ಮಡಿಕೇರಿ ಮೇ 15 NEWS DESK : ನಗರದ ರಾಜಾಸೀಟ್ ನಲ್ಲಿ ಕೋವಿ ಮತ್ತು ಕೊಳಲು ಹೆಸರಿನ ನೂತನ ಚಲನಚಿತ್ರಕ್ಕೆ ಮುಹೂತ೯ ನೆರವೇರಿತು. ಹಿರಿಯ ಕಲಾವಿದ ಕಾಂತಾರ ಖ್ಯಾತಿಯ ಬಾಸುಮ ಕೊಡಗು ನಿದೇ೯ಶನದಲ್ಲಿ ಮಂಗಳೂರಿನ ಇಂಪೀರಿಯಲ್ ಪ್ರೊಡಕ್ಷನ್ಸ್ ಸಂಸ್ಥೆಯ ನಿಮಾ೯ಣದಲ್ಲಿ ತಯಾರಾಗುವ ಕೋವಿ ಮತ್ತು ಕೊಳಲು ಚಿತ್ರಕ್ಕೆ ಮುಹೂತ೯ ಪೂಜೆ ನೆರವೇರಿಸಿ ಖ್ಯಾತ ಜೋತಿಷಿ ಆಯ೯ವಧ೯ನ್ ಗುರೂಜಿ ಕ್ಲಾಪ್ ಮಾಡಿದರು. ಉತ್ತಮ ಕನ್ನಡ ಚಿತ್ರಗಳು ತೆರೆಗೆ ಬರಬೇಕಾಗಿರುವುದು ಇಂದಿನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಬಾಸುಮ ಅವರ ಕೋವಿ ಮತ್ತು ಕೊಳಲು ಭರವಸೆ ಮೂಡಿಸಿದೆ ಎಂದು ಅವರು ಹೇಳಿದರು. ಚಿತ್ರದ ನಿಮಾ೯ಣ ಸಂಸ್ಥೆಯಾದ ಇಂಪೀರಿಯಲ್ ಸಂಸ್ಥೆಯ ಮುಖ್ಯಕಾಯ೯ನಿವ೯ಹಣಾಧಿಕಾರಿ ಹೇಮಂತ್ ಕುಲಾಲ್, ಮಾತನಾಡಿ, ಕೋವಿ ಮತ್ತು ಕೊಳಲು ಉತ್ತಮ ಕಥೆ ಹೊಂದಿರುವ ಹಿನ್ನಲೆಯಲ್ಲಿ ನಿಮಾ೯ಣಕ್ಕೆ ಮುಂದಾಗಿರುವುದಾಗಿ ಹೇಳಿದರು. ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ, ಮಾತನಾಡಿ, ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಹೆಸರಾಗಿರುವ ಹಿರಿಯ ರಂಗಕಮಿ೯ ಬಾಸುಮ ಅವರು ಕನ್ನಡದ…
ಲೇಖಕ: admin
ಮಡಿಕೇರಿ ಮೇ 15 NEWS DESK : ಚೇರಂಬಾಣೆ ಬೇಂಗೂರು ಗ್ರಾಮದಲ್ಲಿರುವ ಪಟ್ಟಮಾಡ ಕುಟುಂಬದ ಐನ್ ಮನೆಯಲ್ಲಿ ಗುರು ಕಾರೋಣ ತೆರೆ ಆಯೋಜಿತವಾಗಿತ್ತು. ಕಾರೋಣ, ಕೊಡಿಭೀರ, ಭೈರವ, ಕುಟ್ಟಿಚಾತ, ಕರಿಬಾಳ್ ಭಗವತಿ, ನುಚ್ಚುಟ್ಟಿ ಈತ್ ಕುಳಿಯ, ಧಮ೯ದೇವತೆ, ಪಂಜುರುಳಿ ಅಂಗಾರ, ಪಾಷಣಮೂತಿ೯ ಕುಳಿಯ ತೆರೆಗಳು ಈ ಸಂದಭ೯ ಜರುಗಿದವು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಪಟ್ಟಮಾಡ ಕುಟುಂಬದ ಐತಿಹಾಸಿಕ ಐನ್ ಮನೆಗೆ ಭೇಟಿ ನೀಡಿ, ಕೊಡಗಿನ ಸಂಸ್ಕೖತಿ ಮತ್ತು ಪರಂಪರೆಯಾಗಿರುವ ಐನ್ ಮನೆಗಳನ್ನು ಪದ್ದತಿಯೊಂದಿಗೆ ಸಂರಕ್ಷಿಸುವ ಕೆಲಸಕ್ಕೆ ತಾನು ಸವ೯ ರೀತಿಯ ನೆರವನ್ನು ನೀಡುತ್ತಾ ಬಂದಿದ್ದೇನೆ ಎಂದರು. ಐನ್ ಮನೆಗಳಲ್ಲಿ ಆಯೋಜಿತವಾಗುವ ಇಂಥ ಸಂಸ್ಕೖತಿ, ಪರಂಪರೆಯ ಧಾಮಿ೯ಕ ಕಾಯ೯ಕ್ರಮಗಳು ಯುವಪೀಳಿಗೆಯಲ್ಲಿ ಉತ್ತಮ ಸಂಸ್ಕಾರ ರೂಪಿಸಲು ನೆರವಾಗುತ್ತದೆ ಎಂದು ಶ್ಲಾಘಿಸಿದರು. ಈ ಸಂದಭ೯ ವಿಧಾನಪರಿಷತ್ ಮಾಜಿ ಸದಸ್ಯ ಮಂಡೇಪಂಡ ಸುನೀಲ್ ಸುಬ್ರಹ್ಮಣಿ, ಪಟ್ಟಮಾಡ ಕುಟುಂಬದ ಪಟ್ಟೇದಾರ ಡಿಕ್ಕಾ ಕಾಳಪ್ಪ, ಕುಟುಂಬ ಸಮಿತಿ ಅಧ್ಯಕ್ಷ ಪಿ.