ಕುಶಾಲನಗರ ಮಾ.27 NEWS DESK : ಕರ್ನಾಟಕ ಸರ್ಕಾರದ ಸಮಗ್ರ ಶಿಕ್ಷಣ – ಕರ್ನಾಟಕದ ರಾಜ್ಯ ನಿರ್ದೇಶನಾಲಯದ ನಿರ್ದೇಶನದಂತೆ ರಾಜ್ಯ ಶಿಕ್ಷಣ ಮತ್ತು ತರಬೇತಿ ಇಲಾಖೆ( ಡಿ.ಎಸ್.ಇ.ಆರ್.ಟಿ.) ಯ ವತಿಯಿಂದ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಯಲ್ಲಿ ಜಿಲ್ಲಾ ವೃತ್ತಿಪರ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ (ಕೆರಿಯರ್) ಘಟಕವನ್ನು ಸ್ಥಾಪಿಸಲಾಗಿದೆ ಎಂದು ಡಯಟ್ ಸಂಸ್ಥೆಯ ಪ್ರಾಂಶುಪಾಲರು ಆದ ಪದನಿಮಿತ್ತ ಉಪನಿರ್ದೇಶಕ(ಅಭಿವೃದ್ದಿ)ರಾದ ರಾಮಚಂದ್ರ ರಾಜೇ ಅರಸ್ ತಿಳಿಸಿದರು. ಕುಶಾಲನಗರ ತಾಲ್ಲೂಕಿನ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಯಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ವೃತ್ತಿಪರ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ (ಕೆರಿಯರ್) ಘಟಕವನ್ನುಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ 34 ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಗಳಲ್ಲಿ ಇಂತಹ ವೃತ್ತಿಪರ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು. ಡಯಟ್ ಸಂಸ್ಥೆಯಲ್ಲಿ ಆರಂಭಿಸಲಾಗಿರುವ ಜಿಲ್ಲಾ ವೃತ್ತಿಪರ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ ಘಟಕದ ಮೂಲಕ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಅವರ ಆಸಕ್ತಿ…
ಲೇಖಕ: admin
ಚಿಕ್ಕ ಅಳುವಾರ ಮಾ.27 NEWS DESK : ನಾಟಕ ಎಂಬುದು ಕೇವಲ ಮನರಂಜನೆಯ ಭಾಗ ಅಲ್ಲ; ಅದು ಸಮಾಜದ ಚಿಂತನೆ, ನೈತಿಕ ಬೋಧನೆಗಳನ್ನು, ಅಗತ್ಯ ವಿಚಾರಗಳನ್ನು ನಮ್ಮ ಮನಸ್ಸಿನ ಆಳಕ್ಕೆ ಇಳಿಸುವ, ಹೃದಯಸ್ಪರ್ಶಿ ಪ್ರದರ್ಶನವನ್ನು ತೆರೆಯ ಮೇಲೆ ತರುವ ಕಲೆ. ಅಲ್ಲದೇ ರಂಗಭೂಮಿಯು ಸಮಾಜದ ಒಂದು ಜೀವಂತ ದರ್ಪಣ ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅಭಿಪ್ರಾಯಪಟ್ಟರು. ಚಿಕ್ಕ ಅಳುವಾರದ ಜ್ಞಾನ ಕಾವೇರಿ ಆವರಣದಲ್ಲಿ ಕೊಡಗು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ- 20026 ರ ಅಂಗವಾಗಿ ನಡೆದ ವಿಶೇಷ ಉಪನ್ಯಾಸ, ರಂಗಗೌರವ ಮತ್ತು ರಂಗಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಿನಿಮಾ ಮತ್ತು ರಂಗಭೂಮಿಗೂ ಬಹಳಷ್ಟು ವ್ಯತ್ಯಾಸವಿದೆ. ಅಂತಾರಾಷ್ಟಿಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬಹುತೇಕ ನಟರು ರಂಗಭೂಮಿ ಕಲಾವಿದರೇ ಆಗಿದ್ದಾರೆ. ಅವರ ನಟನೆಯಲ್ಲಿ ಒಂದು ಜೀವಂತಿಕೆ ಇತ್ತು. ಆದರೆ ಇಂದು ಈ ಜೀವಂತಿಕೆಯ ನಟನೆಯನ್ನು ಕಾಣುವುದು ವಿರಳವಾಗಿದೆ ಎಂದು…
