗು ವಿದ್ಯಾಲಯ ಬಾಲಕಿಯರ ತಂಡವು 0-1 ಗೋಲಿನಿಂದ ಮಹಾರಾಷ್ಟ್ರ ತಂಡದ ವಿರುದ್ಧ ಹಾಗೂ ಕೊಡಗು ವಿದ್ಯಾಲಯ ಬಾಲಕರ ತಂಡವು 0-1 ಗೋಲಿನಿಂದ ಬಾಗಲಕೋಟೆ ತಂಡದ ವಿರುದ್ಧ ಸೊಲನ್ನನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.  ಕೊಡಗು ವಿದ್ಯಾಲಯ ಬಾಲಕಿಯರ ತಂಡದ ನಾಯಕಿ…

Read More

ಗುಜರಾತ್ : ಭಾರತಕ್ಕೆ ಮುಂದಿನ 25 ವರ್ಷಗಳು ಅತ್ಯಂತ ಪ್ರಮುಖ ವರ್ಷಗಳಾಗಿರಲಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದರು. ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಮಂಗಳವಾರ ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಏಕತಾ ನಗರದಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ಜಲ ಅರ್ಚನೆ ಮತ್ತು ಪುಷ್ಪಾರ್ಚನೆ ಮಾಡಿದರು. ಬಳಿಕ ಮಾತನಾಡಿದ ಅವರು, ಈ ದಿನ ನಮ್ಮ ಸಮಾಜದಲ್ಲಿ ಏಕತೆ ಮತ್ತು ಸಹೋದರತ್ವದ ಮನೋಭಾವವನ್ನು ಇನ್ನಷ್ಟು ಹೆಚ್ಚಿಸಲಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿ ನೆರೆದಿರುವ ಯುವಕರು ಮತ್ತು ಧೈರ್ಯಶಾಲಿಗಳ ಉತ್ಸಾಹವು ‘ರಾಷ್ಟ್ರೀಯ ಏಕತಾ ದಿನ’ದ ದೊಡ್ಡ ಶಕ್ತಿಯಾಗಿದೆ ಎಂದು ಹೇಳಿದರು. ಮಿನಿ ಭಾರತದ ರೂಪ ವಿಭಿನ್ನವಾಗಿ ಕಾಣಿಸುತ್ತಿದೆ. ಇಲ್ಲಿ ಭಾಷೆ, ಸಂಪ್ರದಾಯ ವಿಭಿನ್ನವಾಗಿದೆ. ಆದರೆ, ಪ್ರತಿಯೊಬ್ಬ ವ್ಯಕ್ತಿಯೂ ಒಗ್ಗಟ್ಟಾಗಿದ್ದಾರೆ. ಅದು ಬಲವಾದ ಸಂಪರ್ಕವನ್ನು ಹೊಂದಿದೆ. ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ನಡೆದ ಕಾರ್ಯಕ್ರಮ, ಜನವರಿ 26 ರಂದು ಕರ್ತವ್ಯ ಪಥದಲ್ಲಿ ನಡೆದ ಪರೇಡ್ ಮತ್ತು ನರ್ಮದಾ ತೀರದಲ್ಲಿ…

Read More

ನಾಪೋಕ್ಲು ಅ.31 : ಅಖಿಲ ಕೊಡವ ಸಮಾಜದ ಅಧ್ಯಕ್ಷರಾಗಿ ಸುಮಾರು ಐದು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ದಿವಂಗತ ಮಾತಂಡ ಮೊಣ್ಣಪ್ಪ ಅವರ ಜ್ಞಾಪಕಾರ್ಥವಾಗಿ ವಿರಾಜಪೇಟೆಯ ಮುಖ್ಯ ರಸ್ತೆಯೊಂದಕ್ಕೆ ಅವರ ಹೆಸರು ನಾಮಕರಣ ಮಾಡಲು ಅಖಿಲ ಕೊಡವ ಸಮಾಜ ಮನವಿ ಮಾಡಿದೆ. ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಅಖಿಲ ಕೊಡವ ಸಮಾಜದ ಪರವಾಗಿ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಹಾಗೂ ಗೌರವ ಕಾರ್ಯದರ್ಶಿ ಕೀತಿಯಂಡ ವಿಜಯಕುಮಾರ್ ಅವರು ಮನವಿ ಸಲ್ಲಿಸಿದರು. ಈ ಸಂದರ್ಭ ಕುಂಜಿಲ ಗ್ರಾ.ಪಂ ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಹಾಜರಿದ್ದರು. ವರದಿ : ದುಗ್ಗಳ ಸದಾನಂದ 