ಡಿ.ಪೊನ್ನಪ್ಪ, ಕಾಯ೯ದಶಿ೯…
ಮಡಿಕೇರಿ,ಮೇ 15 NEWS DESK : ಮಡಿಕೇರಿಯಲ್ಲಿರುವ ಕೊಡವ ಹೆರಿಟೇಜ್ ಕೇಂದ್ರವನ್ನು ಮಡಿಕೇರಿ ಕೊಡವ ಸಮಾಜಕ್ಕೆ ಹಸ್ತಾಂತರಿಸುವ ಕುರಿತು ಮಡಿಕೇರಿ ಕ್ಷೇತ್ರದ ಡಾ.ಮಂತ್‍ರ್ ಗೌಡ ಅವರ ನೇತೃತ್ವದಲ್ಲಿ ಚರ್ಚೆ ನಡೆಸಲಾಯಿತು. ನಗರದ ಸುದರ್ಶನ್ ಅತಿಥಿ ಗೃಹದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶಾಸಕರೊಂದಿಗೆ ಚರ್ಚಿಸಿ, ಕೊಡವ ಹೆರಿಟೇಜ್ ಕೇಂದ್ರದ ಕಟ್ಟಡ ಕಾಮಗಾರಿ ಶೇ.90ರಷ್ಟು ಮುಕ್ತಾಯವಾಗಿದ್ದು, ಒಳಾಂಗಣ ಕಾಮಗಾರಿಗಳು ಬಾಕಿ ಇವೆ. ಇದನ್ನು ಕೊಡವ ಸಂಸ್ಕøತಿಯ ಮ್ಯೂಸಿಯಂ ಮಾದರಿಯಲ್ಲಿ ಅನುಷ್ಟಾನ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಕೊಡವ ಹೆರಿಟೇಜ್ ಕೇಂದ್ರದ ನಿರ್ವಹಣೆ, ಮೇಲ್ವಿಚಾರಣೆಗಾಗಿ ಕೇಂದ್ರವನ್ನು ಕೊಡವ ಸಮಾಜಕ್ಕೆ ಹಸ್ತಾಂತರಿಸಿದರೆ ಸುಲಭವಾಗುತ್ತದೆ ಎಂದು ಶಾಸಕರ ಗಮನ ಸೆಳೆದರು. ಬಳಿಕ ಶಾಸಕ ಡಾ.ಮಂತರ್ ಗೌಡ ಅವರಿಗೆ ಈ ಕುರಿತು ಮನವಿ ಸಲ್ಲಿಸಲಾಯಿತು. ಸಭೆಯಲ್ಲಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಮಡಿಕೇರಿ ಕೊಡವ ಸಮಾಜ ಉತ್ತಮ ರೀತಿಯಲ್ಲಿ ಸಂಸ್ಥೆಯನ್ನು ನಿರ್ವಹಿಸುವ ವಿಶ್ವಾಸವಿದೆ. ಕೊಡವ ಹೆರಿಟೇಜ್ ಕೇಂದ್ರದ ಜವಾಬ್ದಾರಿಯನ್ನು ಕೊಡವ ಸಮಾಜಕ್ಕೆ ನೀಡುವ…
ಮಡಿಕೇರಿ ಮೇ 15 NEWS DESK : ಕೊಡಗು ಜಿಲ್ಲೆಯಲ್ಲಿ ಮುಂಗಾರು ಶೀಘ್ರ ಆರಂಭವಾಗುವ ಲಕ್ಷಣಗಳು ಕಾಣುತ್ತಿದ್ದು, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಸೂಚಿಸಿದ್ದಾರೆ. ಪೊನ್ನಂಪೇಟೆಯ ತಾ.ಪಂ.