ಮಡಿಕೇರಿ ಮಾ.27 NEWS DESK : ಶ್ರೀ ವಿನಾಯಕ ಸೇವಾ ಟ್ರಸ್ಟ್ ಕತ್ತಲೆಕಾಡು-ಜೇನುಕೊಲ್ಲಿ ವತಿಯಿಂದ ಶ್ರೀರಾಮನವಮಿ, ದುರ್ಗಾಪೂಜೆ ಹಾಗೂ ಟ್ರಸ್ಟ್‌ನ ವಾರ್ಷಿಕ ಮಹಾಸಭೆ ಸಂಭ್ರಮದಿಂದ ಜರುಗಿತು. ಬ್ರಹ್ಮಶ್ರೀ ವೇದಮೂರ್ತಿ ಗಿರೀಶ್ ತಂತ್ರಿಯವರ ನೇತೃತ್ವದಲ್ಲಿ ಗುರುವಾರ ಪೂಜಾ ಕಾರ್ಯಗಳು ನೆರವೇರಿದವು. ಟ್ರಸ್ಟ್‌ನ ನೂತನ ಜಾಗದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಸಭಾಭವನಕ್ಕೆ ದೇವರ ಚಿತ್ರಪಟವನ್ನು ಮೆರವಣಿಗೆಯಲ್ಲಿ ತಂದು ಇರಿಸಲಾಯಿತು. ನೂತನ ಭಜನಾ ಮಂದಿರ ನಿರ್ಮಾಣ ಸಂಬಂಧ ಟ್ರಸ್ಟ್ ವತಿಯಿಂದ ಸಾಮೂಹಿಕ ದುರ್ಗಾ ಹೋಮ ಏರ್ಪಡಿಸಲಾಗಿತ್ತು. ಬಳಿಕ ಶ್ರೀ ರಾಮಚಂದ್ರನ ಚಿತ್ರಪಟಕ್ಕೆ ಆರತಿ ಬೆಳಗಿ ಪ್ರಾರ್ಥಿಸಲಾಯಿತು. ದಿನದ ಪ್ರಯುಕ್ತ ಪುಟಾಣಿ ಮಕ್ಕಳು ಶ್ರೀರಾಮಚಂದ್ರ ಹಾಗೂ ಸೀತಾ ಮಾತೆಯ ವೇಷ ಧರಿಸಿ ಪಾಲ್ಗೊಂಡು ವಿಶೇಷ ಮೆರುಗು ನೀಡಿದರು. ಗಿರೀಶ್ ತಂತ್ರಿ ಮಾತನಾಡಿ, ನಮ್ಮ ಧರ್ಮದ ಪಾಲನೆ ಮತ್ತು ರಕ್ಷಣೆಯನ್ನು ನಾವೇ ಮಾಡಬೇಕು. ಧರ್ಮ ಕಾರ್ಯದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡಾಗಿ ನಮ್ಮಲ್ಲಿ ಜಾಗೃತಿ ನಿರಂತರವಾಗಿರಲು ಸಾಧ್ಯವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನಮ್ಮವರೇ ನಮ್ಮ ಧರ್ಮವನ್ನು ಬೇರೆ ಬೇರೆ ರೀತಿಯಲ್ಲಿ ಅವಹೇಳನ ಮಾಡುತ್ತಿದ್ದಾರೆಂದು ಬೇಸರ…
ಗೋಣಿಕೊಪ್ಪ ಮಾ.27 NEWS DESK : ರಾಮನವಮಿ ಪ್ರಯುಕ್ತ ಗೋಣಿಕೊಪ್ಪ ನಗರ ಹಿಂದೂ ಪರ ಸಂಘಟನೆಗಳು ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು. ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ನಂತರ ರಾಮ ಸ್ತೋತ್ರವನ್ನು ಪಠಿಸಿ ಸಮಾಜದ ಸುಭೀಕ್ಷೆಗೆ ಪ್ರಾರ್ಥಿಸಿದರು. ಇದೇ ಸಂದರ್ಭ ನೆರದವರಿಗೆ ಸಿಹಿ ಹಂಚಲಾಯಿತು. ವಿಶ್ವ ಹಿಂದೂ ಪರಿಷತ್ ಪೊನ್ನಂಪೇಟೆ ತಾಲೂಕು ಪ್ರಖಂಡ ಅಧ್ಯಕ್ಷ ಅಮೃತ್‍ರಾಜ್, ಉಪಾಧ್ಯಕ್ಷ ಎಂ.ಎಸ್.ಸುಬ್ರಮಣಿ, ಕಾರ್ಯದರ್ಶಿ ಉಮೇಶ್, ಮಾಜಿ ಕಾರ್ಯದರ್ಶಿ ಅಮ್ಮತ್ತೀರ ಸುರೇಶ್, ಗೋಣಿಕೊಪ್ಪ ನಗರಘಟಕ ಕಾರ್ಯದರ್ಶಿ ಕೆ.ವಿ. ಸುರೇಶ್, ಗೋ ರಕ್ಷಕ್ ಅರುಣ್ ಗೋಪಾಲಕೃಷ್ಣ, ಪ್ರಚಾರಕ್ ಪುಷ್ಪಾರಾಜ್, ಸಂಘ ಪರಿವಾರದ ಪ್ರಮುಖರಾದ ನೆಲ್ಲೀರ ಚಲನ್, ಸುರೇಶ್ ರೈ, ರಾಜೇಶ್, ಕೊಣಿಯಂಡ ಬೋಜಮ್ಮ, ಕೆ.ಜಿ.ರಾಮಕೃಷ್ಣ, ದೀಪಕ್, ಕುಮಾರ, ಬೆಂಜಂಡ ರಶ್ಮಿ ದೇವಯ್ಯ, ಎಂ.ಎನ್. ಗಣೇಶ್, ಅಣ್ಣಪ್ಪ, ಚೇತನ್, ಸುಬ್ರಮಣಿ, ಜ್ಯೊತಿ, ವಿನು, ಲಕ್ಷ್ಮಿರೆಡ್ಡಿ, ಮಂಜು, ವಿನೋದ್, ಧನಲಕ್ಷ್ಮಿ, ಮಣಿಕಂಠ, ಶಿವು ಇದ್ದರು.