Read More

ಮಡಿಕೇರಿ ಅ.31 : ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಹಾಗೂ ಈ ಯೋಜನೆಯಡಿ ಸಾಲ-ಸೌಲಭ್ಯವನ್ನು ಪಡೆಯಲು ಇಚ್ಛಿಸುವವರು ಕಡ್ಡಾಯವಾಗಿ ಆನ್‍ಲೈನ್ kacdc.karnataka.gov.in ರ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ನ.30 ಕೊನೆಯ ದಿನವಾಗಿದೆ. ಅರಿವು ಶೈಕ್ಷಣಿಕ ಸಾಲ ಯೋಜನೆ:-ಈ ಯೋಜನೆಯಲ್ಲಿ ಸಿ.ಇ.ಟಿ./ಎನ್.ಇ.ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿ ಪರ ಕೋರ್ಸ್‍ಗಳಾದ ಇಂಜಿನಿಯರಿಂಗ್, ವೈದ್ಯಕೀಯ, ಬಿಯುಎಂಎಸ್, ಬಿಡಿಎಸ್. ಬಿಎಎಂಎಸ್., ಬಿಹೆಚ್‍ಎಂಎಸ್, ಎಂಬಿಎ, ಎಂಟೆಕ್, ಎಂಇ, ಎಂಡಿ, ಪಿಎಚ್‍ಡಿ, ಬಿಸಿಎ/ಎಂಸಿಎ, ಎಂಎಸ್ ಅಗ್ರಿಕಲ್ಚರ್, ಬಿಎಸ್ಸಿ ನರ್ಸಿಂಗ್, ಬಿಫಾರಂ/ಎಂಫಾರಂ, ಬಿಎಸ್ಸಿ. ಪ್ಯಾರಾ ಮೆಡಿಕಲ್, ಬಿಎಸ್ಸಿ. ಬಯೋಟೆಕ್ನಾಲಜಿ, ಬಿಟೆಕ್, ಬಿಪಿಟಿ., ಬಿವಿಎಸ್‍ಸಿ./ಎಂವಿ, ಬಿಎನ್‍ಎಂ, ಬಿಎಚ್‍ಎಂ, ಎಂಡಿಎಸ್, ಎಂಎಸ್‍ಡಬ್ಲ್ಯೂ, ಎಲ್‍ಎಲ್‍ಎಂ, ಎಂಎಫ್‍ಎ, ಎಂಎಸ್ಸಿ. ಬಯೋಟೆಕ್ನಾಲಜಿ, ಎಂಎಸ್ಸಿ. ಎಜಿ, ಮುಂತಾದ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ವಾರ್ಷಿಕ ರೂ. 1 ಲಕ್ಷಗಳಂತೆ ಕೋರ್ಸ್ ಅವಧಿಗೆ ಗರಿಷ್ಠ ರೂ. 4 ಲಕ್ಷಗಳಿಂದ ರೂ. 5 ಲಕ್ಷಗಳವರೆಗೆ ವಾರ್ಷಿಕ ಶೇ.2ರ…

Read More

ಮಡಿಕೇರಿ ಅ.31 : ರಾಜ್ಯದ ಕ್ರೀಡಾಪಟುಗಳು ಕಳೆದ 5 ವರ್ಷಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಕ್ರೀಡಾ ಪೋಷಕರಿಗೆ 2023-24ನೇ ಸಾಲಿನಲ್ಲಿ ರೂ.5 ಲಕ್ಷಗಳ ನಗದು ಬಹುಮಾನಗಳೊಂದಿಗೆ ‘ಕರ್ನಾಟಕ ಕ್ರೀಡಾ ಪೋಷಕ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕೊಡಗು ಜಿಲ್ಲೆಯ ಆಸಕ್ತ ಕ್ರೀಡಾಪಟುಗಳು ಅರ್ಜಿ ನಮೂನೆಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಮಡಿಕೇರಿ ಇಲ್ಲಿ ಪಡೆದು ನವೆಂಬರ್, 18 ರೊಳಗೆ ಈ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ.08272-220986 ಮತ್ತು 7975381728 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Read More

ಮಡಿಕೇರಿ ಅ.31 : ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ‘ಜಾಗೃತಿ ಅರಿವು ಸಪ್ತಾಹ’ ಪ್ರಯುಕ್ತ ಪ್ರತಿಜ್ಞಾ ವಚನವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಭೋದಿಸಿದರು. ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.  

Read More

ಮಡಿಕೇರಿ ಅ.31 : ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾ.ಪಂ.ವ್ಯಾಪ್ತಿಯ ಕೆದಮುಳ್ಳೂರು ಗ್ರಾಮದ ಸರ್ವೇ ನಂಬರ್ 370/1 ರ 7.50 ಎಕರೆ ಜಾಗದಲ್ಲಿ 129 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಪ್ರಥಮ ಹಂತದಲ್ಲಿ 60 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ವಿದ್ಯುತ್ ಮತ್ತು ಕುಡಿಯುವ ನೀರು ಸಂಪರ್ಕ ಕಲ್ಪಿಸದೆ ಅರ್ಧಕ್ಕೆ ನಿಂತಿರುವ ಹಿನ್ನೆಲೆ ಈ ಕಾಮಗಾರಿಗಳ ಸಂಬಂಧ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಈಗಾಗಲೇ 60 ಮನೆಗಳ ನಿರ್ಮಾಣ ಕಾಮಗಾರಿ ನಡೆದಿದ್ದು, ಅರ್ಧಕ್ಕೆ ನಿಂತು ಹೋಗಿದೆ. ಈ ಸಂಬಂಧ ಸರ್ಕಾರದ ಗಮನಕ್ಕೆ ತಂದು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು. ಈಗಾಗಲೇ ಸೋಲಾರ್ ದೀಪದ ವ್ಯವಸ್ಥೆ ಮಾಡಲಾಗಿದೆ. ಆಹಾರ ಕಿಟ್, ಟಾರ್ಚ್ ವಿತರಿಸಲಾಗಿದೆ. ಸರ್ಕಾರ ಆದಿವಾಸಿಗಳು, ಬಡವರ ಒಳಿತಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆ ನಿಟ್ಟಿನಲ್ಲಿ ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ…

Read More