ಸಭಾಂಗಣದಲ್ಲಿ ನಡೆದ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲ್ಲೂಕು ಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಜಿಲ್ಲೆಯ ಅಲ್ಲಲ್ಲಿ ಗಾಳಿ ಮಳೆಗೆ ಮರದ ಕೊಂಬೆಗಳು ಬೀಳುತ್ತಿದ್ದು, ಇದರಿಂದ ವಿದ್ಯುತ್ ಹಾಗೂ ಸಾರಿಗೆ ಸಂಪರ್ಕಕ್ಕೆ ಅಡಚಣೆ ಉಂಟಾಗುತ್ತದೆ. ಆದ್ದರಿಂದ ರಸ್ತೆ ಬದಿ ಬೀಳುವ ಕೊಂಬೆಗಳನ್ನು ಕಡಿಯುವುದು, ಚರಂಡಿ ಹೂಳು ತೆಗೆಯುವುದು, ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವುದು, ಮತ್ತಿತರ ಅಗತ್ಯ ಕ್ರಮವಹಿಸುವಂತೆ ಎ.ಎಸ್.ಪೊನ್ನಣ್ಣ ಅವರು ನಿರ್ದೇಶನ ನೀಡಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ್ದಲ್ಲಿ ತಳಮಟ್ಟದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ. ಆ ನಿಟ್ಟಿನಲ್ಲಿ ಇಚ್ಛಾಶಕ್ತಿ ತೋರಬೇಕು ಎಂದು…
ಮಡಿಕೇರಿ NEWS DESK ಮೇ 15 : ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗದ ರಾಜ್ಯ ಕಾಂಗ್ರೆಸ್ ಸರಕಾರ ವಿದ್ಯಾರ್ಥಿಗಳಿಗೆ ಸಮಾನತೆಯ ಪಾಠ ಮಾಡುವ ಬದಲು ಹಿಜಾಬ್ ರಾಜಕಾರಣದ ಮೂಲಕ ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಭಿವೃದ್ಧಿ ಶೂನ್ಯ ರಾಜ್ಯ ಸರಕಾರ ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳಲ್ಲಿ ಅಸಮಾನತೆ ಮೂಡಿಸುತ್ತಿದೆ. ಸಮವಸ್ತ್ರ ಮತ್ತು ಸಮಾನತೆಯ ಅರಿವಿಲ್ಲದ ಕಾಂಗ್ರೆಸ್ ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿದೆ. ಒಂದು ಧರ್ಮದವರನ್ನು ಓಲೈಸಿಕೊಳ್ಳುವ ಭರದಲ್ಲಿ ಮತ್ತೊಂದು ಧರ್ಮದವರ ಮೇಲೆ ಗದಾ ಪ್ರಹಾರ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ಸಮಾನತೆ ಮೂಡಿಸಲಾಗದವರು ಸಮಾಜದಲ್ಲಿ ಐಕ್ಯತೆ ಕಾಪಾಡುವ ಪಾಠ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಸರಕಾರದ ಹಿಜಾಬ್ ಅನುಮತಿಯ ನಿಲುವು ಒಡೆದು ಆಳುವ ನೀತಿ ಎನ್ನುವುದು ಮತ್ತೊಮ್ಮೆ ರಾಜ್ಯದ ಜನತೆಗೆ ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿರುವ ಹಿಂದೂ ಕಾರ್ಯಕರ್ತರು ಮೌನಕ್ಕೆ ಶರಣಾಗಿರುವುದು ದುರಾದೃಷ್ಟಕರ. “ಸಬ್…