ಕುಶಾಲನಗರ ಮಾ.27 NEWS DESK : ಉತ್ತರ ಕೊಡಗಿನ ಪ್ರಮುಖ ಪುಣ್ಯ ಕ್ಷೇತ್ರವಾಗಿರುವ ಕುಶಾಲನಗರ ತಾಲೂಕಿನ ಕಣಿವೆಯ ಶ್ರೀರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮ ರಥೋತ್ಸವ ಶುಕ್ರವಾರ ಶದ್ಧಾ ಭಕ್ತಿಯಿಂದ ನೆರವೇರಿತು. ರಾಮಲಿಂಗೇಶ್ವರ, ಅಗಸ್ತೇಶ್ವರ, ಗುಹೇಶ್ವರ, ಹರಿಹರೇಶ್ವರ ಲಕ್ಷ್ಮಣೇಶ್ವರ ಹಾಗು ಬಸವೇಶ್ವರ ಪಂಚ ಲಿಂಗಗಳ ಸನ್ನಿಧಿಯಲ್ಲಿ ಪೂರ್ವಾಭಿಮುಖವಾಗಿ ಹರಿದಿರುವ ಕಾವೇರಿ ನದಿಯ ದಂಡೆಯಲ್ಲಿ ಅಪಾರ ಭಕ್ತ ಸಮೂಹ ರಥೋತ್ಸವಕ್ಕೆ ಸಾಕ್ಷಿಯಾಯಿತು. ಶ್ರೀ ರಾಮನು ಮರಳಿನಿಂದ ಪ್ರತಿಷ್ಠಾಪಿಸಿದನೆಂಬ ಇತಿಹಾಸ ಹಾಗೂ ಪ್ರತೀತಿ ಇರುವ ಸನ್ನಿಧಿಯಲ್ಲಿ ಬೆಂಗಳೂರಿನ ವೇದಬ್ರಹ್ಮ ನರಹರಿ ಶರ್ಮಾ ಹಾಗೂ ಕಣಿವೆ ರಾಮಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ ನೇತೃತ್ವದ ಪುರೋಹಿತರ ತಂಡ ಧಾರ್ಮಿಕ ವಿಧಿಗಳನ್ನು ಪೂರೈಸಿದರು. ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ಪದ್ಧತಿಯಂತೆ ನೆರೆಯ ಹೆಬ್ಬಾಲೆ ಗ್ರಾಮಸ್ಥರು ಅಂಚೆಯ ಮೂಲಕ ಕಾಶಿಯಿಂದ ತರಿಸಿದ್ದ ಪವಿತ್ರ ಗಂಗಾ ಜಲವನ್ನು ಅಲಂಕೃತ ಮಂಟಪದಲ್ಲಿಟ್ಟು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕಣಿವೆಯ ಶ್ರೀಕ್ಷೇತ್ರಕ್ಕೆ ತಂದು ದೇವರಿಗೆ ಪ್ರೋಕ್ಷಣೆ ಗೈದ ಬಳಿಕ ರಾಮಲಿಂಗೇಶ್ವರ…
ಮಡಿಕೇರಿ NEWS DESK ಮಾ.27 : ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿಯಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿ, ಸೋಮವಾರಪೇಟೆ ತಾಲ್ಲೂಕಿನ ಕುಸುಬೂರು ಗ್ರಾಮದ ಕೆಂಚಮ್ಮನ ಬಾಣೆಯ ಬಿ.ಎಸ್.ಆನಂದ್ ನೇಮಕಗೊಂಡಿದ್ದಾರೆ. ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆದೇಶದ ಮೇರೆಗೆ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬಿ.ಎಸ್.ಆನಂದ್ ಅವರನ್ನು ನೇಮಕ ಮಾಡಿ ದಾವಣಗೆರೆಗೆ ನಿಯೋಜಿಸಿದ್ದಾರೆ. ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಏ.9 ರಂದು ನಡೆಯಲಿದೆ.