ಮಡಿಕೇರಿ NEWS DESK ಮೇ 15 : ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅನುಮತಿ ನೀಡಿರುವ ರಾಜ್ಯ ಸರಕಾರದ ಕ್ರಮ ಖಂಡನೀಯವೆಂದು ಸೋಮವಾರಪೇಟೆ ಬಿಜೆಪಿ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಿಜಾಬ್ ಪ್ರಕರಣ ನ್ಯಾಯಾಲಯದಲ್ಲಿದ್ದು, ವಿಚಾರಣೆ ಪೂರ್ಣಗೊಳ್ಳುವ ಮೊದಲೇ ಸರಕಾರ ನೀಡಿರುವ ಆದೇಶ ಕಾನೂನಿಗೆ ವಿರುದ್ಧವಾಗಿದೆ. ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. 2022ರಲ್ಲಿದ್ದ ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆದಿರುವ ಕಾಂಗ್ರೆಸ್ ಸರಕಾರ ಒಂದು ಸಮುದಾಯದ ಓಲೈಕೆಗಾಗಿ ವಿದ್ಯಾರ್ಥಿಗಳ ಸಮಾನತೆಯ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೆಲ್ಲರೂ ಸರ್ವ ಸಮಾನರು ಮತ್ತು ಐಕ್ಯತೆಯಿಂದ ಶಿಕ್ಷಣದ ಗುರಿ ಸಾಧಿಸಬೇಕೆನ್ನುವ ಉದ್ದೇಶದಿಂದ ಸಮವಸ್ತ್ರದ ವ್ಯವಸ್ಥೆಯನ್ನು ಪಾಲಿಸಲಾಗುತ್ತಿದೆ. ಆದರೆ ಕಾಂಗ್ರೆಸ್ ಸರಕಾರ ಶಿಕ್ಷಣದ ಹಕ್ಕನ್ನು ಎತ್ತಿ ಹಿಡಿಯುವ ಕಾರಣ ನೀಡಿ ವಿದ್ಯಾರ್ಥಿಗಳ ಸಮಾನತೆಯ ಹಕ್ಕನ್ನು ಕಸಿದುಕೊಳ್ಳುತ್ತಿದೆ. ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳಲ್ಲಿ ಭೇದಭಾವ ಮೂಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ದಾವಣಗೆರೆ ಉಪಚುನಾವಣೆಯಲ್ಲಿ ಒಂದು ಸಮುದಾಯದ ಮಂದಿ ರಾಜ್ಯ ಸರಕಾರದ…
ಮಡಿಕೇರಿ NEWS DESK ಮೇ 15 : ವೈಯುಕ್ತಿಕ ಕಾರಣದಿಂದಾಗಿ ಭಾಗಮಂಡಲ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕೋಳಿಬೈಲು ವೆಂಕಟೇಶ್ ರವರು ಇತ್ತೀಚಿಗೆ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಇಂದು ಭಾಗಮಂಡಲಕ್ಕೆ ಕಾರ್ಯನಿಮಿತ್ತ ಆಗಮಿಸಿದ್ದ ಮಾನ್ಯ ಶಾಸಕರು, ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ವೆಂಕಟೇಶ್ ರವರೊಂದಿಗೆ ಮಾತನಾಡಿ, ಪಕ್ಷದ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುವಂತೆ ಕೇಳಿಕೊಂಡ ಮೇರೆಗೆ, ಶಾಸಕರ ಹಾಗೂ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ತಮ್ಮ ನಿಲುವನ್ನು ಬದಲಾಯಿಸಿ ರಾಜೀನಾಮೆಯನ್ನು ಹಿಂಪಡೆದಿದ್ದಾರೆ.