ಸೋಮವಾರಪೇಟೆ ಮಾ.26 NEWS DESK : ಹಿರಿಕರ ಗ್ರಾಮ ನಿವಾಸಿ ಹೆಚ್.ಡಿ.ಲತ(58) ನಿಧನರಾಗಿದ್ದಾರೆ. ಮೃತರು ಪತಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆಯಿತು.
ಸೋಮವಾರಪೇಟೆ ಮಾ.26 NEWS DESK : ಚಿಕ್ಕಂದಿನಿಂದಲೇ ಹೆಣ್ಣುಮಕ್ಕಳಿಗೆ ದೊಡ್ಡ ಕನಸು ಕಾಣಬಾರದು ಎಂದು ಹೇಳುವ ಸಮಾಜದ ಮನೋಭಾವವನ್ನು ಬದಲಾಯಿಸುವ ಅಗತ್ಯವಿದೆ ಎಂದು ಚಲನಚಿತ್ರ ಹಾಗೂ ಕಿರುತೆರೆ ಕಲಾವಿದೆ ವರ್ಷ ಗಿರಿಧರ್ ಹೇಳಿದರು. ಸೋಮವಾರಪೇಟೆ ಬ್ರಾಹ್ಮಣ ಸಮಾಜ ಹಾಗೂ ದೇವಿ ಬಳಗದ ಆಶ್ರಯದಲ್ಲಿ ಶ್ರೀ ಸೋಮೇಶ್ವರ ದೇವಾಲಯದ ಆವರಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಗುರಿಯೊಂದಿಗೆ ಯಾವುದೇ ಕ್ಷೇತ್ರದಲ್ಲಾದರೂ ಮುಂದುವರಿಯುವ ಮನೋಭಾವ ಬೆಳೆಸಿಕೊಂಡು, ಹೆಣ್ಣುಮಕ್ಕಳು ದೊಡ್ಡ ಕನಸುಗಳನ್ನು ಕಂಡು ಸಾರ್ಥಕ ಜೀವನ ಸಾಧಿಸಬೇಕು ಎಂದು ಹೇಳಿದರು. ಮಹಿಳಾ ದಿನಾಚರಣೆ ಕೇವಲ ಒಂದು ದಿನದ ಆಚರಣೆ ಮಾತ್ರವಲ್ಲ, ಬದಲಾಗಿ ಮಹಿಳೆಯರ ತ್ಯಾಗ, ಶಕ್ತಿ, ಸಾಹಸ ಮತ್ತು ಸಾಧನೆಗಳನ್ನು ಸ್ಮರಿಸುವ ಮಹತ್ವದ ದಿನವಾಗಿದೆ ಎಂದರು. ಹೆಣ್ಣು ಸಂಸಾರದ ಕಣ್ಣು ಎಂಬ ನುಡಿಗಟ್ಟಿನಂತೆ, ಮನೆ, ಕುಟುಂಬ ಮತ್ತು ಸಮಾಜದ ಏಳಿಗೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಹಿಳೆಯರು ತಮ್ಮ ಸಾಮರ್ಥ್ಯ ವನ್ನು ಅರಿತು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯಬೇಕು…
ಸೋಮವಾರಪೇಟೆ ಮಾ.26 NEWS DESK : ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ಕೃಷಿಕರು ಕಂಗಾಲಾಗಿದ್ದಾರೆ. ಗಣಗೂರು, ಯರಪಾರೆ, ಬಾಣಾವಾರ, ಗೋಣಿಮರೂರು ಗ್ರಾಮಗಳ ಕೃಷಿ ಭೂಮಿಗೆ ಪ್ರತಿನಿತ್ಯ ಕಾಡಾನೆಗಳು ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಗೋಣಿಮರೂರು-ಯರಪಾರೆ ಗ್ರಾಮದ ಗಣೇಶ್ ಎಂಬವರ ಜೋಳದ ಫಸಲನ್ನು ನಾಶರಮೇಶ್ ಎಂಬವರ ತೆಂಗಿನ ಗಿಡಗಳನ್ನು ಮುರಿದು ತಿಂದು ನಾಶಪಡಿಸಿವೆ. ಕಾಡಾನೆ ಹಾವಳಿಯಿಂದ ಕೃಷಿ ಫಸಲನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮಗೆ ಯಾವುದೇ ಪರಿಹಾರ ಬೇಡ. ಒಂದೆರಡು ಸಾವಿರ ಪರಿಹಾರದಿಂದ ಕುಟುಂಬ ಸಾಕಲು ಸಾಧ್ಯವಿಲ್ಲ. ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ಯರಪಾರೆಯಲ್ಲಿ ಒಂದೆರಡು ಕಿ.ಮೀನಷ್ಟು ಸೋಲಾರ್ ತಂತಿಬೇಲಿ ಅಳವಡಿಸಿಕೊಡಬೇಕು ಎಂದು ರೈತರಾದ ರೇವಣ್ಣ, ಹರೀಶ್ ಆಗ್ರಹಿಸಿದ್ದಾರೆ. ಕಾಡಾನೆ ಕಂದಕಗಳನ್ನು ದುರಸ್ತಿ ಪಡಿಸಬೇಕು. ಸೋಲಾರ್ ತಂತಿಬೇಲಿಯ ನಿರ್ವಹಣೆ ಮಾಡಬೇಕು. ಸಿಬ್ಬಂದಿಗಳು ಪಟಾಕಿ ಸಿಡಿಸಿ ತೆರಳಿದರೆ, ಕಾಡಾನೆ ಹಾವಳಿ ನಿಯಂತ್ರಣ ಅಸಾಧ್ಯದ ಮಾತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ಮಾ.26 NEWS DESK : ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವದ ಮುನ್ನ ದಿನದಂದು ರಾಮಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಸೀತಾ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು. ಬ್ರಹ್ಮ ರಥೋತ್ಸವ ಅಂಗವಾಗಿ ಮೊದಲು ಸಂಧ್ಯಾಪೂಜೆ, ಕೂಡಿಗೆ, ಮತ್ತು ಶಿರಂಗಾಲ ಗ್ರಾಮಸ್ಥರಿಂದ ನಡೆದು ನಂತರ ಸಂಪ್ರದಾಯದಂತೆ ಶ್ರೀ ರಾಮ ಮತ್ತು ಸೀತಾ ಕಲ್ಯಾಣೋತ್ಸವ ಕಾರ್ಯಕ್ರಮ ವೇ. ಬ್ರಹ್ಮ. ಶ್ರೀ .ಕರಣೀಕ ನರಹರಿಶರ್ಮಾ ಅವರ ನೇತೃತ್ವದ ತಂಡವು ವಿವಿಧ ಕಲ್ಯಾಣೋತ್ಸವದ ಪದ್ಧತಿಯಂತೆ ಆಚರಣೆ ಮಾಡಿ ಸೀತಾ ಕಲ್ಯಾಣೋತ್ಸವವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯದರ್ಶಿ ಕೆ.ಎಸ್.ಮಾಧವ ಉಪಾಧ್ಯಕ್ಷ ಕೆ.ಕೆ.ಮಂಜುನಾಥ ಸ್ವಾಮಿ, ಸಹ ಕಾರ್ಯದರ್ಶಿ ಕೆ.ಎಲ್. ಮಹೇಶ್ ಕುಮಾರ್ ಸೇರಿದಂತೆ ಸಮಿತಿ ನಿರ್ದೇಶಕರು ದೇವಾಲಯದ ಪ್ರಧಾನ ಆರ್ಚಕ ಹೆಚ್.ಆರ್. ರಾಘವೇಂದ್ರ ಚಾರ್ ಸೇರಿದಂತೆ ಕೂಡಿಗೆ, ಶಿರಂಗಾಲ ಗ್ರಾಮಸ್ಥರು ಹಾಜರಿದ್ದರು.