ಮಡಿಕೇರಿ NEWS DESK ಮೇ 15 : ನೀಟ್ ಪರೀಕ್ಷೆ ರದ್ದತಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನದ ಜೊತೆಗಿನ ಚೆಲ್ಲಾಟವಾಗಿದ್ದು, ಈ ಕ್ರಮ ಖಂಡನೀಯವೆಂದು ಎನ್‌ಎಸ್‌ಯುಐ ಕೊಡಗು ಜಿಲ್ಲಾಧ್ಯಕ್ಷ ಅಬ್ದುಲ್ ರಾಶೀದ್ ಪಿ.ಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಶ್ನೆ ಪತ್ರಿಕೆ ಸೋರಿಕೆಯ ಕಾರಣದಿಂದ ನೀಟ್ ಪರೀಕ್ಷೆ ರದ್ದಾಗಿರುವುದು ಇಡೀ ಶಿಕ್ಷಣ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಹಗಲಿರುಳು ಕಷ್ಟಪಟ್ಟು ಓದಿದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಈ ಘಟನೆ ದೊಡ್ಡ ಪೆಟ್ಟು ನೀಡಿದೆ. ‘ಕೋಚಿಂಗ್ ಮಾಫಿಯಾ’, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ರಾಜಕೀಯ ವ್ಯಕ್ತಿಗಳ ನಡುವಿನ ಭ್ರಷ್ಟ ಸಂಬಂಧದಿಂದಾಗಿ ವಿದ್ಯಾರ್ಥಿಗಳು ಇಂದು ಬಲಿಪಶುಗಳಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅತಿಯಾದ ಕೇಂದ್ರೀಕರಣವು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ. ರಾಜ್ಯಗಳ ಅಧಿಕಾರವನ್ನು ಕಿತ್ತುಕೊಂಡು, ಇಡೀ ವೈದ್ಯಕೀಯ ಶಿಕ್ಷಣದ ಪ್ರವೇಶ ಪ್ರಕ್ರಿಯೆಯನ್ನು ಎನ್‌ಟಿಎ ಅಡಿಯಲ್ಲಿ ತಂದಿರುವುದರಿಂದ ಈ ವ್ಯವಸ್ಥೆ ಹದಗೆಟ್ಟಿದೆ. ಇಡೀ ದೇಶಕ್ಕೆ ಒಂದೇ ಪರೀಕ್ಷೆ ಇರುವುದರಿಂದ, ಯಾವುದಾದರು ಒಂದು ಕಡೆ ಅಕ್ರಮ ನಡೆದರೂ ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು…
ಮಡಿಕೇರಿ NEWS DESK ಮೇ 15 : ಶಾಸಕರಾಗಿ ಅಧಿಕಾರ ವಹಿಸಿಕೊಂಡು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರನ್ನು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಪ್ರಮುಖರು ಹಾಗೂ ಹಲವು ಮುಖಂಡರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಮಡಿಕೇರಿ ಬ್ಲಾಕ್ ಪ್ರಚಾರ ಸಮಿತಿಯ ಅಧ್ಯಕ್ಷ ವಿ.ಜಿ.ಮೋಹನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರ ಜನಪರ ಕಾರ್ಯಗಳನ್ನು ಶ್ಲಾಘಿಸಲಾಯಿತು. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಮತ್ತಷ್ಟು ವೇಗವಾಗಿ ಸಾಗಲಿ ಎಂದು ಆಶಿಸಲಾಯಿತು. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹಂಸ ಹೆಚ್.ಎ, ಕೆಪಿಸಿಸಿ ಪ್ರಚಾರ ಸಮಿತಿಯ ಉಪಾಧ್ಯಕ್ಷೆ ಶಾಂತೆಯಂಡ ವೀಣಾ ಅಚ್ಚಯ್ಯ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್, ಅಕ್ರಮ ಸಕ್ರಮ ಸಮಿತಿಯ ಸದಸ್ಯ ಹರಿಪ್ರಸಾದ್ ಕೋಚನ ಪ್ರಮುಖರಾದ ಮೂವ್ವನ ಕೀರ್ತನ್, ರೂಪ ಸುಬ್ಬಯ್ಯ, ಲತೀಫ್ ಸುಂಟಿಕೊಪ್ಪ, ಉಳುವಾರನ ಪವಿತ್ರ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ತೆನ್ನಿರ ಮೈನಾ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜಿ.ಪೀಟರ್,…
ವಿರಾಜಪೇಟೆ ಮೇ 14 NEWS DESK : ವಿರಾಜಪೇಟೆಯ ಮಗ್ಗುಲದಲ್ಲಿರುವ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕೊಡಗಿನಲ್ಲಿ ಸುಸ್ಥಿರ ಉದ್ಯಮಶೀಲತೆಗಾಗಿ ಕಂಜಿತಂಡ ಮಿಸಸ್ ರಾಣಿ ಅಯ್ಯಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕೊಡಗಿನಲ್ಲಿ ನವೀನ ಉದ್ಯಮಶೀಲತಾ ಉದ್ಯಮಗಳ ಮೂಲಕ ಸುಸ್ಥಿರತೆಯನ್ನು ಹೆಚ್ಚಿಸಲು ಬದ್ಧರಾಗಿರುವ ವ್ಯಕ್ತಿಗಳನ್ನು ಗುರುತಿಸಿ ನೀಡುವ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಸುನೀಲ್ ಮುದ್ದಯ್ಯ ಅವರು, ಸುಸ್ಥಿರ ಉದ್ಯಮಶೀಲತೆಗಾಗಿ ರಾಣಿ ಅಯ್ಯಪ್ಪ ಪ್ರಶಸ್ತಿಯು ಒಂದು ವಿಶಿಷ್ಟ ಗೌರವವಾಗಿದ್ದು, ಅದರ ಹೆಸರಿನ ಮೌಲ್ಯಗಳು ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಟ್ರಸ್ಟ್ ಮುಖಾಂತರ ಕುಟುಂಬದವರಿಂದ ರಾಣಿ ಅಯ್ಯಪ್ಪ ಅವರ ಹೆಸರಿನಲ್ಲಿ ಸ್ಥಾಪಿಸಿದ ಪ್ರಶಸ್ತಿ ಮತ್ತು ಅವರ ಸ್ಮರಣೆಯನ್ನು ಕಾಪಾಡುವುದು ಮತ್ತು ಕೊಡಗಿಗೆ ಅವರ ಕೊಡುಗೆಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ. ಅಲ್ಲದೆ ಆಹಾರ ಭದ್ರತೆ ಮತ್ತು ಗ್ರಾಮೀಣ ಜೀವನೋಪಾಯಕ್ಕೆ ಸುಸ್ಥಿರತೆಯ ನುಡಿಗಟ್ಟುಗಳೊಂದಿಗೆ ಜಗತ್ತು ಇಂದು ಹೋರಾಡುತ್ತಿದೆ. ಸುಸ್ಥಿರ ಕೃಷಿಯು ಮುಂದಕ್ಕೆ ಒಂದು ಪ್ರಮುಖ…






